ನಾಗರ ಹಾವಿಗೂ ಆಪರೇಷನ್!
Team Udayavani, Apr 22, 2020, 3:07 PM IST
ತೀರ್ಥಹಳ್ಳಿ: ಗಾಯಗೊಂಡ ನಾಗರ ಹಾವಿಗೆ ಆಪರೇಷನ್ ಮಾಡಿ ಚಿಕಿತ್ಸೆ ನೀಡಿದ ಘಟನೆ ತೀರ್ಥಹಳ್ಳಿಯಲ್ಲಿ ನಡೆದಿದೆ. ಡಾ| ಯುವರಾಜ್ ಹೆಗ್ಡೆ ಈ ಚಿಕಿತ್ಸೆ ಮಾಡಿದ್ದು ಇದೀಗ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಕೋವಿಡ್ ಆತಂಕದ ನಡುವೆಯೂ ಮಾನವೀಯತೆ ಮೆರೆದಿದ್ದಾರೆ.
ತೀರ್ಥಹಳ್ಳಿಯ ಉಂಟೂರು ಕಟ್ಟೆ ಬಳಿಯ ಶೆಟ್ಟಿಗಳ ಕೊಪ್ಪ ಗ್ರಾಮದಲ್ಲಿ ಸತ್ಯವತಿ ಮಾನಪ್ಪ ಹೆಗಡೆ ಅವರ ಮನೆಯಲ್ಲಿ ಜೆಸಿಬಿ ಯಂತ್ರದಲ್ಲಿ ಮಣ್ಣು ತೆಗೆಯುವ ವೇಳೆಯಲ್ಲಿ ಮಣ್ಣಿನ ಅಡಿಯಲ್ಲಿದ್ದ ನಾಗರ ಹಾವಿಗೆ ತೀವ್ರ ಗಾಯವಾಗಿತ್ತು. ಆಕಸ್ಮಿಕವಾಗಿ ಆದ ಸಮಸ್ಯೆಗೆ ಮರುಗಿದ ಕುಟುಂಬ ಮಂಗಳವಾರ ಚಿಕಿತ್ಸೆ ನೀಡಬೇಕೆಂದು ವೈದ್ಯರಲ್ಲಿ ಕೇಳಿಕೊಂಡಿದ್ದರು. ಲಾಕ್ ಡೌನ್ ಸಮಯವಾದ್ದರಿಂದ ಹೆಚ್ಚಿನ ಚಿಕಿತ್ಸೆಗೆ ಬೇರೆಡೆಗೆ ತೆಗೆದುಕೊಂಡು ಹೋಗುವುದು ಸಾಧ್ಯವೂ ಇರಲಿಲ್ಲ. ಅಲ್ಲದೆ ಸರೀಸೃಪಗಳಿಗೆ ಚಿಕಿತ್ಸೆ ನೀಡುವಾಗ ಹೆಚ್ಚಿನ ಜಾಗೃತಿ ವಹಿಸಬೇಕಾಗುತ್ತದೆ .
ವಿಷಯವನ್ನು ಅರಣ್ಯ ಇಲಾಖೆಯ ಗಮನಕ್ಕೆ ತಂದು ನಂತರ ಹಲವಾರು ತಜ್ಞ ವೈದ್ಯರೊಂದಿಗೆ ಸಮಾಲೋಚನೆ ಮಾಡಿ, ಅಗತ್ಯ ಮಾಹಿತಿಗಳನ್ನು ಮತ್ತು ಚಿಕಿತ್ಸಾ ವಿಧಾನಗಳನ್ನು ಚರ್ಚಿಸಿ ಹಾವಿಗೆ ಚಿಕಿತ್ಸೆ ನೀಡಿದ್ದಾರೆ. ಅರಿವಳಿಕೆ ನೀಡುವಾಗ ಹಾವನ್ನು ನಿಯಂತ್ರಿಸುವ ಸಲುವಾಗಿ ಮಲೆನಾಡಿನ ಪ್ರಸಿದ್ಧ ಉರಗ ತಜ್ಞ ಮಾರುತಿ ಅವರನ್ನು ಸಹ ಜೊತೆಗೆ ಕರೆದುಕೊಂಡು ಹೋಗಿ ಆಪರೇಷನ್ ಮಾಡಲಾಗಿದೆ.
ತೀರ್ಥಹಳ್ಳಿಯ ಪ್ರಸಿದ್ಧ ಪಶುವೈದ್ಯರಾಗಿರುವ ಡಾ| ಯುವರಾಜ ಹೆಗಡೆ ಮೊನ್ನೆ ತಾನೇ ದುಷ್ಕರ್ಮಿಗಳು ದನದ ಕಾಲನ್ನು ಕಡಿದಿದ್ದಕ್ಕೆ ಚಿಕಿತ್ಸೆ ನೀಡಿ ಸಾರ್ವಜನಿಕ ಮೆಚ್ಚುಗೆ ಪಡೆದಿದ್ದರು. ಈಗ ಹಾವಿಗೆ ಆಪರೇಷನ್ ಮಾಡಿ ಮಾನವೀಯತೆ ಮೆರೆದಿದ್ದಾರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Shimoga: ಮಲೆನಾಡಿನಲ್ಲಿ ಮುಂದುವರಿದ ಕಾಡಾನೆ ಕಾಟ; ಇಲಾಖೆ ವಿರುದ್ದ ರೈತರ ಆಕ್ರೋಶ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.