ದಯವಿಟ್ಟು ಶಿವಮೊಗ್ಗಕ್ಕೆ ಬರಬೇಡಿ…! ಪ್ರವಾಸಿಗರಿಗೆ ಶಿವಮೊಗ್ಗ ಜನರ ಮನವಿ
ತ್ಯಾವರೆಕೊಪ್ಪ ಸಿಂಹಧಾಮ ಬಂದ್
Team Udayavani, Mar 16, 2020, 5:50 PM IST
ಶಿವಮೊಗ್ಗ: ದಯವಿಟ್ಟು ಶಿವಮೊಗ್ಗಕ್ಕೆ ಬರಬೇಡಿ..! ರಾಜ್ಯ, ಹೊರ ರಾಜ್ಯದ ಪ್ರವಾಸಿಗರಿಗೆ ಶಿವಮೊಗ್ಗದ ಜನರ ಮನವಿ ಇದು.
ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಸರ್ಕಾರ ನಿರ್ಬಂಧ ಹೇರಿದೆ. ಈ ನಡುವೆ ಬೆಂಗಳೂರು ಸೇರಿದಂತೆ ವಿವಿಧೆಡೆಯ ಪ್ರವಾಸಿಗರು ಶಿವಮೊಗ್ಗದತ್ತ ಮುಖ ಮಾಡುತ್ತಿದ್ದಾರೆ. ರಜೆ ಇರುವುದರಿಂದ ಪ್ರವಾಸಿ ತಾಣಗಳನ್ನು ಕಣ್ತುಂಬಿಕೊಳ್ಳಲು ಮುಂದಾಗಿದ್ದಾರೆ. ಹಾಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಟೂರಿಸ್ಟ್‌ಗಳೇ ಶಿವಮೊಗ್ಗಕ್ಕೆ ಬರಬೇಡಿ ಅನ್ನುವ ಮನವಿಗಳು ಕಾಣಸಿಗುತ್ತಿವೆ.
ಹುಲಿ, ಸಿಂಹಧಾಮ ಬಂದ್: ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಮುಖ ಪ್ರವಾಸಿ ತಾಣ ಹುಲಿ ಮತ್ತು ಸಿಂಹಧಾಮವನ್ನು ಬಂದ್ ಮಾಡಲಾಗಿದೆ. ಮಾ. 15 ರಿಂದ 23ರವರೆಗೆ ಹುಲಿ, ಸಿಂಹಧಾಮ ಬಂದ್ ಮಾಡಲಾಗುತ್ತಿದೆ ಎಂದು ಸಫಾರಿಯ ಕಾರ್ಯಕಾರಿ ನಿರ್ವಾಹಕ ಮುಕುಂದ್ ಚಂದ್ರ ತಿಳಿಸಿದ್ದಾರೆ.
ಶಾಲೆ- ಕಾಲೇಜುಗಳಿಗೆ ರಜೆ ಇರುವುದರಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಳ ಆಗಬಹುದು. ಹೊರ ಜಿಲ್ಲೆ, ರಾಜ್ಯದಿಂದಲು ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಆದರೆ ರಾಜ್ಯ ಸರ್ಕಾರ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದರೆ ಸಮಸ್ಯೆಯಾಗಲಿದೆ ಎಂದು ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮವನ್ನು ಬಂದ್ ಮಾಡಲಾಗುತ್ತದೆ ಎಂದು ಮುಕುಂದ್ ಚಂದ್ರ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.