ಜೋಗದಲ್ಲಿ ಪ್ರವಾಸಿಗರ ದಂಡು
Team Udayavani, Aug 24, 2020, 5:29 PM IST
ಸಾಗರ: ಕೋವಿಡ್-19 ಹಿನ್ನೆಲೆಯಲ್ಲಿ ಮೂರು ತಿಂಗಳಿನಿಂದ ಜನರಿಲ್ಲದೆ ಬಿಕೋ ಎನ್ನುತ್ತಿದ್ದ ವಿಶ್ವವಿಖ್ಯಾತ ಜೋಗ ಜಲಪಾತಕ್ಕೆ ಭಾನುವಾರ ದಾಖಲೆ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸಿದ್ದರು.
ಭಾನುವಾರ ಜಲಪಾತ ವೀಕ್ಷಣೆಗೆ ಪ್ರಕೃತಿಯೂ ಸಾಥ್ ನೀಡಿದ್ದು, ಇಡೀ ದಿನ ಬಿಸಿಲಿನ ವಾತಾವರಣವಿತ್ತು. ಹೀಗಾಗಿ ಪ್ರವಾಸಿಗರಿಗೆ ಜಲಪಾತದ ಭವ್ಯ ದರ್ಶನವಾಯಿತು. ಮುಖ್ಯವಾಗಿ ಖಾಸಗಿ ಕಾರುಗಳೇ ಹೆಚ್ಚಿನ ಸಂಖ್ಯೆಯಲ್ಲಿ ಜೋಗದತ್ತ ಪಯಣಿಸಿದ್ದರಿಂದ ಸಾಗರ-ಜೋಗದ ನಡುವೆ ಕಾರುಗಳ ರ್ಯಾಲಿ ನಡೆಯುತ್ತಿದೆಯೇನೋ ಎಂಬ ದೃಶ್ಯ ಕಂಡುಬಂದಿತು. ಸಂಜೆ 6.30ರ ವೇಳೆಗೆ ಜೋಗ ಅಭಿವೃದ್ಧಿ ಪ್ರಾಧಿಕಾರದ ಪ್ರವೇಶ ಶುಲ್ಕ ಸಂಗ್ರಹ 1.95 ಲಕ್ಷ ರೂ. ದಾಟಿತ್ತು. ಪ್ರವಾಸಿಗರ ಸಂಖ್ಯೆ ತೀವ್ರವಾಗಿ ಹೆಚ್ಚಿದ್ದರಿಂದ ಮೈಸೂರು ಬಂಗ್ಲೋ ಭಾಗದಲ್ಲಿ ಪ್ರವಾಸಿ ವಾಹನಗಳು ತುಂಬಿ ತುಳುಕಿದವು. ವಿಶೇಷವಾಗಿ ಒಂದರ ಬದಲು ಮೂರು ಟಿಕೆಟ್ ಕೌಂಟರ್ ಸ್ಥಾಪಿಸಲಾಗಿದ್ದರೂ ಜಾತ್ರೆಯ ಸಂದರ್ಭದಲ್ಲಿ ದೇವರ ದರ್ಶನಕ್ಕೆ ಕ್ಯೂ ನಿಂತ ಸ್ಥಿತಿ ನಿರ್ಮಾಣವಾಗಿತ್ತು. ಮುಕ್ಕಾಲು ಗಂಟೆ ಕ್ಯೂನಲ್ಲಿ ನಿಂತ ನಂತರವೇ ಜಲಪಾತ ದರ್ಶನಕ್ಕೆ ಪ್ರವೇಶ ಸಿಗುತ್ತಿತ್ತು. ಪ್ರವೇಶಕ್ಕೆ ಮಾಸ್ಕ್ ಕಡ್ಡಾಯವಾಗಿದ್ದ ಹಿನ್ನೆಲೆಯಲ್ಲಿ ಐದಾರು ಜನ ಮಾಸ್ಕ್ ಮಾರಾಟಗಾರರು ಎರಡು ಸಾವಿರಕ್ಕೂ ಹೆಚ್ಚು ಮಾಸ್ಕ್ ಮಾರಿದರು ಎಂದು ಅಲ್ಲಿನ ವರ್ತಕರೊಬ್ಬರು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Hosanagara: ರಸ್ತೆ ಅಪಘಾತದಲ್ಲಿ ಪತಿ ಮೃತಪಟ್ಟ ಸುದ್ದಿ ಕೇಳಿ ಆತ್ಮಹತ್ಯೆಗೆ ಶರಣಾದ ಪತ್ನಿ
Thirthahalli: ಅದ್ಧೂರಿಯಾಗಿ ನಡೆದ ಎಳ್ಳಮಾವಾಸ್ಯೆ ರಥೋತ್ಸವ
ತೀರ್ಥಹಳ್ಳಿಯಲ್ಲಿ ವೈಭವದ ಜಾತ್ರೆ; ಬುರ್ಖಾ ಧರಿಸಿದ್ದ ಅನಾಮಧೇಯ ವ್ಯಕ್ತಿ ಪತ್ತೆ !
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.