ವಾರದ ಅಂತರದಲ್ಲಿ ಅವಳಿ ಜವಳಿ ಕರು ಹಾಕಿದ ಎಮ್ಮೆ!
Team Udayavani, Sep 19, 2022, 7:15 PM IST
ಸಾಗರ: ತಾಲೂಕಿನ ನಾಡಕಲಸಿ ಗ್ರಾಮದಲ್ಲಿ ಎಮ್ಮೆಯೊಂದು ಆರು ದಿನಗಳ ಅಂತರದಲ್ಲಿ ಅವಳಿ ಜವಳಿ ಕರು ಹಾಕಿದ ವಿಸ್ಮಯಕಾರಿ ಘಟನೆ ಸೋಮವಾರ ನಡೆದಿದೆ.
ಇಲ್ಲಿನ ದುರ್ಗಪ್ಪ ಎಂಬುವವರು ಸಾಕಿದ ಎಮ್ಮೆ ಒಂದು ಗಂಡು ಹಾಗು ಒಂದು ಹೆಣ್ಣು ಕರುವಿಗೆ ಜನ್ಮ ನೀಡಿದೆ. ಸೆ. 13ರ ಮಂಗಳವಾರ ಈ ಎಮ್ಮೆ ಮೊದಲ ಬಾರಿಗೆ ಗಂಡು ಕರುವನ್ನು ಸಹಜವಾಗಿ ಹಾಕಿತ್ತು. ಆರೋಗ್ಯವಾಗಿಯೇ ಇದ್ದ ಎಮ್ಮೆ ಹುಲ್ಲು ಮೇಯಲು ಗುಡ್ಡಕ್ಕೆ ಹೋಗಿದ್ದ ಸಂದರ್ಭದಲ್ಲಿ ತನ್ನ ಎರಡನೇ ಕರುವನ್ನು ಸೋಮವಾರ ಹಾಕಿದೆ. ಇದನ್ನು ಗಮನಿಸಿದ ಪಶುಪಾಲಕ ದುರ್ಗಪ್ಪ ಪಶುಪಾಲನಾ ಇಲಾಖೆ ಪಶು ಪರೀಕ್ಷಕಿ ಡಾ. ಲಕ್ಷ್ಮೀ ಭಾಗವತ್ ಅವರನ್ನು ಕರೆಸಿದ್ದಾರೆ.
ಈ ಕುರಿತು ವಿವರಿಸುವ ಡಾ. ಲಕ್ಷ್ಮೀ ಭಾಗವತ್, ಅವಳಿ ಜವಳಿ ಕರು ಹಾಕುವ ಪ್ರಕ್ರಿಯೆ ಎಮ್ಮೆಗಳಲ್ಲಿ ಅತ್ಯಂತ ಅಪರೂಪ. ಅದರಲ್ಲೂ ವಾರದ ನಂತರ ಮತ್ತೊಂದು ಕರು ಹಾಕುವುದಂತೂ ಲಕ್ಷಗಳಲ್ಲಿ ಒಂದಾಗುವಂತದು. ಈ ಎಮ್ಮೆಯನ್ನು ಸಹಜವಾಗಿ ಮೇಯಲು ಬಿಟ್ಟಾಗ ಬೆದೆಗೆ ಬಂದು ಕೋಣದ ಸಂಪರ್ಕವಾಗಿ ಗಬ್ಬ ಕಟ್ಟಿದೆ. ಮೊದಲು ಬೆದೆಯ ನಂತರವೂ ಇನ್ನೊಮ್ಮೆ ಕೋಣದ ಸಂಪರ್ಕದಿಂದ ಪ್ರತ್ಯೇಕವಾದ ಇನ್ನೊಂದು ಗರ್ಭ ಕಟ್ಟಿದೆ. ಬೇರೆ ಬೇರೆ ಸಮಯದ ಗರ್ಭಧಾರಣೆ ಆದುದರಿಂದ ಪ್ರತ್ಯೇಕವಾಗಿಯೇ ಕರು ಹಾಕಿದೆ ಎಂದು ವಿಶ್ಲೇಷಿಸಿದರು.
ಪತ್ರಿಕೆಯೊಂದಿಗೆ ಮಾತನಾಡಿದ ನಿವೃತ್ತ ಪಶು ವೈದ್ಯಾಧಿಕಾರಿ ಡಾ. ಎನ್.ಎಚ್.ಶ್ರೀಪಾದರಾವ್, ಈ ಬಗ್ಗೆ ಪಶು ವೈದ್ಯ ವಿಜ್ಞಾನದಲ್ಲಿ ಹೆಚ್ಚು ಪ್ರಕರಣಗಳು ಸಿಗುವುದಿಲ್ಲ. ನೈಸರ್ಗಿಕ ಗರ್ಭಧಾರಣೆಯ ಸಂದರ್ಭದಲ್ಲಿ ಮಾತ್ರ ಹೀಗಾಗುತ್ತದೆ ಎಂದು ಹೇಳಬಹುದು. ಐಡೆಂಟಿಕಲ್, ನಾನ್ ಐಡೆಂಟಿಕಲ್ ಅವಳಿ ಜವಳಿ ಪ್ರಕರಣಗಳಲ್ಲಿ ಈ ರೀತಿ ಆಗುವುದು ವಿಸ್ಮಯ. ಮನುಷ್ಯರಲ್ಲಿ ಕೆಲವೊಮ್ಮೆ ಎರಡು ಗರ್ಭಕೋಶವಿರುವುದು ಕಂಡುಬಂದಿದೆ. ಆದರೆ ಈ ಪ್ರಕರಣದಲ್ಲಿ ಒಂದೇ ಗರ್ಭಕೋಶದಲ್ಲಿಯೇ ಪ್ರತ್ಯೇಕವಾಗಿ ಎರಡು ವಿಭಿನ್ನ ಸಂದರ್ಭಗಳಲ್ಲಿ ಗರ್ಭಧಾರಣೆ ಆಗಿದೆ ಎಂದರು.
ದುರ್ಗಪ್ಪ ಮಾತನಾಡಿ, ಈ ಹಿಂದೆ ಹೆಣ್ಣು ಕರು ಹಾಕಿದ್ದ ಎಮ್ಮೆ ಈ ಬಾರಿ ಈ ರೀತಿ ವಿಶಿಷ್ಟ ರೀತಿಯಲ್ಲಿ ಅವಳಿ ಜವಳಿ ಕರು ಹಾಕಿರುವುದು ಖುಷಿ ಕೊಟ್ಟಿದೆ. ಎಮ್ಮೆ, ಕರುಗಳು ಆರೋಗ್ಯವಾಗಿವೆ. ಸುತ್ತಮುತ್ತಲಿನ ಜನ ಈ ವಿಸ್ಮಯವನ್ನು ನೋಡಲು ದೊಡ್ಡ ಸಂಖ್ಯೆಯಲ್ಲಿ ಬರುತ್ತಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid ವೇಳೆ ಜೀವ ಉಳಿಸುವ ಕೆಲಸ ಮಾಡಿದ್ದೇವೆ: ಬಿಎಸ್‌ವೈ
Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು
Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!
Shimoga; ವಿಜಯೇಂದ್ರರನ್ನು ಕಟ್ಟಿ ಹಾಕಲು ಕಾಂಗ್ರೆಸ್ ನಿಂದ ಸುಳ್ಳು ಆರೋಪ: ರಾಘವೇಂದ್ರ
Anandapura: ಸಾಲ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
MUST WATCH
ಹೊಸ ಸೇರ್ಪಡೆ
Waqf Issue: ಮೂರು ತಂಡ ರಚನೆಗೆ ಅವ್ವ-ಅಪ್ಪ ಏನೂ ಇಲ್ಲ: ಬಸನಗೌಡ ಪಾಟೀಲ್ ಯತ್ನಾಳ್ ಆಕ್ಷೇಪ
GKVK Research; ಇನ್ನು ಜೇನು ಗೂಡು ಕಟ್ಟಬೇಕಿಲ್ಲ: 3ಡಿ ಗೂಡು ಆವಿಷ್ಕಾರ!
Court Judgement: ತಪ್ಪಿತಸ್ಥ ಎಂದಾದರೆ ಮಾತ್ರ ರಾಜೀನಾಮೆ ನೀಡಬೇಕು: ಜಿ.ಟಿ.ದೇವೇಗೌಡ
Daily Horoscope: ಈ ರಾಶಿಯವರಿಗಿಂದು ದಿನವಿಡೀ ಮಿಶ್ರ ಫಲಗಳ ಅನುಭವ
Average Income: ದೇಶದ ಗ್ರಾಮ ಪಂಚಾಯ್ತಿ ಆದಾಯ ಕೇವಲ 59 ಮಾತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.