ಉದಯ ಕಲಾವಿದರ ಅಟ್ಟ ಇನ್ನು ಮುಂದೆ ಬರೀ ನೆನಪು!

ವಾಣಿಜ್ಯ ಸಂಕೀರ್ಣಕ್ಕಾಗಿ ನೆಲಸಮವಾಗುತ್ತಿದೆ ರಂಗ ಚಟುವಟಿಕೆ ತಾಣವಾಗಿದ್ದ ಕಟ್ಟಡ

Team Udayavani, Nov 15, 2020, 7:00 PM IST

ಉದಯ ಕಲಾವಿದರ ಅಟ್ಟ ಇನ್ನು ಮುಂದೆ ಬರೀ ನೆನಪು!

ಸಾಗರ: ನಗರದ ಜೆಸಿ ರಸ್ತೆಯಲ್ಲಿನ ಉದಯಕಲಾವಿದರು ನಾಟಕ ಸಂಸ್ಥೆಯ ರಿಹರ್ಸಲ್‌ ಜಾಗವಾಗಿ, ಚಿಂತನ ಮಂಥನಗಳ ತಾಣವಾಗಿ “ಅಟ್ಟ’ಎಂದೇ ಜನಪ್ರಿಯವಾಗಿದ್ದ ಸಂಸ್ಥೆಯ ಕಟ್ಟಡ ನೆಲಸಮವಾಗುತ್ತಿದೆ. ಖಾಸಗಿ ಕಟ್ಟಡವಾದುದರಿಂದ ಕಟ್ಟಡ ಮಾಲೀಕರು ಹಳೆಯ ಕಟ್ಟಡ ಕೆಡವಿ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಮುಂದಾಗಿದ್ದಾರೆ. ಇದರಿಂದ ಸಾಗರದ ಸಾಂಸ್ಕೃತಿಕ ಮೆರಗಿಗೆ ಕಾರಣವಾಗಿದ್ದ ಹವ್ಯಾಸಿ ತಂಡದ ಕಟ್ಟಡ ಮರೆಯಾಗಲಿದ್ದು, ಸಾಂಸ್ಕೃತಿಕ ಜಗತ್ತಿನ ಇನ್ನೊಂದು ಕೊಂಡಿ ಇತಿಹಾಸದ ಪುಟ ಸೇರುವಂತಾಗಿದೆ.

ರಾಜ್ಯದ ನಾಟಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಉದಯ ಕಲಾವಿದರು ಸಂಸ್ಥೆ ಕೂಡಹೊಸ ಉತ್ಸಾಹಿಗಳ ಸೇರ್ಪಡೆಯ ಕೊರತೆ ಅನುಭವಿಸುತ್ತಿದೆ. ಸಂಸ್ಥೆಯ ಹಿರಿಯ ಜೀವಗಳು ವಯೋಸಹಜ ಜೀವನ ಸಂಜೆಯ ಕಷ್ಟಗಳನ್ನು ಎದುರಿಸುತ್ತಿದ್ದಾರೆ. ಕೆಲವರು ಬದುಕಿನ ಇನ್ನಿಂಗ್ಸ್‌ ಮುಗಿಸಿದ್ದಾರೆ. ಪುನರುಜ್ಜೀವನದ ಕನಸು ಕೆಲವರಲ್ಲಾದರೂ ಇದ್ದರೂ, “ಅಟ್ಟ’ ಮಾಯವಾಗುವುದು ಉತ್ಸಾಹವನ್ನು ಮತ್ತಷ್ಟು ಕೆಳಗೆ ತಳ್ಳುವ ಸಾಧ್ಯತೆಗಳಿವೆ.

ಎನ್‌.ಆರ್‌. ಮಾಸೂರ್‌ ಮತ್ತವರ ಗೆಳೆಯರು 1948ರಲ್ಲಿ ಉದಯ ಕಲಾವಿದರುಸಂಸ್ಥೆ ಸ್ಥಾಪಿಸಿದರು. ಶ್ರೀರಂಗರ ನಾಟಕಗಳ ಪ್ರದರ್ಶನದಿಂದ ಈ ಸಂಸ್ಥೆ ರಾಜ್ಯದಲ್ಲಿ ಹೆಸರುವಾಸಿಯಾಯಿತು. ಶ್ರೀರಂಗ, ದ.ರಾ. ಬೇಂದ್ರೆ, ಎಂ. ಗೋಪಾಲಕೃಷ್ಣ ಅಡಿಗ, ಚಂದ್ರಶೇಖರ ಕಂಬಾರ, ಬಿ.ವಿ. ಕಾರಂತಮುಂತಾದವರು ಅಟ್ಟಕ್ಕೆ ಬಂದು ಹೋಗಿದ್ದಾರೆ.ಕನ್ನಡದ ಪ್ರಮುಖ ನಾಟಕಗಳಲ್ಲದೇ ಆಂಗ್ಲ, ಫ್ರೆಂಚ್‌, ಹಿಂದಿ ಸೇರಿದಂತೆ ಸಾವಿರಕ್ಕೂ ಮಿಕ್ಕಿ ನಾಟಕಗಳ ಪ್ರದರ್ಶನಕ್ಕೆ ಈ ಅಟ್ಟದಲ್ಲಿಯೇ ಸಿದ್ಧತೆಯಾಗಿದೆ. ಎನ್‌.ಆರ್‌. ಮಾಸೂರ್‌, ಗುರುರಾವ್‌ ಬಾಪಟ್‌ ಇನ್ನಿತರ ನಿರ್ದೇಶಕರ ನಾಟಕ ಪ್ರಸಿದ್ಧಿ ಗಳಿಸಿದೆ. ವಿಜಯವಾಮನ, ರವಿಶಂಕರ ಕೋಳಿವಾಡ, ಮಂಜುನಾಥಜೇಡಿಕುಣಿ, ಸಿ.ಟಿ. ಬ್ರಹ್ಮಾಚಾರ್‌ ಇನ್ನೂ ಮುಂತಾದವರು ನಾಟಕ ನಿರ್ದೇಶಿಸಿದ್ದಾರೆ. ಅನೇಕರು ಅಟ್ಟದ ಕಾರಣದಿಂದ ಕಲಾವಿದರಾಗಿದ್ದಾರೆ. ಸಾಗರಕ್ಕೆ ಖ್ಯಾತಿ ತಂದುಕೊಟ್ಟ, ಹವ್ಯಾಸಿ ರಂಗಭೂಮಿಯಲ್ಲಿ ಮಹತ್ವದ ಸ್ಥಾನ ಗಳಿಸಿದ್ದ ಸಾಗರದ ಉದಯ ಕಲಾವಿದರು ಸಂಸ್ಥೆಯ “ಅಟ್ಟ’ವೆಂಬ ಕಟ್ಟಡ ಇನ್ನು ಕೇವಲ ನೆನಪು ಮಾತ್ರ. ಅದು ಸಂಸ್ಥೆಯ ಅಸ್ತಿತ್ವಕ್ಕೂ ಅನ್ವಯವಾಗದಿರಲಿ ಎಂಬ ಆಶಯವನ್ನು ರಂಗಾಸಕ್ತರಲ್ಲಿ ದಟ್ಟವಾಗಿದೆ.

ರಿಹರ್ಸಲ್‌ನ ಅಟ್ಟ ವಾಣಿಜ್ಯಿಕ ಕಾರಣಗಳಿಂದ ಮಾಯವಾಗುವುದು ಅನಿವಾರ್ಯವಾಗಿದೆ. ಆದರೆ ಉದಯ ಕಲಾವಿದರು ಸಂಸ್ಥೆಯ ಅಭಿರುಚಿಯನ್ನು ಬೇರೊಂದು ರಿಹರ್ಸಲ್‌ತಾಣದಲ್ಲಿ ಮುಂದುವರಿಸಲಾಗುತ್ತದೆ. ಸವಾಲುಗಳ ನಡುವೆಯೂ ಸಂಸ್ಥೆ ತನ್ನ ಸೇವೆಯನ್ನು ಒದಗಿಸಲು ಕಟಿಬದ್ಧವಾಗಿದೆ. ತಾತ್ಕಾಲಿಕವಾಗಿ ಸಂಸ್ಥೆಯ ಎಲ್ಲಾ ವಸ್ತುಗಳನ್ನು ಮಾಲೀಕರೇ ಸ್ವತಃ ಸಾಗಣೆ ಮಾಡಿ ತಮ್ಮ ಸ್ವಂತ ಕಟ್ಟಡದಲ್ಲಿ ಇಟ್ಟುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಸಂಸ್ಥೆಯ ಸ್ಥಳದ ಬಗ್ಗೆ ಚಿಂತನೆ ನಡೆಸಲಾಗುವುದು.  –ಟಿ.ಎಸ್‌. ರಾಘವೇಂದ್ರ, ಅಧ್ಯಕ್ಷರು, ಉದಯ ಕಲಾವಿದರು, ಸಾಗರ

ನಾಟಕ ತಂಡವಾದುದರಿಂದ ಬಾಡಿಗೆ, ಇನ್ನಿತರ ವಿಷಯದಲ್ಲಿ ಯಾವ ನಿರೀಕ್ಷೆ ಇರಲಿಲ್ಲ. ಆದರೂ ವಾರ್ಷಿಕವಾಗಿ ತಪ್ಪದೇ ಬಾಡಿಗೆ ನೀಡಲಾಗುತ್ತಿತ್ತು. ಅನಿವಾರ್ಯ ಕಾರಣಗಳಿಂದಾಗಿ ಕಟ್ಟಡ ನೆಲಸಮ ಮಾಡಲಾಗುತ್ತಿದೆ. ಸದ್ಯಕ್ಕೆ ನಮ್ಮ ಮನೆಯಲ್ಲಿ ನಾಟಕದ ಪರಿಕರಗಳನ್ನು ಇಡಲು ಸಂಸ್ಥೆಗೆ ಅವಕಾಶ ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ಸಂಸ್ಥೆಯ ಪದಾಧಿಕಾರಿಗಳ ಜತೆ ಚರ್ಚಿಸಿ ಅವಕಾಶ ಕಲ್ಪಿಸಲಾಗುವುದು.  –ಎಸ್‌. ಶಶಿಧರ ಯಾಗೈನ್‌, ಕಟ್ಟಡ ಮಾಲೀಕರು, ಸಾಗರ

ಟಾಪ್ ನ್ಯೂಸ್

ನಾನು ಶೀಶಮಹಲ್‌ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್

ನಾನು ಶೀಶಮಹಲ್‌ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್

11-venur

Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ

9

Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ

governer

Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Explainer: HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ಅಂತ್ಯಕ್ರಿಯೆಗೆ ತಯಾರಿ ನಡೆಸಿದ್ದರು

Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್… ರಸ್ತೆಯಲ್ಲೇ ನಡೆಯಿತು ಪವಾಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಈಶ್ವರಪ್ಪ

Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ

Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್‌ ಹಂಚಿಕೆ; ಡಾ.ಸರ್ಜಿ

Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್‌ ಹಂಚಿಕೆ; ಡಾ.ಸರ್ಜಿ

Hosanagara: ರಸ್ತೆ ಅಪಘಾತದಲ್ಲಿ ಪತಿ ಮೃತಪಟ್ಟ ಸುದ್ದಿ ಕೇಳಿ ಆತ್ಮಹತ್ಯೆಗೆ ಶರಣಾದ ಪತ್ನಿ

Hosanagara: ರಸ್ತೆ ಅಪಘಾತದಲ್ಲಿ ಪತಿ ಮೃತಪಟ್ಟ ಸುದ್ದಿ ಕೇಳಿ ಆತ್ಮಹತ್ಯೆಗೆ ಶರಣಾದ ಪತ್ನಿ

7-thirthahalli

Thirthahalli: ಅದ್ಧೂರಿಯಾಗಿ ನಡೆದ ಎಳ್ಳಮಾವಾಸ್ಯೆ ರಥೋತ್ಸವ

1-thirthahalli

ತೀರ್ಥಹಳ್ಳಿಯಲ್ಲಿ ವೈಭವದ ಜಾತ್ರೆ; ಬುರ್ಖಾ ಧರಿಸಿದ್ದ ಅನಾಮಧೇಯ ವ್ಯಕ್ತಿ ಪತ್ತೆ !

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ನಾನು ಶೀಶಮಹಲ್‌ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್

ನಾನು ಶೀಶಮಹಲ್‌ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್

11-venur

Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ

9

Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ

governer

Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.