ಧರ್ಮ ಜಾಗೃತಿಯಿಂದ ನೆಮ್ಮದಿ : ಈಶ್ವರಪ್ಪ
Team Udayavani, Aug 30, 2021, 6:27 PM IST
ಭದ್ರಾವತಿ : ದೈವಭಕ್ತಿ ಮತ್ತು ಗು ರುಭಕ್ತಿಯಿದ್ದಲ್ಲಿ ಹಾಗೂ ಧರ್ಮ ಜಾಗೃತಿಯಾದರೆ ಕೊರೊನಾ, ಪ್ರವಾಹ, ಉಗ್ರವಾದ ಮುಂತಾದ ಸಮಸ್ಯೆಗ ಳು ಪರಿಹಾರವಾಗಿ ನೆಮ್ಮದಿ ಶಾಂತಿ ದೊರಕುತ್ತದೆ ಎಂದು ಗ್ರಾಮಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ. ಎಸ್. ಈಶ್ವರಪ್ಪ ಹೇಳಿದರು.
ತಾಲೂಕಿನ ಬಿಳಿಕಿ ಹಿರೇಮಠದಲ್ಲಿ ಶ್ರೀ ಮಠದ ಪಟ್ಟಾಧ್ಯಕ್ಷ ಶ್ರೀ ರಾಚೋಟೇಶ್ವರ ಶಿವಾಚಾರ್ಯರ ಜನ್ಮ ಸುವರ್ಣ ಮಹೋತ್ಸವ ಹಾಗೂ ಶಿವಮೊಗ್ಗದ ಬೆಕ್ಕಿನಕಲ್ಮಠ ಆನಂದಪುರ ಶ್ರೀಮನ್ ಮಹಾರಾಜ ಜಗದ್ಗುರು ಡಾ| ಶ್ರೀ ಮಲ್ಲಿಕಾರ್ಜುನ ಮುರುಘಾ ರಾಜೇಂದ್ರ ಮಹಾಸ್ವಾಮಿಗಳು 72 ನೇ ಜನ್ಮ ದಿನೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಗೌರವ ಸಮರ್ಪಣೆ, ಸುವರ್ಣ ಭವನ ಸಮುದಾಯ ಸಭಾ ಭವನ ಶಂಕು ಸ್ಥಾಪನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಇದನ್ನೂ ಓದಿ : ಸಂತೆಕಟ್ಟೆ: ನಡುರಸ್ತೆಯಲ್ಲೇ ಯುವತಿಗೆ ಚೂರಿಯಿಂದ ಇರಿದು, ತಾನು ಆತ್ಮಹತ್ಯೆಗೆ ಯತ್ನಿಸಿದ ಯುವಕ
ಒಂದೇ ವೇದಿಕೆಯಲ್ಲಿ ನಾಡಿನ ವಿವಿಧ ಭಾಗಗಳಿಂದ ಆಗಮಿಸಿರುವ ಮಠಮಾನ್ಯಗಳ ಶ್ರೀಗಳು ಇಬ್ಬರು ಸಂತರರಿಗೆ ಪುಷ್ಪ ವೃಷ್ಟಿ ಸುರಿ ಮಳೆ ಗೈದು ಆಚರಿಸಿದ ಜನ್ಮ ದಿನವನ್ನು ನೋಡುವ ಪುಣ್ಯ ದೊರೆತಿರುವುದು ನಮ್ಮ ಭಾಗ್ಯವಾಗಿದೆ ಎಂದರು.
ಶಾಸಕ ಬಿ.ಕೆ. ಸಂಗಮೇಶ್ವರ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜಕ್ಕೆ ಮಾರ್ಗದರ್ಶನ ಮಾಡುವ ಮಠ-ಮಾನ್ಯಗಳ ವಿರುದ್ಧ ಅನಗತ್ಯವಾಗಿ ಅಪಪ್ರಚಾರ ಮಾಡದೆ ಮಠದ ಶ್ರೀಗಳು ಮಾಡುವ ಸಮಾಜ ಮತ್ತು ಧರ್ಮರಕ್ಷಣೆಯ ಕಾರ್ಯಗಳಲ್ಲಿ ಎಲ್ಲರೂಕೈ ಜೋಡಿಸಬೇಕು.
ಮಠಗಳಿಂದ ವಿದ್ಯೆ, ಸಂಸ್ಕೃತಿ, ಸಂಸ್ಕಾರ, ಗುರು-ಹಿರಿಯರಿಗೆ ನೀಡುವ ಗೌರವ ದೊರೆಯುತ್ತವೆ. ಈ ದಿಸೆಯಲ್ಲಿ ಬಿಳಿಕಿ ಶ್ರೀ ಗಳು ನಡೆಯುತ್ತಿರುವುದು ಸಂತಸ ತಂದಿದೆ ಎಂದರು. ಬೆಕ್ಕಿನಕಲ್ಮಠದ ಶ್ರೀಮನ್ ಮಹಾರಾಜ ನಿರಂಜನ ಜಗದ್ಗುರು ಶ್ರೀ ಮಲ್ಲಿಕಾರ್ಜುನ ಮುರುಘಾ ರಾಜೇಂದ್ರ ಮಹಾಸ್ವಾಮೀಜಿ ಆಶೀರ್ವಚನ ನೀಡಿ, ಮನೆ ಮಠಗಳಿಗೆ ಅವಿನಾಭಾವ ಸಂಬಂಧಗಳಿವೆ.
ನಾಡಲ್ಲಿ 29 ಮಠಗಳಿದ್ದು ಮಠ ಮಾನ್ಯಗಳಿಗೆ, ಸಂಘ-ಸಂಸ್ಥೆಗಳಿಗೆ ಜಾತ್ಯತೀತವಾಗಿ ಆರ್ಥಿಕ ಸಬಲೀಕರಣವಾಗಲು ಕಾರಣವೇ ಮಾಜಿ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪರಾಗಿದ್ದಾರೆ. ಅದೇ ರೀತಿ ಸಮಾಜಕ್ಕೆ ಮೂಲಭೂತ ಚೈತನ್ಯ ತುಂಬಿರುವಲ್ಲಿ ಬಿಳಿಕಿ ಶ್ರೀಗಳು ಕಾರ್ಯ ಶ್ಲಾಘನೀಯ ಎಂದರು.
ಸಾನ್ನಿಧ್ಯ ವಹಿಸಿದ್ದ ಎಡೆಯೂರು ಶ್ರೀಗಳಾದ ರೇಣುಕಾ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಜಗತ್ತಿನಲ್ಲಿ ದೇವರು ಹೇಗಿದ್ದಾನೆಂದು ಹುಡುಕಬಾರದು. ಗುರು ರೂಪದಲ್ಲಿ ದೇವರನ್ನು ಕಾಣಬೇಕು ಎಂದರು. ಬಿಳಿಕಿ ಹಿರೇಮಠದ ಪಟ್ಟಾಧ್ಯಕ್ಷ ಶ್ರೀ ರಾಚೋಟೇಶ್ವರ ಶಿವಾಚಾರ್ಯರು ಪ್ರಾಸ್ತಾವಿಕವಾಗಿ ಮಾತನಾಡಿ, ಶ್ರೀ ಮಠದ ಬೆಳವಣಿಗೆಗೆ ಸಹಕರಿಸಿದವರನ್ನು ಸ್ಮರಿಸಿದರು. ಬೆಕ್ಕಿನಕಲ್ಮಠ ಶ್ರೀ ಮತ್ತು ಬಿಳಿಕಿ ಶ್ರೀಗಳಿಗೆ ಜನ್ಮದಿನದ ಅಂಗವಾಗಿ ಎಡೆಯೂರು ಶ್ರೀಗಳು ಮತ್ತು ವಿವಿಧ ಭಾಗಗಳಿಂದ ಬಂದಿದ್ದ ಚರಮೂರ್ತಿ ಶಿವಾಚಾರ್ಯ ,ಅತಿಥಿಗಳು ಪುಷ್ಪ ವೃಷ್ಠಿಗರೆದರು. ಶಿಲಾ ಮಠದ ಶ್ರೀ ಡಾ| ಅಭಿನಯ ಸಿದ್ದಲಿಂಗ ಶಿವಾಚಾರ್ಯ, ರಟ್ಟೇ ಹಳ್ಳಿಯ ಕ ಬ್ಬಿಣ ಕಂತಿ ಮಠದ ಶ್ರೀ ಶಿವಲಿಂಗ ಶಿವಾಚಾರ್ಯರು, ಅಖೀಲ ಭಾರತ ವೀರಶೈವ ಮಹಾಸಭಾ ಯುವ ಘಟಕದ ರಾಜ್ಯಾಧ್ಯಕ್ಷ ಜಿ. ಮನೋಹರ್ ಅಬ್ಲಿಗೆರೆ, ನೀರು ಸರಬರಾಜು ಒಳ ಚರಂಡಿ ಮಂಡಳಿ ನಿರ್ದೇಶಕ ಮಂಗೋಟೆ ರುದ್ರೇಶ್, ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ, ತಾಲೂಕು ಅಧ್ಯಕ್ಷ ಸಿದ್ದಬಸಪ್ಪ, ಕೆ.ಇ. ಕಾಂತೇಶ್, ಟಿ.ವಿ.ಈಶ್ವರಯ್ಯ, ಗ್ರಾಪಂ ಅಧ್ಯಕ್ಷೆ ಪಾಪೀಬಾಯಿ ಮುಂತಾದವರಿದ್ದರು.
ಇದನ್ನೂ ಓದಿ : ಮುಂಬಯಿ ಷೇರುಪೇಟೆ ಸೆನ್ಸೆಕ್ಸ್, ನಿಫ್ಟಿ ಅಂಕ ಸಾರ್ವಕಾಲಿಕ ದಾಖಲೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.