ಗಣಪತಿ ಮೂರ್ತಿ ತಯಾರಿಕೆಗೆ ಕೊರೊನಾ ಅಡ್ಡಿ


Team Udayavani, Sep 7, 2021, 6:36 PM IST

Udayavani Shivamogga News

ಪ್ರಾತಿನಿಧಿಕ ಚಿತ್ರ

„ಕೆ.ಎಸ್‌. ಸುಧೀಂದ್ರ

ಭದ್ರಾವತಿ : ಗಣಪತಿ ಹಬ್ಬಕ್ಕೆ ಇನ್ನು ಕೇವಲ ನಾಲ್ಕು ದಿನಗಳು ಮಾತ್ರ ಉಳಿದಿವೆ. ಕೋವಿಡ್‌ ಆರಂಭಗೊಂಡ ನಂತರದಲ್ಲಿ ಸಾರ್ವಜನಿಕ ಗಣಪತಿ ಸ್ಥಾಪನೆ, ಉತ್ಸವಾದಿಗಳಿಗೆ ಸರ್ಕಾರ ಅವಕಾಶ ನಿರಾಕರಿಸಿದ್ದ ಕಾರಣ ಕಳೆದ ವರ್ಷದಂತೆಈಬಾರಿಯೂ ಸಹ ಮಣ್ಣಿನ ಗಣಪತಿ ತಯಾರಿಸುವ ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ಗಣಪತಿ ತಯಾರಿಸುವ ಗೋಜಿಗೆ ಹೋಗದೆ ಕೆಲವೇ ಗಣಪತಿ ಮೂರ್ತಿಗಳನ್ನು ತಯಾರಿಸಿದ್ದಾರೆ.

ಈವರ್ಷ ಕೋವಿಡ್‌ಮೂರನೇಅಲೆಯನಿರೀಕ್ಷೆಯಲ್ಲಿದ್ದರೂಸಹ ಸದ್ಯಕ್ಷೆ ರಾಜ್ಯದಲ್ಲಿ ಕೊರೊನಾ ಹಾವಳಿ ಇಳಿಮುಖವಾಗಿರುವುದರಿಂದ ಶಾಲಾ- ಕಾಲೇಜುಗಳು,ದೇವಾಲಯಗಳು ಪುನರಾರಂಭಗೊಂಡಿರುವುದನ್ನು ನೋಡಿದ ತಾಲೂಕಿನ ಗಣಪತಿ ತಯಾರಿಸುವ ಕಲಾವಿದರು ಸರ್ಕಾರ ಸಾರ್ವಜನಿಕ ಗಣಪತಿ ತಯಾರಿಕೆಗೆ ಅವಕಾಶ ನೀಡಬಹುದೆಂಬ ಆಶಾಭಾವನೆಯಿಂದ ಎರಡು ತಿಂಗಳು ಮುನ್ನವೇ ಗಣಪತಿ ತಯಾರಿಕೆಗೆ ಚಾಲನೆ ನೀಡಿದ್ದರು.

ಇದನ್ನೂ ಓದಿ : ಕೇರಳದಲ್ಲಿ ನಿಫಾ ವೈರಸ್‌ ಪತ್ತೆ ; ಗಡಿ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ತೀವ್ರ ನಿಗಾ

ಆದರೂ ಸಾರ್ವಜನಿಕವಾಗಿ ಗಣಪತಿಸ್ಥಾಪಿಸಿ ಕಾರ್ಯಕ್ರಮ ನಡೆಸುತ್ತಾ ಬಂದಿರುವ ಸಂಘ ಸಂಸ್ಥೆಗಳವರು ನೀಡಿದ ಆರ್ಡರ್‌ ಮೇರೆಗೆ ಮಾತ್ರ ವಿರಳಾತಿ ವಿರಳ ಸಂಖ್ಯೆಯಲ್ಲಿ ಗಣಪತಿ ಮೂರ್ತಿಗಳನ್ನು ತಯಾರಿಸಿದ್ದಾರೆ. ಹಳೇನಗರದ ನಗರದ ಕುಂಬಾರ ಬೀದಿಯಲ್ಲಿ ಕೆಲವರು ಮಣ್ಣಿನ ಗಣಪತಿ ತಯಾರಿಸಿ ಮಾರಾಟ ಮಾಡುವ ಕಾಯಕವನ್ನು ವಂಶಪಾರಂಪರ್ಯವಾಗಿ ನಡೆಸಿಕೊಂಡು ಬರುತ್ತಿದ್ದು ಅವರಲ್ಲಿ ಕೆಲವರು ಈಗಾಗಲೇ ಚಿಕ್ಕಗಾತ್ರದಿಂದ ಹಿಡಿದು ಮಧ್ಯಮ ಗಾತ್ರದ ಗಣಪತಿ ಮೂತಿಗಳನ್ನು ತಯಾರಿಸಿ ಮನೆಯ ಮುಂದೆ ಮಾರಾಟಕ್ಕಿಟ್ಟಿದ್ದಾರೆ.

ಅನುಮತಿನಂತರಹೆಚ್ಚದಬೇಡಿಕೆ:ಸರ್ಕಾರಸಾರ್ವಜನಿಕಗಣಪತಿ ಪ್ರತಿಷ್ಠಾಪನೆಗೆ ಸರ್ಕಾರ ಷರತ್ತುಬದ್ಧವಾದ ಅನುಮತಿ ನೀಡುತ್ತಿದ್ದಂತೆ ಸಂಘ-ಸಂಸ್ಥೆಗಳಿಂದ ಗಣಪತಿ ಮೂರ್ತಿಗೆ ಹೆಚ್ಚಿನ ಬೇಡಿಕೆ ಬರುತ್ತಿದೆ.

ಹಬ್ಬಕ್ಕೆಇನ್ನುಕೆಲವೇದಿನಗಳುಬಾಕಿಉಳಿದಿದ್ದರಿಂದಒಂದೆಡೆಬೇಡಿಕೆಗೆ ತಕ್ಕಷ್ಟು ಗಣಪತಿ ಮೂರ್ತಿ ಪೂರೈಸಲಾಗದೆ ಗಣಪತಿ ತಯಾರಿಸುವ ಕಲಾವಿದರು ಪೇಚಾಡುತ್ತಿದ್ದರೆ ‌ ಮತ್ತೂಂದೆಡೆ ಸಂಘ-ಸಂಸ್ಥೆಗಳು ಗಣಪತಿಮೂರ್ತಿ ಪಡೆಯಲು ಪರದಾಡುತ್ತಿದ್ದಾರೆ. ಸರ್ಕಾರ ಮುಂಚಿತವಾಗಿ ಆದೇಶ ಪ್ರಕಟಿಸಬೇಕಿತ್ತು ಗಣಪತಿ ತಯಾರಿಸುವ ಕಲಾವಿದರು ಹೇಳುವಂತೆ ಗಣಪತಿ ತಯಾರಿಕೆಗೆ ಮಣ್ಣನ್ನು ತಂದು ಹದಗೊಳಿಸಿ ಅದನ್ನು ಮಾಡಲು ಕೆಲವು ತಿಂಗಳು ಬೇಕಾಗುತ್ತದೆ. ಇದನ್ನು ಸರ್ಕಾರ ಗಮನಿಸಬೇಕು.

ಗಣಪತಿ ಹಬ್ಬ ಆಚರಿಸಬೇಕೇ ಬೇಡವೇ ಎಂಬ ಬಗ್ಗೆ ಹಬ್ಬ ಹತ್ತಿರಕ್ಕೆ ಬಂದಾಗ ಸರ್ಕಾರ ನಿರ್ಧರಿಸಿದರೆ ಬೇಡಿಕೆಗೆ ತಕ್ಕಷ್ಟು ಗಣಪತಿ ತಯಾರಿಕೆ ಪೂರೈಸಲು ಆಗುವುದಿಲ್ಲ. ಸರ್ಕಾರ ಇದನ್ನು ಗಮನಿಸಿ ಸಾಕಷ್ಟು ಪೂರ್ವಭಾವಿಯಾಗಿ ಚರ್ಚಿಸಿ ನಿರ್ಧಾರ ಪ್ರಕಟಿಸ ಬೇಕಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ವಂಶಪಾರಂಪರ್ಯವಾಗಿ ಕುಂಬಾರ ವೃತ್ತಿಯ ಜೊತೆಗೆ ಗೌರಿ ಗಣಪತಿ ಮಣ್ಣಿನ ಮೂರ್ತಿ ತಯಾರಿಸುವ ಕಲಾವಿದ ರುದ್ರಪ್ಪ ಅವರ ಪತ್ನಿ ಹೇಳುವಂತೆ ಹಬ್ಬದ ಆಚರಣೆಯಿಂದ ಸಂಸ್ಕೃತಿ, ಕಲೆ, ಸಂಪ್ರದಾಯ ಎಲ್ಲವೂ ಉಳಿಯುವಂತಾಗುತ್ತದೆ.

ಆದರೆ ಈಗ ಕೊರೊನಾದಿಂದಾಗಿ ನಾಗರಿಕರಾದ ನಾವು ಸರ್ಕಾರದ ನಿಯಮ ಪಾಲನೆ ಮಾಡಬೇಕಾದ್ದರಿಂದ ಸರ್ಕಾರ ನಿಗಪಡಿಸಿದ ಚಿಕ್ಕಗಾತ್ರದ ಕೆಲವೇ ಮೂರ್ತಿಗಳನ್ನು ಮಾತ್ರ ತಯಾರಿಸಿದ್ದೇವೆ ಎಂದು ಹೇಳುತ್ತಾರೆ. ಒಟ್ಟಿನಲ್ಲಿ ಕೊರೊನಾ ಕರಿನೆರಳು ಈ ಬಾರಿಯೂ ಸಾರ್ವಜನಿಕ ಗಣಪತಿ ಪ್ರತಿಷ್ಠಾಪನೆ ಮೇಲೆ ಬಿದ್ದಿದ್ದು ನಾಗರಿಕರು ಗಣೇಶೊತ್ಸವವನ್ನು ಆಚರಿಸುವಲ್ಲಿ ಸರ್ಕಾರದ ನಿಯಮಗಳನ್ನು ಹೇಗೆ ಪಾಲಿಸುತ್ತಾರೋ ಕಾದು ನೋಡಬೇಕಿದೆ.

ಇದನ್ನೂ ಓದಿ : 2023ರ ಚುನಾವಣೆಯಲ್ಲಿ ನೋಡೋಣ: ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಗೆ ರೇವಣ್ಣ ಚಾಲೆಂಜ್

ಟಾಪ್ ನ್ಯೂಸ್

Karkala: ತಿಂಗಳ ಹಿಂದೆ ಮೃತಪಟ್ಟಿದ್ದ ಪತಿ, ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿಯೂ ವಿದ್ಯುತ್ ಆಘಾತದಿಂದ ಮೃ*ತ್ಯು

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-thirthahalli

Thirthahalli: ಶಾಸಕ ಸ್ಥಾನವನ್ನು ಗಿರವಿ ಇಟ್ಟರಾ ಆರಗ ಜ್ಞಾನೇಂದ್ರ ?

Shimoga; Deport Zameer Ahmed: ​​MLA Channabasappa

Shimoga; ಜಮೀರ್‌ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ

8

Holehonnuru: ಕಿರು ಅರಣ್ಯ ಪ್ರದೇಶದಲ್ಲಿ ಕಡವೆ ಬೇಟೆ; ಆರೋಪಿ ಬಂಧನ

6-hosanagar

Hosanagara: ಚಾಲಕನ ನಿಯಂತ್ರಣ ತಪ್ಪಿ ಕ್ಯಾಂಟರ್ ಪಲ್ಟಿ; ದೇಗುಲಕ್ಕೆ ಹಾನಿ

Shimoga: ಶರಾವತಿ ಹಿನ್ನೀರಿನಲ್ಲಿ ತೆಪ್ಪ ಮಗುಚಿ ನಾಪತ್ತೆಯಾಗಿದ್ದ ಮೂವರ ಶವ ಪತ್ತೆ

Shimoga: ಶರಾವತಿ ಹಿನ್ನೀರಿನಲ್ಲಿ ತೆಪ್ಪ ಮಗುಚಿ ನಾಪತ್ತೆಯಾಗಿದ್ದ ಮೂವರ ಶವ ಪತ್ತೆ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

7

Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು

Karkala: ತಿಂಗಳ ಹಿಂದೆ ಮೃತಪಟ್ಟಿದ್ದ ಪತಿ, ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

6

Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ

5

Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿಯೂ ವಿದ್ಯುತ್ ಆಘಾತದಿಂದ ಮೃ*ತ್ಯು

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.