ವೀರಭದ್ರ ಎಲ್ಲ ಸಮುದಾಯದ ಆರಾಧ್ಯದೇವ;, ಸಂಸದ ಬಿ.ವೈ. ರಾಘವೇಂದ್ರ

ವೀರಭದ್ರರ ಅವತಾರ ಭಾರತದ ಅಖಂಡತೆಯನ್ನು ಸಾರುತ್ತದೆ

Team Udayavani, Sep 6, 2022, 6:34 PM IST

ವೀರಭದ್ರ ಎಲ್ಲ ಸಮುದಾಯದ ಆರಾಧ್ಯದೇವ;, ಸಂಸದ ಬಿ.ವೈ. ರಾಘವೇಂದ್ರ

ಶಿವಮೊಗ್ಗ: ವೀರಭದ್ರ ವೀರನೂ ಹೌದು, ಭದ್ರನೂ ಹೌದು. ದುಷ್ಟರ ಪಾಲಿಗೆ ಶಿಕ್ಷಕನಾಗಿದ್ದಾನೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು. ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ವತಿಯಿಂದ ಸೋಮವಾರ ಆಯೋಜಿಸಿದ್ದ ಶ್ರೀ ವೀರಭದ್ರೇಶ್ವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಮಾಜದ ಮುಂದಿನ ಪೀಳಿಗೆಗೆ ಮೇಲ್ಪಂಕ್ತಿ ಹಾಕುವ ಸಲುವಾಗಿ ಯಡಿಯೂರಪ್ಪನವರು ಹಿರಿಯರೊಂದಿಗೆ ಚರ್ಚಿಸಿ ವೀರಭದ್ರ ಜಯಂತಿಗೆ ಕ್ರಮ ಕೈಗೊಂಡಿದ್ದಾರೆ. ಈ ಜಯಂತಿ ಮಾಡಲು ಸರ್ಕಾರ ಘೋಷಣೆ ಮಾಡುವಲ್ಲಿ ಪ್ರದೀಪ್‌ ಕಂಕನವಾಡಿಯವರ ಶ್ರಮ ಇದೆ. ಎಲ್ಲಾ ಸಮುದಾಯದವರು ವೀರಭದ್ರನ ಆರಾಧನೆ ಮಾಡುತ್ತಾರೆಂಬ ಕಾರಣಕ್ಕೆ ಆಚರಿಸಲಾಗುತ್ತದೆ. ಮಂಗಳವಾರ ವೀರಭದ್ರ ಹುಟ್ಟಿದ ದಿನವಾಗಿದೆ ಎಂದರು.

ವಿಧಾನ ಪರಿಷತ್‌ ಸದಸ್ಯ ಆಯನೂರು ಮಂಜುನಾಥ್‌ ಮಾತನಾಡಿ, ವೀರಶೈವ ಸಮಾಜ ವೀರಭದ್ರನ ತರವೇ ಇರಬೇಕು. ಶಿವನ ಕೋಪದಿಂದ ಉದ್ಭವಿಸಿದ ವೀರಭದ್ರ ಅಪಮಾನಕಾರಿ ಸಂಗತಿಗಳಾದಾಗ ದಂಡಿಸುವ ಕೆಲಸ ಮಾಡಿದ್ದಾನೆ. ವೀರಶೈವ ಲಿಂಗಾಯತ ಎಂದು ಒಡೆಯುವ ಕೆಲಸವೂ ನಡೆದಿತ್ತು. ನಾವ್ಯಾರು ಎಂಬ ಅನುಮಾನವೂ ಆರಂಭವಾಗಿತ್ತು. ನಮ್ಮ ಸಂಪ್ರದಾಯ, ಆಚರಣೆ, ಸಂಸ್ಕೃತಿಯನ್ನು ಹೇಳಿಕೊಡಬೇಕಿದೆ. ಹುಟ್ಟಿನಿಂದ ವೀರಶೈವರಾಗುತ್ತಿದ್ದೇವೆಯೇ ಹೊರತೂ ಆಚರಣೆಯನ್ನು ಬಿಡುತ್ತಿದ್ದೇವೆ. ಇದು ಆಗಬಾರದು ಎಂದರು.

ಕುವೆಂಪು ವಿವಿ ಕುಲಪತಿ ಪ್ರೊ| ಬಿ.ಪಿ. ವೀರಭದ್ರಪ್ಪ ಮಾತನಾಡಿ, ಯಾವ ಆಚರಣೆಗಳು ಸಮಾಜಕ್ಕೆ ಬೇಕಾಗಿದೆ ಎಂಬುದನ್ನು ಅರಿತುಕೊಳ್ಳಬೇಕಾಗಿದೆ. ಎಲ್ಲಾ ಕ್ಷೇತ್ರಗಳಲ್ಲಿ ವೀರಶೈವ ಲಿಂಗಾಯಿತರು ಬೆಳೆಯಬೇಕು. ಅಭಿವೃದ್ಧಿ ಪಥವನ್ನು ಕಾಣಬೇಕು. ಆಜಾದಿ ಕಾ ಅಮೃತ ಮಹೋತ್ಸವದ ಸಂದರ್ಭದಲ್ಲಿ ವೀರಭದ್ರೇಶ್ವರ ಅಮರ ಎಂದು ತಿಳಿದು ನಮ್ಮ ಸಮಾಜ ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿ ಮಾಡಬೇಕಾಗಿದೆ.

ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಶೇ. 100 ರಷ್ಟು ಜನ ಉನ್ನತ ಶಿಕ್ಷಣ ಪಡೆಯುತ್ತಾರೆ. ಹಾಗಾಗಿ ಅಲ್ಲಿ ಬಡತನ, ದಾರಿದ್ರ್ಯವಿಲ್ಲ. ನಮ್ಮ ದೇಶದಲ್ಲಿ ಉನ್ನತ ಶಿಕ್ಷಣ ಪಡೆಯುವವರ ಸಂಖ್ಯೆ ಶೇ. 26 ರಷ್ಟು ಮಾತ್ರ. ಹಾಗಾಗಿ ನಾವು ಬಡತನ ಅನುಭವಿಸುತ್ತಿದ್ದೇವೆ. ನಮ್ಮ ಸಮಾಜದ ಆಚರಣೆಗಳನ್ನು ಬಿಡದೇ ಸಮಾಜದ ಎಲ್ಲಾ ಬಂಧುಗಳು ಶೈಕ್ಷಣಿಕ ಅಭಿವೃದ್ಧಿ ಹೊಂದಬೇಕು ಎಂದರು.

ವೀರೇಶ್‌ ಬಾಬು ವಿಶೇಷ ಉಪನ್ಯಾಸ ನೀಡಿ, ವೀರಭದ್ರನಲ್ಲಿಯೂ ಶಿವ ಶಕ್ತಿ ಇದೆ. ಭದ್ರಕಾಳಿ ಸ್ವರೂಪನಾಗಿ ಉದ್ಭವಾದವನು ವೀರಭದ್ರ. ವೀರಶೈವ ಧರ್ಮದ ಸಾರವನ್ನು ಜಗತ್ತಿಗೆ ಸಾರಿದವನು ವೀರಭದ್ರ. ವೀರಭದ್ರರ ಅವತಾರ ಭಾರತದ ಅಖಂಡತೆಯನ್ನು ಸಾರುತ್ತದೆ. ಬೇರೆ ಬೇರೆ ರೂಪದಲ್ಲಿ ಜನ್ಮ ತಾಳಿ ಲೋಕ ಕಲ್ಯಾಣ ಮಾಡಿದ್ದಾರೆ ಎಂದರು.

ರಂಭಾಪುರಿ ಪೀಠದ ಶ್ರೀ ಡಾ| ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು, ಮಳಲಿ ಮಠದ ಶ್ರೀ ಡಾ|ಗುರುನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ರಾಷ್ಟ್ರಯ ಅಧ್ಯಕ್ಷ ಪ್ರದೀಪ್‌ ಕಂಕಣವಾಡಿ, ಜಿಲ್ಲಾಧ್ಯಕ್ಷ ಸಿ.ಪಿ. ಈರೇಶ್‌ ಗೌಡ್ರು, ಎಸ್‌.ಎಸ್‌. ಜ್ಯೋತಿ ಪ್ರಕಾಶ್‌, ಎನ್‌.ಜೆ. ರಾಜಶೇಖರ್‌, ಎಸ್‌.ಪಿ. ದಿನೇಶ್‌, ಅನಿತಾ ರವಿಶಂಕರ್‌, ಡಾ| ಧನಂಜಯ ಸರ್ಜಿ, ಇ.ವಿಶ್ವಾಸ್‌, ರುದ್ರಮುನಿ ಸಜ್ಜನ್‌, ಈರೇಶ್‌ ಗೌಡ್ರು, ಟಿ.ವಿ. ವೀರಯ್ಯ, ಬಳ್ಳೆಕೆರೆ ಸಂತೋಷ್‌, ಎಸ್‌.ಎನ್‌. ಚನ್ನಬಸಪ್ಪ, ಧನರಾಜ್‌ ಬಿ.ಜಿ., ಡಿ.ಎಚ್‌. ಡಾ| ರಾಜೇಶ್‌ ಸುರಗಿಹಳ್ಳಿ, ಎಚ್‌.ವಿ. ಮಹೇಶ್ವರಪ್ಪ, ಬಿಂದುಕುಮಾರ್‌, ಎನ್‌.ಜೆ. ನಾಗರಾಜ್‌, ರೇಖಾ, ಎಚ್‌.ಸಿ. ಯೋಗೀಶ್‌ ಮತ್ತಿತರರು ಇದ್ದರು. ಚೌಕಿಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಳಗ್ಗೆ ರಂಭಾಪುರಿ ಶ್ರೀಗಳು ಇಷ್ಟಲಿಂಗ ಪೂಜೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು.

ಟಾಪ್ ನ್ಯೂಸ್

rohit

BCCI 10-point ಆದೇಶ ಸಮಸ್ಯೆ; ಮೀಸಲಾತಿ ಹೊಂದಿದ್ದೇವೆ ಎಂದು ರೋಹಿತ್ ಸುಳಿವು

kohli

Ranji Trophy; ಸೌರಾಷ್ಟ್ರ ವಿರುದ್ಧ ರಣಜಿ ಪಂದ್ಯದಿಂದ ಹೊರಗುಳಿದ ಕೊಹ್ಲಿ

MB-Patil-Mi

ವಿಜಯೇಂದ್ರ ಪೂರ್ಣಾವಧಿ ಬಿಜೆಪಿ ಅಧ್ಯಕ್ಷರಾಗಿರ್ತಾರೆನ್ನುವ ವಿಶ್ವಾಸವಿದೆಯಾ?: ಎಂ.ಬಿ.ಪಾಟೀಲ್‌

police crime

Saif Ali Khan ಪ್ರಕರಣ: ಶಂಕಿತ ಆರೋಪಿ ಛತ್ತೀಸ್‌ಘಡದಲ್ಲಿ ರೈಲ್ವೆ ಪೊಲೀಸರ ಬಲೆಗೆ?

Maha Kumbh 2025: ನಾಗಾ ಸಾಧುಗಳಿಗೂ…ಅಘೋರಿಗಳಿಗೂ ಇರುವ ವ್ಯತ್ಯಾಸವೇನು? ಆಹಾರ ಪದ್ಧತಿ ಹೇಗೆ

Maha Kumbh 2025: ನಾಗಾ ಸಾಧುಗಳಿಗೂ…ಅಘೋರಿಗಳಿಗೂ ಇರುವ ವ್ಯತ್ಯಾಸವೇನು? ಆಹಾರ ಪದ್ಧತಿ ಹೇಗೆ

1-dee

Maha Kumbh; 7 ಕೋಟಿ ರುದ್ರಾಕ್ಷಿಗಳಿಂದ 12 ಜ್ಯೋತಿರ್ ಲಿಂಗಗಳ ರಚನೆ

Gudibande: ಬುದ್ದಿವಾದ ಹೇಳಿದ್ದೆ ತಪ್ಪಾಯ್ತು… ವಿದ್ಯುತ್ ಹರಿಸಿ ವ್ಯಕ್ತಿಯ ಕೊಲೆ ಯತ್ನ

Gudibande: ಬುದ್ದಿವಾದ ಹೇಳಿದ್ದೆ ತಪ್ಪಾಯ್ತು… ವಿದ್ಯುತ್ ಹರಿಸಿ ವ್ಯಕ್ತಿಯ ಕೊಲೆ ಯತ್ನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sagara: ಜ. 22ರಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ಡಾಕ್ಟರೇಟ್ ಪ್ರದಾನ 

Sagara: ಜ. 22ರಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ಡಾಕ್ಟರೇಟ್ ಪ್ರದಾನ 

ನಾನು ಪ್ರತಿಭಟನೆ, ಪಾದಯಾತ್ರೆ ಮಾಡಿದಷ್ಟು ಯಾವ ರಾಜಕಾರಣಿಯೂ ಮಾಡಿಲ್ಲ: ಕಿಮ್ಮನೆ

ನಾನು ಪ್ರತಿಭಟನೆ, ಪಾದಯಾತ್ರೆ ಮಾಡಿದಷ್ಟು ಯಾವ ರಾಜಕಾರಣಿಯೂ ಮಾಡಿಲ್ಲ: ಕಿಮ್ಮನೆ

Sagara: ಅಭಿವೃದ್ಧಿ ಮಾಡಲಾಗದವರಿಂದ ಫ್ಲೆಕ್ಸ್ ಪ್ರಚಾರ… ಬೇಳೂರು ಕುರಿತು ಹಾಲಪ್ಪ ವ್ಯಂಗ್ಯ

Sagara: ಅಭಿವೃದ್ಧಿ ಮಾಡಲಾಗದವರಿಂದ ಫ್ಲೆಕ್ಸ್ ಪ್ರಚಾರ… ಬೇಳೂರು ಕುರಿತು ಹಾಲಪ್ಪ ವ್ಯಂಗ್ಯ

Shimoga: Prisoner attempts ends his by consuming poison in Central Jail

Shimoga: ಸೆಂಟ್ರಲ್‌ ಜೈಲಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಖೈದಿ

Holehonnur

ಹೊಳೆಹೊನ್ನೂರು ಸುತ್ತಮುತ್ತಲು ಅಡಿಕೆ ಕಳ್ಳತನ: ಮೂವರು ಆರೋಪಿಗಳ ಬಂಧನ

MUST WATCH

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

ಹೊಸ ಸೇರ್ಪಡೆ

rohit

BCCI 10-point ಆದೇಶ ಸಮಸ್ಯೆ; ಮೀಸಲಾತಿ ಹೊಂದಿದ್ದೇವೆ ಎಂದು ರೋಹಿತ್ ಸುಳಿವು

kohli

Ranji Trophy; ಸೌರಾಷ್ಟ್ರ ವಿರುದ್ಧ ರಣಜಿ ಪಂದ್ಯದಿಂದ ಹೊರಗುಳಿದ ಕೊಹ್ಲಿ

MB-Patil-Mi

ವಿಜಯೇಂದ್ರ ಪೂರ್ಣಾವಧಿ ಬಿಜೆಪಿ ಅಧ್ಯಕ್ಷರಾಗಿರ್ತಾರೆನ್ನುವ ವಿಶ್ವಾಸವಿದೆಯಾ?: ಎಂ.ಬಿ.ಪಾಟೀಲ್‌

puttige-8-

Puthige Matha: ವಿಶ್ವ ಗೀತಾ ಪರ್ಯಾಯಕ್ಕೆ‌ ಇಂದಿಗೆ ವರ್ಷ ಪೂರ್ಣ

police crime

Saif Ali Khan ಪ್ರಕರಣ: ಶಂಕಿತ ಆರೋಪಿ ಛತ್ತೀಸ್‌ಘಡದಲ್ಲಿ ರೈಲ್ವೆ ಪೊಲೀಸರ ಬಲೆಗೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.