Anandapur: ತೋಟಕ್ಕೆ ಕಾಡಾನೆ ಹಾವಳಿ… ಅಧಿಕಾರಿಗಳ ನಿರ್ಲಕ್ಷಕ್ಕೆ ಗ್ರಾಮಸ್ಥರ ಆಕ್ರೋಶ
Team Udayavani, Dec 30, 2024, 4:11 PM IST
ಆನಂದಪುರ: ಸಮೀಪದ ಆಚಾಪುರ ಗ್ರಾಮ ಪಂಚಾಯತಿಯ ಪತ್ರ ಹೊಂಡ ಗ್ರಾಮದಲ್ಲಿ ಅಡಕೆ ತೋಟಕ್ಕೆ ನುಗ್ಗಿದ ಆನೆಗಳು ಬೆಳೆಯನ್ನು ನಾಶಪಡಿಸಿದ ಘಟನೆ ಭಾನುವಾರ(ಡಿ.29) ರಾತ್ರಿ ನಡೆದಿದೆ.
ಪತ್ರ ಹೊಂಡ ಗ್ರಾಮದ ಗೀತಮ್ಮ ವೆಂಕಟಸ್ವಾಮಿ ಎಂಬುವರ ಅಡಿಕೆ ತೋಟಕ್ಕೆ ಕಾಡಾನೆಗಳು ಭಾನುವಾರ ರಾತ್ರಿ ದಾಳಿ ಮಾಡಿ ಅಡಿಕೆ, ಬಾಳೆ ಹಾಗೂ ತೆಂಗು ಬೆಳೆಗಳಿಗೆ ಹಾನಿ ಉಂಟುಮಾಡಿವೆ. ಇದರಿಂದ ಸುಮಾರು 30ಕ್ಕೂ ಹೆಚ್ಚು ಅಡಿಕೆ ಮರ, ತೆಂಗಿನ ಗಿಡ, ಹಾಗೂ ಬಾಳೆಯ ಗಿಡಗಳು ನಾಶವಾಗಿವೆ.
ಡಿಸೆಂಬರ್ ತಿಂಗಳ ಮೊದಲಿನಿಂದಲೂ ಗಿಳಾಲ್ ಗುಂಡಿ ಅರಣ್ಯ ಪ್ರದೇಶದ ತಂಗಳವಾಡಿ, ಕಣ್ಣೂರು, ಕಂಚಾಳಸರ, ಅಂಬ್ಲಿಗೋಳ, ಮೂಡಹಗಲು, ಲಕ್ಕವಳ್ಳಿ, ಕೆರೆ ಹಿತ್ಲು, ಈ ಭಾಗದಲ್ಲಿ ಆನೆಗಳು ನಿರಂತರವಾಗಿ ರೈತರ ಬೆಳೆಗೆ ಹಾನಿಗೊಳಿಸುತ್ತಿವೆ. ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಆನೆಗಳನ್ನು ಓಡಿಸುವಲ್ಲಿ ನಿರ್ಲಕ್ಷತನ ತೋರುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಆಚಾಪುರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪ್ರಕಾಶ್ ತಂಗಳವಾಡಿ ಮಾತನಾಡಿ ಕಳೆದ ಒಂದು ತಿಂಗಳಿಂದ ಆನೆಗಳು ರೈತರ ಬೆಳೆಯನ್ನು ನಾಶಪಡಿಸಿದ್ದು ಅಲ್ಲದೆ ಆನೆಯ ವಿಚಾರದಲ್ಲಿ ಭಯಭೀತರಾದ ರೈತರು ಇನ್ನೂ ಹೆಚ್ಚಿನ ಆತಂಕ ಪಡುವಂತಾಗಿದೆ. ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಶಾಸಕರು ಭೇಟಿ ಕೊಟ್ಟಾಗ ಮಾತ್ರ ಅಧಿಕಾರಿಗಳು ಭೇಟಿ ನೀಡುತ್ತಾರೆ. ಆನೆಗಳನ್ನೂ ಓಡಿಸುವ ಕೆಲಸ ಅರಣ್ಯ ಇಲಾಖೆ ಮಾಡಬೇಕಾಗಿದೆ. ಕ್ಷೇತ್ರದ ಶಾಸಕರು ತಕ್ಷಣವೇ ಅರಣ್ಯ ಇಲಾಖೆಯವರಿಗೆ ಸೂಚನೆ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: Malpe Beach: ಶೈಕ್ಷಣಿಕ ಪ್ರವಾಸಕ್ಕೆ ಬರುವ ವಿದ್ಯಾರ್ಥಿಗಳ ಮೇಲೆ ನಿಗಾ ಅಗತ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru:ಬೈಕ್ ಶೋರೂಂನಲ್ಲಿ ಬೆಂಕಿ ಅವಘಡ; ಸುಟ್ಟು ಹೋದ 50ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು
Hampi: ಹಂಪಿ ಉತ್ಸವಕ್ಕೆ ಮಹೂರ್ತ ಫಿಕ್ಸ್! ಫೆ.28 ರಿಂದ 3 ದಿನ ಉತ್ಸವ ಆಚರಣೆ
Davanagere: ಆತ್ಮಹತ್ಯೆ ಮಾಡಿಕೊಂಡಿರುವ ಸಚಿನ್ ಗುತ್ತಿಗೆದಾರನೇ ಅಲ್ಲ…
Hasana: ಕರೆಯನ್ನು ಸ್ವೀಕರಿಸದ ಪ್ರಿಯಕರಗೆ ಚಾಕು ಇರಿದು ಪ್ರಿಯತಮೆ ಪರಾರಿ
Kasturiranganವರದಿ: ಕೇರಳ ಹೊರತು ಉಳಿದ ಯಾವುದೇ ರಾಜ್ಯ ಫಿಸಿಕಲ್ ಸರ್ವೆ ನಡೆಸಿವರದಿ ನೀಡಿಲ್ಲ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mudbidri: ದುರ್ಬಲ ನೀರ್ಕೆರೆ ಸೇತುವೆ; ಹೊಸ ವರುಷಕ್ಕೆ ಹೊಸತು?
Mulki ರೈಲು ನಿಲ್ದಾಣಕ್ಕೆ ನಗರ ಪಂಚಾಯತ್ ಮೂಲ ಸೌಕರ್ಯ
ಪತಿ-ಪತ್ನಿ ಜಗಳದಲ್ಲಿ ಬಾವಿಗೆ ಹಾರಿದ ಪತಿ… ರಕ್ಷಣೆಗೆ ಹೋದ ನಾಲ್ವರು ಸೇರಿ 5 ಮಂದಿ ದುರ್ಮರಣ
ಚಲಿಸುತ್ತಿದ್ದ ಖಾಸಗಿ ಬಸ್‌ನಲ್ಲಿ ದಿಢೀರ್ ಕಾಣಿಸಿಕೊಂಡ ಬೆಂಕಿ; ತಪ್ಪಿದ ಭಾರಿ ಅನಾಹುತ
ಹೊಸ ವರ್ಷದ ಕೊಡುಗೆ: ಬೈಸಿಕಲ್ ಉತ್ತೇಜನಕ್ಕೆ ಉಚಿತ ರೈಡ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.