Shivamogga: ಬೆಂಗ್ಳೂರಿಗೆ ಹರಿಯುತ್ತ ಶರಾವತಿ-ನೇತ್ರಾವತಿ ನೀರು?
ಕಾರ್ಯಸಾಧ್ಯತೆ ವರದಿ ಪಡೆಯಲು ಸರ್ಕಾರ ತಯಾರಿ | ಈಐ ಟೆಕ್ನಾಲಾಜೀಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ ಟೆಂಡರ್
Team Udayavani, Aug 12, 2024, 12:53 PM IST
ಶಿವಮೊಗ್ಗ: ಬೆಂಗಳೂರಿನ ದಾಹ ತೀರಿಸಲು ಸರ್ಕಾರ ಪಶ್ಚಿಮಾಭಿಮುಖವಾಗಿ ಹರಿದು ಅರಬ್ಬಿ ಸಮುದ್ರ ಸೇರುವ ನದಿಗಳಾದ ಶರಾವತಿ ಹಾಗೂ ನೇತ್ರಾವತಿ ಕಡೆ ಕಣ್ಣಿಟ್ಟಿದೆ. ಈ ಬಗ್ಗೆ ಬೆಂಗಳೂರಿಗೆ ನೀರು ತರಲು ಕಾರ್ಯಸಾಧ್ಯತೆ (ಫೀಸಿಬಿಲಿಟಿ) ವರದಿ ಪಡೆಯಲು ಮುಂದಾಗಿದೆ.
ವಿಶ್ವೇಶ್ವರಯ್ಯ ಜಲ ನಿಗಮವು ತನ್ನ ವ್ಯಾಪ್ತಿಗೆ ಬರುವ ಶರಾವತಿ, ನೇತ್ರಾವತಿ ನದಿಗಳಿಂದ ಬೆಂಗಳೂರಿಗೆ ನೀರು ತರುವ ಸಾಧ್ಯತೆ ಬಗ್ಗೆ ವರದಿ ಪಡೆಯಲು ಟೆಂಡರ್ ಆಹ್ವಾನಿಸಿದೆ. ಶರಾವತಿ ನದಿಯಿಂದ ನೀರು ತರುವ ಬಗ್ಗೆ ಬೆಂಗಳೂರಿನ ಈಐ ಟೆಕ್ನಾಲಾಜೀಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಟೆಂಡರ್ ಪಡೆದಿದ್ದು, ಮೂರ್‍ನಾಲ್ಕು ತಿಂಗಳಲ್ಲಿ ವರದಿ ನೀಡುವ ಸಾಧ್ಯತೆ ಇದೆ. ಇನ್ನು ನೇತ್ರಾವತಿ ನದಿಯಿಂದ ನೀರು ತರುವ ವರದಿ ನೀಡಲು ಟೆಂಡರ್ ಕರೆದಿದೆ. ಬೆಂಗಳೂರಿನಿಂದ 250 ಕಿ.ಮೀ.ಗೂ ಅ ಧಿಕ ದೂರುವಿರುವ ಈ ಎರಡು ನದಿಗಳಿಂದ ನೀರು ತರಲು ಸರ್ಕಾರ ಹೊರಟಿದೆ.
15 ಟಿಎಂಸಿ ನೀರು: 2018ರಲ್ಲಿಯೂ ಶರಾವತಿ ನದಿಯಿಂದ ನೀರು ತರುವ ಪ್ರಸ್ತಾಪ ಮಲೆನಾಡಿನ ಜನರ ವಿರೋಧದಿಂದ ಕೈಬಿಡಲಾಗಿತ್ತು. ಬೆಂಗಳೂರು ಜಲಮಂಡಳಿ 15 ಟಿಎಂಸಿ ನೀರನ್ನು ಶರಾವತಿ ನದಿಯಿಂದ ತರಲು ಸಿದ್ಧವಾಗಿದೆ. ಸೊರಬ ತಾಲೂಕಿಗೆ ಕೊಂಡೊಯ್ಯಲು ಯೋಜನೆ ಸಿದ್ಧವಾಗಿದೆ.
ಮಲೆನಾಡಿನ ಜನರಿಗೆ ಆಘಾತ: ಕೇಂದ್ರ ಸರ್ಕಾರ 8,500 ಕೋಟಿ ರೂ. ವೆಚ್ಚದ ಶರಾ ವತಿ ಅಂತರ್ಗತ ಭೂಗರ್ಭ ಜಲ ವಿದ್ಯುತ್ ಯೋಜನೆಗೆ ಅನುಮತಿ ನೀಡಿದ್ದು, ಶರಾವತಿ ನೀರನ್ನು ಮತ್ತೂಮ್ಮೆ ಹಿಂಡಿ ವಿದ್ಯುತ್ ತಯಾರಿಸಲು ಹೊರಟಿದೆ. ಈ ನಡುವೆ ಬೆಂಗಳೂರಿಗೆ ನೀರು ಕೊಂಡೊ ಯ್ಯುವ ಸಾಧ್ಯತೆ ಪರಿಶೀಲನೆಗೆ ಮುಂದಾಗಿದೆ. ಶರಾವತಿಗೆ ಕಟ್ಟಿರುವ ಲಿಂಗನಮಕ್ಕಿ ಡ್ಯಾಂ ಐದು ವರ್ಷಕ್ಕೊಮ್ಮೆ ಭರ್ತಿಯಾದರೆ ಹೆಚ್ಚು.
ಇನ್ನೊಂದೆಡೆ, ಈಗಾಗಲೇ ನೇತ್ರಾವತಿ ನದಿಯಿಂದ ಎತ್ತಿನಹೊಳೆ ಮೂಲಕ ತಿಪ್ಪಗೊಂಡನಹಳ್ಳಿ ಡ್ಯಾಂಗೆ 1.7 ಟಿಎಂಸಿ ನೀರು ತಂದು ಬೆಂಗಳೂರು ನಗರದ ಪಶ್ಚಿಮ ಭಾಗಕ್ಕೆ 110 ಎಂಎಲ್‌ಡಿ ನೀರು ಪೂರೈಸುವ ಕಾರ್ಯ ಅನುಷ್ಠಾನದ ಹಂತದಲ್ಲಿದೆ. 2017ರಲ್ಲಿ ನೇತ್ರಾವತಿ ನದಿಗೆ ಅಲ್ಲಲ್ಲಿ ಜಲಾಶಯ ನಿರ್ಮಾಣ ಮಾಡಿ 20 ಟಿಎಂಸಿ ನೀರನ್ನು ಸಂಗ್ರಹಿಸಬಹುದು ಹಾಗೂ ಮಂಗಳೂರು ನಗರಕ್ಕೂ ನೀರು ಕೊಡಬಹುದು ಎಂದು ವರದಿ ನೀಡಲಾಗಿತ್ತಾದರೂ ವಿರೋಧದಿಂದ ಕೈಬಿಡಲಾಯಿತು. ಈಗ ಮತ್ತೂಮ್ಮೆ ಸರ್ಕಾರ ಹೊಸ ಸಾಧ್ಯತೆ ಪರಿಶೀಲನೆಗೆ ಹೊರಟಿದೆ.
ಟೆಂಡರ್ ಕರೆಯಲಾಗಿದೆ. ಟೆಂಡರ್ ಪಡೆದವರು ಕಾರ್ಯ ಸಾಧ್ಯತೆ ವರದಿ ನೀಡಿದ ಮೇಲೆ ಯೋಜನೆ ಬಗ್ಗೆ ಮಾಹಿತಿ ಸಿಗಲಿದೆ.
– ವರದಯ್ಯ, ಎತ್ತಿನಹೊಳೆ ಯೋಜನೆ ಮುಖ್ಯ ಎಂಜಿನಿಯರ್
ಶರಾವತಿ ನದಿಯಿಂದ ಬೆಂಗ ಳೂರಿಗೆ ನೀರು ತೆಗೆದುಕೊಂಡು ಹೋಗುವ ಸಂಬಂಧ ಕಾರ್ಯಸಾಧ್ಯತೆ ವರದಿ ನೀಡಲು ಟೆಂಡರ್ ಕರೆಯ ಲಾಗಿದೆ. ಬೆಂಗಳೂರಿನ ಈಐ ಟೆಕ್ನಾಲಾ ಜೀಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಟೆಂಡರ್ ಪಡೆದಿದ್ದು, 4 ತಿಂಗಳೊಳಗೆ ಕಾರ್ಯಸಾಧ್ಯತೆ ವರದಿ ನೀಡಲಿದ್ದಾರೆ.– ಪಿ.ಎಚ್.ಲಮಾಣಿ, ಚೀಫ್ ಎಂಜಿನಿಯರ್, ಭದ್ರಾ ಮೇಲ್ದಂಡೆ ಯೋಜನೆ
– ಶರತ್ ಭದ್ರಾವತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್
Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ
Tragedy: ಭೀಕರ ಬೈಕ್ ಅಪಘಾತ… ಕಾಲೇಜಿಗೆ ಹೊರಟಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತ್ಯು
Bellary; ಜನಾರ್ದನ ರೆಡ್ಡಿ ಪಟಾಲಂ ರಾಜಕೀಯವಾಗಿ ಮತ್ತೆ ಬೆಳೆಯದಂತೆ ಮಾಡಬೇಕು: ಸಿದ್ದರಾಮಯ್ಯ
Hubli: ಪ್ರಿಯಾಂಕ್ ಖರ್ಗೆಗೆ ಎಫ್‌ಐಆರ್ ಹಾಕಿಸುವುದೇ ಕೆಲಸ: ತೇಜಸ್ವಿ ಸೂರ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.