ವಿಶ್ವ ಆನೆಗಳ ದಿನಾಚರಣೆ ಹಿನ್ನೆಲೆ: ಸಕ್ರೇಬೈಲು ಆನೆ ಬಿಡಾರದಲ್ಲಿ ವಿಶೇಷ ಪೂಜೆ
ವಿಶ್ವ ಆನೆಗಳ ದಿನಾಚರಣೆಯ ವಿಶೇಷತೆ ಏನು?
Team Udayavani, Aug 12, 2021, 1:40 PM IST
ಶಿವಮೊಗ್ಗ: ಇಂದು ವಿಶ್ವ ಆನೆಗಳ ದಿನಾಚರಣೆ. ಈ ಹಿನ್ನೆಲೆಯಲ್ಲಿ ಸಕ್ರೆಬೈಲು ಆನೆ ಬಿಡಾರದಲ್ಲಿ ಆನೆಗಳಿಗೆ ವಿಶೇಷ ಪೂಜೆ ನಡೆಸಲಾಗಿದೆ.
ಗಾಜನೂರು ಬಳಿಯ ಸಕ್ರೇಬೈಲಿನಲ್ಲಿರುವ ಆನೆ ಬಿಡಾರದಲ್ಲಿ ಆನೆಗಳಿಗೆ ಪೂಜೆ ಸಲ್ಲಿಸಿ, ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಆಹಾರ ನೀಡಿದರು. ಸಿಸಿಎಫ್ ರವಿಶಂಕರ್, ಡಿಎಫ್ಓ ಐ.ಎಂ.ನಾಗರಾಜ್ ನೇತೃತ್ವದಲ್ಲಿ ಆನೆಗಳಿಗೆ ಪೂಜೆ ಮಾಡಲಾಯಿತು.
ಪ್ರತಿವರ್ಷ ಆನೆಗಳ ದಿನಾಚರಣೆ ಸಂದರ್ಭದಲ್ಲಿ ಆನೆಗಳ ಕ್ರೀಡಾಕೂಟ ಆಯೋಜಿಸಲಾಗುತ್ತಿತ್ತು. ಕೋವಿಡ್ ಕಾರಣಕ್ಕಾಗಿ ಈ ಬಾರಿ ಆನೆಗಳ ಕ್ರೀಡಾಕೂಟ ರದ್ದುಗೊಳಿಸಲಾಗಿದೆ. ಹೀಗಾಗಿ ಸರಳವಾಗಿ ಆನೆಗಳಿಗೆ ಪೂಜೆ ಸಲ್ಲಿಸಿ, ಆನೆಗಳ ದಿನಾಚರಣೆ ಆಚರಿಸಲಾಯಿತು.
ಏನಿದರ ಹಿನ್ನೆಲೆ: ಏಷ್ಯಿನ್ ಮತ್ತು ಆಫ್ರಿಕನ್ ಆನೆಗಳಿಗೆ ಉಂಟಾಗಿರುವ ಸಂಕಷ್ಟವನ್ನು ಎತ್ತಿ ತೋರಿಸಲು, ಅದರ ಬಗ್ಗೆ ಅರಿವು ಮೂಡಿಸಲು ಆನೆಗಳ ದಿನಾಚರಣೆ ಪ್ರಾರಂಭಿಸಲಾಯಿತು. 2012ರ ಆಗಸ್ಟ್ 12ರಂದು ಮೊದಲ ಬಾರಿಗೆ ವಿಶ್ವ ಆನೆಗಳ ದಿನವನ್ನು ಆಚರಿಸಲಾಯಿತು. ಕೆನಡಿಯನ್ ಸಿನಿಮಾ ಮೇಕರ್ ಪ್ಯಾಟ್ರಿಕಾ ಸಿಮ್ ಮತ್ತು ಥೈಲ್ಯಾಂಡ್ ಮೂಲದ ಆನೆಗಳ ಮರು ಪರಿಚಯ ಪ್ರತಿಷ್ಠಾನ ಜತೆಗೂಡಿ ಆನೆಗಳ ದಿನ ಆಚರಣೆಗೆ ಆರಂಭಿಸಿದ್ದರು.
ಇದನ್ನೂ ಓದಿ:ಎರಡು ದಿನಗಳ ಕರಾವಳಿ ಜಿಲ್ಲೆ ಪ್ರವಾಸ : ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಿಎಂ
ವಿಶ್ವ ಆನೆಗಳ ದಿನ ಪ್ಯಾಟ್ರಿಕಾ ಸಿಮ್ ನೇತೃತ್ವದಲ್ಲೇ ಶುರುವಾಯಿತು. ಆಕೆ ಸ್ಥಾಪಿಸಿದ ವಿಶ್ವ ಆನೆಗಳ ಸಮಾಜ ಈ ವಿಶ್ವ ಆನೆಗಳ ದಿನವನ್ನು ನಿರ್ವಹಣೆ ಮಾಡಿತ್ತು. ಈ ಸಂಸ್ಥೆ ಹಲವು ವರ್ಷಗಳಿಂದಲೂ ಆನೆಗಳ ಸುರಕ್ಷತೆ, ಅವುಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನೇ ಮಾಡಿಕೊಂಡು ಬಂದಿದೆ. ಆನೆಯ ಕುರಿತಾಗಿಯೇ ಮೊದಲ ವಿಶ್ವ ಆನೆ ದಿನಾಚರಣೆಯ ದಿನದಂದು ಹಾಲಿವುಡ್ ನಟ ವಿಲಿಯಂ ಶಟ್ನೇರ್ ‘ರಿಟರ್ನ್ಸ್ ಟೂ ಫಾರೆಸ್ಟ್’ ಎಂಬ ಸಾಕ್ಷಚಿತ್ರ ನಿರ್ಮಿಸಿದ್ದರು.
ಭಾರತದಲ್ಲಿ ಅತೀ ಹೆಚ್ಚು ಏಷ್ಯನ್ ಆನೆಗಳಿವೆ. 2017ರ ಗಣತಿಯ ಪ್ರಕಾರ ದೇಶದಲ್ಲಿ 27,312 ಆನೆಗಳಿವೆ. ಇದು ವಿಶ್ವದ ಆನೆಗಳ ಸಂಖ್ಯೆ 55%. ಭಾರತದಲ್ಲಿ ಅತೀ ಹೆಚ್ಚು ಆನೆಗಳನ್ನು ಹೊಂದಿರುವ ರಾಜ್ಯವೆಂದರೆ ಕರ್ನಾಟಕ. ಇಲ್ಲಿ 6049 ಆನೆಗಳಿದ್ದು, ಎರಡನೇ ಸ್ಥಾನದಲ್ಲರುವ ಅಸ್ಸಾಂನಲ್ಲಿ 5719 ಆನೆಗಳಿವೆ. (2017ರ ಗಣತಿ ಪ್ರಕಾರ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Infectious Disease: ರಾಜ್ಯಕ್ಕೂ ಬೇಕಿದೆ “ವಿಷಾಣು ಯುದ್ಧ ಅಭ್ಯಾಸ್”
Sagara: ಭೀಕರ ಅಪಘಾತ… ರಿಕ್ಷಾ ಚಾಲಕ ಸೇರಿ ಇಬ್ಬರು ಮೃತ್ಯು, ಮೂವರಿಗೆ ಗಾಯ
Anandapura: ಬಟ್ಟೆ ತೊಳೆಯಲು ಹೋದ ಮಹಿಳೆ ಕೆರೆಗೆ ಬಿದ್ದು ಮೃತ್ಯು
Hosanagara: ಬಿಸಿ ಟೀ ಮೈ ಮೇಲೆ ಬಿದ್ದು ಗಂಭೀರ ಗಾಯಗೊಂಡಿದ್ದ ಎರಡು ವರ್ಷದ ಮಗು ಸಾವು
MUST WATCH
ಹೊಸ ಸೇರ್ಪಡೆ
MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್
Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ
Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.