ಹೊಸನಗರ: ರೈತನ ಬಲಿ ಪಡೆದ ಅಡಕೆ ಎಲೆಚುಕ್ಕೆ ರೋಗ!
Team Udayavani, Oct 8, 2022, 11:06 AM IST
ಹೊಸನಗರ (ಶಿವಮೊಗ್ಗ): ಮಲೆನಾಡಿನಲ್ಲಿ ಎಲೆ ಚುಕ್ಕೆ ತೀವ್ರತೆ ಹೆಚ್ಚಾಗಿದ್ದು, ರೈತನೋರ್ವನ ಬಲಿ ಪಡೆದುಕೊಂಡಿದೆ.
ಎಲೆಚುಕ್ಕೆ ರೋಗಕ್ಕೆ ಅಡಕೆ ತೋಟ ಬಲಿಯಾದ ಹಿನ್ನೆಲೆ ಮಾಡಿದ ಸಾಲ ತೀರಿಸಲಾಗದೆ ಸಂಕಷ್ಟಕ್ಕೆ ಸಿಲುಕಿದ ರೈತ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹೊಸನಗರ ತಾಲೂಕಿನ ಕರಿಮನೆ ಗ್ರಾಪಂ ವ್ಯಾಪ್ತಿಯ ಕಿಳಮದೂರು ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಕರಿಮನೆ ಗ್ರಾಪಂ ಕಿಳಂದೂರು ಗ್ರಾಮದ ಕೃಷ್ಣಪ್ಪಗೌಡ (60) ಮೃತ ವ್ಯಕ್ತಿ. ಸಂಜೆ 4.30ರ ಹೊತ್ತಿಗೆ ಮನೆಯ ಪಕ್ಕದಲ್ಲಿರುವ ಮಾವಿನ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತ ಕೃಷ್ಣಪ್ಪಗೌಡ ಅವರ ಸಹೋದರ ಯೋಗೇಂದ್ರ ಗೌಡ ಜಂಟಿ ಹೆಸರಿನಲ್ಲಿ 4 ಎಕರೆ 11 ಗುಂಟೆ, ಕೃಷ್ಣಪ್ಪಗೌಡ ಹೆಸರಿನಲ್ಲಿ 2 ಎಕರೆ 20 ಗುಂಟೆ ಜಮೀನು ಹೊಂದಿದ್ದರು. ಜಮೀನಿನಲ್ಲಿ ಅಡಕೆ ತೋಟ ಮತ್ತು ಭತ್ತದ ಕೃಷಿ ಮಾಡಿಕೊಂಡಿದ್ದರು. ಆದರೆ ಎಲೆಚುಕ್ಕೆ ರೋಗದಿಂದ ಅಡಕೆ ತೋಟ ಸಂಪೂರ್ಣ ಹಾಳಾಗಿದ್ದು ತೊಂದರೆಗೆ ಸಿಲುಕಿದ್ದರು.
ಕೃಷಿ ಅಭಿವೃದ್ಧಿಗಾಗಿ ಕೆನರಾ ಬ್ಯಾಂಕ್ ನಲ್ಲಿ 3 ಲಕ್ಷ, ನಗರ ನೀಲಕಂಠೇಶ್ವರ ಪತ್ತಿನ ಸಹಕಾರ ಸಂಘದಲ್ಲಿ ರೂ.1.5 ಲಕ್ಷ ಸಾಲ ಮಾಡಿದ್ದರು. ಅಲ್ಲದೇ ಕೃಷಿ ಕೆಲಸಕ್ಕಾಗಿ ಊರಿನಲ್ಲಿ ಹಲವರ ಹತ್ತಿರ ಕೈಸಾಲ ಮಾಡಿಕೊಂಡಿದ್ದರು. ಆದರೆ ಅಡಿಕೆ ಬೆಳೆ ಎಲೆಚುಕ್ಕೆ ರೋಗಕ್ಕೆ ತುತ್ತಾದ ಹಿನ್ನೆಲೆಯಲ್ಲಿ ಮಾಡಿದ ಸಾಲ ಹೇಗೆ ತೀರಿಸೋದು ಎಂದು ಯೋಚನೆಗೀಡಾಗಿ ಮನೆಯಲ್ಲಿ ಹೇಳಿಕೊಂಡಿದ್ದರು.
ಇದನ್ನೂ ಓದಿ:ಯೂಟ್ಯೂಬರ್ ನನ್ನು ಭೇಟಿ ಮಾಡಲು 250 ಕಿಮೀ ದೂರ ಸೈಕಲ್ ತುಳಿದ ಬಾಲಕ ; ಕೊನೆಗೆ ಆಗಿದ್ದೇನು?
ಈ ಕಾರಣವೇ ನಮ್ಮ ತಂದೆಯ ಆತ್ಮಹತ್ಯೆಗೆ ಕಾರಣ. ಅದು ಬಿಟ್ಟು ಬೇರೆ ಯಾವುದೇ ಕಾರಣ ಇರಲಿಲ್ಲ ಎಂದು ಅವರ ಮಗ ಸತೀಶ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ರೋಗ ನಿಯಂತ್ರಣಕ್ಕೆ ಸರ್ಕಾರದ ಅನುದಾನ: ರಾಜ್ಯದ ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಹರಡುತ್ತಿರುವ ಅಡಿಕೆ ಎಲೆ ಚುಕ್ಕೆ ರೋಗ ನಿಯಂತ್ರಣಕ್ಕೆ ರಾಜ್ಯ ಸರಕಾರ ಒಟ್ಟು ಎಂಟು ಕೋಟಿ ರೂಪಾಯಿಗಳಷ್ಟು ಅನುದಾನ ನಿಗಡಿ ಮಾಡಿ, ನಾಲ್ಕು ಕೋಟಿ ರೂಪಾಯಿಗಳನ್ನು, ತಕ್ಷಣಕ್ಕೆ ರೈತರಿಗೆ ವಿತರಿಸಲು ಇತ್ತೀಚೆಗಷ್ಟೇ ಬಿಡುಗಡೆ ಮಾಡಿದೆ. ರೋಗ ನಿಯಂತ್ರಣಕ್ಕೆ, ಉತ್ತಮ ಗುಣ ಮಟ್ಟದ ಸಸ್ಯ ಸಂರಕ್ಷಣೆ ಔಷಧ ಕೊಳ್ಳಲು, ಪ್ರತಿ ಹೆಕ್ಟೇರ್ ಗೆ, 4000 ರೂಪಾಯಿ ಅನುದಾನವನ್ನು, ಮೊದಲ ಸಿಂಪರಣೆಗಾಗಿ 1.5 ಹೆಕ್ಟೇರ್ ತೋಟಗಾರಿಕಾ ಪ್ರದೇಶ ಮಿತಿಗೊಳಪಟ್ಟು ರೈತರಿಗೆ, ಅನುದಾನ ಒದಗಿಸಲಾಗುವುದು ಎಂದು ಸಚಿವ ಆರಗ ಜ್ಞಾನೇಂದ್ರ ಹೇಳಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf: ರೈತರಿಗೆ ನೀಡಿರುವ ನೋಟಿಸ್ ತಕ್ಷಣ ವಾಪಸ್: ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ
Waqf Issue: ನ.4ರಂದು ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ ಪ್ರತಿಭಟನೆ
High Court: ಕ್ರಿಮಿನಲ್ ಕೇಸ್ ಡೈರಿ ಪ್ರತೀ ಪುಟಕ್ಕೆ ಸಹಿ:ಅರ್ಜಿ ವಜಾಗೊಳಿಸಿದ ಹೈಕೋರ್ಟ್
Bengaluru: ಸುವರ್ಣ ಸಂಭ್ರಮದಲ್ಲಿ ರಾಜ್ಯೋತ್ಸವ ವೈಭವ
Bengaluru: ಕೇಂದ್ರದ ತೆರಿಗೆ ಅನ್ಯಾಯ ಮಧ್ಯೆಯೂ ಅಭಿವೃದ್ಧಿ: ಸಿಎಂ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.