ಜೀರೋ ಟ್ರಾಫಿಕ್‌ನಲ್ಲಿ ಯುವಕನ ದೇಹ ರವಾನೆ
Team Udayavani, Sep 15, 2018, 6:15 AM IST
ಶಿವಮೊಗ್ಗ: ಮೆದುಳು ನಿಷ್ಕ್ರಿಯಗೊಂಡಿರುವ ಯುವಕನ ಅಂಗಾಂಗ ದಾನ ಮಾಡಲು ಪೋಷಕರು ಇಚ್ಛಿಸಿದ್ದರಿಂದ ಆತನ ದೇಹವನ್ನು ಶುಕ್ರವಾರ ಬೆಳಗ್ಗೆ ಜೀರೋ ಟ್ರಾಫಿಕ್‌ನಲ್ಲಿ ಶಿವಮೊಗ್ಗದಿಂದ ಬೆಂಗಳೂರಿಗೆ ಕೊಂಡೊಯ್ಯಲಾಯಿತು.
ಭದ್ರಾವತಿ ತಾಲೂಕಿನ ಜೇಡಿಕಟ್ಟೆ ಗ್ರಾಮದ ವಾಸಿ ಹರೀಶ್ (32) ಗುರುವಾರ ಮೂಛೆì ಹೋಗಿದ್ದರಿಂದ ಆತನನ್ನು ಶಿವಮೊಗ್ಗ ಮ್ಯಾಕ್ಸ್ ಹಾಸ್ಟಿಟಲ್‌ಗೆ ಸೇರಿಸಲಾಗಿತ್ತು. ಮಿದುಳು ನಿಷ್ಕಿಯಗೊಂಡಿತ್ತು. ಆದರೆ ಚಿಕಿತ್ಸೆ ಫಲಿಸಲಿಲ್ಲ. ಈ ಕುರಿತು ಕುಟುಂಬದವರಿಗೆ ಕಣ್ಣುಗಳನ್ನು ದಾನ ಮಾಡಬಹುದು ಎಂದು ತಿಳಿಸಿದೆ. ಆದರೆ ಕುಟುಂಬದವರೇ ಬಹು ಅಂಗಾಂಗಗಳ ದಾನಕ್ಕೆ ಸೂಚಿಸಿದರು. ಹಾಗಾಗಿ ಬೆಂಗಳೂರಿಗೆ ದೇಹವನ್ನು ರವಾನಿಸಲಾಗಿದೆ ಎಂದು ಮ್ಯಾಕ್ಸ್ ಆಸ್ಪತ್ರೆ ವೈದ್ಯ ನಾರಾಯಣ ಪಂಜಿ ತಿಳಿಸಿದರು.
ಯುವಕನ ದೇಹ ಬೆಂಗಳೂರಿಗೆ ತಲುಪುತ್ತಿದ್ದಂತೆ ಆತನ ಕಣ್ಣು, ಎರಡು ಕಿಡ್ನಿ, ಲಿವರ್, ಹೃದಯವನ್ನು ಅಲ್ಲಿಯ ಆಸ್ಪತ್ರೆ ವೈದ್ಯರು ತೆಗೆದುಕೊಂಡಿದ್ದಾರೆ. ನಂತರ ಯುವಕನ ಮೃತದೇಹವನ್ನು ಭದ್ರಾವತಿಯ ಜೇಡಿಕಟ್ಟೆಗೆ ರವಾನಿಸಿದ್ದಾರೆ.
ಜೀರೋ ಟ್ರಾಫಿಕ್ ವ್ಯವಸೆ: ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ದೇಹವನ್ನು ಸಾಗಿಸಬೇಕಿದ್ದರಿಂದ ಗುರುವಾರ ರಾತ್ರಿ ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಅಭಿನವ್ ಖರೆಗೆ ಕುಟುಂಬಸ್ಥರು ಮನವಿ ಮಾಡಿದ್ದಾರೆ. ಇದಕ್ಕೆ ಒಪ್ಪಿದ ಅವರು ಜೀರೋ ಟ್ರಾಫಿಕ್‌ಗೆ ವ್ಯವಸ್ಥೆ ಮಾಡಿದ್ದರು. ಬೆಳಗ್ಗೆ 7.30ಕ್ಕೆ ವಿಶೇಷ ಆಂಬ್ಯುಲೆನ್ಸ್‌ನಲ್ಲಿ ದೇಹವನ್ನು ಕೊಂಡೊಯ್ಯಲಾಯಿತು. ಪೊಲೀಸ್ ಇಲಾಖೆ ಪೆಟ್ರೋಲಿಂಗ್ ವಾಹನವು ಆಂಬ್ಯುಲೆನ್ಸ್‌ಗೆ ಬೆಂಗಾವಲಾಗಿತ್ತು.
ಟ್ರಾಫಿಕ್ ಸಮಸ್ಯೆಯಿಂದಾಗಿ ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ಹರೀಶ್ ದೇಹ ತಲುಪುವುದು ತಡವಾಗುವ ಸಾಧ್ಯತೆಯಿತ್ತು. ಹೀಗಾಗಿ ಶಿವಮೊಗ್ಗ ಎಸ್‌ಪಿ ಅಭಿನವ್ ಖರೆ ಅವರನ್ನು ಮಧ್ಯರಾತ್ರಿ ಸಂಪರ್ಕಿಸಿ ವಿಚಾರ ತಿಳಿಸಿದೆವು. ಕೂಡಲೇ ಅವರು ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಿದರು.
– ಶಿವಮೊಗ್ಗ ನಂದನ್, ಹರೀಶ್ ಸಂಬಂಧಿ
ಮಗನ ಸುದ್ದಿ ಕೇಳಿ ತಂದೆ ಕೂಡ ಸಾವು
ಮೆದುಳು ನಿಷ್ಕ್ರಿಯಗೊಂಡಿರುವುದರಿಂದ ಹರೀಶ್ ಬದುಕುಳಿಯುವುದಿಲ್ಲ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಆತನ ತಂದೆ ಬಾಲಕೃಷ್ಣ (59) ಅವರಿಗೆ ಆಘಾತವಾಗಿದೆ. ಕುಸಿದು ಬಿದ್ದ ಅವರನ್ನು ಕೂಡಲೇ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಮೆದುಳಿನಲ್ಲಿ ರಕ್ತಸ್ರಾವವಾಗಿದ್ದರಿಂದ ಚಿಕಿತ್ಸೆ ಫಲಿಸದೇ ಬಾಲಕೃಷ್ಣ ಕೊನೆಯುಸಿರೆಳೆದರು. ಒಂದೇ ಮನೆಯಲ್ಲಿ ಎರಡೆರಡು ಸಾವಿನ ಸುದ್ದಿಯಿಂದ ಸಂಬಂ ಧಿಕರು, ಜೇಡಿಕಟ್ಟೆ ಗ್ರಾಮ ಹಬ್ಬದ ಮಾರನೇ ದಿನವೇ ಸೂತಕದ ಛಾಯೆಯಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
High Court: ಮುಮ್ತಾಜ್ ಅಲಿ ಆತ್ಮಹ*ತ್ಯೆ ಪ್ರಕರಣ: ಆರೋಪಿಗಳನ್ನು ಪೊಲೀಸ್ ವಶಕ್ಕೆ ನೀಡಲ್ಲ
Karnataka: ಲೋಕಾಯುಕ್ತ ದಾಳಿ; ಕಂತೆ ಕಂತೆ ಹಣ ವಶಕ್ಕೆ
H. D. Kumaraswamy: ರಾಜ್ಯದಲ್ಲಿ ಪ್ರಜಾಪ್ರಭುತ್ವ ಕೊನೆಯುಸಿರೆಳೆಯುತ್ತಿದೆಯೇ?
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
C.T.Ravi; ಬಿಡುಗಡೆ ಬಳಿಕ ಬಿಜೆಪಿ ಕಿಡಿ ಕಿಡಿ: ನಾವೇನು ಬಳೆ ತೊಟ್ಟು ಕುಳಿತಿಲ್ಲ…!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
High Court: ಮುಮ್ತಾಜ್ ಅಲಿ ಆತ್ಮಹ*ತ್ಯೆ ಪ್ರಕರಣ: ಆರೋಪಿಗಳನ್ನು ಪೊಲೀಸ್ ವಶಕ್ಕೆ ನೀಡಲ್ಲ
Karnataka: ಲೋಕಾಯುಕ್ತ ದಾಳಿ; ಕಂತೆ ಕಂತೆ ಹಣ ವಶಕ್ಕೆ
24 ಕಂಬಳ ಕೂಟಕ್ಕೆ ತಲಾ 5 ಲಕ್ಷದಂತೆ ಅನುದಾನ: ಸಚಿವ ಎಚ್.ಕೆ. ಪಾಟೀಲ್
Mandya; ಕನ್ನಡ ಸಾಹಿತ್ಯ ಸಮ್ಮೇಳನ: “ಉದಯವಾಣಿ’ ವಿಶೇಷ ಪುರವಣಿ ಬಿಡುಗಡೆ
H. D. Kumaraswamy: ರಾಜ್ಯದಲ್ಲಿ ಪ್ರಜಾಪ್ರಭುತ್ವ ಕೊನೆಯುಸಿರೆಳೆಯುತ್ತಿದೆಯೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.