Shimoga; ಜಮೀರ್ ಅಹಮದ್ ರನ್ನು ಸಂಪುಟದಿಂದ ವಜಾ ಮಾಡಬೇಕು: ಈಶ್ವರಪ್ಪ ಆಗ್ರಹ
Team Udayavani, Nov 21, 2023, 3:22 PM IST
ಶಿವಮೊಗ್ಗ: ರಾಜ್ಯದ ಕಾಂಗ್ರೆಸ್ ಸರ್ಕಾರ ಭಾರತದ ಸಂವಿಧಾನ ಪ್ರಕಾರ ಆಡಳಿತ ನಡೆಸುತ್ತಿದೆಯಾ ಅಥವಾ ಪಾಕಿಸ್ತಾನದ ಇಸ್ಲಾಮಿಕ್ ಪ್ರಕಾರ ಆಡಳಿತ ನಡೆಸುತ್ತಿದೆಯಾ? ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಬೇಕು. ಜಮೀರ್ ಅಹಮ್ಮದ್ ತೆಲಂಗಾಣದಲ್ಲಿ ಪ್ರಚಾರಕ್ಕೆ ಹೋದಾಗ ಸರ್ಕಾರದ ಸಭಾಧ್ಯಕ್ಷ ಪೀಠಕ್ಕೆ ಅಪಮಾನ ಮಾಡಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಸ್ಲಿಂ ಸಭಾಧ್ಯಕ್ಷರಿಗೆ ಎಲ್ಲರೂ ತಲೆಬಾಗಿ ವಿಧಾನಸಭೆ ಚಟುವಟಿಕೆ ನಡೆಸಬೇಕು. ಮುಸ್ಲಿಂ ನಾಯಕರಿಗೆ ತಲೆಬಾಗಬೇಕು ಎಂಬುದಕ್ಕೆ ನನ್ನ ವಿರೋಧವಿದೆ. ಸಂವಿಧಾನ ಪೀಠಕ್ಕೆ, ಸ್ಪೀಕರ್ ಸ್ಥಾನಕ್ಕೆ ನಾವು ಮರ್ಯಾದೆ ಕೊಡುವುದು. ಖಾದರ್ ಎಂಬ ಬೋಳಪ್ಪ ಇದ್ದಾನೆಂದು ನಾವು ಗೌರವ ಕೊಡಲ್ಲ. ಸಂವಿಧಾನ ಪೀಠಕ್ಕೆ, ಸ್ಪೀಕರ್ ಖಾದರ್ ಗೆ ನಾವು ಗೌರವ ಕೊಡುತ್ತೇವೆ. ಒಂದು ಹಳ್ಳಿಯಲ್ಲಿ ಕತ್ತೆ ಮೇಲೆ ದೇವರು ಕೂರಿಸಿಕೊಂಡು ಮೆರವಣಿಗೆ ಮಾಡುತ್ತಿದ್ದರು. ಕತ್ತೆಗಲ್ಲಾ ನಾವು ಮರ್ಯಾದೆ ಕೊಡುತ್ತಿರುವುದು, ಬದಲಾಗಿ ದೇವರಿಗೆ ಮರ್ಯಾದೆ. ಅಲ್ಲಿ ಕುಳಿತಿರುವವರು ಕತ್ತೆ ಎಂದು ಹೇಳುತ್ತಿಲ್ಲ. ಅಲ್ಲಿ ಕುಳಿತಿರುವರು ದೇವರು. ಜಮೀರ್ ಅಹಮ್ಮದ್ ಸಂವಿಧಾನ ಪೀಠಕ್ಕೆ ಅಪಮಾನ ಮಾಡಿದ್ದಾನೆ. ತಕ್ಷಣ ಅವನನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕು. ಮುಂದಿನ ದಿನಗಳಲ್ಲಿ ಜನ ಮತ ಹಾಕಬೇಕಾದರೆ ಯೋಚನೆ ಮಾಡಬೇಕು ಎಂದರು.
ಜಮೀರ್ ಅಹಮ್ಮದ್ ಒಬ್ಬ ರಾಷ್ಟ್ರದ್ರೋಹಿ, ಅವನು ಸಚಿವ ಸಂಪುಟದಲ್ಲಿದ್ದಾನೆ. ಅವನನ್ನು ಮೊದಲು ಸಚಿವ ಸ್ಥಾನದಿಂದ ಕಿತ್ತು ಬಿಸಾಕಿ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರು ಜಮೀರ್ ಹೇಳಿಕೆ ಬಗ್ಗೆ ನಿಲುವು ಸ್ಪಷ್ಟಪಡಿಸಬೇಕು. ಅವನನ್ನು ಕಿತ್ತು ಹಾಕಿದರೆ ತಮ್ಮ ಸ್ಥಾನ ಹೋಗುವ ಬಗ್ಗೆ ಸಿದ್ದರಾಮಯ್ಯನವರಿಗೆ ಏನಾದರೂ ಭಯ ಇದೆಯಾ? ಜಮೀರ್ ಅಹಮ್ಮದ್ ಹೇಳಿಕೆಗೆ ಹಿಂದೂ ಸಮಾಜ ಜಾಗೃತರಾಗಬೇಕು. ಬರುವಂತಹ ಚುನಾವಣೆಯಲ್ಲಿ ಹಿಂದೂ ಸಮಾಜ ಮೋದಿ ಕೈ ಬಲಪಡಿಸಬೇಕು. ಮುಸ್ಲಿಂರು ಕೂಡಾ ಜಮೀರ್ ಅಹಮ್ಮದ್ ಹೇಳಿಕೆ ತಪ್ಪಾಗಿದೆಯೆಂದರೆ ಖಂಡಿಸಬೇಕು ಎಂದು ಈಶ್ವರಪ್ಪ ಒತ್ತಾಯಿಸಿದರು.
ತಾಲಿಬಾನ್ ಶಿಕ್ಷಣ ಕರ್ನಾಟಕದಲ್ಲಿ ನಡೆಯುತ್ತಿದೆ. ಅನಾಥಾಲಯದಲ್ಲಿ ತಾಲಿಬಾನ್ ಶಿಕ್ಷಣ ಕೊಡುತ್ತಿದೆ ಎಂದು ವರದಿಯಾಗಿದೆ. ಇಸ್ಲಾಮಿಕ್ ಶಿಕ್ಷಣ ಕೊಡುತ್ತಿದ್ದಾರೆ. 200 ಅನಾಥ ಮಕ್ಕಳಿಗೆ ತಾಲಿಬಾನ್ ಶಿಕ್ಷಣ ಕೊಡಲಾಗುತ್ತಿದೆ. ಅಲ್ಲಿ ಸರಿಯಾದ ಮೂಲಭೂತ ವ್ಯವಸ್ಥೆ ಇಲ್ಲ. ಮುಸ್ಲಿಂರಿಗೆ ಪ್ರತ್ಯೇಕ ಶಿಕ್ಷಣ ಕೊಡುವ ವ್ಯವಸ್ಥೆ ನಮ್ಮ ದೇಶದಲ್ಲಿಲ್ಲ. ಮಕ್ಕಳಿಗೆ ಭಾರತೀಯ ರಾಷ್ಟ್ರೀಯ ಶಿಕ್ಷಣ ಕೊಡಲಿ ತಾಲಿಬಾನ್ ಶಿಕ್ಷಣ ಕೊಡಬಾರದು. ಅಧಿಕಾರಿಗಳು ಪರಿಶೀಲನೆ ನಡೆಸಿ ವರದಿ ಕೊಡಬೇಕು ಎಂದರು.
ಕಾಂತರಾಜ್ ವರದಿ ಜಾರಿಗೆ ಆಗ್ರಹಿಸಿ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಾಂತರಾಜ್ ಅವರ ಹಿಂದುಳಿದ ಆಯೋಗದ ವರದಿಯನ್ನು ಸಿಎಂ ಇಟ್ಟುಕೊಂಡು ಕುಳಿತಿದ್ದಾನೆ. ಮೊದಲು ಅದನ್ನು ಬಿಡುಗಡೆ ಮಾಡಿಸಿ. ಆ ವರದಿಗೆ ಕಾರ್ಯದರ್ಶಿ ಸಹಿ ಹಾಕಿಲ್ಲ ಅಂದರೆ ಅದಕ್ಕೆ ಬೆಂಕಿ ಹಾಕಿಯೆಂದು ನಾನು ಹೇಳಿದ್ದೆ. ಜಾತಿ ಜನಗಣತಿ ಸಂವಿಧಾನ ಬದ್ದವಾಗಿರಬೇಕು. ಸುಪ್ರೀಂ ಕೋರ್ಟ್ ತೀರ್ಪು ಕೊಡಬೇಕು. ನಮ್ಮ ದೇಶದ ತಜ್ಞರ ಜೊತೆ ಚರ್ಚೆ ನಡೆಸಬೇಕು. ನಾನೇ ಹಿಂದುಳಿದ ವರ್ಗದ ಚಾಂಪಿಯನ್ ಅಂತಾ ಹೆಸರು ಪಡೆಯಲು ಸಿದ್ದರಾಮಯ್ಯ ಕಾಂತರಾಜ್ ಆಯೋಗ ರಚಿಸಿದರು. ವರದಿ ಬಿಡುಗಡೆ ಮಾಡದಿದ್ದಕ್ಕೆ ಜಾತಿ ಜಾತಿ ನಡುವೆ ಬೆಂಕಿ ಹತ್ತಿಕೊಂಡಿದೆ. ಕೆಲವರು ಸ್ವಾಗತಿಸಿದರೆ, ಕೆಲವರು ವಿರೋಧ ಮಾಡುತ್ತಿದ್ದಾರೆ. ವರದಿ ಬಿಡುಗಡೆಗೆ ಮೊದಲು ಸಿದ್ದರಾಮಯ್ಯ ಹಿಂದು ಸಮಾಜದ ಪ್ರಮುಖ ಸ್ವಾಮೀಜಿಗಳ ಸಭೆ ಕರೆಯಲಿ. ಯಾವುದೇ ಜಾತಿಗೆ ಅನ್ಯಾಯವಾಗುವುದು ಬೇಡ. ವರದಿಯಿಂದ ಜಾತಿ ಜಾತಿಗಳು ಛಿದ್ರವಾಗುವುದು ಬೇಡ. ಸಮಾಜದಲ್ಲಿ ಜಾತಿ ಜಾತಿಗಳ ನಡುವೆ ಸಂಘರ್ಷ, ಅಸಮಾಧಾನ ಉಂಟಾಗುವ ಮೊದಲು ಸಭೆ ಕರೆಯಿರಿ. ಮೊದಲು ವರದಿಯನ್ನು ಚರ್ಚೆಗೆ ಬಿಡಿ ಚರ್ಚೆ ನಂತರ ವರದಿ ಬಿಡುಗಡೆ ಮಾಡಿ. ಇದರಲ್ಲಿ ಸರ್ವಾಧಿಕಾರ ಧೋರಣೆ ಮಾಡಿದರೆ ನಿಮ್ಮ ಸರಕಾರ ಉಳಿಯಲ್ಲ ಎಂದು ಎಚ್ಚರಿಸಿದರು.
ಹಲೋ ಅಪ್ಪ ಸಿಎಂ ಪುತ್ರನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅವರ ಪಕ್ಷದ ಅನೇಕ ಸಚಿವರು, ಶಾಸಕರು ನನ್ನ ಬಳಿ ಹೇಳಿದ್ದಾರೆ. ಯಾವುದೇ ಸರಕಾರದಲ್ಲಿ ಆಗದ ಭ್ರಷ್ಟಾಚಾರ ಈ ಸರಕಾರದಲ್ಲಿವಾಗಿದೆ. ಸಿಎಂ ಕುಟುಂಬ, ಡಿಸಿಎಂ ಕುಟುಂಬ ವರ್ಗಾವಣೆ ದಂಧೆಯಲ್ಲಿ ತೊಡಗಿದ್ದಾರೆ. ಅವರದ್ದೇ ಪಕ್ಷದ ಶಾಸಕರ ಆರೋಪ ಇದು. ನಮ್ಮ ಬಳಿ ಅವರ ಪಕ್ಷದ ಶಾಸಕರೇ ಆರೋಪ ಮಾಡ್ತಿದ್ದಾರೆ. ಈ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕು ಎಂದರು.
ಹಿಂದು ಸಂಸ್ಕೃತಿಯ ವಿಶೇಷತೆ ದತ್ತ ಮಾಲೆ. ದತ್ತಮಾಲೆ ಯಾವುದೋ ಒಂದು ಪಕ್ಷದ್ದು, ಜಾತಿಯದ್ದಲ್ಲ. ಮುಂದೊಂದು ದಿನ ಸಿದ್ದರಾಮಯ್ಯ, ಡಿಕೆಶಿ ಹಾಗು ರಾಹುಲ್ ಗಾಂಧಿ ಸಹ ದತ್ತಮಾಲೆ ಹಾಕಬಹುದು. ಕೆಲವರಿಗೆ ನಿಧಾನವಾಗಿ ಬುದ್ದಿ ಬರುತ್ತದೆ. ರಾಜಕಾರಣಕೋಸ್ಕರ ಸಮಾಜವಾದ ತೆಗೆದು ಬಿಡುತ್ತಾರೆ ಎಂದರು.
ಬಿಜೆಪಿಯವರು ಮುಸ್ಲಿಂ ವಿರೋಧಿಗಳಲ್ಲ. ಬಿಜೆಪಿಯವರು ರಾಷ್ಟ್ರೀಯವಾದಿಗಳು. ಹೀಗಾಗಿಯೇ ಉತ್ತರ ಪ್ರದೇಶದಲ್ಲಿ ಶಮಿ ಹೆಸರಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡ್ತಿದ್ದಾರೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ನೇಮಕಕ್ಕೆ ಅಸಮಾಧಾನ ವಿಚಾರಕ್ಕೆ ಮಾತನಾಡಿದ ಈಶ್ವರಪ್ಪ, ಕೆಲವರು ಅಲ್ಲೊಬ್ಬರು ಇಲ್ಲೊಬ್ಬರು ಇರಬಹುದು. ಮನೆಯ ಹಿರಿಯರು ಏನು ಹೇಳುತ್ತಾರೋ ಅದನ್ನು ಕೇಳಬೇಕು. ಮನೆಯ ಹಿರಿಯರು ಹೇಳಿದ್ದನ್ನು ಕೇಳಿಕೊಂಡು ಹೋಗಬೇಕು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CT Ravi Arrest; ಧೂರ್ತ ಸರ್ಕಾರ ನೀಚತನದ ಕೆಲಸ ಮಾಡಿದೆ: ಆರಗ ಜ್ಞಾನೇಂದ್ರ
Shimoga; ಇದು ಸಿ.ಟಿ.ರವಿ ಅವರನ್ನು ಸದೆಬಡಿಯುವ ಪ್ರಯತ್ನ;ಶಾಸಕ ಚನ್ನಬಸಪ್ಪ
Sakrebailu: ತಾಂತ್ರಿಕ ದೋಷದಿಂದ ಸುಟ್ಟು ಕರಕಲಾದ ಬಸ್
ಭದ್ರಾವತಿಯ ರೈಸ್ಮಿಲ್ನಲ್ಲಿ ಬಾಯ್ಲರ್ ಸ್ಫೋಟ: ಕಣ್ಮರೆಯಾಗಿದ್ದ ವ್ಯಕ್ತಿಯ ಶವ ಪತ್ತೆ
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.