ನಾಟಕದಲ್ಲಿದೆ ಜೀವನ ಪಾಠ
ರಂಗ ತಾಲೀಮಿಗೆ ಸೂಕ್ತ ಸ್ಥಳಾವಕಾಶ ಸಿಗಲಿ: ಡಾ| ಗಣೇಶ್
Team Udayavani, Oct 4, 2019, 3:48 PM IST
ಶಿವಮೊಗ್ಗ: ನಾಟಕ ಎಂದರೆ ಬರೀ ಕಲೆಯಲ್ಲ. ಅದು ಜೀವನದ ಪಾಠವನ್ನು ಹೇಳುತ್ತದೆ ಎಂದು ರಂಗಕರ್ಮಿ, ಶಿವಮೊಗ್ಗ ರಂಗಾಯಣದ ಮಾಜಿ ನಿರ್ದೇಶಕ
ಡಾ| ಎಂ. ಗಣೇಶ್ ಹೇಳಿದರು.
ಶಿವಮೊಗ್ಗ ದಸರಾ ಪ್ರಯುಕ್ತ ಆಯೋಜಿಸಿದ್ದ ರಂಗದಸರಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಿವಮೊಗ್ಗ ನಗರದಲ್ಲಿ ರಂಗತಂಡಗಳು ಕ್ರಿಯಾಶೀಲವಾಗಿವೆ. ಹಾಗಾಗಿ ರಂಗಭೂಮಿ ಕ್ಷೇತ್ರದಲ್ಲಿ ಶಿವಮೊಗ್ಗವು ತನ್ನದೇ ಆದ ವಿಶಿಷ್ಟ ಸ್ಥಾನ ಹೊಂದಿದೆ ಎಂದರು.
ಕಲಾವಿದರು ಒಕ್ಕೂಟದ ಅಧ್ಯಕ್ಷ ಕೊಟ್ರಪ್ಪ ಜಿ. ಹಿರೇಮಾಗಡಿ ಅವರು ಮಾತನಾಡಿ, ಶಿವಮೊಗ್ಗದ ರಂಗಕಲಾವಿದರು ತಾಲೀಮು ಸ್ಥಳದ ಕೊರತೆ ಎದುರಿಸುತ್ತಿದ್ದಾರೆ. ಅವರಿಗೆ ಮಹಾನಗರ ಪಾಲಿಕೆಯಿಂದ ಸೂಕ್ತ ಸೌಲಭ್ಯ ನೀಡಬೇಕು ಎಂದರು.
ರಂಗಕರ್ಮಿ ಹೊನ್ನಾಳಿ ಚಂದ್ರಶೇಖರ್ ಅವರು ಮಾತನಾಡಿ, ರಂಗ ದಸರಾ ಕಾರ್ಯಕ್ರಮವನ್ನು ಮುಂದಿನ ವರ್ಷ ಇನ್ನೂ ವಿಭಿನ್ನವಾಗಿ ಆಯೋಜಿಸಬೇಕಿದೆ. ಹಾಗಾಗಿ ಕನಿಷ್ಠ 4 ತಿಂಗಳು ಮೊದಲು ಈ ಕಾರ್ಯಕ್ರಮಕ್ಕೆ ಸಿದ್ಧರಾಗಲು ಮಹಾನಗರ ಪಾಲಿಕೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಉಪಮಹಾಪೌರರಾದ ಎಸ್.ಎನ್. ಚನ್ನಬಸಪ್ಪ ಅವರು, ಶಿವಮೊಗ್ಗ ದಸರಾದಲ್ಲಿ ರಂಗ ದಸರಾ ಕಾರ್ಯಕ್ರಮ ಸೇರ್ಪಡೆಯಾಗಿರುವುದು ವಿಶೇಷ. ಈ ಕಾರ್ಯಕ್ರಮ ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದೇವೆ
ಎಂದರು.
ರಂಗ ತಾಲೀಮಿಗೆ ಮಹಾನಗರ ಪಾಲಿಕೆಯಿಂದಲೇ ಸೂಕ್ತ ಸೌಲಭ್ಯ ಮಾಡಿಕೊಡುವ ದಿಸೆಯಲ್ಲಿ ಖಂಡಿತ ಪ್ರಯತ್ನಿಸುತ್ತೇವೆ ಎಂದು ಭರವಸೆ ನೀಡಿದರು.
ರಂಗದಸರಾ ಸಮಿತಿ ಅಧ್ಯಕ್ಷ ರಾಹುಲ್ ಬಿದರೆ, ರಂಗ ದಸರಾ ಸಮಿತಿ ಸದಸ್ಯರಾದ ಆರ್.ಸಿ. ನಾಯ್ಕ, ಮೀನಾ ಗೋವಿಂದರಾಜು, ಆರ್.ಎಸ್. ಸತ್ಯನಾರಾಯಣ ರಾಜು, ಆಡಳಿತ ಪಕ್ಷದ ನಾಯಕ ಎಸ್. ಜ್ಞಾನೇಶ್ವರ್, ಸ್ಥಾಯಿ
ಸಮಿತಿ ಅಧ್ಯಕ್ಷ ಗನ್ನಿ ಶಂಕರ್, ಪಾಲಿಕೆ ಸದಸ್ಯರಾದ ಎಚ್.ಸಿ. ಯೋಗೇಶ್, ನಾಗರಾಜ ಕಂಕಾರಿ, ಸುರೇಖಾ ಮುರಳೀಧರ್, ಆಶಾ ಚಂದ್ರಪ್ಪ, ಮಂಜುಳಾ ಶಿವಣ್ಣ, ಸುನೀತಾ ಅಣ್ಣಪ್ಪ, ಸುವರ್ಣ ಶಂಕರ್, ಧೀರರಾಜ್ ಹೊನ್ನವಿಲೆ, ರೇಖಾ ರಂಗನಾಥ್ ಇದ್ದರು. ರಂಗ ದಸರಾ ಸಮಿತಿ ಸದಸ್ಯ ಕಾರ್ಯದರ್ಶಿ ವಿನಾಯಕ್ ಅವರು ಅತಿಥಿಗಳನ್ನು ಅಭಿನಂದಿಸಿದರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.