ನನಸಾಗುತ್ತಿಲ್ಲ ಸ್ವಂತ ನಿವೇಶನ ಕನಸು!
ನಿವೇಶನಗಳ ಅಭಿವೃದ್ಧಿಗೆ ಖಾಸಗಿ ಡೆವಲಪರ್‌ಗಳ ಹಿಂದೇಟುಸೂಡಾದಿಂದ ಹಂಚಿಕೆಯಾಗ್ತಿಲ್ಲ ನಿವೇಶನ
Team Udayavani, Dec 16, 2019, 1:44 PM IST
ಶರತ್ ಭದ್ರಾವತಿ
ಶಿವಮೊಗ್ಗ: ಒಂದು ಕಡೆ ಹೊಸ ಬಡಾವಣೆ ಮಾಡಲು ರಿಯಲ್ ಎಸ್ಟೇಟ್ ಉದ್ದಿಮೆದಾರರು ಮುಂದಾಗುತ್ತಿಲ್ಲ. ಇನ್ನೊಂದು ಕಡೆ ಬಡವರು, ಮಧ್ಯಮ ವರ್ಗದ ಜನರಿಗೆ ಕೈಗೆಟಕುವ ದರದಲ್ಲಿ ಸೈಟುಗಳು ದೊರೆಯುತ್ತಿಲ್ಲ. ಬಡವರ ಕನಸು ನನಸಾಗಿಸಬೇಕಾದ ಶಿವಮೊಗ್ಗ- ನಗರಾಭಿವೃದ್ಧಿ ಪ್ರಾಧಿಕಾರ 8 ವರ್ಷದಿಂದ ಒಂದೂ ಬಡಾವಣೆಗಳನ್ನು ಅಭಿವೃದ್ಧಿಪಡಿಸುತ್ತಿಲ್ಲ.
ನಗರದ ಯಾವುದೇ ಮೂಲೆಗೆ ಹೋದರೂ ಚದರಡಿಗೆ ಕನಿಷ್ಠ 900-1000 ರೂ.ನಿಂದ ಭೂಮಿ ಬೆಲೆ ಶುರುವಾಗುತ್ತದೆ. ಸೂಡಾದಲ್ಲಿ ಮಧ್ಯಮ ಹಾಗೂ ಬಡ ವರ್ಗಕ್ಕೂ ಕಡಿಮೆ ದರದಲ್ಲಿ ನಿವೇಶನಗಳು ಸಿಗುತ್ತವೆ. ಆದರೆ 2012 ರಿಂದ ಈ ಕನಸು ಸಾಕಾರವಾಗಿಲ್ಲ. ಖಾಸಗಿ ರಿಯಲ್ ಎಸ್ಟೇಟ್ ಉದ್ದಿಮೆದಾರರ ಇಚ್ಛಾಶಕ್ತಿ, ಹಣಬಲದ ಮುಂದೆ ಸೂಡಾಗೆ ಶಿವಮೊಗ್ಗ ಸುತ್ತಮುತ್ತ ಭೂಮಿಯೇ ದೊರೆಯುತ್ತಿಲ್ಲ. ರೈತರು ಸಹ ದುಬಾರಿ ದರ ಹೇಳುತ್ತಿರುವುದರಿಂದ ಹಿಂದೇಟು ಹಾಕುವಂತಾಗಿದೆ. ಕೆಲ ಕಾನೂನು ತೊಡಕು ಹಾಗೂ ಈ ಹಿಂದೆ ನಡೆದ ನಿವೇಶನ ಹಂಚಿಕೆ ಹಗರಣದಿಂದಲೂ ರೈತರು ತಮ್ಮ ಜಮೀನು ಇತರರ ಪಾಲಾಗುವುದು ಬೇಡ ಎಂದು ಮುಂದೆ ಬರುತ್ತಿಲ್ಲ.
ಖಾಸಗಿ ಪೈಪೋಟಿಯಿಂದಾಗಿ ಸೂಡಾಗೆ ಭೂಮಿಯೇ ಲಭ್ಯವಾಗುತ್ತಿಲ್ಲ. ಈ ಹಿಂದೆ ಮಲವಗೊಪ್ಪದಲ್ಲಿ 170 ಎಕರೆ ಜಾಗದಲ್ಲಿ ವಾಜಪೇಯಿ ಬಡಾವಣೆ ಅಭಿವೃದ್ಧಿ ಪಡಿಸಲಾಗಿತ್ತು. ಆದರೆ, ನಿಯಮಬಾಹಿರ ಹಾಗೂ ಒಂದೇ ಕುಟುಂಬಕ್ಕೆ ಹಲವು ನಿವೇಶನಗಳ ಹಂಚಿಕೆ ಮಾಡಿರುವ ಪ್ರಕರಣ ಲೋಕಾಯುಕ್ತದಲ್ಲಿದೆ. ನಾನಾ ತಕರಾರುಗಳ ಮಧ್ಯೆ ಸೂಡಾದಿಂದ ಬಡಾವಣೆ ಅಭಿವೃದ್ಧಿಪಡಿಸುವ ಕೆಲಸ ನಿರೀಕ್ಷಿತ ವೇಗದಲ್ಲಿ ಸಾಗುತ್ತಿಲ್ಲ. 1985-2011ರ ವರೆಗೆ 16 ಬಡಾವಣೆ 9,093 ನಿವೇಶನಗಳನ್ನು ಸೂಡಾ ಅಭಿವೃದ್ಧಿಪಡಿಸಿದೆ. ಆದರೆ, ಡೆವಲಪರ್ಗಳಿಂದ ಲೇಔಟ್ ರಚನೆ, ಬಡಾವಣೆಗಳ ಅಭಿವೃದ್ಧಿ ಕಾರ್ಯ ಅಲ್ಲಲ್ಲಿ ತೊಡಕುಗಳನ್ನು ಎದುರಿಸಿದರೂ ಸರಾಗವಾಗಿ ಸಾಗಿದೆ. ಖಾಸಗಿಯವರಿಂದ 1985ರಿಂದ 2019ರ ವರೆಗೆ ಒಟ್ಟು 19,600 ನಿವೇಶನಗಳನ್ನು ಮಾರಾಟ ಮಾಡಲಾಗಿದೆ. ಸರಕಾರದ ವಿವಿಧ ಯೋಜನೆಗಳಿಂದ ಬಡವರಿಗೆ ಕೊಡ ಮಾಡುವ ವಸತಿ ಯೋಜನೆಗಳೂ ನಿಗದಿತ ಅವ ಧಿಗೆ ಪೂರ್ಣಗೊಳ್ಳುತ್ತಿಲ್ಲ.
ಕೊಳಚೆ ನಿರ್ಮೂಲನಾ ಮಂಡಳಿ, ನಗರಸಭೆ, ಪುರಸಭೆ, ಪಾಲಿಕೆ ಮೂಲಕ ನಿರ್ಮಾಣವಾಗಬೇಕಿರುವ ಮನೆಗಳು ಮರಳು, ಕಾರ್ಮಿಕರ ಕೊರತೆ, ಅಧಿಕಾರಿಗಳ ನಿರ್ಲಕ್ಷ್ಯದಿಂದಲೂ ಪೂರ್ಣಗೊಂಡಿಲ್ಲ. ಬಡವರ ಕನಸು ನನಸಾಗುತ್ತಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ
MUST WATCH
ಹೊಸ ಸೇರ್ಪಡೆ
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.