ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗಲಿ

ವಿವಿಗಳ ಏಕನಿಕಾಯ ಬೋಧನೆ ತೆರವುಗೊಳಿಸಿ ಸಮಗ್ರ ಬಹುಶಿಸ್ತೀಯ ಪದ್ಧತಿ ಜಾರಿಗೆ: ಪ್ರೊ| ಶ್ರೀಧರ್‌

Team Udayavani, Dec 7, 2019, 2:40 PM IST

7-December-18

ಶಿವಮೊಗ್ಗ: ನೂತನವಾಗಿ ರೂಪಿಸಲಾಗಿರುವ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾದಲ್ಲಿ, ಈಗಿನ ಏಕಶಿಸ್ತೀಯ ಉನ್ನತ ಶಿಕ್ಷಣ ತೆರೆಮರಿಗೆ ಸರಿದು, ಬಹುಶಿಸ್ತೀಯ ಶಿಕ್ಷಣ ಪದ್ಧತಿ ಅಸ್ತಿತ್ವಕ್ಕೆ ಬರಲಿದೆ ಎಂದು ರಾಷ್ಟ್ರೀಯ ಶಿಕ್ಷಣ ನೀತಿ ಕರಡು ರಚನಾ ಸಮಿತಿಯ ಸದಸ್ಯ ಕಾರ್ಯದರ್ಶಿ ಪ್ರೊ| ಎಂ. ಎನ್‌. ಶ್ರೀಧರ್‌ ಅಭಿಪ್ರಾಯಪಟ್ಟರು.

ಕುವೆಂಪು ವಿಶ್ವವಿದ್ಯಾಲಯದ ಪಿ.ಎಂ.ಇ. ಮಂಡಳಿಯು ಶುಕ್ರವಾರ ಪ್ರೊ| ಎಸ್‌.ಪಿ.ಹಿರೇಮಠ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶೇಷ ಉಪನ್ಯಾಸದಲ್ಲಿ ಅವರು ರಾಷ್ಟ್ರೀಯ ಶಿಕ್ಷಣ ನೀತಿ 2019ರ ಕುರಿತು ಮಾತನಾಡಿದರು.

ಪ್ರಸ್ತುತವಿರುವ ಮೆಡಿಕಲ್‌, ಟೆಕ್ನಾಲಜಿಕಲ್‌, ಸಾಂಪ್ರಾದಾಯಿಕ ವಿವಿಗಳ ಏಕನಿಕಾಯ ಬೋಧನೆಯನ್ನು ತೆರವುಗೊಳಿಸಿ, ಎಲ್ಲ ನಿಕಾಯ-ವಿಷಯಗಳನ್ನು ಒಳಗೊಂಡ ಸಮಗ್ರ ಬಹುಶಿಸ್ತೀಯ ಮಾದರಿಯನ್ನು ಜಾರಿಗೆ ತರಲಿದೆ ಎಂದರು.

ಪದವಿ ಹಂತದಲ್ಲಿ ಲಿಬರಲ್‌ ಆರ್ಟ್ಸ್ ಎಂಬ ಕೋರ್ಸ್‌ ಇರಲಿದ್ದು, ಕಲಾ, ವಿಜ್ಞಾನ, ವಾಣಿಜ್ಯ, ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಪರಸ್ಪರ ಶಿಸ್ತಿನ ಒಂದೊಂದು ಅಥವಾ ಅವರಿಚ್ಛೆಯ ವಿಷಯಗಳನ್ನು ಅಭ್ಯಸಿಸಬಹುದು. ಒಂದು ವಿಷಯ ತಜ್ಞತೆಗೆ ಸೀಮಿತಗೊಳ್ಳದೇ ಜ್ಞಾನಗಳಿಕೆಯ ಹಂಬಲವನ್ನು ಇದು ಪೂರೈಸಲಿದೆ. ಈ ವ್ಯವಸ್ಥೆಯಲ್ಲಿ ಕಲಿಕೆಯು ವಿದ್ಯಾರ್ಥಿಗಳ ಆಸಕ್ತಿ, ಸ್ವಾತಂತ್ರ ಮತ್ತು ಸಾಮಾಜಿಕ ಓಳಗೊಳ್ಳುವಿಕೆಗಳನ್ನು ಕೇಂದ್ರೀಕರಿಸಿಕೊಂಡು ನಡೆಯಲಿದೆ. ಭಾರತದ ನಳಂದ, ತಕ್ಷಶಿಲಾ ವಿವಿಗಳ ಶಿಕ್ಷಣ ಪರಂಪರೆ, ಸುಸ್ಥಿರ ಅಭಿವೃದ್ಧಿ ಗುರಿಗಳೆಲ್ಲವನ್ನು ಒಟ್ಟುಗೂಡಿಸಿ ನೀತಿಯನ್ನು ರೂಪಿಸಿಲಾಗಿದೆ. ಇದಕ್ಕೆ ಅನುಗುಣವಾಗಿ ಶಿಕ್ಷಣ ಸಂಸ್ಥೆಗಳನ್ನು ಮರುರೂಪಿಸುವ ಸವಾಲು ಸರ್ಕಾರದ ಮುಂದಿದೆ ಎಂದು ತಿಳಿಸಿದರು.

ಉನ್ನತ ಶಿಕ್ಷಣವನ್ನು ಸಂಶೋಧನಾ ಸಂಸ್ಥೆ, ಶಿಕ್ಷಣ ಸಂಸ್ಥೆ ಮತ್ತು ಪದವಿ ನೀಡುವ ಸ್ವಾಯತ್ತ ಕಾಲೇಜು ಸಂಸ್ಥೆಗಳು ಎಂಬ ಮೂರು ವಿಭಾಗಗಳಾಗಿ ರೂಪಿಸಲಾಗುತ್ತದೆ. ಆಗ ಸಂಶೋಧನೆಗೆ ಒತ್ತು ದೊರೆಯುವ ಜೊತೆಗೆ ಸ್ಥಳೀಯ ಅಗತ್ಯಗಳನ್ನು ಅರಿತು ವಿಶೇಷ ಕೋರ್ಸ್‌ಗಳನ್ನು ರೂಪಿಸಿ ಪೂರೈಸುವ ಕಾರ್ಯ ಆಗಲಿದ್ದು, ಶಿಕ್ಷಣ ವಿಕೇಂದ್ರೀಕರಣವಾಗಲಿದೆ. ಆಡಳಿತವನ್ನು ಅನುದಾನ, ಗುಣಮಟ್ಟ ನಿರ್ಧಾರ, ಮಾನ್ಯತೆ ಮತ್ತು ನಿಯಂತ್ರಣ ಎಂಬ ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದ್ದು, ಆಯಾ ವಿಭಾಗದ ಕಾರ್ಯಚಟುವಟಿಕೆಯನ್ನು ಇದು ಸುಗಮಗೊಳಿಸಲಿದೆ ಎಂದು ಹೇಳಿದರು.

ಏಕಶಿಸ್ತೀಯ ಶಿಕ್ಷಣವು ಉದ್ಯೋಗಕ್ಕಾಗಿ ಮಾತ್ರ ವಿದ್ಯಾರ್ಥಿಗಳನ್ನು ರೂಪಿಸುತ್ತಿದೆ. ಹೊಸ ನೀತಿಯಲ್ಲಿ ದೊರೆಯುವ ಶಿಕ್ಷಣವು ಬದಲಾಗುವ ಜಾಗತಿಕ ಸ್ಪರ್ಧಾತ್ಮಕ ಉದ್ಯೋಗ ಮಾರುಕಟ್ಟೆಯಲ್ಲಿಯೂ ಸಫಲವಾಗುವ ಕ್ರಿಯಾತ್ಮಕ ಶಿಕ್ಷಣ ನೀಡಲಿದೆ. ಸಾಂಪ್ರದಾಯಿಕ ಶಿಕ್ಷಣದ ಜೊತೆಜೊತೆಗೆ ವೃತ್ತಿಪರ ಶಿಕ್ಷಣ ವಿಷಯಗಳನ್ನು ವಿದ್ಯಾರ್ಥಿಗಳು ಕಲಿಯುವ ಅವಕಾಶವನ್ನು ನೀತಿ ಒದಗಿಸಲಿದೆ. ಏಕವಿಷಯ ತಜ್ಞತೆಯು ಆವಿಷ್ಕಾರಿ ಮನೋಭಾವವನ್ನು ಕ್ಷೀಣಗೊಳಿಸುತ್ತದೆ.

ಪಾಶ್ಚಿಮಾತ್ಯರಲ್ಲಿನ ಬಹುಶಿಸ್ತೀಯ ಶಿಕ್ಷಣವು ನೋಬೆಲ್‌ ವಿದ್ವಾಂಸರನ್ನು ರೂಪಿಸುತ್ತಿದೆ ಎಂದರು. ಕುಲಪತಿ ಪ್ರೊ| ಬಿ.ಪಿ.ವೀರಭದ್ರಪ್ಪ ಮಾತನಾಡಿ, 2019ರ ಶಿಕ್ಷಣ ನೀತಿಯು ಎಲ್ಲರನ್ನು ಒಳಗೊಳ್ಳುವ ಭೌದ್ಧಿಕ ಆಸಕ್ತಿಯನ್ನು ಪೂರೈಸುವ ಸಮಗ್ರ ಶಿಕ್ಷಣ ವ್ಯವಸ್ಥೆಯಾಗಿದ್ದು, ಅಧ್ಯಾಪಕರು, ಪ್ರಾಂಶುಪಾಲರು ಹಾಗೂ ಶಿಕ್ಷಣ ಆಡಳಿತಗಾರರಿಗೆ ಶೈಕ್ಷಣಿಕೆ ಸ್ವಾತಂತ್ರ್ಯ ನೀಡುತ್ತದೆ.

ಇದನ್ನು ಬಳಸಿಕೊಂಡು ಬರುವ ದಿನಗಳಲ್ಲಿ ಹೊಸ ರೀತಿಯ ಸಾಧನೆ ಮಾಡಿ ತೋರಬೇಕಿದೆ ಎಂದರು. ವಿಶ್ವವಿದ್ಯಾಲಯದ ಕುಲಸಚಿವ ಪ್ರೊ| ಎಸ್‌.ಎಸ್‌. ಪಾಟೀಲ್‌ ಮಾತನಾಡಿದರು. ವಿವಿ ವ್ಯಾಪ್ತಿಯ ಕಾಲೇಜುಗಳ ಪ್ರಾಂಶುಪಾಲರು, ಅಧ್ಯಾಪಕರು ಮತ್ತು ಸಂಶೋಧನಾರ್ಥಿಗಳು ಇದ್ದರು. ಉಪನ್ಯಾಸದ ನಂತರ ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಸಂವಾದದಲ್ಲಿ ಪ್ರೊ| ಶ್ರೀಧರ್‌ ಪ್ರಶ್ನೆಗಳಿಗೆ ಉತ್ತರಿಸಿದರು.

ಟಾಪ್ ನ್ಯೂಸ್

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು

Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ

Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ

Boxing: ವಿಶ್ವ ಬಾಕ್ಸಿಂಗ್‌ ಸಂಸ್ಥೆಯಿಂದ ಮಧ್ಯಂತರ ಏಷ್ಯನ್‌ ಮಂಡಳಿ

Boxing: ವಿಶ್ವ ಬಾಕ್ಸಿಂಗ್‌ ಸಂಸ್ಥೆಯಿಂದ ಮಧ್ಯಂತರ ಏಷ್ಯನ್‌ ಮಂಡಳಿ

Aranthodu: ಅಪ್ತಾಪ್ತ ವಯಸ್ಸಿನ ಯುವತಿಯ ಮೇಲೆ ಅತ್ಯಾಚಾರ; ಆರೋಪಿಯ ಸೆರೆ

Aranthodu: ಅಪ್ತಾಪ್ತ ವಯಸ್ಸಿನ ಯುವತಿಯ ಮೇಲೆ ಅತ್ಯಾಚಾರ; ಆರೋಪಿಯ ಸೆರೆ

Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ

Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

puttige-4

Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು

accident

Udupi: ಬೈಕ್‌ ಢಿಕ್ಕಿ; ವ್ಯಕ್ತಿಗೆ ಗಾಯ; ಪ್ರಕರಣ ದಾಖಲು

2

Malpe: ಬೋಟಿನಿಂದ ಸಮುದ್ರಕ್ಕೆ ಬಿದ್ದ ಮೀನುಗಾರ ನಾಪತ್ತೆ

complaint

Udupi: ಕಾರ್ಮಿಕನ ಬೈಕ್‌ ಕಳ್ಳತನ; ಪ್ರಕರಣ ದಾಖಲು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

puttige-4

Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1

Kasaragod Crime News: ಅವಳಿ ಪಾಸ್‌ಪೋರ್ಟ್‌; ಕೇಸು ದಾಖಲು

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.