ಡಿಸಿಸಿ ಬ್ಯಾಂಕ್‌ ಅಧಿಕಾರಕ್ಕಾಗಿ ಶುರುವಾಯ್ತು ಕಸರತ್ತು

13 ನಿರ್ದೇಶಕರ ಸ್ಥಾನಗಳು •4 ನಿರ್ದೇಶಕರ ಅವಿರೋಧ ಆಯ್ಕೆ •9 ಸ್ಥಾನಗಳಿಗೆ ಚುನಾವಣೆ

Team Udayavani, May 5, 2019, 3:36 PM IST

Udayavani Kannada Newspaper

ಶಿವಮೊಗ್ಗ: ಜಿಲ್ಲೆಯ ಸಹಕಾರ ಕ್ಷೇತ್ರದ ತಾಯಿ ಬೇರು ಎನಿಸಿದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ (ಡಿಸಿಸಿ)ನಲ್ಲಿ ಅಧಿಕಾರ ಪ್ರತಿಷ್ಠಾಪನೆಗೆ ಜೆಡಿಎಸ್‌- ಕಾಂಗ್ರೆಸ್‌ ಮೈತ್ರಿಕೂಟ ಮತ್ತು ಬಿಜೆಪಿ ನಡುವೆ ಭಾರಿ ಪೈಪೋಟಿ ಏರ್ಪಟ್ಟಿದೆ.

ಸಹಕಾರ ಕ್ಷೇತ್ರದ ಚುನಾವಣೆಯು ರಾಜಕೀಯೇತರವಾದರೂ ಸ್ಪರ್ಧೆ ಮಾಡಿರುವವರು ವಿವಿಧ ಪಕ್ಷಗಳ ಕಾರ್ಯ ಕರ್ತರು, ಮುಖಂಡರು ಮತ್ತು ಜವಾಬ್ದಾರಿಯುತ ಸ್ಥಾನಗಳಲ್ಲಿ ಇರುವವರೇ ಆಗಿದ್ದಾರೆ. ಅಭ್ಯರ್ಥಿಗಳಿಗೆ ಕಾಂಗ್ರೆಸ್‌, ಜೆಡಿಎಸ್‌ ಮತ್ತು ಬಿಜೆಪಿಯು ಬೆಂಬಲ ಘೋಷಿಸಿ ಅವರ ಗೆಲುವಿಗೆ ಪ್ರಯತ್ನ ನಡೆಸಿವೆ.

ವಾರ್ಷಿಕ ಕೋಟ್ಯಂತರ ರೂ. ವಹಿವಾಟು ಹೊಂದಿರುವ ಡಿಸಿಸಿ ಬ್ಯಾಂಕ್‌ನಲ್ಲಿ ಹಾಲಿ ಅಧ್ಯಕ್ಷ ಆರ್‌.ಎಂ. ಮಂಜುನಾಥ ಗೌಡ ಅವರು ಸುಮಾರು ಎರಡು ದಶಕಗಳಿಂದ ಏಕಸ್ವಾಮ್ಯ ಸಾಧಿಸಿದ್ದಾರೆ. ರಾಜ್ಯದಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಜಿಲ್ಲೆಯಲ್ಲಿ ಯಾವುದೇ ಪಕ್ಷ ಪ್ರಭುತ್ವ ಸಾಧಿಸಿದರೂ ಡಿಸಿಸಿ ಬ್ಯಾಂಕ್‌ನಲ್ಲಿ ಮಂಜುನಾಥ ಗೌಡ ಅವರ ಹಿಡಿತವನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಈ ಬಾರಿ ಬ್ಯಾಂಕ್‌ನ ಆಡಳಿತವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಬೇಕೆಂದು ಸರ್ವಪಕ್ಷಗಳಲ್ಲೂ ತೀವ್ರ ಪ್ರಯತ್ನ ನಡೆದಿದೆ. 4 ಕ್ಷೇತ್ರಗಳ 13 ನಿರ್ದೇಶಕರ ಸ್ಥಾನಗಳಲ್ಲಿ ಈಗಾಗಲೇ ನಾಲ್ವರು ಅವಿರೋಧ ಆಯ್ಕೆಯಾಗಿದ್ದಾರೆ. ಇದರಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಲ್ಲಿ ಶಿವಮೊಗ್ಗ ತಾಲೂಕಿನಿಂದ ಹಾಲಿ ನಿರ್ದೇಶಕ ಕೆ.ಪಿ. ದುಗ್ಗಪ್ಪ ಗೌಡ, ಹೊಸನಗರ ತಾಲೂಕಿನಿಂದ ಎಂ.ಎನ್‌. ಪರಮೇಶ್‌ ಮತ್ತು ಶಿಕಾರಿಪುರ ತಾಲೂಕಿನಿಂದ ಅಗಡಿ ಅಶೋಕ್‌ ಹಾಗೂ ಪಟ್ಟಣ ಸಹಕಾರ ಬ್ಯಾಂಕ್‌ಗಳ ಕ್ಷೇತ್ರದ ಶಿವಮೊಗ್ಗ ಉಪ ವಿಭಾಗದಿಂದ ಎಸ್‌.ಪಿ. ದಿನೇಶ್‌ ಅವಿರೋಧ ಆಯ್ಕೆಯಾಗಿದ್ದಾರೆ.

ಉಳಿದ 9 ಸ್ಥಾನಗಳಿಗೆ ಮೇ 6ರಂದು ಮತದಾನ ನಡೆಯಲಿದೆ. 9 ಸ್ಥಾನಗಳಿಗೆ 18 ಮಂದಿ ಸ್ಪರ್ಧಿಸಿದ್ದು ಎಲ್ಲ ಸ್ಥಾನಗಳಲ್ಲೂ ನೇರ ಹಣಾಹಣಿ ಏರ್ಪಟ್ಟಿದೆ. ಚುನಾವಣೆಯಲ್ಲಿ ಕೇವಲ 333 ಮತದಾರರಿರುವುದರಿಂದ ಸೀಮಿತ ಸಂಖ್ಯೆಯ ಮತದಾರರನ್ನು ಒಲಿಸಿಕೊಳ್ಳಲು ಅಭ್ಯರ್ಥಿಗಳು ತೀವ್ರ ಕಸರತ್ತು ನಡೆಸಿದ್ದಾರೆ. ತೀವ್ರ ಪೈಪೋಟಿಯಿಂದಾಗಿ ಮತದಾರರಿಗೆ ಭಾರಿ ಪ್ರಮಾಣದ ಆಮಿಷ ಒಡ್ಡಲಾಗುತ್ತಿದ್ದು ಮತದಾರರಿಗೆ ಚುನಾವಣೆಯು ಸುಗ್ಗಿಯಂತಾಗಿದೆ. ಹಣ ಅಲ್ಲದೆ ಚಿನ್ನ, ಬೆಳ್ಳಿ ರೂಪದಲ್ಲಿ ಕೊಡುಗೆಗಳ ಮಹಾಪೂರವೂ ಹರಿದಿದೆ.

ಮತದಾನಕ್ಕೆ ಇನ್ನೆರಡು ದಿನ ಮಾತ್ರ ಬಾಕಿ ಉಳಿದಿದ್ದು ಕಡೇ ಕ್ಷಣದಲ್ಲಿ ಮತಗಳು ಕೈ ತಪ್ಪಿ ಹೋಗದಂತೆ ತಡೆಯಲು ಅಭ್ಯರ್ಥಿಗಳು ಎಲ್ಲ ರೀತಿಯ ಪ್ರಯತ್ನ ನಡೆಸಿದ್ದಾರೆ. ಮತದಾನದ ದಿನವೇ ಸಂಜೆ ಮತ ಎಣಿಕೆ ಸಹ ನಡೆಯಲಿರುವುದರಿಂದ ಸೋಮವಾರ ಸಂಜೆ 6ಗಂಟೆ ಹೊತ್ತಿಗೆ ಡಿಸಿಸಿ ಬ್ಯಾಂಕ್‌ನ ಆಡಳಿತ ಮುಂದೆ ಯಾರ ಪಾಲಾಗುತ್ತದೆ ಎಂಬುದು ಗೊತ್ತಾಗುತ್ತದೆ.

ಕಣದಲ್ಲಿರುವ ಅಭ್ಯರ್ಥಿಗಳು
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳುಭದ್ರಾವತಿ ತಾಲೂಕು: ಎನ್‌.ಜಿ. ಮಹೇಂದ್ರಗೌಡ, ಎಚ್.ಎಲ್. ಷಡಾಕ್ಷರಿ ತೀರ್ಥಹಳ್ಳಿ ತಾಲೂಕು: ಎಚ್.ಆರ್‌. ನವೀನ, ಬಸವಾನಿ ವಿಜಯದೇವ್‌ ಸಾಗರ ತಾಲೂಕು: ಕೆ.ಕೆ. ರಾಜೇಶ್‌, ಎಚ್.ಕೆ. ವೆಂಕಟೇಶ್‌ ಸೊರಬ ತಾಲೂಕು: ಎಂ.ಆರ್‌. ಅಶೋಕ್‌, ಎನ್‌.ಎಚ್. ಶ್ರೀಪಾದರಾವ್‌.

ಪಟ್ಟಣ ಸಹಕಾರ ಬ್ಯಾಂಕುಗಳು ಹಾಗೂ ಬ್ಯಾಂಕಿನ ವ್ಯಾಪ್ತಿಯಲ್ಲಿ ಬರುವ ಒತ್ತಿನ ಸಹಕಾರ ಸಂಘಗಳುಸಾಗರ ಉಪವಿಭಾಗ: ಎಂ.ಬಿ. ಚನ್ನವೀರಪ್ಪ, ಎಚ್.ಎಸ್‌. ರವೀಂದ್ರ

ಬ್ಯಾಂಕಿನ ವ್ಯಾಪ್ತಿಯಲ್ಲಿ ಬರುವ ಇನ್ನಿತರೆ ಸಹಕಾರ ಸಂಘಗಳುಶಿವಮೊಗ್ಗ ಉಪ ವಿಭಾಗ: ಜೆ.ಪಿ. ಯೋಗೀಶ್‌, ಕೆ.ಬಿ. ರವಿಶಂಕರ ಸಾಗರ ಉಪವಿಭಾಗ: ಬಿ.ಎಂ. ಪಾಲಾಕ್ಷಪ್ಪ, ಬಿ.ಡಿ. ಭೂಕಾಂತ್‌.

ತಾಲ್ಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘ ಹಾಗೂ ಇತರೆ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘಗಳುಶಿವಮೊಗ್ಗ ಉಪ ವಿಭಾಗ: ಆರ್‌.ಎಂ . ಮಂಜುನಾಥ ಗೌಡ, ಜೆ. ವಿರೂಪಾಕ್ಷಪ್ಪ ಸಾಗರ ಉಪವಿಭಾಗ: ಕೆ. ಕೀರ್ತಿರಾಜ್‌, ಜಿ.ಎನ್‌. ಸುಧಿಧೀರ್‌

ಒಂದು ನಾಮಪತ್ರಕ್ಕೆ 26 ಸೂಚಕರು
ಹಾಲಿ ನಿರ್ದೇಶಕ ಎಸ್‌.ಪಿ.ದಿನೇಶ್‌ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಕ್ಷೇತ್ರದಲ್ಲಿರುವ ಮತದಾರರ ಸಂಖ್ಯೆ 36. ಈ ಪೈಕಿ 26 ಮಂದಿ ದಿನೇಶ್‌ ನಾಮಪತ್ರಕ್ಕೆ ಸೂಚಕರಾಗಿ ಸಹಿ ಹಾಕಿದ್ದರು. ಉಳಿದ ಮತದಾರರಲ್ಲಿ ಮೂವರು ದಿನೇಶ್‌ ವಿರುದ್ಧ ನಾಮಪತ್ರ ಸಲ್ಲಿಸಿ ಬಳಿಕ ಉಮೇದುವಾರಿಕೆ ಹಿಂಪಡೆದಿದ್ದರು.

ಟಾಪ್ ನ್ಯೂಸ್

1-eena

ವಚನ ಸಾಹಿತ್ಯದಲ್ಲಿ ಶ್ರೀಕೃಷ್ಣನ ಮಾತು: ಬೃಹತ್‌ ಗೀತೋತ್ಸವ ಕಾರ್ಯಕ್ರಮದಲ್ಲಿ ವೀಣಾ ಬನ್ನಂಜೆ

1-cocco

230 ರೂ. ಗಡಿ ದಾಟಿದ ಹಸಿ ಕೊಕ್ಕೊ ಧಾರಣೆ

1-shadaa

ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ

suicide

Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eena

ವಚನ ಸಾಹಿತ್ಯದಲ್ಲಿ ಶ್ರೀಕೃಷ್ಣನ ಮಾತು: ಬೃಹತ್‌ ಗೀತೋತ್ಸವ ಕಾರ್ಯಕ್ರಮದಲ್ಲಿ ವೀಣಾ ಬನ್ನಂಜೆ

1-cocco

230 ರೂ. ಗಡಿ ದಾಟಿದ ಹಸಿ ಕೊಕ್ಕೊ ಧಾರಣೆ

1-sid-male

Udupi; ಸಿದ್ದಾಪುರ ಪರಿಸರದಲ್ಲಿ ಮಳೆ

suicide

Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು

puttige-4

Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-eena

ವಚನ ಸಾಹಿತ್ಯದಲ್ಲಿ ಶ್ರೀಕೃಷ್ಣನ ಮಾತು: ಬೃಹತ್‌ ಗೀತೋತ್ಸವ ಕಾರ್ಯಕ್ರಮದಲ್ಲಿ ವೀಣಾ ಬನ್ನಂಜೆ

1-cocco

230 ರೂ. ಗಡಿ ದಾಟಿದ ಹಸಿ ಕೊಕ್ಕೊ ಧಾರಣೆ

1-sid-male

Udupi; ಸಿದ್ದಾಪುರ ಪರಿಸರದಲ್ಲಿ ಮಳೆ

1-adaa

ಕೃಷಿ ಬೆಲೆ ಆಯೋಗದ ಅಧ್ಯಕ್ಷರಾಗಿ ಅಶೋಕ ದಳವಾಯಿ ನೇಮಕ

1-shadaa

ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.