ನಾಟಕ ರಂಗಕ್ಕೆ ತಿರುವು ನೀಡಿದ್ದ ಕಾರ್ನಾಡರು
ಕಾರ್ನಾಡರು ನಾಟಕಗಳ ಮೂಲಕ ಸಮಾಜಕ್ಕೆ ಹೊಸ ವಿಚಾರಗಳನ್ನು ಪರಿಚಯಿಸಿದ್ದರು: ಪ್ರೊ| ನಟರಾಜ್
Team Udayavani, Jul 14, 2019, 4:58 PM IST
ಶಿವಮೊಗ್ಗ: ಕಾರ್ನಾಡರಿಗೆ ರಂಗನಮನ ಕಾರ್ಯಕ್ರಮದಲ್ಲಿ ಪ್ರೊ| ಎಂ.ಬಿ. ನಟರಾಜ್ ಮಾತನಾಡಿದರು.
ಶಿವಮೊಗ್ಗ: ಗಿರೀಶ ಕಾರ್ನಾಡ ನಾಟಕ ರಂಗಕ್ಕೆ, ಅಭಿನಯ ಕ್ಷೇತ್ರಕ್ಕೆ ಅಸಾಮಾನ್ಯ ತಿರುವು ನೀಡಿದಂತ ವ್ಯಕ್ತಿ ಎಂದು ಸಾಹಿತಿ ಪ್ರೊ| ಎಂ.ಬಿ.ನಟರಾಜ್ ಅಭಿಪ್ರಾಯಪಟ್ಟರು.
ನಗರದ ಕುವೆಂಪು ರಂಗ ಮಂದಿರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಹೊಂಗಿರಣ ಶಿವಮೊಗ್ಗದ ಸಹಯೋಗದಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ಗಿರೀಶ ಕಾರ್ನಾಡರಿಗೆ ರಂಗನಮನ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ರಂಗಭೂಮಿ ಜಡವಾಗಿದ್ದ ಕಾಲದಲ್ಲಿ ಗಿರೀಶ ಕಾರ್ನಾಡ ಅದಕ್ಕೆ ಹೊಸ ಆಯಾಮ ನೀಡಿದರು. ಇತಿಹಾಸದ ಕಲ್ಪನೆಯಲ್ಲಿ ಇಂದಿನ ಕಾಲದ ವಿಚಾರಗಳನ್ನು ಸಮ್ಮಿಲನ ಮಾಡಿ ನೋಡುವ ಮನಸ್ಥಿತಿಯೇ ಇಲ್ಲದ ಕಾಲದಲ್ಲಿ ಕಾರ್ನಾಡರ ಯಯಾತಿ, ತುಘಲಕ್, ಹಯವಧನ ಹೀಗೆ ಹಲವು ನಾಟಕಗಳು ಹೊಸ ವಿಚಾರಗಳನ್ನು ಪರಿಚಯಿಸಿದವು ಎಂದರು.
ಕಾರ್ನಾಡರಿಂದ ಕನ್ನಡ ನಾಟಕ ವಿಮರ್ಶೆಯೂ ಬೆಳೆಯಿತು. ನಾಟಕದ ಬಗ್ಗೆ, ಅಭಿನಯದ ಬಗ್ಗೆ, ನಿರ್ದೇಶಕನ ಪಾತ್ರ ಬಗ್ಗೆ ಹೆಚ್ಚೆಚ್ಚು ವಿಮರ್ಶೆಗಳು ಬರಲು ಪ್ರಾರಂಭಿಸಿದವು ಎಂದು ಹೇಳಿದರು.
ಮನುಷ್ಯನ ಇತಿ, ಮಿತಿ ಏನು ಎಂಬುದನ್ನು ಸಾಮಾಜಿಕ ನೆಲೆಗಟ್ಟಿನಲ್ಲಿ ನೋಡುವ ಪ್ರಯತ್ನವನ್ನು ಕಾರ್ನಾಡರ ನಾಟಕಗಳಲ್ಲಿ ನೋಡಬಹುದು. ಅವರ ನಾಟಕಗಳು ಓದುವುದಕ್ಕೂ ಸವಾಲು ಮತ್ತು ಅಭಿನಯಕ್ಕೂ ಸವಾಲಾಗಿವೆ. ಆದರೆ, ಅವರ ನಾಟಕಗಳು ನಮ್ಮಲ್ಲಿ ಮತ್ತೆ ಮತ್ತೆ ನಾಟಕಗಳನ್ನು ನೋಡುವ ಅಭಿರುಚಿಯನ್ನು ಬೆಳೆಸುತ್ತವೆ. ಅನಗತ್ಯ ವಿಚಾರಗಳ ಬಗ್ಗೆ ತಲೆ ಕೆಡಿಸಿಕೊಳ್ಳದ ಅಪರೂಪ ವ್ಯಕ್ತಿತ್ವದ ಕಾರ್ನಾಡರಿಗೆ ರಂಗನಮನ ಸಲ್ಲಿಸುತ್ತಿರುವುದು ಅತ್ಯಂತ ಅರ್ಥಪೂರ್ಣ ಎಂದರು. ರಂಗ ನಿರ್ದೇಶಕ ಕಾಂತೇಶ್ ಕದರಮಂಡಲಗಿ, ‘ಕನ್ನಡ ಸಾಹಿತ್ಯಲೋಕ ಹಾಗೂ ರಂಗಭೂಮಿ ಕ್ಷೇತ್ರವನ್ನು ಅತ್ಯಂತ ಶ್ರೀಮಂತಗೊಳಿಸಿದ ವ್ಯಕ್ತಿ ಕಾರ್ನಾಡರು’ ಎಂದು ತಿಳಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ.ಬಿ. ಶಂಕರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಬಾವಿಮನೆ ನಾಗರಾಜ್ ಇದ್ದರು. ಹಸನ್ ಬೆಳ್ಳಿಗನೂಡು ನಿರೂಪಿಸಿದರು. ಈ ಸಂದರ್ಭದಲ್ಲಿ ಡಾ| ಸಾಸ್ವೆಹಳ್ಳಿ ಸತೀಶ್ ನಿರ್ದೇಶನದ ಗಿರೀಶ ಕಾರ್ನಾಡರ ‘ಹೂವು’ ನಾಟಕ ಪ್ರದರ್ಶನಗೊಂಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
Mangaluru: ಆನ್‌ಲೈನ್ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ
Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್ ಅಧ್ಯಕ್ಷನ ಬಂಧನ
Whale: ಅಂಬರ್ ಗ್ರೀಸ್ ಮಾರಾಟ ಜಾಲ ಶಂಕೆ: ಕಾರ್ಯಾಚರಣೆಗೆ ಬಂದಿದ್ದ ಅಧಿಕಾರಿಗಳಿಗೆ ಹಲ್ಲೆ!
Surathkal: ತಡಂಬೈಲ್‌ನಲ್ಲಿ ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ
MUST WATCH
ಹೊಸ ಸೇರ್ಪಡೆ
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ
Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.