ಮಳೆನಾಡು ಸ್ತಬ್ಧ !
ಪ್ರವಾಹದಲ್ಲಿ ಕೊಚ್ಚಿಹೋದ ವ್ಯಕ್ತಿ•ಇನ್ನೊಬ್ಬನ ರಕ್ಷಿಸಿದ ಕುಂಸಿ ಪೊಲೀಸರು•ಹಲವು ಬಡಾವಣೆಗಳಲ್ಲೀಗ ನೀರು
Team Udayavani, Aug 11, 2019, 11:25 AM IST
ಶಿವಮೊಗ್ಗ: ಆಶ್ಲೇಷ ಮಳೆ ಅಬ್ಬರಕ್ಕೆ ಮಲೆನಾಡು ಸ್ತಬ್ಧಗೊಂಡಿದ್ದು, ಎಲ್ಲೆಲ್ಲೂ ಈಗ ನೋವು ಆಕ್ರಂದನವೇ ಕೇಳಿ ಬರುತ್ತಿದೆ. ಶುಕ್ರವಾರ ರಾತ್ರಿ ಸುರಿದ ಭಾರೀ ಮಳೆ ಊಹಿಸಲಾಧ್ಯ ಅನಾಹುತಗಳನ್ನು ಸೃಷ್ಟಿಸಿದೆ.
ರಾತ್ರೋರಾತ್ರಿ ತುಂಗೆ ನೀರಿನ ಪ್ರಮಾಣ ಏರಿಕೆಯಾದ್ದರಿಂದ ನಗರದ ಹಲವು ಬಡಾವಣೆಗಳಿಗೆ ನೀರು ನುಗ್ಗಿದೆ. ಗುರುವಾರವೇ ಕುಂಬಾರಗುಂಡಿ, ಬಾಪೂಜಿನಗರ, ಸೀಗೆಹಟ್ಟಿ ಬಡಾವಣೆ ನಿವಾಸಿಗಳನ್ನು ಸ್ಥಳಾಂತರಿಸಲಾಗಿತ್ತು. ಶುಕ್ರವಾರ ರಾತ್ರಿ ನೀರಿನ ಮಟ್ಟ ಏರಿಕೆಯಾಗುತ್ತಿದ್ದಂತೆ ಮತ್ತೆ ನೂರಾರು ಮಂದಿಯನ್ನು ಸ್ಥಳಾಂತರಿಸಲಾಯಿತು. ಶನಿವಾರ ಬೆಳಗ್ಗೆ ವಿದ್ಯಾನಗರದ ಸೀತಾ ಲೇಔಟ್ ನಿವಾಸಿಗಳನ್ನು ಸ್ಥಳಾಂತರಿಸಲಾಯಿತು. ನಗರದ ಮಹಾವೀರ ಗೋಶಾಲೆಯಲ್ಲಿದ್ದ 200ಕ್ಕೂ ಹೆಚ್ಚು ಗೋವುಗಳನ್ನು ಕೋಟೆ ಠಾಣೆ ಪೊಲೀಸರು ರಕ್ಷಿಸಿದ್ದಾರೆ. ಗೋಶಾಲೆ ಸಂಪೂರ್ಣ ಜಲಾವೃತಗೊಂಡಿದ್ದು 10ಕ್ಕೂ ಹೆಚ್ಚು ಹಸುಗಳು ಮೃತಪಟ್ಟಿವೆ. ನೆರೆಗೆ ಸಿಲುಕಿ ಜಿಲ್ಲೆಯಲ್ಲಿ ಒಟ್ಟು 41 ಜಾನುವಾರುಗಳು ಮೃತಪಟ್ಟಿವೆ. ತೀರ್ಥಹಳ್ಳಿ ತಾಲೂಕಿನಲ್ಲಿ 22, ಶಿವಮೊಗ್ಗ ತಾಲೂಕಿನಲ್ಲಿ 19 ಜಾನುವಾರುಗಳು ಮೃತಪಟ್ಟಿವೆ. ಭದ್ರಾವತಿ ತಾಲೂಕಿನಲ್ಲಿ 3000 ಕೋಳಿಮರಿಗಳು ಸತ್ತಿವೆ.
ಪ್ರವಾಹದಲ್ಲಿ ಕೊಚ್ಚಿ ಹೋದ ವ್ಯಕ್ತಿ: ಸಾಗರ ರಸ್ತೆಯ ಚೋರಡಿ ಕುಮದ್ವತಿ ನದಿ ಬಳಿ ನಿಂತಿದ್ದ ಇಬ್ಬರಿಗೆ ಬೊಲೆರೋ ವಾಹನವೊಂದು ಡಿಕ್ಕಿ ಹೊಡೆದು ಇಬ್ಬರು ಪ್ರವಾಹಕ್ಕೆ ಜಾರಿದ್ದರು. ಕುಂಸಿ ಗ್ರಾಮದ ಅಮರ್‌ನಾಥ್ (55) ಕೊಚ್ಚಿ ಹೋಗಿದ್ದು, ಅದೇ ಗ್ರಾಮದ ನಾಗರಾಜ್ (50) ಅವರನ್ನು ರಕ್ಷಿಸಲಾಗಿದೆ. ಕುಂಸಿ ಠಾಣೆ ಪೊಲೀಸರ ಸಮಯಪ್ರಜ್ಞೆಯಿಂದ ಓರ್ವನ ಪ್ರಾಣ ಉಳಿದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
Chikkamagaluru: ಕೇರಳದಿಂದ “ಸುರಕ್ಷಿತ’ ಮಲೆನಾಡಿನತ್ತ “ನಕ್ಸಲರು’?
Naxalite: ಮಲೆನಾಡಿಗೆ ನಕ್ಸಲರ ಭೇಟಿ ದೃಢ; 3 ಬಂದೂಕು-ಮದ್ದುಗುಂಡು ವಶ
ಚಿಕಿತ್ಸೆಗೆಂದು ಬಂದಿದ್ದ ರೋಗಿ ಸಾವು; ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರ ಆರೋಪ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.