ಕೂಡಲಿ ಮಠ ಅಭಿವೃದ್ಧಿಗೆ ಶ್ರಮ
ಮರುಕಳಿಸಿದ ಮೂಲ ಶಾರದಾಂಬಾ ಪೀಠದ ವೈಭವ: ವಿದ್ಯಾರಣ್ಯ ಸ್ವಾಮೀಜಿ
Team Udayavani, Jun 24, 2019, 4:40 PM IST
ಶಿವಮೊಗ್ಗ: ಉಪ ವಿಭಾಗಾಧಿಕಾರಿ ಟಿ.ವಿ.ಪ್ರಕಾಶ್ ಅವರಿಂದ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಅಧಿಕಾರ ಪಡೆದರು.
ಶಿವಮೊಗ್ಗ: ಮುಂದಿನ ದಿನಗಳಲ್ಲಿ ಮಠದ ಅಭಿವೃದ್ಧಿಗೆ ಸರ್ಕಾರಗಳು ಕೈ ಜೋಡಿಸಿದರೆ ರಾಜ್ಯದಲ್ಲಿಯೇ ಒಂದು ಅತ್ಯುತ್ತಮ ಮಠವನ್ನಾಗಿ ನಿರ್ಮಿಸಲು ಶ್ರಮಿಸುವುದಾಗಿ ಕೂಡಲಿ- ಶೃಂಗೇರಿ ಶಂಕರಾಚಾರ್ಯ ಮಹಾಸಂಸ್ಥಾನದ ವಿದ್ಯಾಭಿನವ ವಿದ್ಯಾರಣ್ಯ ಭಾರತಿ ಸ್ವಾಮೀಜಿ ತಿಳಿಸಿದರು.
ಶನಿವಾರ ಸಮೀಪದ ಕೂಡಲಿ ಮಠದಲ್ಲಿ ಸರ್ಕಾರದ ವತಿಯಿಂದ ಉಪ ವಿಭಾಗಾಧಿಕಾರಿ ಟಿ.ವಿ. ಪ್ರಕಾಶ್ ಅವರಿಂದ ಅಧಿಕಾರ ಸ್ವೀಕರಿಸಿ ಅವರು ಮಾತನಾಡಿದರು.
ಈ ಮಠದಲ್ಲಿ ಮಾಡಬೇಕಾಗಿರುವ ಸಾಕಷ್ಟು ಅಭಿವೃದ್ಧಿ ಕೆಲಸಗಳಿದ್ದು, ಇಲ್ಲಿ ಪ್ರತಿನಿತ್ಯ ಅನ್ನದಾಸೋಹ ನಡೆಸಲು ಮೂರು ಮಹಲ್ನಲ್ಲಿ ಅನ್ನದಾನ ಭವನ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು. ಈ ಕ್ಷೇತ್ರವನ್ನು ಪ್ರವಾಸಿ ತಾಣವನ್ನಾಗಿ ಮಾಡಲಾಗುವುದು. ಪ್ರವಾಸಿಗರಿಗೆ ತೊಂದರೆಯಾಗದಂತೆ ಪ್ರವಾಸಿ ಮಂದಿರವನ್ನು ನಿರ್ಮಾಣ ಮಾಡಲಾಗುವುದು. ಶಾರದಾಂಬೆಯ ಸನ್ನಿಧಿಗೆ ಅಕ್ಷರಾಭ್ಯಾಸಕ್ಕೆ ಬರುವ ಜನರಿಗೆ ಎಲ್ಲಾ ರೀತಿಯ ಸೌಲಭ್ಯವನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು.
ಈ ಹಿಂದೆ ಹಿರಿಯ ಸ್ವಾಮೀಜಿ ಆಡಳಿತ ನಡೆಸುತ್ತಿದ್ದಾಗ ಕೆಲವರು ಇವರ ವಿಶ್ವಾಸವನ್ನು ದುರುಪಯೋಗಪಡಿಸಿಕೊಂಡು ಕಡತದಲ್ಲಿ ಸಹಿ ಹಾಕಿಸಿಕೊಂಡರು. ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿ ನಮ್ಮ ಸ್ವಾಧಿಧೀನದಲ್ಲಿರುವ ಮಠವನ್ನು ಸರ್ಕಾರಕ್ಕೆ ವಹಿಸುವ ಕೆಲಸವನ್ನು ಮಾಡಲಾಯಿತು. ಇದರಿಂದ ಕೋರ್ಟ್‌ಗೆ ಅಲೆಯುವಂತಾಯಿತು ಎಂದು ತಿಳಿಸಿದರು.
5 ರಿಂದ 6 ವರ್ಷಗಳ ಕಾಲ ಅಲೆದ ನಂತರ ಹೈಕೋರ್ಟ್ ನಮ್ಮ ಪರ ತೀರ್ಪು ನೀಡಿತು. ಆ ನಂತರ ಪುನಃ ಅವರು ಮೇಲ್ಮನವಿ ಸಲ್ಲಿಸಿದರು. ಒಂದು ವರ್ಷದ ಕಾಲದ ನಂತರ ಸರ್ಕಾರಕ್ಕೆ ವಹಿಸಲಾಯಿತು. ನಂತರ ಅಧಿಕಾರಕ್ಕೆ ಬಂದ ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಮಠವನ್ನು ತಮಗೆ ನೀಡುವಂತೆ ಅದೇಶಿಸಿದರು. ಹಿರಿಯ ಸ್ವಾಮೀಜಿ ನಿಧನ ಹೊಂದಿದ ಕಾರಣ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಬಹಳ ದಿನದ ಕನಸು ಯೋಗಾಯೋಗದಿಂದ ಈ ಕೆಲಸ ಸಿಕ್ಕಿದೆ. 13ನೇ ವಯಸ್ಸಿನಲ್ಲಿಯೇ ಇರುವಾಗಲೇ ನಾನು ಇಲ್ಲಿ ಬಂದು ಈ ಮಠದ ಉದ್ಧಾರಕ್ಕೆ ಶ್ರಮಿಸಬೇಕು ಎಂಬುದು ಹಿರಿಯ ಸ್ವಾಮೀಜಿ ಕನಸಾಗಿತ್ತು. ಅದು ಇಂದಿಗೆ ಪೂರ್ಣಗೊಂಡಿದೆ. ಮುಂದಿನ ದಿನಗಳಲ್ಲಿ ಮಠದ ಉದ್ಧಾರಕ್ಕೆ ಶ್ರಮಿಸುತ್ತೇನೆ ಎಂದು ಹೇಳಿದರು.
ಮೂಲ ಶಾರಾದಾಂಬಾ ಪೀಠದ ವೈಭವ ಮತ್ತೆ ಮರುಕಳಿಸಲಿದೆ. ಶಾರಾದಾಂಬ ದೇವಾಲಯದ ನಿರ್ಮಾಣ ಕಾರ್ಯ ಶೀಘ್ರ ಪೂರ್ಣಗೊಳ್ಳಲಿದೆ. ಸುಸಜ್ಜಿತ ಭೋಜನ ಶಾಲೆಯ ನಿರ್ಮಾಣಕ್ಕೆ ತೀರ್ಮಾನಿಸಲಾಗಿದೆ. ಯಾತ್ರಿ ನಿಲಯ ನಿರ್ಮಾಣಕ್ಕೆ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಂದಾಯ ನಿರೀಕ್ಷಕ ಎಚ್. ಸುರೇಶ್, ಭಾಗ್ಯ, ಮಂಜುನಾಥ, ಶ್ರೀನಿವಾಸ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
Mangaluru: ಆನ್‌ಲೈನ್ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ
Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್ ಅಧ್ಯಕ್ಷನ ಬಂಧನ
Whale: ಅಂಬರ್ ಗ್ರೀಸ್ ಮಾರಾಟ ಜಾಲ ಶಂಕೆ: ಕಾರ್ಯಾಚರಣೆಗೆ ಬಂದಿದ್ದ ಅಧಿಕಾರಿಗಳಿಗೆ ಹಲ್ಲೆ!
Surathkal: ತಡಂಬೈಲ್‌ನಲ್ಲಿ ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ
MUST WATCH
ಹೊಸ ಸೇರ್ಪಡೆ
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ
Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.