ಮೀಸಲು ಕ್ಷೇತ್ರದಲ್ಲಿ ಮುನ್ನಡೆ ಯಾರಿಗೆ?
ಲಂಬಾಣಿ ಸಮುದಾಯದ ಬೆಂಬಲದ ವಿಶ್ವಾಸದಲ್ಲಿ ಮೈತ್ರಿಕೂಟ•ಬಿಜೆಪಿಗೆ ಮೋದಿ ಅಲೆ ಕೈ ಹಿಡಿದಿರುವ ನಿರೀಕ್ಷೆ
Team Udayavani, May 4, 2019, 1:20 PM IST
ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ
ಶಿವಮೊಗ್ಗ: ಮೀಸಲು ವಿಧಾನಸಭಾ ಕ್ಷೇತ್ರವಾಗಿರುವ ಶಿವಮೊಗ್ಗ ಗ್ರಾಮಾಂತರ ಪ್ರದೇಶದಲ್ಲಿ ಈ ಬಾರಿ ಉಭಯ ಪಕ್ಷಗಳ ನಡುವೆ ಜಿದ್ದಾಜಿದ್ದಿನ ಹೋರಾಟ ನಡೆದಿದೆ. ಉಪ ಚುನಾವಣೆಯಲ್ಲಿ ಬಿಜೆಪಿ ಕೈ ಹಿಡಿದಿದ್ದ ಈ ಕ್ಷೇತ್ರದ ಮತದಾರರು ಈ ಬಾರಿ ಯಾರ ಕೈ ಹಿಡಿಯಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.
ಜೆಡಿಎಸ್‌ನ ಭದ್ರಕೋಟೆಯಾಗಿದ್ದ ಗ್ರಾಮಾಂತರ ಕ್ಷೇತ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಾಲಾಗಿದೆ. ಲೋಕಸಭಾ ಉಪ ಚುನಾವಣೆಯಲ್ಲೂ ಕ್ಷೇತ್ರದ ಮತದಾರರು ಬಿಜೆಪಿಗೆ ಲೀಡ್ ಕೊಟ್ಟಿದ್ದರು. ಆದರೆ ಈ ಬಾರಿ ಮೂರು ಪಕ್ಷಗಳು ಬಿರುಸಿನ ಪ್ರಚಾರ ನಡೆಸಿರುವುದರಿಂದ ಲೀಡ್ ಯಾರಿಗೆ ಎಂಬ ಕುತೂಹಲ ಮೂಡಿಸಿದೆ. ಬಿಜೆಪಿ 15 ಸಾವಿರಕ್ಕೂ ಹೆಚ್ಚು ಲೀಡ್ ಪಡೆಯುತ್ತೇವೆ ಎಂಬ ಉತ್ಸಾಹದಲ್ಲಿದ್ದರೆ, ಜೆಡಿಎಸ್ ಮಾತ್ರ ಮೂರ್‍ನಾಲ್ಕು ಸಾವಿರ ಲೀಡ್ ಬರಬಹುದೆಂಬ ನಿರೀಕ್ಷೆ ಇಟ್ಟುಕೊಂಡಿದೆ.
ರೈತಾಪಿ ವರ್ಗವೇ ಹೆಚ್ಚಾಗಿರುವ ಈ ಕ್ಷೇತ್ರದಲ್ಲಿ ಲಂಬಾಣಿಗರು, ಲಿಂಗಾಯತರು, ಎಸ್‌ಸಿ, ಎಸ್‌ಟಿಗಳು ನಿರ್ಣಾಯಕರಾಗಿದ್ದಾರೆ. ಒಂದು ಕಾಲದಲ್ಲಿ ಬಂಗಾರಪ್ಪ ಕೈ ಹಿಡಿಯುತ್ತಿದ್ದ ಲಂಬಾಣಿ ಸಮುದಾಯ ಈಗ ತನ್ನ ನಿಲುವು ಬದಲಾಯಿಸಿಕೊಂಡಿದೆ. ಕುಮಾರಸ್ವಾಮಿ ಸಾಲಮನ್ನಾ, ಬಂಗಾರಪ್ಪನವರ ಪಂಪ್‌ಸೆಟ್‌ಗೆ ಉಚಿತ ವಿದ್ಯುತ್ ಬಗ್ಗೆ ಜೆಡಿಎಸ್ ಹೆಚ್ಚಿನ ಪ್ರಚಾರ ನಡೆಸಿತ್ತು. ಬಿಜೆಪಿ ತನ್ನ ಪೇಜ್ ಪ್ರಮುಖ್, ಸಂಘಟನೆ ಮೂಲಕ ಮನೆ ಮನೆ ತಲುಪಿದ್ದು, ಯುವಕರು ಮೋದಿ ಪರವಾಗಿ ಮತ ಚಲಾಯಿಸಿದ್ದು ಎರಡೂ ಪಕ್ಷಗಳ ನಡುವೆ ಉತ್ತಮ ಹೋರಾಟಕ್ಕೆ ನಿರೀಕ್ಷಿಸಲಾಗಿದೆ.
ಕ್ಷೇತ್ರವಾರು ಲೆಕ್ಕಾಚಾರ: ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಆನವೇರಿ ಜಿಪಂ, ಹೊಳಲೂರು ಜಿಪಂ, ಹಸೂಡಿ ಜಿಪಂ, ಹಾರನಹಳ್ಳಿ ಜಿಪಂ, ಕುಂಸಿ ಜಿಪಂ, ಹೊಳೆಹೊನ್ನೂರು ಜಿಪಂ ಹಾಗೂ ಶಿವಮೊಗ್ಗ ನಗರದ 14, 15 ಹಾಗೂ 35 ನೇ ವಾರ್ಡ್ ಸೇರಲಿದೆ. ಆನವೇರಿ ಜಿಪಂ ಭಾಗದಲ್ಲಿ ಲಿಂಗಾಯತರು ನಿರ್ಣಾಯಕರಾಗಿದ್ದು ಬಿಜೆಪಿಗೆ ಉತ್ತಮ ಮತ ಸಿಗುವ ವಿಶ್ವಾಸ ವ್ಯಕ್ತಪಡಿಸಿದೆ. ಅದೇ ರೀತಿ ಹಸೂಡಿ, ಹೊಳಲೂರು, ಹಾರನಹಳ್ಳಿ ಭಾಗದಲ್ಲಿ ಹಾಗೂ 14, 15ನೇ ವಾರ್ಡ್‌ನಲ್ಲಿ ಪ್ಲಸ್ ಆಗುವ ಸಾಧ್ಯತೆ ಇದೆ ಎಂಬುದು ಬಿಜೆಪಿ ಮುಖಂಡರ ಅಭಿಪ್ರಾಯ. ಜೆಡಿಎಸ್ ಈ ಬಾರಿ ದೊಡ್ಡಮಟ್ಟದ ನಿರೀಕ್ಷೆ ಇಟ್ಟುಕೊಳ್ಳದಿರುವುದು ವಿಶೇಷ. ಶಿವಮೊಗ್ಗದ 35ನೇ ವಾರ್ಡ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರು ಇರುವುದರಿಂದ ಈ ಬಾರಿ ಹೆಚ್ಚಿನ ಮತ ಬೀಳಲಿದೆ ಎಂಬ ನಿರೀಕ್ಷೆ ಇಟ್ಟುಕೊಂಡಿದೆ. ಅದೇ ರೀತಿ ಕುಂಸಿ ಜಿಪಂ ಕ್ಷೇತ್ರದಲ್ಲಿ ಈಡಿಗರು ದೊಡ್ಡ ಸಂಖ್ಯೆಯಲ್ಲಿದ್ದು ಅವರು ಸಹ ಮಧು ಬಂಗಾರಪ್ಪ ಬೆಂಬಲಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹಾರನಹಳ್ಳಿ ಜಿಪಂ ಕ್ಷೇತ್ರದಲ್ಲೂ ಲೀಡ್ ಸಿಗುತ್ತದೆ. ಹೊಳಲೂರು, ಆನವೇರಿ ಜಿಪಂ ಕ್ಷೇತ್ರದಲ್ಲಿ ಸಮಬಲದ ಹೋರಾಟ ನಿರೀಕ್ಷೆ ಮಾಡಲಾಗಿದೆ. ಈ ಬಾರಿ ಮಧು ಬಂಗಾರಪ್ಪ ಪರ ಅನುಕಂಪದ ಅಲೆ ಇದ್ದು, ಲಂಬಾಣಿ ಸಮುದಾಯ ಕೆಲ ಹಳ್ಳಿಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಮತ ಚಲಾಯಿಸಿದ್ದಾರೆ ಎಂಬುದು ಜೆಡಿಎಸ್ ಮುಖಂಡರ ವಿಶ್ವಾಸ.
ತಿ ಬೂತ್‌ನಲ್ಲೂ ನಮ್ಮ ಕಾರ್ಯಕರ್ತರು ಉತ್ಸಾಹದಿಂದ ಕೆಲಸ ಮಾಡಿದ್ದಾರೆ. ಪೇಜ್ ಪ್ರಮುಖರು ಮನೆ ಮನೆ ತಲುಪಿ ನರೇಂದ್ರ ಮೋದಿ ಅವರ ಸಾಧನೆಗಳನ್ನು ಮನೆ ಮನೆಗೆ ತಲುಪಿಸಿದ್ದಾರೆ. ಯುವಕರು ಹಿಂದಿಗಿಂತಲೂ ಹೆಚ್ಚು ಮೋದಿ ಪರ ಒಲವು ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗ ಗ್ರಾಮಾಂತರದ ಎಲ್ಲ ಬೂತ್‌ಗಳಲ್ಲೂ ಉತ್ತಮ ಮತದಾನವಾಗಿದ್ದು ಬಿಜೆಪಿಗೆ 17352 ಬರಲಿದೆ. ಕನಿಷ್ಠ ನಾವು 15 ಸಾವಿರಕ್ಕೂ ಹೆಚ್ಚು ಮತಗಳ ಲೀಡ್ ಕೊಡಲಿದ್ದೇವೆ. •ಕೆ.ಬಿ.ಅಶೋಕ್ ನಾಯ್ಕ,
ಶಾಸಕ, ಶಿವಮೊಗ್ಗ ಗ್ರಾಮಾಂತರ
ಪ್ರತಿ ಬೂತ್‌ನಲ್ಲೂ ಜಿದ್ದಾಜಿದ್ದಿನ ಹೋರಾಟ ನಡೆದಿದೆ. ನಾವು ಅಷ್ಟು ಬರುತ್ತೆ, ಇಷ್ಟು ಬರುತ್ತೆ ಎಂದು ಸುಳ್ಳು ಹೇಳಲ್ಲ. ಪ್ರಾಮಾಣಿಕವಾಗಿ ನಮ್ಮ ಕಾರ್ಯಕರ್ತರು ಕೆಲಸ ಮಾಡಿದ್ದಾರೆ. ಈ ಬಾರಿ ಒಂದೂವರೆಯಿಂದ ಎರಡು ಸಾವಿರ ಲೀಡ್ ಪಡೆಯಬಹುದು ಎಂಬ ನಿರೀಕ್ಷೆ ಇದೆ. ಕುಮಾರಸ್ವಾಮಿ ಸರಕಾರದ ಸಾಲಮನ್ನಾ, ಮಧು ಬಂಗಾರಪ್ಪ ಪರ ಅನುಕಂಪದ ಅಲೆ ಇದ್ದು ನಮಗೆ ಕೈ ಹಿಡಿಯಲಿದೆ. ಈ ಬಾರಿ ಯಾರೇ ಗೆದ್ದರೂ 10ರಿಂದ 15 ಸಾವಿರ ಅಂತರದಲ್ಲಿ ಗೆಲ್ಲಬಹುದು.
•ಕಾಂತರಾಜು ಸೋಮಿನಕೊಪ್ಪ,
ಗ್ರಾಮಾತರ ಜೆಡಿಎಸ್ ಅಧ್ಯಕ್ಷ
ಗ್ರಾಮಾಂತರ ಕ್ಷೇತ್ರದಲ್ಲಿ ಒಟ್ಟು 247 ಬೂತ್‌ಗಳಿದ್ದು, 1,05,748 ಮಹಿಳೆಯರು, 106500 ಪುರುಷ ಮತದಾರರಿದ್ದಾರೆ. ಅವರಲ್ಲಿ ಈ ಬಾರಿ 87513 ಪುರುಷರು, 83095 ಮಹಿಳೆಯರು ಮತ ಚಲಾಯಿಸಿದ್ದಾರೆ. ಶೇ. 80.38 ಮತದಾನವಾಗಿದೆ.
ಶರತ್ ಭದ್ರಾವತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.