ಒಂದಾದ ಭದ್ರಾವತಿ ಹಾಲಿ- ಮಾಜಿ ಶಾಸಕರು
ತಡರಾತ್ರಿ ತುರ್ತು ಸುದ್ದಿಗೋಷ್ಠಿಯಲ್ಲಿ ಡಿಕೆಶಿ ಘೋಷಣೆ
Team Udayavani, Apr 21, 2019, 4:23 PM IST
ಶಿವಮೊಗ್ಗ: ನಗರದ ಖಾಸಗಿ ಹೊಟೇಲ್‌ನಲ್ಲಿ ಸಚಿವ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಒಂದಾದ ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ವರ್ ಮತ್ತು ಮಾಜಿ ಶಾಸಕ ಅಪ್ಪಾಜಿ ಗೌಡ.
ಶಿವಮೊಗ್ಗ: ಭದ್ರಾವತಿಯ ಶಾಸಕ ಬಿ.ಕೆ.
ಸಂಗಮೇಶ್ವರ್ ಹಾಗೂ ಮಾಜಿ ಶಾಸಕ ಅಪ್ಪಾಜಿ
ಗೌಡರ ನಡುವಿನ ಅಸಮಾಧಾನವನ್ನು
ಉಪಶಮನಗೊಳಿಸಿರುವ ಟ್ರಬಲ್ ಶೂಟರ್
ಡಿ.ಕೆ. ಶಿವಕುಮಾರ್ ಇಬ್ಬರೂ ಒಟ್ಟಾಗಿದ್ದಾರೆ
ಎಂದು ಶುಕ್ರವಾರ ರಾತ್ರಿ ಇಲ್ಲಿನ ಖಾಸಗಿ
ಹೊಟೇಲ್‌ವೊಂದರಲ್ಲಿ ಕರೆಯಲಾಗಿದ್ದ
ತುರ್ತು ಸುದ್ದಿಗೋಷ್ಠಿಯಲ್ಲಿ ಘೋಷಿಸಿದರು.
ಹಾವು ಮುಂಗುಸಿಯಂತಿದ್ದ ಭದ್ರಾವತಿ
ಶಾಸಕ, ಕಾಂಗ್ರೆಸ್‌ನ ಸಂಗಮೇಶ್ವರ್,
ಜೆಡಿಎಸ್‌ನ ಅಪ್ಪಾಜಿ ಗೌಡ ನಡುವ
ಸ್ನೇಹ ಕುದುರಿಸುವಲ್ಲಿ ಸಫಲರಾಗಿದ್ದಾರೆ.
ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಕಾರಣಕ್ಕೆ
ಮಾಜಿ ಹಾಲಿ ಶಾಸಕರು ಒಟ್ಟಿಗೆ ಪ್ರಚಾರ
ನಡೆಸಲು ತೀರ್ಮಾನಿಸಿದ್ದಾರೆ. ಇನ್ನು ಮುಂದೆ
ಕ್ಷೇತ್ರದಲ್ಲಿ ಜಂಟಿ ಪ್ರಚಾರ ಮಾಡಲಿದ್ದಾರೆ.
ಕಾರ್ಯಕರ್ತರು, ನಾಯಕರ ನಡುವೆ
ಒಟ್ಟಿಗೆ ಸಾಗಲು ತೀರ್ಮಾನಿಸಿದ್ದಾರೆ ಎಂದು
ಡಿಕೆಶಿ ತಿಳಿಸಿದರು.
ಭದ್ರಾವತಿ ಹಾಗೂ ಗ್ರಾಮಾಂತರ ಪ್ರದೇಶದ ಹತ್ತು ಕಡೆ ಶನಿವಾರ ಜಂಟಿ ಪ್ರಚಾರ ಮಾಡಲಿದ್ದು, ಚುನಾವಣೆ ದೃಷ್ಟಿಕೋನದಿಂದ ಇದು ಉತ್ತಮ ಸಂಕೇತವಾಗಿದೆ. ಭದ್ರಾವತಿಯಿಂದ ಕನಿಷ್ಠ 1 ಲಕ್ಷ ಮತಗಳ ಲೀಡ್ ಸಿಗುವ ನಿರೀಕ್ಷೆ ಇದೆ. ಎರಡೂ
ಪಕ್ಷದ ಮಂತ್ರಿಗಳು, ಶಾಸಕರು ಚುನಾವಣೆ ಕೆಲಸ ಮಾಡುತ್ತಿದ್ದಾರೆ. ಇಲ್ಲಿರುವ ಹಾಲಿ, ಮಾಜಿ ಶಾಸಕರಿಬ್ಬರೂ ಮೈತ್ರಿಕೂಟದವರೇ ಆಗಿರುವುದರಿಂದ ಗೆಲ್ಲಲು ಪ್ರಬಲ ಅವಕಾಶಗಳಿವೆ. ಇರುವ ಎರಡು ದಿನ ಬಿರುಸಿನ ಪ್ರಚಾರ ಮಾಡಲಾಗುವುದು. ಭದ್ರಾವತಿಯಲ್ಲಿ ಮೋದಿ ಹವಾ ಇಲ್ಲ ಎಂದು ಡಿಕೆಶಿ ಪುನರುತ್ಛಸಿದರು.
ಶಾಸಕ ಬಿ.ಕೆ. ಸಂಗಮೇಶ್ವರ್ ಮಾತನಾಡಿ,’ನನ್ನ ಹಾಗೂ ಅಪ್ಪಾಜಿ ಗೌಡರ ನಡುವೆ ಭಿನ್ನಾಭಿಪ್ರಾಯವಿತ್ತು. ಅದನ್ನು ಬದಿಗೊತ್ತಿ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಅವರಿಗೆ ಒಂದು ಲಕ್ಷಕ್ಕೂ ಹೆಚ್ಚು ಮತಗಳನ್ನು ನೀಡುತ್ತೇವೆ. ಸಚಿವ ಡಿ.ಕೆ. ಶಿವಕುಮಾರ್ ಸಂಧಾನಕ್ಕೆ ನಾವು ವೈಯಕ್ತಿಕ ಭಿನ್ನಾಭಿಪ್ರಾಯ ಬದಿಗೊತ್ತಿದ್ದೇವೆ. ಒಂದು ಒಪ್ಪಂದಕ್ಕೆ ಬಂದಿದ್ದೇವೆ. ನಾಳಿನ ಉಳಿವಿಗಾಗಿ ಮತ
ಯಾಚಿಸಲಿದ್ದೇವೆ. ಕಾಂಗ್ರೆಸ್- ಜೆಡಿಎಸ್ ಕಾರ್ಯಕರ್ತರು ಒಗ್ಗೂಡಿ ಕೆಲಸ ಮಾಡಬೇಕು ಎಂದು ಹೇಳಿದರು.
ಡಿಕೆಶಿ ಸಂಧಾನದಲ್ಲಿ ಅರ್ಥವಿದೆ. ಮತದಾನಕ್ಕೆ ಇನ್ನೂ 78 ಗಂಟೆ ಕಾಲಾವಕಾಶವಿದ್ದು, ಮಧು ಗೆಲುವು ದೇಶಕ್ಕೆ ಸುದ್ದಿಯಾಗುವಂತೆ ಕೆಲಸ ಮಾಡುತ್ತೇವೆ. ರಾಜ್ಯ ನಾಯಕರ ಅಪೇಕ್ಷೆಯಂತೆ
ಕಾರ್ಯಕರ್ತರು ವೈಮನಸ್ಸನ್ನು ದೂರವಿಟ್ಟು ಕೆಲಸ ಮಾಡಬೇಕು ಎಂದು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಅಪ್ಪಾಜಿಗೌಡ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.