ವಿಸ್ಮಯ ಮೂಡಿಸಿದ ಒಂಭತ್ತು ಕವಲಿನ ಅಡಕೆ ಮರ!
Team Udayavani, Nov 30, 2019, 3:50 PM IST
ಶಿವಮೊಗ್ಗ: ಪ್ರಕೃತಿಯು ತನ್ನ ಮಡಿಲೊಳಗೆ ಹತ್ತು ಹಲವು ಕುತೂಹಲವನ್ನು ಹುದಿಗಿಟ್ಟುಕೊಂಡಿದೆ. ಕೆಲವೊಮ್ಮೆ ವಿಚಿತ್ರಗಳನ್ನು ತೋರಿಸುತ್ತದೆ. ಹೌದು, ಆಗಾಗ ಪ್ರಕೃತಿಯಲ್ಲಿ ಅಲ್ಲೊಂದು ಇಲ್ಲೊಂದು ವಿಸ್ಮಯಗಳು ಕಾಣಸಿಗುತ್ತವೆ. ಅಂಥದ್ದೇ ಒಂದು ವಿಸ್ಮಯ ಭದ್ರಾವತಿ ತಾಲೂಕಿನ ಎಮ್ಮೆಹಟ್ಟಿ ಗ್ರಾಮದಲ್ಲಿ ನಡೆದಿದೆ. ಹೌದು ಇಂಥ ವಿಸ್ಮಯಕ್ಕೆ ಕಾರಣವಾಗಿರುವ ಅಪರೂಪದ ಅಡಕೆ ಮರ. ಅಡಕೆ ಮರದಲ್ಲಿ ಎಂಥ ವಿಶೇಷವಿದೆ ಎಂಬ ಕಂಪ್ಲೀಟ್ ಸ್ಟೋರಿ ಇಲ್ಲಿದೆ.
ಭದ್ರಾವತಿ ತಾಲೂಕು ಎಮ್ಮೆಹಟ್ಟಿ ಗ್ರಾಮದ ಮಂಜಪ್ಪ ಅವರ ತೋಟದಲ್ಲಿರುವ 18 ವರ್ಷದ ಅಡಕೆ ಮರ ಎಲ್ಲ ಮರಗಳಂತೆ ಸಾಮಾನ್ಯವಾಗಿಲ್ಲ. ಈ ಮರದ ಬುಡ ಒಂದಾದರೆ ತಲೆ ಮೇಲೆ ಒಂಭತ್ತು ಸುಳಿಗಳಿವೆ. ಇಂಥ ಅಪರೂಪದ ಅಡಕೆ ಮರ ಇದೀಗ ಜನರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಹತ್ತು ವರ್ಷದವರೆಗೆ ಈ ಅಡಕೆ ಮರವೂ ಎಲ್ಲ ಅಡಕೆ ಮರಗಳಂತೆಯೇ ಇತ್ತು. ಹತ್ತು ವರ್ಷವಾದ ಬಳಿಕ ಆರಂಭದಲ್ಲಿ ಮೊದಲಿಗೆ ಅಡಕೆ ಮರದ ತುದಿಯಲ್ಲಿ ಒಂದು ರೆಂಬೆ ಕವಲೊಡೆಯಿತು. ಬಳಿಕ ಹೀಗೆಯೇ ಒಂಭತ್ತು ಕವಲುಗಳು ಒಡೆದು ಒಂಭತ್ತು ಸುಳಿಗಳು ಬಂದಿವೆ. ಕೇವಲ ಸುಳಿಗಳು ಬಂದಿರುವುದು ಮಾತ್ರವಲ್ಲ, ಎಲ್ಲ ಸುಳಿಗಳಲ್ಲಿಯೂ ಅಡಕೆ ಗೊನೆಗಳು ಬಂದಿರುವುದು ವಿಶೇಷ. ಜೊತೆಗೆ ಮತ್ತೆ ಮತ್ತೆ ರೆಂಬೆ ಕವಲುಗಳು ಒಡೆಯುತ್ತಲೇ ಇವೆ.
ಆರಂಭದಲ್ಲಿ ಒಂದೇ ಅಡಕೆ ಮರದಲ್ಲಿ ರೆಂಬೆಯ ಕವಲುಗಳು ಒಡೆಯಲಾರಂಭಿಸಿದಾಗ ತೋಟದ ಮಾಲೀಕ ಮಂಜಪ್ಪ ಹೆದರಿಕೊಂಡಿದ್ದರು. ಅಡಕೆ ಮರ ಸತ್ತು ಹೋಗುತ್ತದೆಯೇನೋ ಎಂದು ಭಾವಿಸಿದ್ದರು. ಆದರೆ ಎಲ್ಲ ಕವಲುಗಳಲ್ಲಿಯೂ ಅಡಕೆ ಫಸಲುಗಳು ಬರುತ್ತಿರುವುದರಿಂದ ಇದೀಗ ಮಂಜಪ್ಪ ಹೆಚ್ಚು ಖುಷಿ ಪಡುತ್ತಿದ್ದಾರೆ. ಈ ವಿಚಿತ್ರವಾದ ಅಡಕೆ ಮರದಲ್ಲಿ ನಾಲ್ಕು ಅಡಕೆ ಮರಗಳಲ್ಲಿ ಬರುವಷ್ಟು ಫಸಲು ಬರುತ್ತಿದೆ. ಇಂಥ ಅಡಕೆ ಮರಗಳಿರುವ ಒಂದು ಎಕರೆ ಅಡಕೆ ತೋಟವಿದ್ದರೆ ನಾಲ್ಕೈದು ಎಕರೆ ಜಾಗದಲ್ಲಿ ಬೆಳೆಯುವಷ್ಟು ಅಡಕೆಯನ್ನು ಬೆಳೆಯಬಹುದು ಎಂದು ಜನ ಮಾತನಾಡುತ್ತಿದ್ದಾರೆ.
ಒಂಭತ್ತಕ್ಕೂ ಹೆಚ್ಚು ಸುಳಿಗಳಿರುವ ಅಡಕೆ ಮರ ಇದೀಗ ಸಾರ್ವಜನಿಕರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಹೀಗೆ ಅಡಕೆ ಮರವೊಂದರಲ್ಲಿ ದಿನೇ ದಿನೇ ಕವಲುಗಳು ಒಡೆದು ಹೆಚ್ಚುವರಿ ಸುಳಿಗಳು ಬರುತ್ತಿರುವುದಕ್ಕೆ ಕಾರಣವೇನು ಎಂಬುದರ ಬಗ್ಗೆ ಸಸ್ಯಶಾಸ್ತ್ರ ವಿಭಾಗದ ವಿಜ್ಞಾನಿಗಳು ಸಂಶೋಧನೆ ನಡೆಸಬೇಕು ಎಂಬುದು ಜನರ ಒತ್ತಾಯವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ
Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್ ಮೇಲೇ ಕಣ್ಣು!
Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ
“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ
Council Session: ಪವರ್ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.