ಮಲೆನಾಡಲ್ಲಿ ವರುಣಾರ್ಭಟದ ಬದಲು ಸೂರ್ಯನ ತಾಪ!
Team Udayavani, Jul 14, 2019, 11:24 AM IST
ಶರತ್ ಭದ್ರಾವತಿ
ಶಿವಮೊಗ್ಗ: ಪುನರ್ವಸು ಮಳೆಯು ಎರಡು ದಿನಗಳಿಂದ ಬಿಡುವು ನೀಡಿದ್ದು ಮಲೆನಾಡಿನಲ್ಲಿ ಸೂರ್ಯನ ತಾಪ ಹೆಚ್ಚಾಗಿದೆ. ಮುಂಗಾರು ಆರ್ಭಟಿಸಬೇಕಾದ ಈ ಕಾಲದಲ್ಲಿ ಮಳೆ ಮಾಯವಾಗಿರುವುದು ಕೃಷಿ ಚಟುವಟಿಕೆಗಳ ಮೇಲೆ ವ್ಯತಿರಿಕ್ತ ಪ್ರಭಾವ ಬೀರಿದೆ.
ಜೂನ್‌ನಲ್ಲಿ ಮಳೆ ಸಂಪೂರ್ಣ ಕೈ ಕೊಟ್ಟಿತ್ತು. ಆದರೆ ಜುಲೈ ಮೊದಲ ವಾರದಿಂದಲೇ ಮಳೆ ಎಡೆಬಿಡದೆ ಸುರಿಯಿತು. ಇದರಿಂದ ಕೃಷಿ ಚಟುವಟಿಕೆಗಳು ಬಿರುಸಾಗಿ ಸಾಗಲಿಲ್ಲ. ಎರಡು ದಿನಗಳಿಂದ ಮಳೆ ಕೈಕೊಟ್ಟಿರುವುದರಿಂದ ಬಿತ್ತನೆಗೆ ಅನುಕೂಲವಾಗಿತ್ತು. ಆದರೆ ಮೆಕ್ಕೆಜೋಳ ಬಿತ್ತನೆ ಅವಧಿ ಮುಗಿಯುತ್ತಾ ಬಂದಿದ್ದು ರೈತರು ಆತಂಕದಲ್ಲೇ ಬಿತ್ತನೆ ಮುಂದುವರಿಸಿದ್ದಾರೆ.
ಮೆಕ್ಕೆಜೋಳ ಬಿತ್ತನೆಗೆ ಹಿನ್ನಡೆ: ಜಿಲ್ಲೆಯಲ್ಲಿ 55 ಸಾವಿರ ಹೆಕ್ಟೇರ್ ಮೆಕ್ಕೆಜೋಳ ಬಿತ್ತನೆ ಗುರಿ ಹೊಂದಲಾಗಿತ್ತು. ಜುಲೈ 12ರವರೆಗೆ 41068 ಹೆಕ್ಟೇರ್ ಬಿತ್ತನೆಯಾಗಿದೆ. ಮೆಕ್ಕೆಜೋಳ ಹೆಚ್ಚು ಬೆಳೆಯುವ ಶಿವಮೊಗ್ಗ, ಶಿಕಾರಿಪುರ, ಸೊರಬದಲ್ಲೇ ಬಿತ್ತನೆಗೆ ಹಿನ್ನಡೆಯಾಗಿದೆ. ಮೆಕ್ಕೆಜೋಳದ ಬಿತ್ತನೆ ಅವಧಿ ಮುಗಿಯುತ್ತಾ ಬಂದಿದ್ದು ಹೆಚ್ಚೆಂದರೆ ಎರಡ್ಮೂರು ದಿನ ಮಾತ್ರ ಬಾಕಿ ಇದೆ. ಜಿಲ್ಲೆಯಲ್ಲಿ ಮಳೆ ಕಣ್ಣಾಮುಚ್ಚಾಲೆ ಕಾರಣಕ್ಕೆ ಮೆಕ್ಕೆಜೋಳ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ.
ಶಿಕಾರಿಪುರದಲ್ಲಿ 23500 ಹೆಕ್ಟೇರ್ ಬಿತ್ತನೆ ಗುರಿ ಇದ್ದು ಈವರೆಗೆ 18750 ಹೆಕ್ಟೇರ್ ಬಿತ್ತನೆಯಾಗಿದೆ. ಸೊರಬದಲ್ಲಿ 12450 ಹೆಕ್ಟೇರ್ ಬಿತ್ತನೆ ಗುರಿ ಇದ್ದು 10082 ಹೆಕ್ಟೇರ್ ಬಿತ್ತನೆಯಾಗಿದೆ. ಶಿವಮೊಗ್ಗದಲ್ಲಿ 14000 ಹೆಕ್ಟೇರ್ ಗುರಿ ಇದ್ದು 8086 ಹೆಕ್ಟೇರ್ ಬಿತ್ತನೆಯಾಗಿದೆ. ಇನ್ನು ಭದ್ರಾವತಿಯಲ್ಲಿ 2050 ಹೆಕ್ಟೇರ್ ಗುರಿ ಬದಲಿಗೆ 1025 ಹೆಕ್ಟೇರ್, ಸಾಗರ 3100 ಹೆಕ್ಟೇರ್ ಬದಲಿಗೆ 2650 ಹೆಕ್ಟೇರ್ ಬಿತ್ತನೆಯಾಗಿದೆ.
ಭತ್ತ ಬೆಳಗಾರರಲ್ಲಿ ಆತಂಕ: ತುಂಗಾ ಮೇಲ್ದಂಡೆ ಕಾಲುವೆಗೆ ಜುಲೈ 15ರಿಂದ ನೀರು ಬಿಡಲು ನಿರ್ಧರಿಸಲಾಗಿದ್ದು ಕೃಷಿ ಚಟುವಟಿಕೆ ಬಿರುಸಾಗಿದೆ. ತುಂಗಾ ಜಲಾಶಯಕ್ಕೆ ಉತ್ತಮ ಒಳಹರಿವು ಇದ್ದು ಕಾಲುವೆಗೆ ನೀರು ಬಿಡಲು ಯಾವುದೇ ತೊಂದರೆ ಇಲ್ಲ. ಮಳೆ ಇದೇ ರೀತಿ ಕ್ಷೀಣಿಸಿದರೆ ಕಾಲುವೆಗೂ ನೀರು ಬಿಡುವ ಲಕ್ಷಣಗಳಿಲ್ಲ.
ಇನ್ನು ಅತಿ ಹೆಚ್ಚು ಅಚ್ಚುಕಟ್ಟು ಹೊಂದಿರುವ ಭದ್ರಾ ಜಲಾಶಯ ಕೂಡ ಭರ್ತಿಯಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ಡ್ಯಾಂನಲ್ಲಿ ಈವರೆಗೆ 134.1 ಅಡಿ ನೀರಿದ್ದು 23.06 ಟಿಎಂಸಿ ನೀರಿದೆ. ಡ್ಯಾಂನ ಗರಿಷ್ಠ ಸಾಮರ್ಥ್ಯ 72 ಟಿಎಂಸಿ. ರೈತರು ನೀರು ಬಿಡುವ ನಂಬಿಕೆ ಮೇಲೆ ಸಸಿ ಮಡಿ ಬಿಟ್ಟಿದ್ದು ಮಳೆಗಾಲದ ಬೆಳೆಗೂ ನೀರು ಸಿಗುವ ಸಾಧ್ಯತೆಗಳು ದೂರ ಇದೆ. ಶಿಕಾರಿಪುರದ ಅಂಜನಾಪುರ ಜಲಾಶಯ ಕೂಡ ಅರ್ಧ ಭರ್ತಿಯಾಗಿದ್ದು ಭತ್ತದ ಬೆಳೆಗೆ ನೀರು ಸಿಗುವುದು ಸಾಧ್ಯವಿಲ್ಲ.
ಶೇ.21ರಷ್ಟು ಮಳೆ ಕೊರತೆ
ಮುಂಗಾರು ಪ್ರಾರಂಭದ ಜೂ. 1ರಿಂದ ಜು. 13ರವರೆಗೆ ಜಿಲ್ಲೆಯಲ್ಲಿ ಶೇ.21ರಷ್ಟು ಮಳೆ ಕೊರತೆಯಾಗಿದೆ. ಅದರಲ್ಲೂ ಸೊರಬ ಶೇ.42, ತೀರ್ಥಹಳ್ಳಿಯಲ್ಲಿ ಶೇ.40ರಷ್ಟು ಮಳೆ ಕೊರತೆ ಆಗಿದೆ. ಶಿಕಾರಿಪುರದಲ್ಲಿ ಶೇ.27, ಶಿವಮೊಗ್ಗದಲ್ಲಿ ಶೇ.18, ಭದ್ರಾವತಿಯಲ್ಲಿ ಶೇ.21ರಷ್ಟು, ಹೊಸನಗರ ಶೇ.16, ಸಾಗರದಲ್ಲಿ ಶೇ.1ರಷ್ಟು ಮಳೆ ಕೊರತೆಯಾಗಿದೆ. ಶಿಕಾರಿಪುರ, ಭದ್ರಾವತಿ, ಶಿವಮೊಗ್ಗ, ಸೊರಬ ತಾಲೂಕುಗಳನ್ನು ಹಿಂಗಾರು ಮಳೆ ವಿಫಲಗೊಂಡ ಹಿನ್ನೆಲೆಯಲ್ಲಿ ಬರಪೀಡಿತ ತಾಲೂಕುಗಳೆಂದು ಘೋಷಣೆ ಮಾಡಲಾಗಿತ್ತು. ಜುಲೈನಲ್ಲಿ ದೊಡ್ಡ ಮಳೆಯಾಗುವ ಯಾವುದೇ ಲಕ್ಷಣಗಳು ಇಲ್ಲದ ಕಾರಣ ಬರ ಘೋಷಣೆ ಮುಂದುವರಿಯುವ ಸಾಧ್ಯತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gundlupete: ಬೋನಿಗೆ ಬಿದ್ದ ಗಂಡು ಚಿರತೆ
Ayodhya ರಾಮನ ದರ್ಶನ ಪಡೆದಿದ್ದ “ಬಸಪ್ಪ” ಈಗ ಶಬರಿಮಲೆಗೆ ಪ್ರಯಾಣ!
Belekeri Mining Case: ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಜೈಲು ಶಿಕ್ಷೆಗೆ ಹೈಕೋರ್ಟ್ ತಡೆ
CID Inquiry: ಪರಿಷತ್‌ನಲ್ಲಿ ನಡೆದ ಘಟನೆ ಎಂದು ಉಲ್ಲೇಖಿಸಿದ್ದು ತಪ್ಪು: ಬಸವರಾಜ ಹೊರಟ್ಟಿ
Mangaluru: ಎರಡು ಸೈಬರ್ ವಂಚನೆ ಪ್ರಕರಣ: ಸೆನ್ ಪೊಲೀಸರಿಂದ ಇಬ್ಬರ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.