ಖಾಸಗಿ ಶಾಲೆ ಪೈಪೋಟಿ ಮಧ್ಯೆ ಇಂಗ್ಲಿಷ್‌ ಮಾಧ್ಯಮ ಸಕ್ಸಸ್‌?

Team Udayavani, May 29, 2019, 1:21 PM IST

29-May-19

ಶಿವಮೊಗ್ಗ: ಸರಕಾರದ ಮಹತ್ವಕಾಂಕ್ಷಿ ಆಂಗ್ಲಮಾಧ್ಯಮ ಶಿಕ್ಷಣ ಯೋಜನೆಗೆ ಜಿಲ್ಲೆಯಲ್ಲಿ ಪ್ರಚಾರದ ಕೊರತೆ ಕಾಡುತ್ತಿದೆ. 1ನೇ ತರಗತಿಯಿಂದ ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಲು ಪೋಷಕರು ಉತ್ಸಾಹ ತೋರುತ್ತಿದ್ದು ಜೂನ್‌ ಅಂತ್ಯದ ವೇಳೆಗೆ ಎಷ್ಟು ಮಕ್ಕಳು ದಾಖಲಾಗುತ್ತಾರೆ ನೋಡಬೇಕಿದೆ.

ಜಿಲ್ಲೆಯ 29 ಸರಕಾರಿ ಶಾಲೆಗಳನ್ನು ಆಂಗ್ಲ ಮಾಧ್ಯಮಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದ್ದು, ಸರಕಾರದ ನಿಯಮಾವಳಿ ಕಾರಣ ನಗರ ಹಾಗೂ ಪಟ್ಟಣ ಪ್ರದೇಶಗಳ ಶಾಲೆಗಳಿಗೆ ಅವಕಾಶ ಸಿಕ್ಕಿದೆ. ಈ ಶಾಲೆಗಳು ಖಾಸಗಿ ಶಾಲೆಗಳ ಪೈಪೋಟಿ ಎದುರಿಸುತ್ತಿದ್ದು ಯಾವ ರೀತಿಯ ಪ್ರತಿಕ್ರಿಯೆ ಸಿಗಲಿದೆ ಎಂಬ ಕುತೂಹಲ ಮೂಡಿಸಿದೆ.

ಖಾಸಗಿ ಶಾಲೆ ಪೈಪೋಟಿ: ಭದ್ರಾವತಿಯ ಹೊಸಸಿದ್ದಾಪುರ ಸರಕಾರಿ ಶಾಲೆಯಲ್ಲಿ ಈ ಬಾರಿ ಪ್ರಥಮ ಬಾರಿಗೆ ಆಂಗ್ಲ ಮಾಧ್ಯಮ ಶಾಲೆ ಆರಂಭಿಸಲಾಗಿದ್ದು ಈಗಾಗಲೇ 10 ಮಕ್ಕಳು ದಾಖಲಾಗಿದ್ದಾರೆ. ನಗರಕ್ಕೆ ಹೊಂದಿಕೊಂಡಿರುವ ಈ ಗ್ರಾಮದಲ್ಲಿ ಬಹುತೇಕ ಮಕ್ಕಳು ಖಾಸಗಿ ಶಾಲೆಗೆ ಹೋಗುತ್ತಾರೆ. ಖಾಸಗಿ ಶಾಲೆ ಬಸ್‌ಗಳು ಮನೆ ಬಾಗಿಲಿಗೆ ಬಂದು ಮಕ್ಕಳನ್ನು ಕರೆದೊಯ್ಯುತ್ತವೆ. ಇಷ್ಟರ ಹೊರತಾಗಿಯೂ ಕೂಲಿ ಕಾರ್ಮಿಕ, ರೈತಾಪಿ ಕುಟುಂಬಗಳು ಸರಕಾರಿ ಶಾಲೆಗೆ ಮಕ್ಕಳನ್ನು ಸೇರಿಸುತ್ತಿದ್ದಾರೆ. ಇದೇ ಊರಿಗೆ ಹೊಂದಿಕೊಂಡಿರುವ ಸರಕಾರಿ ಹೈಸ್ಕೂಲ್ನಲ್ಲಿ ಪ್ರತಿ ವರ್ಷ ಉತ್ತಮ ಫಲಿತಾಂಶ ಬರುತ್ತಿರುವ ಕಾರಣ ಮಕ್ಕಳ ಸಂಖ್ಯೆ ಉತ್ತಮವಾಗಿದೆ. ಖಾಸಗಿ ಶಾಲೆ ಪೈಪೋಟಿಗಳ ನಡುವೆ ಆಂಗ್ಲ ಮಾಧ್ಯಮ ಶಾಲೆ ಯಾವ ರೀತಿ ಸಾಧನೆ ಮಾಡಲಿದೆ ಎಂಬುದಕ್ಕೆ ಕಾಲವೇ ಉತ್ತರಿಸಬೇಕಿದೆ.

ಪ್ರತಿ ತಾಲೂಕಿಗೆ ತಲಾ ನಾಲ್ಕು ಶಾಲೆ ಮಂಜೂರಾಗಿದ್ದು, ಈಗಾಗಲೇ ಒಂದೊಂದು ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಆಂಗ್ಲ ಮಾಧ್ಯಮದ ಜತೆ ಕನ್ನಡ ಮಾಧ್ಯಮವೂ ಇರಲಿದ್ದು, ಮಕ್ಕಳನ್ನು ಯಾವ ಶಾಲೆಗೆ ಸೇರಿಸಬೇಕೆಂಬ ಆಯ್ಕೆಯನ್ನು ಪೋಷಕರಿಗೆ ಬಿಡಲಾಗಿದೆ. ಜಿಲ್ಲೆಯ 29 ಶಾಲೆಗಳಿಗೆ 29 ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. ಇಂಗ್ಲಿಷ್‌ ಶಿಕ್ಷಕರು ಇರುವ ಶಾಲೆಯನ್ನೇ ಮೊದಲ ಬಾರಿಗೆ ಆಯ್ಕೆ ಮಾಡಿಕೊಳ್ಳಲಾಗಿದೆ.

ಹೈಸ್ಕೂಲ್ಗೆ ಡಿಮ್ಯಾಂಡ್‌: ಏಳನೇ ತರಗತಿ ನಂತರ ಇಂಗ್ಲಿಷ್‌ ಮಾಧ್ಯಮದಲ್ಲಿ ಅಭ್ಯಾಸ ಮಾಡಿದರೆ ಉನ್ನತ ಶಿಕ್ಷಣ ಪಡೆಯಲು ಅನುಕೂಲವಾಗಲಿದೆ ಎಂಬುದು ಪೋಷಕರ ಮನವಿ. 8ನೇ ತರಗತಿಗೆ ನೇರವಾಗಿ ಇಂಗ್ಲಿಷ್‌ ಕಲಿಕೆಗೆ ಮುಂದಾದರೆ ತ್ರಾಸದಾಯಕವಾಗಬಹುದು ಎಂಬುದು ಇನ್ನೂ ಕೆಲ ಪೋಷಕರ ವಾದ. ಒಂದರಿಂದ 10ನೇ ತರಗತಿವರೆಗೆ ಎಲ್ಲ ತರಗತಿಗಳಿಗೂ ಇಂಗ್ಲಿಷ್‌ ಮಾಧ್ಯಮ ಬೇಕೆಂಬುದು ಬಹುತೇಕರ ಒತ್ತಾಯ.

ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ನಾಲ್ಕು ಶಾಲೆಗಳನ್ನು ನೀಡಲಾಗಿದ್ದು ಈ ಸಂಖ್ಯೆಯನ್ನು ಹೆಚ್ಚಿಸಲು ಈಗಾಗಲೇ ಒತ್ತಡ ಬಂದಿದೆ. ಶಿಕ್ಷಕರ ಸಂಖ್ಯೆ, ಮಕ್ಕಳ ದಾಖಲಾತಿ ಆಧಾರದ ಮೇಲೆ ಆಂಗ್ಲ ಮಾಧ್ಯಮ ಶಾಲೆ ವಿಸ್ತರಿಸಲು ಇಲಾಖೆ ನಿರ್ಧರಿಸಿದೆ.

ಮಾನದಂಡ ಏನು? 1 ರಿಂದ 10ತರಗತಿವರೆಗೆ ಒಂದೇ ಕಡೆ ಇರುವ ಶಾಲೆಗಳನ್ನು ಆಯ್ಕೆ ಮಾಡಲಾಗಿದೆ. ಒಂದೇ ಕಡೆ ಇರದಿದ್ದರೆ ಕನಿಷ್ಠ 500 ಮೀಟರ್‌ ಹಾಗೂ ಗರಿಷ್ಠ 1500 ಮೀಟರ್‌ ಅಂತರದಲ್ಲಿರುವ ಶಾಲೆಗಳನ್ನು ಗುರುತಿಸಲಾಗಿದೆ. ಜತೆಗೆ ಮಕ್ಕಳ ದಾಖಲಾತಿ ಪ್ರಮಾಣವು ಉತ್ತಮವಾಗಿರಬೇಕು

ಯಾವ್ಯಾವ ಶಾಲೆ: ಭದ್ರಾವತಿ ತಾಲೂಕಿನ ಹೊಸಸಿದ್ದಾಪುರ ಸರಕಾರಿ ಶಾಲೆ, ದೊಣಭಘಟ್ಟದ ಉರ್ದು ಬಾಲಕಿಯರ ಶಾಲೆ, ಅಂತರಗಂಗೆ ಸರಕಾರಿ ಶಾಲೆ, ಅರಳಿಹಳ್ಳಿ ಸರಕಾರಿ ಶಾಲೆ, ಸಾಗರ ತಾಲೂಕಿನ ಹೊಸನಗರ ಸರಕಾರಿ ಶಾಲೆ, ನಿಟ್ಟೂರು ಸರಕಾರಿ ಶಾಲೆ, ಹೊಸನಗರದ ಅಮೃತ ಶಾಲೆ, ಆನಂದಪುರ ಸರಕಾರಿ ಶಾಲೆ, ತೀರ್ಥಹಳ್ಳಿಯ ಕೋಡೂರು ಸರಕಾರಿ ಶಾಲೆ, ಗಾಜನೂರು ಸರಕಾರಿಶಾಲೆ, ಉಂಬ್ಳೆಬೈಲು ಸರಕಾರಿ ಶಾಲೆ, ಮೇಗರವಳ್ಳಿ, ಕೋಣಂದೂರು ಸರಕಾರಿ ಶಾಲೆ, ಶಿಕಾರಿಪುರದ ಕುಸ್ಕೂರು ಸರಕಾರಿ ಶಾಲೆ, ಹಿತ್ತಲ ಗ್ರಾಮದ ಸರಕಾರಿ ಶಾಲೆ, ಶಿರಾಳಕೊಪ್ಪದ ಬಾಲಕಿಯರ ಸರಕಾರಿ ಶಾಲೆ, ಧನರಾಜ್‌ ಹೇಮರಾಜ್‌ ಸರಕಾರಿ ಶಾಲೆ, ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಕೊಮ್ಮನಾಳು, ಶೆಟ್ಟಿಹಳ್ಳಿ, ಹಾಯ್‌ಹೊಳೆ ಉನ್ನತೀಕರಿಸಿದ ಸರಕಾರಿ ಶಾಲೆ, ಸೂಳೆಬೈಲಿನ ಸರಕಾರಿ ಶಾಲೆ, ಶಿವಮೊಗ್ಗ ನಗರದ ಎನ್‌.ಟಿ. ರಸ್ತೆ ಸರಕಾರಿ ಶಾಲೆ, ಗಾಡಿಕೊಪ್ಪ ಸರಕಾರಿ ಶಾಲೆ, ಮಿಳಘಟ್ಟ ಸರಕಾರಿ ಶಾಲೆ, ಕೆ.ಆರ್‌. ಪುರಂ ಸರಕಾರಿ ಶಾಲೆ, ಸೊರಬ ತಾಲೂಕಿನ ಕಮರೂರು ಉನ್ನತೀಕರಿಸಿದ ಸರಕಾರಿ ಶಾಲೆ, ಜಡೆ, ಆನವಟ್ಟಿ ಸರಕಾರಿ ಶಾಲೆಗಳು ಆಂಗ್ಲ ಮಾಧ್ಯಮಕ್ಕೆ ಆಯ್ಕೆಯಾಗಿವೆ.

ಈಗಾಗಲೇ 29 ಶಿಕ್ಷಕರಿಗೆ ತರಬೇತಿ ನೀಡಿ ನಿಯೋಜಿಸಲಾಗಿದೆ. ಹೆಚ್ಚುವರಿ ಶಾಲೆಗಳಿಗೆ ಬೇಡಿಕೆ ಇದೆ. ಆದರೆ ಸರಕಾರದ ನಿರ್ದೇಶನದಂತೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ನಾಲ್ಕು ಶಾಲೆಗಳನ್ನು ನೀಡಲಾಗಿದೆ. ಒಂದನೇ ತರಗತಿಯಿಂದ ಆಂಗ್ಲ ಮಾಧ್ಯಮ ಶುರುವಾಗಲಿದೆ. ಮುಂದಿನ ವರ್ಷದಿಂದ ಅದು ಮುಂದುವರಿಯಲಿದೆ.
ಸುಮಂಗಳ ಕುಚಿನಾಡ,
ಡಿಡಿಪಿಐ, ಶಿವಮೊಗ್ಗ

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

1-aaaaaaa

Karkala: ಕಾಂಗ್ರೆಸ್ ನಾಯಕ ಡಿ. ಅರ್.‌ರಾಜು ನಿಧನ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

1-chuii

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

1-aaaaaaa

Karkala: ಕಾಂಗ್ರೆಸ್ ನಾಯಕ ಡಿ. ಅರ್.‌ರಾಜು ನಿಧನ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

1-chuii

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.