ವೃಕ್ಷ ಲಕ್ಷ ಆಂದೋಲನದ ಹೋರಾಟಕ್ಕೆ ಸಿಕ್ತು ಫಲ
ಬೊಮ್ಮತ್ತಿ- ನಾಡಕಲಸಿ ಅರಣ್ಯ ದೇವರ ಕಾಡು ಎಂದು ಘೋಷಣೆ ಆಂದೋಲನ ಕಾರ್ಯಕರ್ತರ ಸಂತಸ
Team Udayavani, Oct 16, 2019, 1:08 PM IST
ಶಿವಮೊಗ್ಗ: ಸಾಗರ ಸಮೀಪದ ಮಂಚಾಲೆ ಬೊಮ್ಮತ್ತಿ, ನಾಡಕಲಸಿ, ನಾರಗೋಡ, ಬಿಳಿಸಿರಿ ಗ್ರಾಮಗಳ ವ್ಯಾಪ್ತಿಯ 326 ಎಕರೆ ಪ್ರದೇಶವನ್ನು ಸಾಗರ ಅರಣ್ಯ ಇಲಾಖೆ ದೇವರ ಕಾಡು ಎಂದು ಘೋಷಣೆ ಮಾಡಿದೆ.
ಅಲ್ಲಿ ಟ್ರೆಂಚ್ ನಿರ್ಮಾಣ, ರಕ್ಷಣಾ ಕವಚ ತೊಡಿಸಲಾಗಿದೆ. ಇದರಿಂದ ಸುತ್ತಲಿನ 5 ಹಳ್ಳಿಗಳ 6 ಕೆರೆಗಳು ಜಲ ಸಮೃದ್ಧಿ ಕಾಣಲಿವೆ. ಅರೆಮಲೆನಾಡು ತ್ಯಾಗರ್ತಿಗೆ ಹೊಂದಿಕೊಂಡಿರುವ ಬೊಮ್ಮತ್ತಿ ಮಲೆನಾಡಾಗೇ ಉಳಿಯಲಿದೆ ಎಂದು ವೃಕ್ಷಲಕ್ಷ ಆಂದೋಲನ ಹರ್ಷ ವ್ಯಕ್ತಪಡಿಸಿದೆ.
ಕಳೆದ ಲೋಕಸಭಾ ಚುನಾವಣೆಯ ಭರಾಟೆಯ ಮಧ್ಯೆ ಸಾಗರ-ಹೊಸನಗರ- ಸೊರಬ ಭಾಗಗಳಲ್ಲಿ 10,000 ಎಕರೆ ಕಾನು ಅರಣ್ಯ ನಾಶವಾಗುತ್ತಿದೆ ಎಂಬ ಗಂಭೀರ ಪ್ರಕರಣವನ್ನು ವೃಕ್ಷಲಕ್ಷ ಆಂದೋಲನ ಬಯಲಿಗೆ ತಂದಿತ್ತು. ಎಲ್ಲರ ಗಮನ ಚುನಾವಣೆ ಮೇಲೆ ಇರುವಾಗ ಮಲೆನಾಡಿನ ಗ್ರಾಮ ಸಾಮೂಹಿಕ ಭೂಮಿ-ಕಾನು ಅರಣ್ಯಗಳನ್ನು ಬೇಕಾಬಿಟ್ಟಿ ನಾಶ ಮಾಡುವ ಕೃತ್ಯ, ಭೂಕಬಳಿಕೆ ಆಗುತ್ತಿದೆ ಎಂದು ಮಾರ್ಚ್ 2019 ರಲ್ಲಿ ವೃಕ್ಷಲಕ್ಷ ಕಾರ್ಯಕರ್ತರು ಸಾಗರ- ಶಿವಮೊಗ್ಗ ಅರಣ್ಯ ಇಲಾಖೆಗೆ ದೂರು ನೀಡಿದ್ದರು.
ಏಪ್ರಿಲ್‌ನಲ್ಲಿ ರಾಜ್ಯದ ಅರಣ್ಯ ಮುಖ್ಯಸ್ಥರಿಗೆ, ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ, ಭಾರತ ಸರ್ಕಾರದ ಅರಣ್ಯ ಮಂತ್ರಾಲಯಕ್ಕೂ ಅಹವಾಲು ಸಲ್ಲಿಸಿದ್ದರು.
ಹೋರಾಟದ ಆರಂಭ: ಸಾಗರ ಸಮೀಪದ ಮಂಚಾಲೆ ಬೊಮ್ಮತ್ತಿ, ನಾಡಕಲಸಿ, ನಾರಗೋಡ, ಬಿಳಿಸಿರಿ ಗ್ರಾಮಗಳ ಯುವಕರು ಬೊಮ್ಮತ್ತಿ ಸುತ್ತ ನಡೆಯುವ ಭೂಕಬಳಿಕೆ ಬಗ್ಗೆ ವೃಕ್ಷಲಕ್ಷ ಆಂದೋಲನದ ಗಮನ ಸೆಳೆದಿದ್ದರು.
ಮೇ- ಜೂನ್‌ನಲ್ಲಿ 2 ತಿಂಗಳ ಕಾಲ ಕಾರ್ಯಕರ್ತರು ಸರ್ಕಾರದ ಮೇಲೆ ಒತ್ತಡ, ಅರಣ್ಯ ಅಧಿಕಾರಿಗಳ ಜೊತೆ ಸ್ಥಳ ಸಮೀಕ್ಷೆ, ಜಾಗೃತಿ ನಡೆಸಿದ್ದರು.
ಜೀವ ವೈವಿಧ್ಯ ದಾಖಲಾತಿ: ಕಳೆದ ಜುಲೈ ತಿಂಗಳಲ್ಲಿ ಬೊಮ್ಮತ್ತಿಯಲ್ಲಿ ಜೀವ ವೈವಿಧ್ಯ ದಾಖಲಾತಿ ಶಿಬಿರ, ವೃಕ್ಷ ಜಾಗೃತಿ ಜಾಥಾ ಎಂಬ ವಿಶೇಷ ಕಾರ್ಯಕ್ರಮವನ್ನು ವೃಕ್ಷಲಕ್ಷ ಆಂದೋಲನ ರೂಪಿಸಿತು. ರಾಜ್ಯ ಜೀವ ವೈವಿಧ್ಯ ಮಂಡಳಿ, ಅರಣ್ಯ ಕಾಲೇಜು, ಕೃಷಿ ವಿಶ್ವವಿದ್ಯಾಲಯ, ಅರಣ್ಯ ಇಲಾಖೆ, ಜಿಪಂ, ಸಾಮಾಜಿಕ ಅರಣ್ಯ, ಪರಿಸರ ವಿಜ್ಞಾನಿಗಳು ಸೇರಿ ಕಾನು ಅರಣ್ಯ ನಾಶವಾಗುತ್ತಿರುವ ಪ್ರದೇಶಗಳಿಗೆ ಭೇಟಿ ನೀಡಿದ್ದರು.
ಡಾ| ಟಿ.ವಿ. ರಾಮಚಂದ್ರ, ಡಾ| ಕುಶಾಲಪ್ಪ, ಡಾ| ರಾಮಕೃಷ್ಣ, ಡಾ| ಜಡೆಗೌಡ, ಪ್ರೊ| ಬಿ.ಎಂ. ಕುಮಾರಸ್ವಾಮಿ, ಅನಂತರಾಂ, ಆನೆಗೊಳಿ ಸುಬ್ಬರಾವ್, ಶ್ರೀಪಾದ ಬಿಚ್ಚುಗತ್ತಿ, ಗಣಪತಿ ಇವರೆಲ್ಲ ಜೀವ ವೈವಿಧ್ಯ ಕಾನು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು.
ನೂರಾರು ಬಳ್ಳಿ, ಬೇರು, ಔಷಧ ಸಸ್ಯ, ಹಣ್ಣು ಬಿಡುವ, ವೃಕ್ಷಗಳು, ಚಾಪೆಹುಲ್ಲು, ಮೇವಿನ ವೃಕ್ಷ, ನಾಟಿನಮರ, ಪವಿತ್ರ ವೃಕ್ಷ, ಜೇನುಮರ, ತಂಬಳಿಗಿಡ, ಗಡ್ಡೆಗೆಣಸುಗಳನ್ನು ಗುರುತಿಸಿದರು. ಈ ಅರಣ್ಯದ ಪಾರಿಸರಿಕ ಸೇವೆ ವಾರ್ಷಿಕವಾಗಿ ಕೋಟ್ಯಂತರ ರೂಪಾಯಿ ಮೌಲ್ಯದ್ದು ಎಂದು ಅಂದಾಜು ಮಾಡಿದರು.
ದೇವರಕಾಡು ಯೋಜನೆ ಜಾರಿ: ಇದೇ ಹೊತ್ತಿಗೆ ರಾಜ್ಯ ಅರಣ್ಯ ಇಲಾಖೆಯ ಯೋಜನೆ, ಔಷಧಿ ಸಸ್ಯ ವಿಭಾಗದ ಮುಖ್ಯ ಅಧಿಕಾರಿಗಳು ವಿಶೇಷ ದೇವರ ಕಾಡು ನಿರ್ಮಾಣ, ವಿನಾಶದ ಅಂಚಿನ ಔಷಧೀಯ ಸಸ್ಯ ಸಂರಕ್ಷಣಾ ಯೋಜನೆಯನ್ನೇ ಬೊಮ್ಮತ್ತಿ-ನಾರಗೋಡ ಕಾನು ಪ್ರದೇಶಕ್ಕೆ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manvi; ರಾಜಲಬಂಡ ಅಣೆಕಟ್ಟೆಯಲ್ಲಿ ಕಂಡು ಬಂದ ಭಾರಿ ಗಾತ್ರದ ಮೀನುಗಳು
Chikkamagaluru: ತಿಂಗಳ ಹಿಂದೆ ಮದುವೆಯಾಗಿದ್ದ ನವವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ
ಕೊಪ್ಪಳದಲ್ಲಿ ಕ್ಯಾನ್ಸರ್ ಖಾಯಿಲೆಗಿಲ್ಲ ಚಿಕಿತ್ಸೆ -114 ಜನರಲ್ಲಿ ಕ್ಯಾನ್ಸರ್ ಪತ್ತೆ!
ಬೆಳಗಾವಿ: ಎರಡೂ ಅಧಿವೇಶನಗಳಿಗೆ ಕಾಡಿದ ಶೋಕ
Namma Metro; ಡಿಸೆಂಬರ್ 31ರಂದು ಮಧ್ಯರಾತ್ರಿ 2 ಗಂಟೆಯವರೆಗೆ ಮೆಟ್ರೋ ಸಂಚಾರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ShivaRajkumar ಮನೆಯ ಮುದ್ದಿನ ಶ್ವಾನ ನೀಮೋ ಇನ್ನಿಲ್ಲ: ಭಾವನಾತ್ಮಕ ಪತ್ರ ಬರೆದ ಗೀತಾ
Manvi; ರಾಜಲಬಂಡ ಅಣೆಕಟ್ಟೆಯಲ್ಲಿ ಕಂಡು ಬಂದ ಭಾರಿ ಗಾತ್ರದ ಮೀನುಗಳು
Chikkamagaluru: ತಿಂಗಳ ಹಿಂದೆ ಮದುವೆಯಾಗಿದ್ದ ನವವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ
Arvind Kejriwal ವಾಗ್ದಾಳಿ: ತನಿಖೆಗೆ ಆದೇಶದ ಬಳಿಕ ಬಿಜೆಪಿ-ಕಾಂಗ್ರೆಸ್ ವಿರುದ್ಧ ಆಕ್ರೋಶ
‘I am single’; ಅರ್ಜುನ್ ಕಪೂರ್ ಕಾಮೆಂಟ್‌ಗೆ ಕೊನೆಗೂ ಮಲೈಕಾ ಅರೋರಾ ಪ್ರತಿಕ್ರಿಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.