ಸಚಿವಗಿರಿಗಾಗಿ ಓಟ; ಅದೃಷ್ಟದಾಟ!
ಜಿಲ್ಲೆಯ 6 ಶಾಸಕರಲ್ಲಿ ನಾಲ್ವರು ಅನುಭವಿಗಳು•ಸ್ಥಾನ ದಕ್ಕಿಸಿಕೊಳ್ಳಲು ಇವೆ ಹಲವು ತೊಡಕು
Team Udayavani, Jul 28, 2019, 10:59 AM IST
ಶಿವಮೊಗ್ಗ: ಮತ್ತೂಮ್ಮೆ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗುತ್ತಿದ್ದಂತೆ ಪಕ್ಷದ ಶಕ್ತಿ ಕೇಂದ್ರವಾದ ಶಿವಮೊಗ್ಗದಲ್ಲಿ ಸಚಿವ ಸ್ಥಾನ ಯಾರಿಗೆ ಒಲಿಯಲಿದೆ ಎಂಬ ಬಿಸಿ ಬಿಸಿ ಚರ್ಚೆ ಆರಂಭಗೊಂಡಿದೆ. ಒಟ್ಟು ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಆರರಲ್ಲಿ ಬಿಜೆಪಿ ಶಾಸಕರೇ ಇದ್ದಾರೆ. ಆರರಲ್ಲಿ ನಾಲ್ವರು ಈಗಾಗಲೇ ಸಚಿವ ಸ್ಥಾನಕ್ಕೇರಿ ಅನುಭವಿಗಳಾಗಿದ್ದಾರೆ. ಇಬ್ಬರು ಎಂಎಲ್ಸಿಗಳಿದ್ದು ಇಬ್ಬರೂ ಬಿ.ಎಸ್. ಯಡಿಯೂರಪ್ಪನವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಈ ಬಾರಿ ಯಾರಿಗೆ ಸಚಿವ ಸ್ಥಾನ ದಕ್ಕಲಿದೆ ಎಂಬ ಕುತೂಹಲ ಮೂಡಿದೆ.
ಗೆದ್ದವರೆಲ್ಲ ಹಿರಿಯರೆ: ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರಕಾರ ಮತ್ತು ಬಿಜೆಪಿ ಸರಕಾರದ ಅವಧಿಯಲ್ಲಿ ಜಿಲ್ಲೆಯ ಹಲವು ಶಾಸಕರಿಗೆ ಸಚಿವರಾಗುವ ಸುಯೋಗ ಬಂದಿತ್ತು. ಈಗ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕ ಕೆ.ಬಿ. ಅಶೋಕ ನಾಯ್ಕ ಮತ್ತು ಪಕ್ಷದ ಜಿಲ್ಲಾಧ್ಯಕ್ಷರೂ ಆದ ಎಸ್. ರುದ್ರೇಗೌಡ ಅವರನ್ನು ಹೊರತುಪಡಿಸಿ ಪಕ್ಷದ ಉಳಿದೆಲ್ಲಾ ಶಾಸಕರು ಸಚಿವರಾಗುವ ಹಿರಿತನ ಹೊಂದಿದ್ದಾರೆ. ಈ ಆಧಾರದಲ್ಲಿ ಈಶ್ವರಪ್ಪ ಅವರಲ್ಲದೆ ಈಗಾಗಲೇ ಸಚಿವರಾದ ಅನುಭವ ಹೊಂದಿರುವ ಕುಮಾರ್ ಬಂಗಾರಪ್ಪ, ಹರತಾಳು ಹಾಲಪ್ಪ, ಆರಗ ಜ್ಞಾನೇಂದ್ರ, ಆಯನೂರು ಮಂಜುನಾಥ್ ಸಹ ಅರ್ಹರಾಗಿದ್ದಾರೆ.
ಯಾರಿಗೆ ಅದೃಷ್ಟ: ಬಿಜೆಪಿಗೆ ಶಿವಮೊಗ್ಗ ಜಿಲ್ಲಾ ಘಟಕ ಪ್ರಮುಖವಾದರೂ ರಾಜ್ಯದೆಲ್ಲೆಡೆಯ 105 ಶಾಸಕರು ಇದ್ದಾರೆ. ಮೈತ್ರಿ ಸರಕಾರದ ಪತನಕ್ಕೆ ಕಾರಣವಾಗಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಅವಕಾಶ ಮಾಡಿಕೊಟ್ಟ ಪಕ್ಷೇತರರು, ಕಾಂಗ್ರೆಸ್ ಮತ್ತು ಜೆಡಿಎಸ್‌ನಿಂದ ಹೊರಬಂದ ಅತೃಪ್ತರೂ ಮಂತ್ರಿ ರೇಸ್‌ನಲ್ಲಿದ್ದಾರೆ. ಈಶ್ವರಪ್ಪ ಅವರಷ್ಟೇ ಹಿರಿತನ, ಸೇವಾ ಅನುಭವ ಮತ್ತು ಪ್ರಭಾವ ಹೊಂದಿದ 50ಕ್ಕೂ ಅಧಿಕ ಶಾಸಕರು ಪಕ್ಷದೊಳಗಿದ್ದಾರೆ. ಹೀಗಾಗಿ ಶಿವಮೊಗ್ಗದಲ್ಲಿರುವ ಶಾಸಕರಿಗೆ ಹಿರಿತನವಿದ್ದರೂ ಯಾರಿಗೆ ಅದೃಷ್ಟ ಒಲಿದುಬರುತ್ತದೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ ಎಂದು ಪಕ್ಷದ ಕೆಲ ಮುಖಂಡರು ಹೇಳುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು
United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್ ನೇತೃತ್ವ
Operation: ಕಾಸರಗೋಡಿನಲ್ಲಿ ಎನ್.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ
Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…
Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.