ಕುಟುಂಬಗಳನ್ನು ವಿಶ್ವದೊಂದಿಗೆ ಜೋಡಿಸಿದ್ದು ಯೋಗ
ಯೋಗಕ್ಕಿದೆ ವ್ಯಕ್ತಿಯ ಅರಿವನ್ನು ಹೆಚ್ಚಿಸುವ, ವಿಸ್ತರಿಸುವ ಶಕ್ತಿ •ಯೋಗದಿಂದ ದೇಶಕ್ಕೆ ವಿಶ್ವಮಾನ್ಯತೆ: ಈಶ್ವರಪ್ಪ
Team Udayavani, Jun 22, 2019, 11:56 AM IST
ಶಿವಮೊಗ್ಗ: ಯೋಗ ದಿನದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು
ಶಿವಮೊಗ್ಗ: ಎಲ್ಲಾ ಕುಟುಂಬಗಳನ್ನು ವಿಶ್ವದ ಜೊತೆಗೆ ಜೋಡಿಸಿದೆ ಯೋಗ ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಶಾಸಕ ಕೆ.ಎಸ್.ಈಶ್ವರಪ್ಪ ಅವರು ಹೇಳಿದರು.
ಶುಕ್ರವಾರ ಜಿಲ್ಲಾಡಳಿತ, ಜಿಪಂ, ಆಯುಷ್ ಇಲಾಖೆ, ಮಹಾನಗರ ಪಾಲಿಕೆ, ಸ್ಥಳೀಯ ಸಂಘ-ಸಂಸ್ಥೆಗಳು ಹಾಗೂ ಆಯುರ್ವೇದ ಮಹಾವಿದ್ಯಾಲಯಗಳ ಸಹಯೋಗದೊಂದಿಗೆ ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ 5ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿ ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಸಮತೋಲನ ಕಾಯ್ದುಕೊಳ್ಳುವ, ಅರಿವನ್ನು ವಿಸ್ತರಿಸುವ ಅದ್ವಿತೀಯ ಶಕ್ತಿ ಸಾಮರ್ಥ್ಯ ಯೋಗಕ್ಕಿದೆ ಎಂದರು.
ಜಾತಿ, ಮತ, ಭಾಷೆ ಬಣ್ಣಗಳನ್ನು ಮೀರಿದ ಉದಾತ್ತ ಚಿಂತನೆ ಹೊಂದಿರುವ ಯೋಗದಿಂದಾಗಿ ಭಾರತೀಯ ಸಂಸ್ಕೃತಿ ಇಲ್ಲಿನ ಪರಂಪರೆ ಜಗತ್ತಿನ ಕೇಂದ್ರಬಿಂದುವಿನಂತೆ ಗುರುತಿಸಲ್ಪಡುತ್ತಿದೆ. ಯೋಗ ಇಂದು ವಿಶ್ವದೆಲ್ಲೆಡೆ ಹರಡಿದೆ. ಅದನ್ನು ಅನುಸರಿಸುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ವೈಯಕ್ತಿಕವಾಗಿ, ಶಾರೀರಿಕವಾಗಿ, ಮಾನಸಿಕವಾಗಿ ಬಲಿಷ್ಠವಾದಾಗ ಸಹಜವಾಗಿ ದೇಶವೂ ಬಲಿಷ್ಠವಾಗುತ್ತಿದೆ ಎಂದರು.
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕ ಕೆ.ಬಿ. ಅಶೋಕನಾಯ್ಕ ಮಾತನಾಡಿ, ಯೋಗವನ್ನು ವಿಶ್ವಕ್ಕೆ ಪರಿಚಯಿಸಿದ ಕೀರ್ತಿ ಭಾರತಕ್ಕಿದೆ. ಅದು ನಮ್ಮ ಹಿರಿಮೆ. ವ್ಯಕ್ತಿಯು ಸದಾ ಲವಲವಿಕೆಯಿಂದಿರಲು ಹಾಗೂ ಕ್ರಿಯಾಶೀಲನಾಗಿರಲು ಯೋಗ ಸಹಕಾರಿಯಾಗಿದೆ ಎಂದರು. ಯೋಗವನ್ನು ವೈದ್ಯಕೀಯ ಸೇವೆಗಳೊಂದಿಗೆ ಸೇರಿಸಬೇಕಾದ ಅಗತ್ಯವಿದೆ ಎಂದ ಅವರು, ಯೋಗವು ವಿಶ್ವದ ಮೂಲೆ-ಮೂಲೆಗೆ ತಲುಪುವಂತಾಗಬೇಕು. ದೈನಂದಿನ ಕೆಲಸದ ಒತ್ತಡದಿಂದ ಮುಕ್ತರಾಗಿ ಚಟುವಟಿಕೆಯಿಂದಿರಲು, ಶಾಂತಿ-ಸುವ್ಯವಸ್ಥೆ ಕಂಡುಕೊಳ್ಳಲು ಯೋಗ ಅವಶ್ಯಕವಾಗಿದೆ ಎಂದರು.
ಜಿಲ್ಲಾಧಿಕಾರಿ ಕೆ.ಎ. ದಯಾನಂದ್ ಮಾತನಾಡಿ, ಯೋಗ ವೈದ್ಯಶಕ್ತಿಯನ್ನು ಹೊಂದಿದೆ. ಇಲ್ಲಿನ ಸಾಂಸ್ಕೃತಿಕ, ವೈದ್ಯಕೀಯ ಪರಂಪರೆಯನ್ನು ಮುಂದುವರಿಸುವ, ಜಗತ್ತಿಗೆ ಅದನ್ನು ಪರಿಚಯಿಸುವ, ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡುವ ಅಗತ್ಯವಿದೆ ಎಂದರು.
ನಗರದ ಪ್ರಮುಖ ಬೀದಿಗಳಲ್ಲಿ ಯೋಗನಡಿಗೆ ಆಕರ್ಷಕ ಪಥಸಂಚಲನ ಏರ್ಪಡಿಸಲಾಗಿತ್ತು. ಈ ಪಥಸಂಚಲನವು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಅಂತಿಮವಾಗಿ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ಸಂಪನ್ನಗೊಂಡಿತು.
ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಕೆ. ಶಿವರಾಮೇ ಗೌಡ, ಜಿಪಂ ಉಪ ಕಾರ್ಯದರ್ಶಿ ಡಾ| ರಂಗಸ್ವಾಮಿ, ಕ್ರೀಡಾದಿಕಾರಿ ರಮೇಶ್, ಜಿಲ್ಲಾ ಆಯುಷ್ ಅಧಿಕಾರಿ ಡಾ| ಹರ್ಷ ಪುತ್ರಾಯ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
Mangaluru: ಆನ್‌ಲೈನ್ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ
Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್ ಅಧ್ಯಕ್ಷನ ಬಂಧನ
Whale: ಅಂಬರ್ ಗ್ರೀಸ್ ಮಾರಾಟ ಜಾಲ ಶಂಕೆ: ಕಾರ್ಯಾಚರಣೆಗೆ ಬಂದಿದ್ದ ಅಧಿಕಾರಿಗಳಿಗೆ ಹಲ್ಲೆ!
Surathkal: ತಡಂಬೈಲ್‌ನಲ್ಲಿ ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ
MUST WATCH
ಹೊಸ ಸೇರ್ಪಡೆ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.