ಜಮೀನಿನ ಪಹಣಿ ಪತ್ರದಲ್ಲಿ ಬೆಳೆ ನಮೂದಿಸಲು ರೈತರ ಪರದಾಟ!
ಬೆಳೆ ಸಾಲ ಪಡೆಯಲು ಪಹಣಿಯಲ್ಲಿ ಬೆಳೆ ದಾಖಲೆ ಕಡ್ಡಾಯ
Team Udayavani, May 15, 2019, 5:46 PM IST
ಶೃಂಗೇರಿ: ತಾಲೂಕು ಕಚೇರಿಯಲ್ಲಿ ಪಹಣಿಯಲ್ಲಿ ಬೆಳೆ ದೃಢೀಕರಣಕ್ಕಾಗಿ ರೈತರು ಸಾಲುಗಟ್ಟಿ ನಿಂತಿರುವುದು.
ಶೃಂಗೇರಿ: ಜಮೀನಿನ ಪಹಣಿಯ ಬೆಳೆ ಕಾಲಂನಲ್ಲಿ ಬೆಳೆಯ ಬಗ್ಗೆ ಮಾಹಿತಿ ಇಲ್ಲದೆ, ಬೆಳೆ ದೃಢೀಕರಣಕ್ಕಾಗಿ ತಾಲೂಕಿನ ರೈತರು ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಪಹಣಿಯಲ್ಲಿ ಬೆಳೆ ಮಾಹಿತಿ ದಾಖಲಿಸುವ ಸಮಸ್ಯೆ ನಿನ್ನೆ-ಮೊನ್ನೆಯದಲ್ಲ, ಕಳೆದ 2 ರಿಂದ 3 ವರ್ಷಗಳಿಂದಲೂ ಇದೆ. ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ರೈತರು ಸಹಕಾರ ಸಂಸ್ಥೆ, ವಾಣಿಜ್ಯ ಬ್ಯಾಂಕ್‌ಗಳಲ್ಲಿ ಬೆಳೆ ಸಾಲ ಪಡೆಯುವ ಉದ್ದೇಶಕ್ಕಾಗಿ ಜಮೀನಿನ ಪಹಣಿ ಮತ್ತು ಪಹಣಿಯಲ್ಲಿ ಬೆಳೆ ಮಾಹಿತಿ ಕಡ್ಡಾಯವಾಗಿದೆ. ಆದರೆ ಪಹಣಿಗಾಗಿ ರೈತರು ತಾಲೂಕು ಕಚೇರಿಯಲ್ಲಿ ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ, ಪಹಣಿಯ ಬೆಳೆ ಕಾಲಂನಲ್ಲಿ ಬೆಳೆ ಬಗ್ಗೆ ಮಾಹಿತಿ ಇಲ್ಲದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಬಯಲುಸೀಮೆ ಪ್ರದೇಶದಲ್ಲಿ ಬೆಳೆಯುವ ಭತ್ತ, ಶುಂಠಿ ಇವುಗಳೆಲ್ಲ ವಾರ್ಷಿಕ ಬೆಳೆಗಳು. ಪ್ರತಿವರ್ಷವೂ ಪಹಣಿಯಲ್ಲಿ ಬದಲಾವಣೆಯಾಗುವುದು ಸಹಜ. ಆದರೆ ಮಲೆನಾಡಿನ ಪ್ರಮುಖ ಬೆಳೆಯಾದ ಅಡಕೆ ತೋಟ, ತೆಂಗು ಇತ್ಯಾದಿ ಬೆಳೆಗಳು ಪಹಣಿಯ ಬೆಳೆಯ ಕಾಲಂ ಇರಬೇಕು. ಆದರೆ ಬೆಳೆ ಕಾಲಂನಲ್ಲಿ ಶೂನ್ಯವಾಗಿ ಬರೀ ಬಿಳಿ ಹಾಳೆ ಬರುತ್ತದೆ. ಬೆಳೆ ಮಾಹಿತಿ ಇಲ್ಲದ ಪಹಣಿಯನ್ನು ಯಾವುದಾದರೂ ಸಹಕಾರ ಸಂಘ ಅಥವಾ ವಾಣಿಜ್ಯ ಬ್ಯಾಂಕ್‌ಗಳಿಗೆ ನೀಡಿದರೆ ಕವಡೆ ಕಾಸಿನ ಬೆಲೆ ಇಲ್ಲದಾಗಿದೆ. ಬೆಳೆಯಿಲ್ಲದ ಪಹಣಿ ಮೇಲೆ ಸಾಲ ನೀಡಲಾಗದು ಎಂಬ ಸಿದ್ಧ ಉತ್ತರ ಬ್ಯಾಂಕ್‌ನಿಂದ ಬರುತ್ತದೆ. ಕಡ್ಡಾಯ ಬೆಳೆಯ ದೃಢೀಕರಣಕ್ಕಾಗಿ ಮತ್ತೆ ಗ್ರಾಮ ಲೆಕ್ಕಿಗರನ್ನು ಹುಡುಕಿಕೊಂಡು ಹೊರಡಬೇಕಿದೆ.
ಪಹಣಿಯಲ್ಲಿ ಬೆಳೆಯಿಲ್ಲದೆ ಪರದಾಡುವಂತಾಗಿದ್ದು, ದೃಢೀಕರಣ ಇಲ್ಲದ ಪಹಣಿ ಸರಿಪಡಿಸುವುದಕ್ಕೆ ನೂರಾರು ರೂ. ಖರ್ಚು ಮತ್ತು ಸಮಯ ವ್ಯರ್ಥವಾಗುತ್ತಿದೆ. ಇದರೊಂದಿಗೆ ಮತ್ತೂಂದು ಸಮಸ್ಯೆ ಇದೆ. 20 ಗುಂಟೆ ಬೆಳೆಯುವ ಅಡಕೆ ತೋಟದ ಪ್ರದೇಶದಲ್ಲಿ ಕಾಳು ಮೆಣಸು, ಕಾಫಿ ಬೆಳೆಯುತ್ತಿದ್ದರೂ ಬೆಳೆ ಕಾಲಂನಲ್ಲಿ 3 ಗುಂಟೆ ಎಂದು ನಮೂದಾಗಿದೆ. ಇದು ಪ್ರತಿವರ್ಷವೂ ರೈತರಿಗೆ ಗೋಳು ತಪ್ಪಿದ್ದಲ್ಲ. ಈ ರೀತಿ ಪಡೆದ ದೃಢೀಕರಣದ ಪಹಣಿಯ ಆಯಸ್ಸು ಕೂಡ ಕೇವಲ ಆರು ತಿಂಗಳು ಮಾತ್ರ. ಇದಕ್ಕೆಲ್ಲ ಸರ್ಕಾರ ಶಾಶ್ವತ ಪರಿಹಾರ ಕಂಡು ಹಿಡಿಯಬೇಕು.
•ಯಡದಳ್ಳಿ ಪ್ರಕಾಶ್ ಹೆಗ್ಡೆ, ಮಸಿಗೆ ಸುರೇಶ್, ಹಂಚಲಿ ಕೃಷ್ಣಮೂರ್ತಿರಾವ್, ಬೆಳಂದೂರು ದೇವೆಂದ್ರಗೌಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಸಾಲ ಮರುಪಾವತಿಸದೆ ನಕಲಿ ದಾಖಲೆ ಸೃಷ್ಟಿಸಿ ಮರು ಸಾಲ; ಪ್ರಕರಣ ದಾಖಲು
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?
ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
Priority: ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಅವಕಾಶ ವಂಚಿತ ಯಕ್ಷಗಾನ
Sabarimala Railway: ಶಬರಿಮಲೆ ತೀರ್ಥಾಟನೆ: ಕೇರಳಕ್ಕೆ 10 ವಿಶೇಷ ರೈಲು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.