ಮುಂಗಾರು ಅತಂತ್ರ: ಭತ್ತ ಬೆಳೆಗಾರರ ಸ್ಥಿತಿ ಗಂಭೀರ
ಇಳುವರಿ ಕುಂಠಿತಗೊಳ್ಳುವ ಭೀತಿ
Team Udayavani, Jul 31, 2019, 11:41 AM IST
ಶೃಂಗೇರಿ: ತಾಲೂಕಿನ ಮಸಿಗೆ ಗ್ರಾಮದಲ್ಲಿ ಬಿತ್ತನೆಯಾಗಿರುವ ಭತ್ತದ ಸಸಿ ಮುಡಿ.
ಶೃಂಗೇರಿ: ತಾಲೂಕಿನಾದ್ಯಂತ ಮುಂಗಾರು ಮಳೆಯ ಕಣ್ಣಾಮುಚ್ಚಾಲೆ ಮುಂದುವರಿದಿದ್ದು, ಭತ್ತ ಬೆಳೆಯುವ ರೈತರ ಸ್ಥಿತಿ ಅತಂತ್ರವಾಗಿದೆ. ಭತ್ತ ಬೆಳೆಯುತ್ತಿರುವ ರೈತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದ್ದು, ಇದರ ನಡುವೆ ಹವಮಾನ ಪ್ರತಿಕೂಲದಿಂದ ರೈತರು ಭತ್ತ ಬೆಳೆಯಲು ಹಿಂದೇಟು ಹಾಕುವಂತಾಗಿದೆ.
ಬಿತ್ತನೆಗೆ ಹಿನ್ನಡೆ: ಜೂನ್ ಎರಡನೇ ವಾರದಿಂದ ಬಿರುಸಾಗಿ ನಡೆಯಬೇಕಿದ್ದ ಬಿತ್ತನೆ ಕಾರ್ಯಕ್ಕೆ ಸಕಾಲದಲ್ಲಿ ಮಳೆಯಾಗದ ಕಾರಣ ಹಿನ್ನಡೆಯಾಗಿತ್ತು. ಬಹುತೇಕ ಮಳೆಯಾಶ್ರಿತ ಗದ್ದೆಗಳಿದ್ದು, ಬಿತ್ತನೆ ಮಾಡುವಷ್ಟು ನೀರಿಲ್ಲದೇ ತೊಂದರೆಯಾಗಿತ್ತು. ಜೂನ್ ಕೊನೆಯ ವಾರದಲ್ಲಿ ಸಾಮಾನ್ಯ ಮಳೆ ಮತ್ತು ಮೋಟರ್ ಮೂಲಕ ನೀರೆತ್ತಿ ಭತ್ತದ ಸಸಿ ಮುಡಿಯನ್ನು ಸಿದ್ಧಗೊಳಿಸಲಾಗಿದೆ. ತಾಲೂಕಿನಲ್ಲಿ ಶೇ.80 ಕ್ಕೂ ಹೆಚ್ಚು ಬಿತ್ತನೆ ಕಾರ್ಯ ಮುಗಿದಿದ್ದು, ಜುಲೈ ಮೂರನೇ ವಾರದಿಂದಲೇ ನಾಟಿ ಕಾರ್ಯ ಆರಂಭವಾಗಬೇಕಿತ್ತು.
ನಾಟಿಗೂ ಮಳೆ ಕೊರತೆ: ಸಸಿ ಮುಡಿಯನ್ನು ಒಂದು ಗದ್ದೆಯಲ್ಲಿ ಮಾಡುವುದರಿಂದ ಅಲ್ಪ ಪ್ರಮಾಣದ ನೀರು ಸಾಕು. ಆದರೆ, ನಾಟಿ ಕಾರ್ಯಕ್ಕೆ ಎಲ್ಲಾ ಗದ್ದೆಗಳಿಗೂ ಸಾಕಷ್ಟು ನೀರಿನ ಅಗತ್ಯವಿರುತ್ತದೆ. ಮಳೆ ಒಮ್ಮೊಮ್ಮೆ ಬಂದು ನಂತರ ಬಿಡುವು ಕೊಡುತ್ತಿದೆ. ಸತತವಾಗಿ ಮಳೆ ಬಾರದ ಹಿನ್ನೆಲೆಯಲ್ಲಿ ಹಳ್ಳ, ಕೆರೆ, ಗುಡ್ಡದಿಂದ ಹರಿದು ಬರುವ ಸ್ವಾಭಾವಿಕ ನೀರು ಹೆಚ್ಚಾಗಿಲ್ಲ.
ಬಲಿಯುತ್ತಿರುವ ಸಸಿ: ಪ್ರತಿ ವರ್ಷದಂತೆ ನಕ್ಷತ್ರಗಳ ವಾಡಿಕೆ ಮಳೆಯಾಗುತ್ತದೆ ಎಂಬ ನಂಬಿಕೆಯಲ್ಲಿ ಬಿತ್ತನೆ ಮಾಡಿರುವ ರೈತರು ಇದೀಗ ಕಂಗಾಲಾಗಿದ್ದಾರೆ. ಭತ್ತದ ಸಸಿ ಕೀಳುವ ದಿನ ಸಮೀಪಿಸುತ್ತಿದ್ದರೂ, ಗದ್ದೆಯಲ್ಲಿ ನೀರು ಇಲ್ಲವಾಗಿದೆ. ನಿಯಮಿತ ವೇಳೆಗೆ ಭತ್ತದ ಸಸಿ ನಾಟಿ ಮಾಡಲೇಬೇಕಾದ ಅನಿವಾರ್ಯತೆ ಇದ್ದು, ತಡವಾದರೆ ಇಳುವರಿ ಕುಂಠಿತಗೊಳ್ಳಲಿದೆ. ಸದ್ಯದ ಸ್ಥಿತಿಯಲ್ಲಿ ನಿರೀಕ್ಷೆಯಂತೆ ನಾಟಿ ಅಸಾಧ್ಯ ಎನ್ನೋದು ಹಲವು ರೈತರ ಮಾತು.
ಈಗಾಗಲೇ ರೈತರು ನಾಟಿ ಕಾರ್ಯಕ್ಕೆ ಪೂರ್ವಭಾವಿಯಾಗಿ ಬದುಗಳನ್ನು ಕೆತ್ತಿ ಗದ್ದೆಯನ್ನು ಸಿದ್ಧಪಡಿಸಿಕೊಂಡಿದ್ದು, ಮಳೆ ಕೈಕೊಟ್ಟರೆ ಅಪಾರ ನಷ್ಟ ಉಂಟಾಗುತ್ತದೆ.
ಈ ವರ್ಷ ಮಳೆ ಅತಂತ್ರವಾಗಿದೆಯಾದರೂ ಮುಂಬರುವ ದಿನಗಳಲ್ಲಿ ಮಳೆಯಾಗಲಿದೆ ಎಂಬ ಭರವಸೆ ಇದೆ. ಇಲಾಖೆಯಲ್ಲಿ ಹೈಬ್ರಿಡ್ ತಳಿಯ ಬಿತ್ತನೆ ಬೀಜವನ್ನು ಸಹಾಯಧನದಲ್ಲಿ ನೀಡಲಾಗುತ್ತಿದ್ದು, ಇನ್ನೂ ಬಿತ್ತನೆಗೆ ಅವಕಾಶವಿದೆ.
•ರವಿಶಂಕರ್, ಕೃಷಿ ಅಧಿಕಾರಿ
ನಮ್ಮ ಗ್ರಾಮದಲ್ಲಿ ಭತ್ತ ಬೆಳೆಯುವ ಕೆಲವೇ ರೈತರಿದ್ದು, ಈ ವರ್ಷದ ಮಳೆ ಭತ್ತ ಬೆಳೆಯುವ ರೈತರಿಗೆ ನಿರಾಸೆ ಮೂಡಿಸಿದೆ. ಒಂದಷ್ಟು ಗದ್ದೆಗಳಿಗೆ ನೀರಿದ್ದರೂ, ಮಲೆನಾಡಿಗೆ ಅಗತ್ಯವಿರುವಷ್ಟು ಮಳೆಯಾಗದಿದ್ದರೆ ಸೆಪ್ಟೆಂಬರ್ ನಂತರ ಮತ್ತೆ ನೀರಿನ ಕೊರತೆಯಾಗುತ್ತದೆ. ತಾಲೂಕಿನಲ್ಲಿ ಭತ್ತದ ಬದಲಿಗೆ ಗದ್ದೆಯಲ್ಲಿ ಬದಲಿ ಬೆಳೆಯನ್ನು ಬೆಳೆಯಲಾಗದು. ಮಲೆನಾಡಿನಲ್ಲಿ ಭತ್ತ ಬೆಳೆಯುವ ರೈತರಿಗೆ ಸರಕಾರ ವಿಶೇಷ ಪ್ರೋತ್ಸಾಹ ನೀಡದಿದ್ದರೆ ಇನ್ನು ಕೆಲವೇ ವರ್ಷದಲ್ಲಿ ರೈತರು ಭತ್ತ ಬೆಳೆಯುವುದನ್ನೇ ಕೈಬಿಡಬಹುದು.
•ಕೆ.ಎಂ. ಬಾಲಕೃಷ್ಣ ಕೆಂಜಿಗೆರೆ,
ಶೃಂಗೇರಿ ತಾಲೂಕು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Chikkamagaluru: ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಭಸ್ಮವಾದ ಗುಡಿಸಲು
Belagavi: ಗ್ಯಾರಂಟಿ ವಿರೋಧಿಸಿದ ವಿಪಕ್ಷಗಳಿಗೆ ಸ್ಪಷ್ಟ ಉತ್ತರ ನೀಡಿದ ಮತದಾರ: ಹೆಬ್ಬಾಳ್ಕರ್
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
MUST WATCH
ಹೊಸ ಸೇರ್ಪಡೆ
Maharashtra Polls: ಯಾರಾಗಲಿದ್ದಾರೆ ಮಹಾ ಮುಖ್ಯಮಂತ್ರಿ? ಸುಳಿವು ನೀಡಿದ ಫಡ್ನವೀಸ್
ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!
Dhanashree Verma: ಯಶ್ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್
Re-Release: ಈ ವರ್ಷ ರೀ ರಿಲೀಸ್ ಆದ ಬಾಲಿವುಡ್ ಸಿನಿಮಾಗಳ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.