ಹೆಸರಿಗೆ ಉದ್ಯಾನ: ಬರೀ ಅದ್ವಾನ
ನಿರ್ವಹಣೆ ಕೊರತೆಯಿಂದ ಮಕ್ಕಳು ಆಟೋಟದಿಂದ ದೂರವಾಗುವ ಸ್ಥಿತಿ ನಿರ್ಮಾಣ
Team Udayavani, Oct 11, 2019, 3:55 PM IST
ರಮೇಶ್ ಕರುವಾನೆ
ಶೃಂಗೇರಿ: ಪಟ್ಟಣದ ಎರಡನೇ ವಾರ್ಡಿನಲ್ಲಿರುವ ಮಕ್ಕಳ ಉದ್ಯಾನವನ ನಿರ್ಮಾಣವಾಗಿ ಹಲವು ವರ್ಷಗಳೇ ಕಳೆದಿದ್ದು, ಇದೀಗ ನಿರ್ವಹಣೆ ಕೊರತೆಯಿಂದ ಮಕ್ಕಳ ಆಟೋಟದಿಂದ ದೂರವಾಗಿ ಆಟಕ್ಕುಂಟು ಲೆಕ್ಕಕ್ಕಿಲ್ಲದ ಸ್ಥಿತಿ ನಿರ್ಮಾಣವಾಗಿದೆ.
ಮಲೆನಾಡಿನ ಪ್ರದೇಶವಾದರೂ ಪಟ್ಟಣದಲ್ಲಿ ಗಿಡ, ಮರಗಳೇ ಇಲ್ಲವಾಗಿದೆ. ಇಕ್ಕಟ್ಟಾದ ಪಟ್ಟಣದಲ್ಲಿ ಒಂದು ಬದಿ ನದಿ ಇದ್ದು, ಇರುವ ಜಾಗದಲ್ಲಿ ಮನೆಗಳು ನಿರ್ಮಾಣವಾಗಿವೆ. 30 ವರ್ಷದ ಹಿಂದೆ ನಿರ್ಮಾಣವಾದ ನೂತನ ಬಡಾವಣೆ ಶಾರದಾ ನಗರದಲ್ಲಿ ಪಪಂ ಮಕ್ಕಳಿಗಾಗಿ ಉದ್ಯಾನವನ ಹಾಗೂ ಅದಕ್ಕೆ ಸುತ್ತಲೂ ಕಾಂಪೌಂಡ್ ನಿರ್ಮಿಸಿದೆ.
ಉದ್ಯಾನದಲ್ಲಿ ವಿವಿಧ ಜಾತಿಯ ಗಿಡವನ್ನು ನೆಡಲಾಗಿತ್ತು. ಇದರೊಂದಿಗೆ ಮಕ್ಕಳಿಗಾಗಿ ಜಾರು ಬಂಡಿ, ಜೋಕಾಲಿ ಮತ್ತಿತರ ಆಟಿಕೆ ವಸ್ತುವನ್ನು ಅಳವಡಿಸಲಾಗಿತ್ತು. ಸೋಲಾರ್ ದೀಪವನ್ನು ಅಳವಡಿಸಲಾಗಿತ್ತು. ನೀರಿನ ಕಾರಂಜಿ, ಬೆಳಗ್ಗೆ- ಸಂಜೆ ಕಾಲ್ನಡಿಗೆ ಮಾಡುವವರಿಗೆ ಪಾದಚಾರಿ ಮಾರ್ಗ ನಿರ್ಮಾಣ ಮಾಡಲಾಗಿದೆ. ಉದ್ಯಾನವನಕ್ಕೆ ಅಲ್ಪ ಜಾಗವಿದ್ದರೂ ಪಟ್ಟಣದ ಏಕೈಕ ಪಾರ್ಕ್ ಇದಾಗಿದ್ದರಿಂದ ಸಾರ್ವಜನಿಕರು ಬೆಳಗ್ಗೆ ಮತ್ತು ಸಂಜೆ ಇಲ್ಲಿಗೆ ಬರುತ್ತಿದ್ದರು.
ನಿರ್ವಹಣೆ ಕೊರತೆಯಿಂದ ಇದೀಗ ಉದ್ಯಾನವನವೇ ಹಾಳಾಗಿದ್ದು, ಮಕ್ಕಳ ಆಟಿಕೆ ವಸ್ತುಗಳು ಉಪಯೋಗಿಸಲಾಗದಷ್ಟು ಹಾಳಾಗಿವೆ. ಉದ್ಯಾನದಲ್ಲಿ ಗಿಡ, ಗಂಟಿ ಬೆಳೆದಿದ್ದು, ಇದರಿಂದ ಹಾವು ಚೇಳುಗಳ ವಾಸ ಸ್ಥಾನವಾಗಿದೆ. ನೀರಿನ ಕಾರಂಜಿಯಲ್ಲಿ ನೀರು ಇಲ್ಲ, ನೀರಿನ ಪೂರೈಕೆಯೂ ಇಲ್ಲದೇ ಸೊರಗಿದೆ. ಬೇಸಿಗೆಯಲ್ಲಿ ಗಿಡಗಳಿಗೆ ನೀರಿಲ್ಲದೇ ಸೊರಗುತ್ತವೆ. ಶುದ್ಧ ಗಾಳಿ ಸೇವನೆ, ನೆಮ್ಮದಿಗಾಗಿ ಬರುವ ಸಾರ್ವಜನಿಕರು ಸ್ವಚ್ಛತೆ ಇಲ್ಲದಿರುವ ಉದ್ಯಾನದೊಳಕ್ಕೆ ಬರಲು ಹೆದರುವಂತಾಗಿದೆ. ಪಾದಚಾರಿ ಮಾರ್ಗದ ಸುತ್ತಲೂ ಕಳೆ ಬೆಳೆದು ಪಾದಚಾರಿ ಮಾರ್ಗವೇ ಮುಚ್ಚಿ ಹೋಗುತ್ತಿದೆ.ಪಾರ್ಕಿನಲ್ಲಿ
ಅಂಗನವಾಡಿಯೊಂದಕ್ಕೆ ಅವಕಾಶ ನೀಡಲಾಗಿದ್ದು, ಮಕ್ಕಳು ಗಿಡಗಂಟಿಗಳ ನಡುವೆ ಇರುವಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ದೆಹಲಿ ಪರೇಡ್‌ಗೆ ಬ್ರಹ್ಮ ಜಿನಾಲಯ ಸ್ತಬ್ಧಚಿತ್ರ; ಗತ ವೈಭವ ಸಾರಲಿದೆ ಟ್ಯಾಬ್ಲೊ
Mangaluru: ಹೆಲಿಕಾಪ್ಟರ್ ಸಂಚಾರ: ಸ್ಥಳ ಬದಲಾವಣೆ
Belagavi: ಕಾಂಗ್ರೆಸ್ ಶಕ್ತಿ ಏನೆಂದು ನಮಗಿಂತ ಚೆನ್ನಾಗಿ ಬಿಜೆಪಿಯವರಿಗೆ ಗೊತ್ತಿದೆ: ಡಿಕೆಶಿ
Shivamogga: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಓ ಈಶ್ವರಪ್ಪ
Hunsur: ಕೆಲ ಗ್ರಾಮಗಳಲ್ಲಿ ಒಂಟಿ ಸಲಗದ ಉಪಟಳ; ಬೆಳೆ ನಾಶ, ರೈತರು ಕಂಗಾಲು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ದೆಹಲಿ ಪರೇಡ್‌ಗೆ ಬ್ರಹ್ಮ ಜಿನಾಲಯ ಸ್ತಬ್ಧಚಿತ್ರ; ಗತ ವೈಭವ ಸಾರಲಿದೆ ಟ್ಯಾಬ್ಲೊ
SriLanka ನೌಕಾಪಡೆಯಿಂದ ತಮಿಳುನಾಡಿನ 17 ಮೀನುಗಾರರ ಬಂಧನ; ಬಿಡುಗಡೆಗೆ ಸ್ಟಾಲಿನ್ ಮನವಿ
Year Ender 2024: ಗೂಗಲ್ ನಲ್ಲಿ ಈ ವರ್ಷ ಅತೀ ಹೆಚ್ಚು ಹುಡುಕಲ್ಪಟ್ಟ ವಿಷಯ ಯಾವುದು ಗೊತ್ತಾ?
ಪಾರ್ಟಿಗೆ ಕರೆದು ಬಟ್ಟೆ ಬಿಚ್ಚಿಸಿ, ಮೂತ್ರ ವಿಸರ್ಜಿಸಿ ಅವಮಾನ… ಮನನೊಂದ ಬಾಲಕ ಆತ್ಮಹತ್ಯೆ
OTT Release Date: ಸೂಪರ್ ಹಿಟ್ ʼಭೈರತಿ ರಣಗಲ್ʼ ಓಟಿಟಿ ರಿಲೀಸ್‌ಗೆ ಡೇಟ್ ಫಿಕ್ಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.