ಸಂವಿಧಾನ ಗೌರವಿಸಿ: ಮನಗೂಳಿ
200ಕ್ಕೂ ಹೆಚ್ಚು ಜನರಿಗೆ ಬೌದ್ಧ ಧರ್ಮ ದೀಕ್ಷೆ•ಮುಕ್ತ ಭಾರತ ನಿರ್ಮಾಣಕ್ಕೆ ಶ್ರಮಿಸಿ
Team Udayavani, Jul 12, 2019, 4:01 PM IST
ಸಿಂದಗಿ: ಬೌದ್ಧ ಧರ್ಮ ದೀಕ್ಷಾ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ. ಮನಗೂಳಿ ಮಾತನಾಡಿದರು
ಸಿಂದಗಿ: ಭಾರತ ಜಾತ್ಯತೀತ ರಾಷ್ಟ್ರ, ಸಂವಿಧಾನ ನಮ್ಮ ಗ್ರಂಥ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ. ಮನಗೂಳಿ ಹೇಳಿದರು.
ಪಟ್ಟಣದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಹಮ್ಮಿಕೊಂಡಿದ್ದ ಬೌದ್ಧ ಧರ್ಮದ ದಿಕ್ಷಾ ಕಾರ್ಯಕ್ರಮ, ಮೌಡ್ಯ ವಿರೋಧಿ ಹಾಗೂ ಸಸಿ ನಡೆಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಡಾ| ಅಂಬೇಡ್ಕರ್ ಅವರ ಅವಿರತ ಪ್ರಯತ್ನದಿಂದ ಭಾರತಕ್ಕೆ ಸಿಕ್ಕ ವåಹಾನ್ ಗ್ರಂಥ ಸಂವಿಧಾನವಾಗಿದೆ. ನಾವೆಲ್ಲರೂ ಸಂವಿಧಾನವನ್ನು ಅರಿತು ಗೌರವಿಸೋಣ ಎಂದರು.
ದಲಿತ ಚಳವಳಿ ಮುಖಂಡ ಎಚ್.ಎಂ. ರುದ್ರಸ್ವಾಮಿ ಹಾಗೂ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಡಾ| ಡಿ.ಜಿ. ಸಾಗರ ಮಾತನಾಡಿ, ಭಾರತದಲ್ಲಿ ಜಾತಿರಹಿತ, ವರ್ಗರಹಿತ, ಅಸಮಾನತೆ ರಹಿತ, ಹಸಿವು ಮತ್ತು ಬಡತನ ಮುಕ್ತ ಭಾರತ ನಿರ್ಮಾಣ ಆಗಬೇಕಿರುವುದು ಸಂವಿಧಾನದ ಆಶಯ. ಈ ನಿಟ್ಟಿನಲ್ಲಿ ಎಲ್ಲ ಪ್ರಗತಿಪರ ವಿಚಾರವಾದಿ ಸಂಘಟನೆಗಳು ಕಾರ್ಯ ನಿರ್ವಹಿಸಬೇಕಾಗಿದೆ. ಯಾರು ತುಳಿತಕ್ಕೆ ಶೋಷಣೆಗೆ ಒಳಗಾಗಿದ್ದಾರೆಯೋ, ಅಂತರವರ ಒಳಿತಿಗೆ ದುಡಿಯುತ್ತಿರುವ ರಾಜ್ಯದ ಏಕೈಕ ಸಂಘಟನೆ ಕರ್ನಾಟಕ ರಾಜ್ಯ ಸಂಘರ್ಷ ಸಮಿತಿ ಎಂದು ಹೇಳಿದರು.
ನೇತೃತ್ವ ವಹಿಸಿದ್ದ ಕರ್ನಾಟಕ ರಾಜ್ಯ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ವೈ.ಸಿ. ಮಯೂರ ಅವರಿಗೆ ರಮಾಬಾಯಿ ಅಂಬೇಡ್ಕರ್ ಮಹಿಳಾ ಸಂಘ ಪಡಗಾನೂರ ವತಿಯಿಂದ ಆಧುನಿಕ ಸಿದ್ದನಾಕ ಪ್ರಶಸ್ತಿ ನೀಡಿ ಗೌರವಿಸಿ ಸನ್ಮಾನಿಸಲಾಯಿತು.
ಸಾನ್ನಿಧ್ಯ ವಹಿಸಿದ್ದ ಸಂಘಪಾಲ ಬಂತೇಜಿ ಆಶೀರ್ವಚನ ನೀಡಿದರು. ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿಠ್ಠಲ ಕೋಳ್ಳೂರ, ದಸಂಸ ರಾಜ್ಯ ಸಂಘಟನಾ ಸಂಚಾಲಕ ರಮೇಶ ಆಸಂಗಿ, ಪುರಸಭೆ ಮಾಜಿ ಸದಸ್ಯ ರಾಜಶೇಖರ ಕೂಚಬಾಳ, ಪಪಂ ಸದಸ್ಯ ಶಿವಾನಂದ ಜಗತಿ, ಕೂಲಿ ಕಬ್ಬಲಿಗ ಯುವ ವೇದಿಕೆ ರಾಜ್ಯಾಧ್ಯಕ್ಷ ಶಿವಾಜಿ ಮೆಟಗಾರ, ಅಂಬಣ್ಣ ಜಿವಣಗಿ, ಬಿ.ಸಿ. ವಾಲಿ, ಎಸ್.ಪಿ. ಸುಳ್ಳದ, ಡಾ| ದಸ್ತಗೀರ್ ಮುಲ್ಲಾ, ಶರಣು ಶಿಂಧೆ, ಸಿದ್ದು ರಾಯಣ್ಣನವರ, ತಾಪಂ ಸದಸ್ಯ ಲಕ್ಕಪ್ಪ ಬಡಿಗೇರ, ತಾಪಂ ಸದಸ್ಯ ಎಂ.ಎನ್. ಕಿರಣರಾಜ, ಕಂದಾಯ ನಿರೀಕ್ಷಕ ಸುರೇಶ ಮ್ಯಾಗೇರಿ, ಚಂದ್ರಕಾಂತ ಸಿಂಗೆ, ಪ್ರದೀಪ ಗೌರ, ರಮೇಶ ಧರಣಾಕರ, ಎನ್.ಜಿ. ದೊಡಮನಿ, ಎಚ್.ಎ. ತಳ್ಳೋಳ್ಳಿ, ಕಾಶೀನಾಥ ತಳಕೇರಿ, ಭಾಸ್ಕರ ಪೂಜಾರಿ, ಚಂದ್ರಶೇಖರ ಕಡಕೋಳಕರ, ಶ್ರೀಕಾಂತ ಸೋವåಜಾಳ, ಗಾಲೀಬ ಯಂಟಮಾನ ಇದ್ದರು.
ಈ ವೇಳೆ ತಾಲೂಕಿನ ವಿವಿಧ ಗ್ರಾಮದ ಸುಮಾರು 200ಕ್ಕೂ ಹೆಚ್ಚು ಜನ ಬೌದ್ಧ ಧರ್ಮದ ದೀಕ್ಷೆ ಪಡೆದರು. ಕಾರ್ಯಕ್ರಮದ ನಂತರ ವಿವಿಧೆಡೆ 500ಕ್ಕೂ ಹೆಚ್ಚು ಸಸಿ ನೆಡಲಾಯಿತು.
ವಿನಾಯಕ ಗುಣಸಾಗರ ಸ್ವಾಗತಿಸಿದರು. ಪ್ರಕಾಶ ಗುಡಿಮನಿ ನಿರೂಪಿಸಿದರು. ಅಶೋಕ ಚಲವಾದಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belma: ಕುಸಿತ ಭೀತಿಯಲ್ಲಿರುವ ಮನೆ; ಕಾಂಕ್ರೀಟ್ ತಡೆಗೋಡೆಗೆ ಪಿಡಬ್ಲ್ಯುಡಿ ಪ್ರಸ್ತಾವ
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Surathkal: ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಮುಲ್ಕಿ ಕಂದಾಯ ನಿರೀಕ್ಷಕ
Mudbidri: ಸರಕಾರಿ ಬಸ್ಸಿಗಿಲ್ಲ ನಿಲ್ದಾಣ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
MUST WATCH
ಹೊಸ ಸೇರ್ಪಡೆ
Belma: ಕುಸಿತ ಭೀತಿಯಲ್ಲಿರುವ ಮನೆ; ಕಾಂಕ್ರೀಟ್ ತಡೆಗೋಡೆಗೆ ಪಿಡಬ್ಲ್ಯುಡಿ ಪ್ರಸ್ತಾವ
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Surathkal: ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಮುಲ್ಕಿ ಕಂದಾಯ ನಿರೀಕ್ಷಕ
Mudbidri: ಸರಕಾರಿ ಬಸ್ಸಿಗಿಲ್ಲ ನಿಲ್ದಾಣ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.