ಸಮಾಜಕ್ಕೆ ಹಿರಿಯರ ಮಾರ್ಗದರ್ಶನ ಅಗತ್ಯ
Team Udayavani, Jan 1, 2020, 2:40 PM IST
ಸಿಂದಗಿ: ಸುಂದರ ಸಮಾಜ ನಿರ್ಮಾಣದಲ್ಲಿ ಹಿರಿಯರ ಮಾರ್ಗದರ್ಶನ ಅತ್ಯವಶ್ಯ. ಆದ್ದರಿಂದ ಹಿರಿಯ ಮಾರ್ಗದರ್ಶನದಲ್ಲಿ ನಾವೆಲ್ಲರೂ ನಡೆಯೋಣ ಎಂದು ಆಲಮೇಲದ ಜಗದೇವ ಮಲ್ಲಿಬೊಮ್ಮ ಸ್ವಾಮೀಜಿ ಹೇಳಿದರು.
ಮಂಗಳವಾರ ಪಟ್ಟಣದ ತಾಪಂ ಸಭಾಭವನದಲ್ಲಿ ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ವತಿಯಿಂದ ಹಮ್ಮಿಕೊಂಡ 75 ವರ್ಷ ಮೇಲ್ಪಟ್ಟ ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಜೀವನದಲ್ಲಿ ಏನಾದರು ಸಾಧನೆ ಮಾಡಬೇಕಾದರೆ ಹಿರಿಯರ ಮಾರ್ಗದರ್ಶನ ಬೇಕು. ವೃತ್ತಿಯಿಂದ ನಿವೃತ್ತಿಯಾದರೂ ಅವರಲ್ಲಿ ನಾವು ಚೈತನ್ಯಕಾಣುತ್ತಿದ್ದೇವೆ. ಅವರ ಆರೋಗ್ಯವೇ ಚೈತನ್ಯದ ಗುಟ್ಟಾಗಿದೆ. ಕಿರಿಯರಾದ ನಾವು ಹಿರಿಯರ ಮಾರ್ಗದರ್ಶನದಲ್ಲಿ ನಡೆಯೋಣ ಎಂದರು.
ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಸ್.ಸಿ. ಬಿರಾದಾರ ಮಾತನಾಡಿ, ನಿವೃತ್ತಿಯಾದ ಮೇಲೆ ನಮಗೆ ವಯ್ಯಸ್ಸಾಗಿದೆ ಎಂದು ತಿಳಿದುಕೊಳ್ಳಬೇಡಿ. ಹಿತಮಿತವಾದ ಆಹಾರ ಸೇವನೆ, ಸರಳ ವ್ಯಾಯಾಮ, ವಾಯುವಿಹಾರ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳೋಣ. ಕುಟುಂಭದ ಸದಸ್ಯರೊಂದಿಗೆ ಪ್ರೀತಿ ವಿಶ್ವಾಸದಿಂದ ಬಾಳ್ಳೋಣ. ಮಕ್ಕಳು, ಸೊಸೆಯಂದಿರರು, ಮೊಮ್ಮಕ್ಕಳನ್ನು ಪ್ರೀತಿಯಿಂದ ಕಂಡು ಅವರ ವಿಶ್ವಾಸಕ್ಕೊಳಗಾಗಬೇಕು. ಆಗ ನಮ್ಮ ಜೀವನ ಸುಖ ಜೀವನವಾಗಲು ಸಾಧ್ಯ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ತಾಲೂಕಾಧ್ಯಕ್ಷ ವಿ.ಬಿ. ಕುರಡಿ ಮಾತನಾಡಿ, ಪ್ರತಿ ವರ್ಷದ ವಾಡಿಕೆಯಂತೆ ಸಂಘದ ವತಿಯಿಂದ 75 ವರ್ಷ ಮೇಲ್ಪಟ್ಟ ನಿವೃತ್ತ ನೌಕರರಿಗೆ ಸನ್ಮಾನಿಸಿ ಗೌರವಿಸಲಾಗಿದೆ. ಇವರೆಲ್ಲರೂ ನಿವೃತ್ತಿಯ ನಂತರ ಕ್ರಿಯಾತ್ಮ ಜೀವನ ನಡೆಸುವ ಜೊತೆಗೆ ಆರೋಗ್ಯವನ್ನು ಕಾಪಾಡಿಕೊಂಡು ಬರುತ್ತಿರುವುದು ಸಂತೋಷಕರ ಎಂದರು.
ಕರ್ನಾಟಕ ರಾಜ್ಯ ನೌಕರರ ಸಂಘದ ತಾಲೂಕಾಧ್ಯಕ್ಷ ಹಾಗೂ ರಾಜ್ಯ ಮಟ್ಟದ ಸಂಘಟನಾ ಕಾರ್ಯದರ್ಶಿ ಅಶೋಕ ತೆಲ್ಲೂರ ಮಾತನಾಡಿ, ಸಮಾಜದ ಅಭಿವೃದ್ಧಿಯಲ್ಲಿ ಹಿರಿಯರ ಮಾರ್ಗದರ್ಶನ ಅತ್ಯವಶ್ಯಕ ಎಂದು ಹೇಳಿದರು. ಎಸ್‌ಬಿಐ ಬ್ಯಾಂಕಿನ ಮುಖ್ಯ ವ್ಯವಸ್ಥಾಪಕ ಎಂ.ಇಡುಕೊಂಡಲು ಅವರು ವೇದಿಕೆ ಮೇಲೆ ಇದ್ದರು.
ಇದೇ ಸಂದರ್ಭದಲ್ಲಿ ಆರ್.ಬಿ. ಜೋಶಿ, ಎಸ್. ಎಸ್. ಕಟ್ಟಿ, ಹ.ಮ. ಪೂಜಾರ, ಎನ್.ಪಿ. ಕುಲಕರ್ಣಿ, ಎಸ್.ಬಿ. ಉಕ್ಕಲಿ, ಕೆ.ಎಂ. ರಾಂಪುರ, ಎಸ್.ಎಂ. ಸೊನ್ನದ, ಎ.ಎಚ್. ಚಿಕ್ಕೋಡಿ, ಕೆ.ಎನ್. ಬಿರಾದಾರ, ಬಿ.ಕೆ. ಕರ್ಜಗಿ, ಆರ್.ಎಸ್. ಬೆಣ್ಣೆಶಿರೂರ, ಎಸ್.ಎಸ್. ಹಿರೇಮಠ, ಜೆ.ಎಂ. ಮಸಾಲಿ, ವಿ.ಎಸ್. ಮಿರ್ಜಿಕರ, ಆರ್.ಜಿ.ಹುನಗುಂದ, ಎಂ.ಎಂ.ಕಲಬುರ್ಗಿ, ಬಿ.ಎಂ. ಹರಿಜನ, ಎಸ್.ಎಸ್. ಕಲಾಲ, ಎಸ್.ಎಂ. ಕೆಂಭಾವಿ, ಡಿ.ಪಿ. ಕೆರೂಟಗಿ, ಜಿ.ಕೆ.
ಪಡಗಾನೂರ, ಬಿ.ಎ. ಕಡಣಿ, ಎಂ.ಎಂ. ಮುಲ್ಲಾ, ಆರ್.ಸಿ. ಹಳೆಮನಿ, ಎಂ.ಎ. ಕಲಕೇರಿ, ಎಸ್.ಡಿ. ಕಪೂìರಮಠ, ಎಂ.ಐ. ಗಣಾಚಾರಿ, ಎ.ಆರ್. ಕುಡಚಿ, ಕಮಲಾಬಾಯಿ ರಜಪೂತ, ಟಿ.ಎನ್.ರಾಯಚೂರ, ಎಚ್.ಸಿ. ಮಣೂರ, ಎಸ್.ಎಸ್.ಕಾಲೇಬಾಗ, ಎಸ್.ಎಸ್. ಪಾಟೀಲ, ಎಲ್.ಡಿ.ಚಬನೂರ, ಡಿ.ಎಂ. ಮಂದೇವಾಲ,ಬಿ.ಎನ್.ಮೊಕಾಶಿ, ಆರ್.ಸಿ. ಪರೂತಿ, ಎ.ಆರ್.ಹಿರೇಮಠ, ಕೆ.ಎ ಸಾಲವಾಡಗಿ, ಎಸ್.ಎ. ಮಕಾನದಾರ ಹಾಗೂ ಇತರರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ಗೌರವಾಧ್ಯಕ್ಷ ಡಾ.ಎಸ್.ಬಿ. ಚಿಕ್ಕಲಗಿ, ತಾಲೂಕಾ ಉಪಾಧ್ಯಕ್ಷ ರಾ.ಸಿ. ವಾಡೇದ, ಬಿ.ಎಂ. ಬಿರಾದಾರ, ಎಸ್.ಬಿ. ಚಾಗಶೆಟ್ಟಿ, ಪ್ರಧಾನಕಾರ್ಯದರ್ಶಿ ಎಸ್.ಎನ್. ಬಿರಾದಾರ, ಕೋಶಾಧ್ಯಕ್ಷ ಜಿ.ಎಸ್. ಶಹಾಪೂರ, ಎಂ.ಎಂ. ಹಂಗರಗಿ, ಎಂ.ಆರ್. ಜಂಗಮಶೆಟ್ಟಿ, ಆರ್.ಬಿ. ಜೋಶಿ, ಜಿ.ಎಸ್. ಗಾಳಿ, ಎಸ್.ಡಿ. ಜೋಗುರ, ಜಿ.ಎಸ್. ಜಂಗಮಶೆಟ್ಟಿ, ಎಂ.ಎಂ. ಹೂಗಾರ, ಎಸ್.ಎಸ್. ಭೂಶೆಟ್ಟಿ, ಡಿ.ಬಿ. ಬಿರಾದಾರ, ಪಿ.ಎಂ. ಮಡಿವಾಳರ, ಎಸ್. ಎಸ್. ಪಾಟೀಲ, ಎ.ಬಿ. ಕರವೀರ, ಎಂ.ಆರ್. ಹೊಸಗೌಡರ, ಎನ್.ಎನ್. ಪಾಟೀಲ, ಎಸ್.ಬಿ. ದೇಸಾಯಿ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ನಿವೃತ್ತ ನೌಕರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.