ಸಾರಂಗ ಶ್ರೀಗೆ ಗೌರವ ಡಾಕ್ಟರೇಟ್
•ಬೆಳಗಾವಿ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಏಳನೇ ಘಟಿಕೋತ್ಸವದಲ್ಲಿ ಪದವಿ ಪ್ರದಾನ
Team Udayavani, May 30, 2019, 9:51 AM IST
ಸಿಂದಗಿ: ಬೆಳಗಾವಿ ರಾಣಿ ಚನ್ನಮ್ಮ ವಿವಿ 7ನೇ ಘಟಿಕೋತ್ಸವದಲ್ಲಿ ಸಿಂದಗಿಯ ಸಾರಂಗಮಠ-ಗಚ್ಚಿನಮಠದ ಪ್ರಭುಸಾರಂಗದೇವ ಶಿವಾಚಾರ್ಯರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.
ಸಿಂದಗಿ: ಬೆಳಗಾವಿ ರಾಣಿ ಚನ್ನಮ್ಮ ವಿವಿ 7ನೇ ಘಟಿಕೋತ್ಸವದಲ್ಲಿ ವಿಜಯಪುರ ಜಿಲ್ಲೆಯ ಸಿಂದಗಿಯ ಸಾರಂಗಮಠ-ಗಚ್ಚಿನಮಠದ ಪ್ರಭುಸಾರಂಗದೇವ ಶಿವಾಚಾರ್ಯರಿಗೆ ಬೆಳಗಾವಿ ರಾಣಿ ಚನ್ನಮ್ಮ ವಿವಿ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿರುವುದು ಭಕ್ತಾದಿಗಳಲ್ಲಿ ಸಂತಸ ತಂದಿದೆ.
ಶ್ರೀಮಠ ಸುಮಾರು ವರ್ಷಗಳಿಂದ ಮಾಡುತ್ತಿರುವ ಕಾರ್ಯವನ್ನು ವಿವಿ ಸಮಿತಿ ಪರಿಶೀಲಿಸಿ ಪ್ರಭುಸಾರಂಗದೇವ ಶಿವಾಚಾರ್ಯರ ಅವರನ್ನು ಆಯ್ಕೆ ಮಾಡಿ ಡಾಕ್ಟರೇಟ್ ಪದವಿ ನೀಡಿದೆ.
ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ನೀಡುತ್ತಿರುವ ಈ ಪದವಿಯನ್ನು ಅಷ್ಟೇ ಗೌರವದಿಂದ ಸ್ವೀಕರಿಸುವುದು ನಮ್ಮಯ ಧರ್ಮ. ನಮ್ಮಯ ಪ್ರತಿಯೊಂದು ಕಾರ್ಯಕ್ಕೆ ಭಕ್ತ ವೃಂದದ ಪ್ರೇರಣೆ, ಸಹಕಾರ, ಪ್ರೀತಿ ಇದೆ. ಲಿಂ| ಚನ್ನವೀರ ಸ್ವಾಮಿಗಳು ಮತ್ತು ಧಾರವಾಡದ ಮುರಘಾಮಠದ ಲಿಂ| ಮಹಾಂತಪ್ಪಗಳ ಹಾಗೂ ಅನೇಕ ಶರಣರ ಸಂತರ ಆಶೀರ್ವಾದವೆ ಪ್ರೇರಣೆಯಾಗಿದೆ. ವೀರಶೈವ ಲಿಂಗಾಯತ ಧರ್ಮವಲ್ಲದೆ ಅನೇಕ ಜಾತಿ ಸಮುದಾಯಗಳ ಜನತೆ ನನ್ನನ್ನು ಪ್ರಿತೀಸುವುದರ ಜೊತೆಗೆ ತನು ಮನದಿಂದ ಸಹಾಯ ಸಹಕಾರ ನೀಡಿ ಕಾಲ ಕಾಲಕ್ಕೆ ಮಾರ್ಗದರ್ಶನ ನೀಡಿದ್ದಾರೆ. ವಿಶ್ವವಿದ್ಯಾಲಯ ನೀಡುತ್ತಿರುವ ಗೌರವ ಇವರಿಗೆಲ್ಲ ಸಲ್ಲಬೇಕು ಎಂದು ಸಾರಂಗ ಶ್ರೀಗಳು ಮನದಾಳದ ಮಾತುಗಳನ್ನಾಡಿದರು.
ಅಭಿನಂದನೆ: ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ 7ನೇ ಘಟಿಕೋತ್ಸವದಲ್ಲಿ ವಿಜಯಪುರ ಜಿಲ್ಲೆಯ ಸಿಂದಗಿಯ ಸಾರಂಗಮಠ- ಗಚ್ಚಿನಮಠದ ಪ್ರಭುಸಾರಂಗದೇವ ಶಿವಾಚಾರ್ಯರಿಗೆ ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ನೀಡಿದ್ದು ನಮಗೆಲ್ಲ ಸಂತಸ ತಂದಿದೆ ಎಂದಿದೆ ಎಂದು ಸಚಿವ ಎಂ.ಸಿ. ಮನಗೂಳಿ, ಮಾಜಿ ಶಾಸಕ ರಮೇಶ ಭೂಸನೂರ, ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ, ಕೃಷಿಕ ಸಮಾಜದ ತಾಲೂಕಾಧ್ಯಕ್ಷ ಶಿವಪ್ಪಗೌಡ ಬಿರಾದಾರ, ಸ್ಥಳೀಯ ಅಂಬಿಕಾತನಯದತ್ತ ವೇದಿಕೆ ಅಧ್ಯಕ್ಷ ಡಾ| ಬಿ.ಆರ್. ನಾಡಗೌಡ, ನೆಲೆ ಪ್ರಕಾಶನದ ಡಾ| ಎಂ.ಎಂ. ಪಡಶೆಟ್ಟಿ, ಡಾ| ಚನ್ನಪ್ಪ ಕಟ್ಟಿ ಹಾಗೂ ಬಳಗ, ಮಕ್ಕಳ ಸಾಹಿತಿ ಹ.ಮ. ಪೂಜಾರ, ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಿ.ಎನ್. ಪಾಟೀಲ ಇಬ್ರಾಹಿಂಪುರ, ಪುರಸಭೆ ಮಾಜಿ ಅಧ್ಯಕ್ಷ ಭಾಷಾಸಾಬ ತಾಂಬೋಳಿ, ಕ್ಷತ್ರೀಯ ಸಮಾಜದ ರಾಜ್ಯಾಧ್ಯಕ್ಷ ಅಶೋಕ ಗಾಯಕವಾಡ, ಅಶೋಕ ವಾರದ, ಅಶೋಕ ಮನಗೂಳಿ, ದಯಾನಂದ ಬಿರಾದಾರ, ಅನಿಲಗೌಡ ಬಿರಾದಾರ, ರಮೇಶ ಜೋಗುರ, ಮುತ್ತು ಮುಂಡೇವಾಡಗಿ, ನವೀನ ಶಹಾಪುರ, ಮಹಾಂತೇಶ ಉಪ್ಪಿನ, ರಮೇಶ ಹೂಗಾರ, ತಾಪಂ ಸದಸ್ಯ ಸುರೇಶ ಪೂಜಾರಿ ಸೇರಿದಂತೆ ತಾಲೂಕಿನ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.