ಕೋರೆಗಾಂವ್‌ ಇತಿಹಾಸ ತಿಳಿದುಕೊಳ್ಳಿ

ಮೂವತ್ತು ಸಾವಿರ ಸೈನಿಕರನ್ನು ಕೇವಲ ಐನೂರು ಸೈನಿಕರು ಸೋಲಿಸಿದ ಕದನ

Team Udayavani, Jan 2, 2020, 4:49 PM IST

2-January-27

ಸಿಂದಗಿ: ಭೀಮಾ ಕೋರೆಗಾಂವ್‌ ವಿಜಯಸ್ತಂಭದ ಇತಿಹಾಸ ನಾವೆಲ್ಲರೂ ಅರಿಯುವುದು ಅವಶ್ಯ ಎಂದು ಧಾರವಾಡದ ಕೆಸಿಡಿ ಕಾಲೇಜಿನ ಉಪನ್ಯಾಸಕ ಸಿದ್ದರಾಮ ಕಾರ್ಣಿಕ ಹೇಳಿದರು.

ಬುಧವಾರ ಪಟ್ಟಣದ ಅಂಬೇಡ್ಕರ್‌ ವೃತ್ತದಲ್ಲಿ ಭೀಮಾ ಕೋರೆಗಾಂವ್‌ ವಿಜಯದ 202ನೇ ವರ್ಷಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

1818ರಂದು ನಡೆದ ಕೋರೆಗಾಂವ್‌ ಯುದ್ಧದ ವಿಜಯೋತ್ಸವ ಸಿಂದಗಿ ಪಟ್ಟಣದಲ್ಲಿ ಆಚರಿಸುವ ಮೂಲಕ ಕೋರೆಗಾಂವ್‌ ವಿಜಯೋತ್ಸವದ ಇತಿಹಾಸ ಈ ಭಾಗದ ಜನತೆಗೆ ತಿಳಿಸಲು ಮುಂದಾದ ಯುವಕರ ಕಾರ್ಯ, ಅಂಬೇಡ್ಕರ್‌ ವೃತ್ತದ ಪಕ್ಕದಲ್ಲಿ ಯುವಕರು ಭೀಮಾ ಕೋರೆಗಾಂವ್‌ ವಿಜಯಸ್ತಂಭ ಮಾದರಿ ನಿರ್ಮಾಣ ಮಾಡಿ ಇತಿಹಾಸ ಯುವ ಜನಾಂಗಕ್ಕೆ ತಿಳಿಸುತ್ತಿರುವುದು ಹೆಮ್ಮೆ ವಿಷಯವಾಗಿದೆ ಎಂದರು.

ನಮ್ಮೆಲ್ಲರ ಸ್ವಾಭಿಮಾನದ ಸಂಕೇತ, ಚಾರಿತ್ರಿಕ ಅರಿವನ್ನು ಮೂಡಿಸಿದವರು ಡಾ| ಬಿ.ಆರ್‌. ಅಂಬೇಡ್ಕರ್‌. ಪ್ರತಿಯೊಂದು ಕಾರ್ಯಕ್ರಮಗಳು ಆತ್ಮಾವಲೋಕನ ಮಾಡಿಕೊಳ್ಳುವ ಸಭೆಯಾಗಬೇಕು. ಸಿಂದಗಿ ಪಟ್ಟಣದಲ್ಲಿ ಭೀಮಾ ಕೋರೆಗಾಂವ್‌ ವಿಜಯಸ್ತಂಭದ ಮಾದರಿ ಸ್ಥಾಪನೆ ಮಾಡಿರುವುದು ಒಳ್ಳೆ ಸಂಗತಿ. ಕೋರೆಗಾಂವ್‌ ಇತಿಹಾಸವನ್ನು ಅರಿಯಬೇಕು. ಆಗ ಕಾರ್ಯಕ್ರಮಕ್ಕೆ ಅರ್ಥ ಬರುತ್ತದೆ ಎಂದು ಹೇಳಿದರು.

1818ರ ಹೊಸ ವರ್ಷದ ಸಂದರ್ಭದಲ್ಲಿ ನಡೆದ ಆ ಯುದ್ಧದ ವಿವರ ಹೇಳುವುದಕ್ಕೂ ಮುನ್ನ ಆ ಸಮಯದಲ್ಲಿ ಇದ್ದ ಸಾಮಾಜಿಕ ಸ್ಥಿತಿಗತಿಯನ್ನು ದಾಖಲಿಸುವುದು ಸೂಕ್ತವೆನಿಸುತ್ತದೆ. 1818 ಅದು ಮಹಾರಾಷ್ಟ್ರದಲ್ಲಿ ಪೇಶ್ವೆಗಳ ಆಡಳಿತದ ಕಾಲ. ಆಗಿನ ಪೇಶ್ವೆ ಮಂತ್ರಿ 2ನೇ ಬಾಜೀರಾಯ. ಸಾಮಾಜಿಕ ದುಸ್ಥಿತಿ ಸಂದರ್ಭದಲ್ಲಿ ಸಾಮ್ರಾಜ್ಯದ ವಿರುದ್ಧ ಹೋರಾಡುವ ಅದ್ಭುತ ಅವಕಾಶವೊಂದು ಬರುತ್ತದೆ. ಅದುವೇ ಕೋರೆಗಾಂವ್‌ ಯುದ್ಧ ಎಂದು ಹೇಳಿದರು.

ಜಿಪಂ ಸದಸ್ಯ ಬಿ.ಆರ್‌. ಯಂಟಮನ ಮಾತನಾಡಿ, ಇತಿಹಾಸದಲ್ಲಿ ಮುಚ್ಚಿ ಹೋದ ಸಾಹಸದ ಘಟನೆ. ಮೂವತ್ತು ಸಾವಿರ ಸೈನಿಕರನ್ನು ಕೇವಲ ಐನೂರು ಜನ ಸೈನಿಕರು ಸೇರಿಕೊಂಡು ಸೋಲಿಸಿದ ಕದನ. ಪೇಶ್ವೆಗಳ ಆಡಳಿತದಲ್ಲಿದ್ದ ಜಾತಿ, ಅಸ್ಪೃಶ್ಯತೆ, ಮೇಲು ಕೀಳುಗಳ ವಿರುದ್ಧ ಸೆಟೆದು ನಿಂತು ಮಾನವೀಯ ಮೌಲ್ಯಗಳನ್ನು ಪಡೆದುಕೊಳ್ಳಲು ಹಂಬಲಿಸುವ ಸೈನಿಕರ ಧೈರ್ಯ ಸಾಹಸ, ಕೆಚ್ಚೆದೆಯ ಹೋರಾಟ. ಶೋಷಿತರು ಮೇಲ್ಜಾತಿ ಶೋಷಿತರ ವಿರುದ್ಧ, ಅವರ ಶೋಷಣೆಯ ನಡವಳಿಕೆಯ ವಿರುದ್ಧ ಯುದ್ಧ ಘೋಷಿಸಿದ, ನಡೆಸಿ ಗೆಲುವು. ಅದು ಭೀಮಾ ತೀರದಲ್ಲಿ ನಡೆದಿದ್ದರಿಂದ ಅದು ಇತಿಹಾಸದಲ್ಲಿ ಭೀಮಾ ಕೋರೆಗಾಂವ್‌ ಯುದ್ಧವಾಗಿದೆ. ವಿಜಯಕ್ಕೆ ಕಾರಣರಾದ ಸೈನಿಕರಿಗೆ ಗೌರವಿಸೊಣ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ದಲಿತ ಸೇನೆ ರಾಜ್ಯಾಧ್ಯಕ್ಷ ಹನುಮಂತ ಯಳಸಂಗಿ, ಮೆರವಣಿಗೆ ಚಾಲನೆ ಮಾಡಿದ ಧಾರವಾಡದ ಜಿ.ಆರ್‌. ಗ್ರೂಪ್‌ನ ಶಿವಾನಂದ ಪಾಟೀಲ ಸೋಮಜಾಳ, ಡಿಎಸ್ಸೆಸ್‌ ಜಿಲ್ಲಾ ಸಂಘಟನಾ ಸಂಚಾಲಕ ವೈ.ಸಿ. ಮಯೂರ ಮಾತನಾಡಿದರು.

ಸಾನ್ನಿಧ್ಯ ವಹಿಸಿದ್ದ ಸಂಘಪಾಲ ಭಂತೇಜಿ, ದೇವರಗುಡ್ಡದ ಧರ್ಮದರ್ಶಿ ಡಾ| ಸಂದೀಪ ಪಾಟೀಲ, ಕರ್ನಾಟಕ ದಲಿತ ಸೇನೆ ರಾಜ್ಯ ಉಪಾಧ್ಯಕ್ಷ ರಾಜಶೇಖರ ಚೌರ, ತಾಲೂಕಾಧ್ಯಕ್ಷ ಶಿವಾನಂದ ಆಲಮೇಲ, ಕರವೇ ರಾಜ್ಯ ಸಂಚಾಲಕ ಸಂತೋಷ ಪಾಟೀಲ ಡಂಬಳ, ಸ್ಥಳಿಯ ಗಣ್ಯ ವ್ಯಾಪಾರಸ್ಥ ಅಶೋಕ ವಾರದ, ಆದರ್ಶ ಶಿಕ್ಷಕ ಎಂ.ಎಸ್‌. ಚೌರ, ಬಿಜೆಪಿ ಮುಖಂಡ ಸಿದ್ದು ಬುಳ್ಳಾ, ಈರಫಾನ್‌ ತಲಕಾರಿ, ಡಾ.ಅನೀಲ ನಾಯಕ, ಬಿಜೆಪಿ ಮಹಿಳಾ ಮುಖಂಡೆ ಸುನಂದಾ ಯಂಪೂರೆ, ಸಾಯಬಣ್ಣ ಪುರದಾಳ, ಪ್ರಧಾನಿ ಮೂಲಿಮನಿ, ಸಿಆರ್‌ಪಿ ಡಿ.ಎಂ. ಮಾವೂರ, ಆನಂದ ತೇರದಾಳ, ಸಂತೋಷ ಭಜಂತ್ರಿ ಸೇರಿದಂತೆ ಇತರರು ವೇದಿಕೆ ಮೇಲೆ ಇದ್ದರು.

ಅಜೀತ ಚೌರ, ಜೈಭೀಮ ನಾಯ್ಕೋಡಿ, ಸಂತೋಷ ಪೂಜಾರಿ, ಶರಣು ಬ್ಯಾಕ್ಯೋಡ, ಚನ್ನು ಬಳಗಾನೂರ, ಮೋಹನ ಬರಗಾಲ, ರವಿಕಾಂತ ನಡುವಿನಕೇರಿ, ಸಾಯಬಣ್ಣ ದೊಡಮನಿ, ಗೌತಮ ಮೇಟಿ, ಭೀಮು ಹೊಸಮನಿ, ಗೋಲ್ಲಾಳ ಬ್ಯಾಕೋಡ, ಮಹಾವೀರ ಸುಲ್ಪಿ, ಮಂಜು ಬಬಲೇಶ್ವರ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ರಾಜಶೇಖರ ಚೌರ ಸ್ವಾಗತಿಸಿದರು. ವಿಜಯಕುಮಾರ ಯಂಟಮಾನ, ಜಗದೀಶ ಸಿಂಗೆ ನಿರೂಪಿಸಿದರು. ಶಿವನಂದ ಆಲಮೇಲ ವಂದಿಸಿದರು.

ಟಾಪ್ ನ್ಯೂಸ್

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

puttige-2

Udupi; ಗೀತಾರ್ಥ ಚಿಂತನೆ 145: ವೇದಪ್ರಾಮಾಣ್ಯದ ಚರ್ಚೆ

missing

ಬರಿಮಾರು ವ್ಯಕ್ತಿ ನಾಪತ್ತೆ; ನದಿ ಕಿನಾರೆಯಲ್ಲಿ ಪಾದರಕ್ಷೆ, ಮೇವಿನ ಕಟ್ಟು ಪತ್ತೆ

Kambala

Kambala; ದೇವರ ಕಂಬಳ ಖ್ಯಾತಿಯ ಹೊಕ್ಕಾಡಿಗೋಳಿ ಕಂಬಳ 

POlice

Kokkada: ಕಳ್ಳತನ; ಇಬ್ಬರು ಆರೋಪಿಗಳು ವಶಕ್ಕೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

puttige-2

Udupi; ಗೀತಾರ್ಥ ಚಿಂತನೆ 145: ವೇದಪ್ರಾಮಾಣ್ಯದ ಚರ್ಚೆ

crime

Kasaragod: ಘರ್ಷಣೆಯಿಂದ ಮೂವರಿಗೆ ಗಾಯ

1-weewq

Baindur: ಬಟ್ಟೆ ವ್ಯಾಪಾರಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.