ಗಿಡ ಬೆಳೆಸುವ ಹವ್ಯಾಸ ಬೆಳೆಸಿಕೊಳ್ಳಲು ಹುರಕಡ್ಲಿ ಸಲಹೆ
ಪರಿಸರ ರಕ್ಷಿಸಿ ಮನುಕುಲ ಉಳಿಸಲು ಮುಂದಾಗಿ
Team Udayavani, Jun 28, 2019, 4:54 PM IST
ಸಿಂದಗಿ: ಜೆ.ಎಚ್. ಪಟೇಲ್ ಶಿಕ್ಷಣ ಮಹಾವಿದ್ಯಾಲಯ ಪ್ರಾಚಾರ್ಯ ಡಾ| ಬಿ.ಎಂ. ಹುರಕಡ್ಲಿ ಸಸಿಗೆ ನೀರುಣಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಸಿಂದಗಿ: ಮನೆಗೊಂದು ಮರ, ಊರಿಗೊಂದು ವನ ಎನ್ನುವ ತತ್ವದಡಿಯಲ್ಲಿ ನಾವು ಹೆಚ್ಚಿನ ಪ್ರಮಾಣದಲ್ಲಿ ಸಸಿಗಳನ್ನು ನೆಡುವ ಮೂಲಕ ಅರಣ್ಯ ಬೆಳೆಸಬೇಕು ಎಂದು ಸ್ಥಳಿಯ ಜೆ.ಎಚ್. ಪಟೇಲ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ| ಬಿ.ಎಂ. ಹುರಕಡ್ಲಿ ಹೇಳಿದರು.
ಗುರುವಾರ ಪಟ್ಟಣದ ವಿದ್ಯಾನಗರದ 4ನೇ ಕ್ರಾಸ್‌ನಲ್ಲಿನ ವಿದ್ಯಾಚೇತನ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಭಾರತೀಯ ರೆಡ್ ಕ್ರಾಸ್ ತಾಲೂಕು ಸಂಸ್ಥೆ ವಿದ್ಯಾಚೇತನ ಹಿರಿಯ ಪ್ರಾಥಮಿಕ ಶಾಲೆ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಹಮ್ಮಿಕೊಂಡ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ವಿಜಯಪುರ ಜಿಲ್ಲೆಯಲ್ಲಿ ಶೇ. 0.17 ಅರಣ್ಯ ಪ್ರದೇಶ ಇರುವುದರಿಂದ ಸತತ ಬರಗಗಾಲಕ್ಕೆ ತುತ್ತಾಗುತ್ತಿದೆ. ಈ ಬವಣೆಯಿಂದ ತಪ್ಪಿಸಿಕೊಳ್ಳಲು ನಾವು ಹೆಚ್ಚು ಹೆಚ್ಚು ಗಿಡಗಳನ್ನು ಬೆಳೆಸಬೇಕು. ಪರಿಸರ ರಕ್ಷಣೆ ಕೇವಲ ಕಾರ್ಯಕ್ರಮದಿಂದ ಈಡೇರಿಸಲು ಸಾಧ್ಯವಿಲ್ಲ. ನಿಮ್ಮ ಮನೆ, ಅಕ್ಕ ಪಕ್ಕದವರ ಮನೆ, ಶಾಲೆ ಆವರಣ, ಸರಕಾರಿ ಕಚೇರಿಗಳ ಆವರಣದಲ್ಲಿ ಹೀಗೆ ಎಲ್ಲೆಲ್ಲಿ ಸ್ಥಳಾವಕಾಶ ಇದೆಯೋ ಅಲ್ಲೆಲ್ಲ ಸಸಿ ನೆಡಬೇಕು. ನೆಟ್ಟ ಸಸಿ ಹೆಮ್ಮರವಾಗಿ ಬೆಳೆಯುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ವಿದ್ಯಾಚೇತನ ಹಿರಿಯ ಪ್ರಾಥಮಿಕ ಶಾಲೆ ಸಂಸ್ಥಾಪಕ ಅಧ್ಯಕ್ಷ ಹ.ಮ. ಪೂಜಾರ ಮಾತನಾಡಿ, ಪರಿಸರ ದಿನಾಚರಣೆ ಕೆವಲ ಹೆಸರಿಗೆ ಮಾತ್ರ ನಡೆಯಬಾರದು. ಪ್ರತಿ ದಿನ ಪರಿಸರ ದಿನ ಆಚರಿಸಬೇಕು. ಪರಿಸರ ರಕ್ಷಣೆಗೆ ಮಹತ್ವ ನೀಡಬೇಕು. ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸಬೇಕು. ಶಾಲೆಯಲ್ಲಿ ನೆಡಸಿದ ಗಿಡಗಳನ್ನು ವಿದ್ಯಾರ್ಥಿಗಳು ದತ್ತು ತೆಗೆದುಕೊಂಡು ನೀವು ಅಲ್ಲಿರುವಷ್ಟು ದಿನವೂ ಅವುಗಳನ್ನು ಪೋಷಿಸಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಭಾರತೀಯ ರೆಡ್ ಕ್ರಾಸ್ ತಾಲೂಕು ಸಂಸ್ಥೆ ಚೇರಮನ್ ಬಿ.ಎನ್. ಪಾಟೀಲ ಇಬ್ರಾಹಿಂಪುರ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಮೂಡಿಸುವುದು ಅತ್ಯವಶ್ಯಕ. ಶಿಕ್ಷಕರು ಪಾಠ ಬೋಧನೆ ಮಾಡುವ ಸಂದರ್ಭದಲ್ಲಿ ಅವಕಾಶ ಸಿಕ್ಕ ಸಂದರ್ಭದಲ್ಲಿ ಮಕ್ಕಳಿಗೆ ಪರಿಸರದ ಬಗ್ಗೆ ತಿಳಿ ಹೇಳಬೇಕು. ಮಕ್ಕಳು ಗಿಡಗಳನ್ನು ಬೆಳೆಸುವ ಹವ್ಯಾಸ ಬೆಳೆಸಿಕೊಳ್ಳಬೇಕು. ಪರಿಸರ ರಕ್ಷಣೆ ಮಾಡುವ ಮೂಲಕ ಮನುಕುಲವನ್ನು ಉಳಿಸೋಣ ಎಂದು ಹೇಳಿದರು.
ಭಾರತೀಯ ರೆಡ್ ಕ್ರಾಸ್ ತಾಲೂಕು ಸಂಸ್ಥೆ ವೈಸ್ ಚೇರಮನ್ ಎಸ್.ಎಂ. ಕುಂಬಾರ ಮಾತನಾಡಿದರು. ಮುಖ್ಯ ಗುರುಮಾತೆ ಜ್ಯೋತಿ ಪೂಜಾರ, ಶಿಕ್ಷಕರಾದ ಮೇರಿ ಮಿಸ್, ಜಾರ್ಜ್ ಡಿಸೋಜಾ, ದಾನಮ್ಮ ಗಣಾಚಾರಿ, ರಾಜು ಹಿರೇಕುರುಬರ, ವಿಜಯಲಕ್ಷ್ಮೀ ಶಹಾಪುರ, ಅಕ್ಷತಾ ಅರ್ಜುಣಗಿ, ಸೌಮ್ಯಾ, ಆಶ್ವಿನಿ ಲೋಣಿ, ಸಾಧನಾ ಇಮಡೆ, ಮಂಗಳಾ ಬಮ್ಮಣ್ಣಿ, ವಿಜಯಲಕ್ಷ್ಮೀ ಮಠಪತಿ, ಗೌರಿ ಪಾಟೀಲ, ಶರಣು ಗೋರ್ಜಿ, ಅಂಬಿಕಾ ಸೇರಿದಂತೆ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಇದ್ದರು. ಭಾರತೀಯ ರೆಡ್ ಕ್ರಾಸ್ ತಾಲೂಕು ಸಂಸ್ಥೆ ನಿರ್ದೇಶಕ ರಮೇಶ ಪೂಜಾರ ಸ್ವಾಗತಿಸಿದರು. ಯುವರಾಜ ಚಂಡ್ರೆಪ್ಪಗೋಳ ನಿರೂಪಿಸಿದರು. ಸ್ಪೂರ್ತಿ ಹರ್ನಾಳ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.