ಬಿಜೆಪಿಗೆ ವರವಾಗದ ಕಾಂಗ್ರೆಸ್ ವಿರೋಧಿ ಅಲೆ
Team Udayavani, Jun 1, 2019, 11:09 AM IST
ಮಲ್ಲಿಕಾರ್ಜುನ ಮುದ್ನೂರ
ಶಹಾಪುರ: ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ವಿರೋಧಿ ಅಲೆ ಲಾಭ ಪಡೆದುಕೊಳ್ಳುವಲ್ಲಿ ಬಿಜೆಪಿ ವಿಫಲವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಶಹಾಪುರ ಪುರಸಭೆ ನಗರಸಭೆಯಾಗಿ ಮೇಲ್ದರ್ಜೇಗೆರಿದ ಬಳಿಕ ನಡೆದ ಪ್ರಥಮ ಚುನಾವಣೆ ಇದಾಗಿದ್ದು, ಪ್ರಥಮದಲ್ಲಿಯೇ ಕಾಂಗ್ರೆಸ್ ಪಕ್ಷ ನಗರಸಭೆ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದೆ.
ಆಡಳಿತರೂಢ ಕಾಂಗ್ರೆಸ್ ವಿರುದ್ಧದ ಅಲೆ ಬಿಜೆಪಿ ಪಡೆಯುವಲ್ಲಿ ವಿಫಲವಾಗಿದೆ. ಆದರೆ ನಗರದ ಅಂದಾಜು 13 ಕಡೆ ಮುಸ್ಲಿಂ ಬಾಹುಳ್ಯವಿರುವ ಕಡೆ ಬಿಜೆಪಿ ಉತ್ತಮ ಅಭ್ಯರ್ಥಿಗಳನ್ನು ಹಾಕುವ ಮೂಲಕ ಉತ್ತಮ ತಂತ್ರಗಾರಿಕೆ ರೂಪಿಸಿತ್ತು. ಮುಸ್ಲಿಂ ಬಾಹುಳ್ಯ ಹೊಂದಿದ್ದ ವಾರ್ಡ್‌ಗಳಲ್ಲಿ ಬಿಜೆಪಿ ಗೆಲ್ಲುವುದು ಸುಲಭವಲ್ಲ ಎಂಬುದರ ಬಗ್ಗೆ ಜಾಸ್ತಿ ಚರ್ಚೆ ನಡೆದಿತ್ತು. ಆದರೆ ನಗರದ ವಾರ್ಡ್ ನಂ. 18 ಮತ್ತು 19ರಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಮುಸ್ಲಿಂ ಸಮುದಾಯದ ಬಲ ಮಾಜಿ ಶಾಸಕ ಗುರು ಪಾಟೀಲ ಅವರ ತಂದೆಯವರಿಂದಲೂ ಇದೆ. ಶಿರವಾಳ ಕುಟುಂಬ ಯಾವುದೇ ಪಕ್ಷಕ್ಕೆ ಹೋದರು ಕೆಲ ಮುಸ್ಲಿಂ ಕುಟುಂಬಗಳು ಅವರ ಬೆಂಬಲಗರಾಗಿಯೇ ಮುಂದುವರಿಯುವ ಮೂಲಕ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ ಎನ್ನಬಹುದು. ಉಳಿದಂತೆ ಜೆಡಿಎಸ್‌ನವರು ಕೆಲ ಕಡೆ ಉತ್ತಮ ಅಭ್ಯರ್ಥಿಗಳನ್ನು ಹಾಕಿದ್ದು, ಸುಮಾರು ಐದು ವಾರ್ಡ್‌ಗಳಲ್ಲಿ ಎರಡನೇ ಸ್ಥಾನಗಳಿಸಿದ್ದಾರೆ. ವಾರ್ಡ್ ನಂ. 9ರಲ್ಲಿ ಜೆಡಿಎಸ್ ಅಭ್ಯರ್ಥಿ ಕೇವಲ 2 ಮತಗಳ ಅಂತರದಿಂದ ಸೋಲುಂಡಿದೆ.
ಮೇ 29ರಂದು ನಗರದಲ್ಲಿ ನಡೆದಿದ್ದ ನಗರಸಭೆ 31 ವಾರ್ಡ್‌ಗಳ ಚುನಾವಣೆಯಲ್ಲಿ ಒಟ್ಟು 91 ಜನ ಅಭ್ಯರ್ಥಿಗಳು ಕಣದಲ್ಲಿದ್ದರು. ಶೇ.61.69ರಷ್ಟು ಮತದಾನವಾಗಿತ್ತು. ಮೇ 31ರಂದು ಫಲಿತಾಂಶ ಹೊರ ಬಂದಿದ್ದು, ಒಟ್ಟು 31 ವಾರ್ಡ್‌ಗಳಲ್ಲಿ 16 ಕಾಂಗ್ರೆಸ್, 12 ಬಿಜೆಪಿ, 2 ಎಸ್‌ಡಿಪಿಐ ಮತ್ತು 1 ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದರು. ನಗರಸಭೆ ಅಧಿಕಾರಕ್ಕೆ ಬೇಕಾದ ಮ್ಯಾಜಿಕ್ ಸಂಖ್ಯೆ 16 ಸದಸ್ಯರನ್ನು ಕಾಂಗ್ರೆಸ್ ಸರಳವಾಗಿ ಪಡೆಯುವ ಮೂಲಕ ನಗರಸಭೆ ಗದ್ದುಗೆಯನ್ನು ಮತ್ತೂಮ್ಮೆ ತನ್ನ ವಶಕ್ಕೆ ಪಡೆಯಿತು. ಇದೇ ಮೊದಲ ಬಾರಿಗೆ ಬಿಜೆಪಿ 12 ಸ್ಥಾನ ಗಳಿಸಿದರೆ, ಎಸ್‌ಡಿಪಿಐ 2 ಖಾತೆ ತೆರೆಯುವ ಮೂಲಕ ನಗರಸಭೆ ಪ್ರವೇಶಿಸಿದೆ.
ಕಳೆದ 20 ವರ್ಷದಿಂದ ಪುರಸಭೆ ಆಡಳಿತ ದರ್ಶನಾಪುರ ಅವರ ಹಿಡಿತದಲ್ಲಿತ್ತು. ಒಟ್ಟು ಕಳೆದ ಬಾರಿ 23 ಸದಸ್ಯತ್ವ ಬಲದಲ್ಲಿ ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ ಬೆಂಬಲದೊಂದಿಗೆ ಸ್ವತಂತ್ರ ಪಕ್ಷದಿಂದ ಆಟೋ ಚಿಹ್ನೆಯಡಿ 6 ಜನ ಗೆಲುವು ಸಾಸಿದ್ದರು. ಅಲ್ಲದೆ 1 ಕೆಜೆಪಿ, 1 ಜೆಡಿಎಸ್ ಆಗ ಗೆಲುವಿನ ನಗೆ ಬೀರಿದ್ದವು.
ಅಂದು ಕಾಂಗ್ರೆಸ್ 15ರಲ್ಲಿ ಗೆಲುವು ಸಾಧಿಸುವ ಮೂಲಕ ಆಗಿನ ಪುರಸಭೆ ಕಾಂಗ್ರೆಸ್ ಪಕ್ಷದ ಪಾಲಾಗಿತ್ತು. ನಂತರದ ದಿನಗಳಲ್ಲಿ ಮಾಜಿ ಶಾಸಕ ಗುರು ಪಾಟೀಲ ಶಿರವಾಳ ಕೆಜೆಪಿ ಸೇರ್ಪಡೆಯಾದ್ದರಿಂದ ಆಟೋ ಚಿಹ್ನೆಯಡಿ ಗೆಲುವು ಸಾಧಿಸಿದ್ದ 6 ಜನ ಮತ್ತು ಒಂದು ಕೆಜಿಪಿ, ಗುರು ಪಾಟೀಲ ಬೆಂಬಲಕ್ಕೆ ನಿಂತಿದ್ದವು. ಜೆಡಿಎಸ್ ನಂತರದ ದಿನಗಳಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿತ್ತು.
ಖಾತೆ ತೆರೆದ ಎಸ್‌ಡಿಪಿಐ
ಇದೇ ಮೊದಲ ಬಾರಿಗೆ ಎಸ್‌ಡಿಪಿಐ ಎರಡು ಖಾತೆ ತೆರೆಯುವ ಮೂಲಕ ನಗರಸಭೆಗೆ ಪಾದಾರ್ಪಣೆ ಮಾಡಿದೆ. ವಾರ್ಡ್‌ನಂ 14 ಮತತು 20ರಲ್ಲಿ ಎಸ್‌ಡಿಪಿಐ ಗೆಲುವು ಸಾಧಿಸಿದೆ. ಚುನಾವಣೆ ಪೂರ್ವದಲ್ಲಿಯೇ ಕಾಂಗ್ರೆಸ್ ಜತೆ ಹೊಂದಾಣಿಕೆ ಮಾಡಿಕೊಂಡಿದ್ದ ಎಸ್‌ಡಿಪಿಐ ಸುಲಭ ಗೆಲವಿಗೆ ಪೂರಕವಾಗಿದೆ.
ಪುರಸಭೆಯಿಂದ ನಗರಸಭೆವರೆಗೂ ಕಾಂಗ್ರೆಸ್ ಪಕ್ಷಕ್ಕೆ ಇಲ್ಲಿನ ಜನರು ಸತತವಾಗಿ ಆಶೀರ್ವಾದ ಮಾಡಿದ್ದಾರೆ. ನಿರಂತರ ಅಭಿವೃದ್ಧಿ ಕೆಲಸ ಮಾಡುತ್ತ ಬಂದಿದ್ದೇವೆ. ಮುಂದೆ ಶಾಶ್ವತ ಕುಡಿಯುವ ನೀರು, ಚರಂಡಿ ಇತರೆ ವ್ಯವಸ್ಥೆಗಳಿಗೆ ಮೊದಲ ಆದ್ಯತೆ ನೀಡಲಾಗುವುದು. ಸುಂದರ ನಗರ ನಿರ್ಮಾಣ ಗುರಿ ಹೊಂದಲಾಗಿದೆ.
•ಶರಣಬಸಪ್ಪಗೌಡ ದರ್ಶನಾಪುರ,
ಶಾಸಕರು
ಬಿಜೆಪಿಯ 12 ಅಭ್ಯರ್ಥಿಗಳ ಗೆಲುವಿಗೆ ಜನರು ಆಶೀರ್ವಾದ ಮಾಡಿದ್ದಾರೆ. ಶಾಸಕರಾಗಿದ್ದಾಗ ಸಾಕಷ್ಟು ಅಭಿವೃದ್ಧಿ ಕಾರ್ಯ ಅನುಷ್ಠಾನಗೊಳಿಸಿದ್ದೇನೆ. ಇನ್ನೂ ನಾಲ್ಕು ಸ್ಥಾನಗಳಲ್ಲಿ ಅಲ್ಪ ಮತಗಳಲ್ಲಿ ನಮ್ಮ ಅಭ್ಯರ್ಥಿಗಳು ಸೋತಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಸಂಘಟನೆ ಮಾಡಲಾಗುವುದು. ಗೆದ್ದ ನಮ್ಮ ಅಭ್ಯರ್ಥಿಗಳು ನಗರದ ಪ್ರಗತಿಗೆ ಶ್ರಮಿಸಲಿದ್ದಾರೆ.
•ಗುರು ಪಾಟೀಲ ಶಿರವಾಳ,
ಮಾಜಿ ಶಾಸಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belekeri Mining Case: ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಜೈಲು ಶಿಕ್ಷೆಗೆ ಹೈಕೋರ್ಟ್ ತಡೆ
CID Inquiry: ಪರಿಷತ್‌ನಲ್ಲಿ ನಡೆದ ಘಟನೆ ಎಂದು ಉಲ್ಲೇಖಿಸಿದ್ದು ತಪ್ಪು: ಬಸವರಾಜ ಹೊರಟ್ಟಿ
Mangaluru: ಎರಡು ಸೈಬರ್ ವಂಚನೆ ಪ್ರಕರಣ: ಸೆನ್ ಪೊಲೀಸರಿಂದ ಇಬ್ಬರ ಬಂಧನ
Christmas: ಕರಾವಳಿಯಲ್ಲಿ ಸಡಗರ, ಸಂಭ್ರಮದ ಕ್ರಿಸ್ಮಸ್
Belthangady: ಸಂತ ಲಾರೆನ್ಸ್ ದೇವಾಲಯದಲ್ಲಿ ಕ್ರಿಸ್ಮಸ್ ಬಲಿಪೂಜೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
A.B.Vajapayee Birth Century: ಸರಳತೆಯ ಸಾಕಾರಮೂರ್ತಿ ನಮ್ಮ ವಾಜಪೇಯಿ
ಮೇಲ್ಮನೆಗೆ ನಾನೇ ಫೈನಲ್, ನನ್ನ ಹಕ್ಕುಚ್ಯುತಿ ಬಗ್ಗೆ ಕಾನೂನು ತಜ್ಞರ ಜತೆ ಸಮಾಲೋಚಿಸಿ ಕ್ರಮ
ISRO: ಬಾಹ್ಯಾಕಾಶ ಯೋಜನೆಯ ಪ್ರತಿ 1.ರೂ.ಗೂ ಭಾರತಕ್ಕೆ2.52 ರೂ. ಲಾಭ
UK: ಒಂದೇ ನಿಮಿಷದಲ್ಲಿ 49 ಗ್ರಾಂ ಕಾಟನ್ ಕ್ಯಾಂಡಿ ಸೇವಿಸಿ ದಾಖಲೆ ಬರೆದ ಮಹಿಳೆ
Belekeri Mining Case: ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಜೈಲು ಶಿಕ್ಷೆಗೆ ಹೈಕೋರ್ಟ್ ತಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.