ತುಂತುರು ಮಳೆಗೆ ನೆಲಕ್ಕೊರಗಿದ ಭತ್ತ
3-4 ದಿನದಿಂದ ಮೋಡ ಕವಿದ ವಾತಾವರಣ ಹತ್ತಿ-ಜೋಳ-ಕಡ್ಲಿ ಬೆಳೆಗೆ ಕೀಟ ಬಾಧೆ
Team Udayavani, Dec 4, 2019, 12:46 PM IST
ಚಂದ್ರಶೇಖರ ಯರದಿಹಾಳ
ಸಿಂಧನೂರು: ತಾಲೂಕಿನಲ್ಲಿ ಕಳೆದ ಮೂರ್‍ನಾಲ್ಕು ದಿನಗಳಿಂದ ಮೋಡ ಮುಸುಕಿದ ವಾತಾವರಣ ಮತ್ತು ಆಗಾಗ ತುಂತುರು ಮಳೆ ಸುರಿಯುತ್ತಿದ್ದು ಭತ್ತ, ತೊಗರಿ, ಕಡ್ಲಿ ಸೇರಿ ವಿವಿಧ ಬೆಳೆ ಬೆಳೆದ ರೈತರು ಬೆಳೆ ರಕ್ಷಣೆಗಾಗಿ ಪರದಾಡುವಂತಾಗಿದೆ.
ತಾಲೂಕಿನ ನೀರಾವರಿ ಆಶ್ರಿತ ಪ್ರದೇಶಗಳಾದ ಜವಳಗೇರಾ, ಪಗಡದಿನ್ನಿ, ಹಂಚಿನಾಳ ಕ್ಯಾಂಪ್, ಸಿಂಗಾಪುರ, ಮುಕ್ಕುಂದಾ, ಆಯನೂರು, ಧಡೇಸಗೂರು, ಕೆಂಗಲ್, ಸಾಲಗುಂದಾ, ಹೆಡಗಿನಾಳ, ಹುಡಾ ಸೇರಿದಂತೆ ಇತರೆಡೆಗಳಲ್ಲಿ ಕಟಾವಿಗೆ ಬಂದಂತಹ ಭತ್ತವು ನೆಲಕ್ಕುರುಳುವಂತಾಗಿದ್ದು, ರೈತರ ಕೈಗೆ ಬಂದ ತುತ್ತು ಬಾಯಿಗೆ ಬರದಂತಹ ಸ್ಥಿತಿ ನಿರ್ಮಾಣವಾಗಿದೆ.
ಇನ್ನು ಒಣ ಬೇಸಾಯದ ಪ್ರದೇಶಗಳಾದ ಕಲ್ಮಂಗಿ, ಹತ್ತಿಗುಡ್ಡ, ಹಿರೇಬೇರ್ಗಿ, ಚಿಕ್ಕಬೇರ್ಗಿ, ಸಂಕನಾಳ, ಬಪ್ಪೂರು, ಗುಡಗಲದಿನ್ನಿ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಹಿಂಗಾರಿನಲ್ಲಿ ತೊಗರಿ, ಕಡ್ಲಿ, ಹತ್ತಿ, ಜೋಳ ಇತರೆ ಬೆಳೆಯಲಾಗಿದೆ. ಈಗ ಮೋಡ ಮುಸುಕಿದ ವಾತಾವರಣ ಮತ್ತು ಅಕಾಲಿಕ ಮಳೆಯಿಂದಾಗಿ ಈ ಬೆಳೆಗಳಿಗೆ ಕೀಟಬಾಧೆ ತಗಲುವಂತಾಗಿದೆ. ತುಂತುರು ಮಳೆಗೆ ಕಡ್ಲಿ, ತೊಗರಿ, ಹತ್ತಿ ಉದುರುವಂತಾಗಿದೆ.
ಕಡ್ಲಿ ಬೆಳೆ ಹುಳಿ ಕಳೆದುಕೊಳ್ಳುವಂತಾಗಿರುವುದು ರೈತರನ್ನು ಚಿಂತೆಗೀಡು ಮಾಡಿದೆ. ನಾಲ್ಕೈದು ವರ್ಷಗಳಿಂದ ಮಳೆ ಇಲ್ಲದೇ ಹಾಗೂ ಕಾಲುವೆಗೆ ನೀರಿಲ್ಲದೆ ರೈತರು ಕಂಗಾಲಾಗಿದ್ದರು. ಮುಂಗಾರಿನಲ್ಲಿ ತಡವಾಗಿಯಾದರೂ ಉತ್ತಮ ಮಳೆ ಆಗಿದೆ. ಜೊತೆಗೆ ಕಾಲುವೆಗೆ ನೀರು ಹರಿಬಿಡಲಾಗಿದೆ. ಈ ಬಾರಿಯಾದರೂ ಉತ್ತಮ ಬೆಳೆ ಬೆಳೆಯಬೇಕೆಂಬ ನಿರೀಕ್ಷೆಯಲ್ಲಿದ್ದ ರೈತರಿಗೆ ಇದೀಗ ಸುರಿಯುತ್ತಿರುವ ಅಕಾಲಿಕ ಮಳೆ ಸಂಕಷ್ಟ ತಂದೊಡ್ಡಿದೆ.
ಅಕಾಲಿಕ ತುಂತುರು ಮಳೆಯಿಂದಾಗಿ ಕಾಳುಕಟ್ಟಿದ ಭತ್ತದ ಬೆಳೆ ನೆಲಕ್ಕೆ ಉರುಳುತ್ತಿದೆ. ಹಿಂಗಾರು ಕಡಲೆ ಬೆಳೆಗೆ ಹುಳಿ ಕಳೆದುಕೊಳ್ಳುತ್ತಿದೆ. ಹೂವು, ಮಗ್ಗು ಉದುರುತ್ತಿದೆ. ಇದರಿಂದ ರೈತರು ಸಂಕಷ್ಟ ಅನುಭವಿಸುವಂತಾಗಿದೆ.
ರವಿಗೌಡ ಮಲ್ಲದಗುಡ್ಡ,
ರೈತ ಮುಖಂಡ
ಕಳೆದ ಮೂರ್‍ನಾಲ್ಕು ದಿನಗಳಿಂದ ವಾತಾವರಣದಲ್ಲಿ ಏರುಪೇರಾಗಿದೆ. ಸ್ವಲ್ಪ ಪ್ರಮಾಣದಲ್ಲಿ ಚಂಡ ಮಾರುತದ ಬಿಸಿ ತಟ್ಟಿದೆ. ಈಗಾಗಲೇ ಕೆಲವು ಕಡೆ ರೈತರು ಭತ್ತ ಕಟಾವು ಮಾಡಿದ್ದಾರೆ. ಇನ್ನೂ ಕೆಲ ರೈತರು ಈ ವಾತಾವರಣಕ್ಕೆ ಭತ್ತ ಕಟಾವು ಮಾಡದಂತಾಗಿದೆ. ಇಂತಹ ವಾತಾವರಣದಿಂದ ಯಾವುದೇ ತೊಂದರೆ ಆಗದು.
ಜಯಪ್ರಕಾಶ ದೇಸಾಯಿ,
ಕೃಷಿ ಇಲಾಖೆ ಅಧಿಕಾರಿ ಸಿಂಧನೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Udupi: ಸಾಲ ಮರುಪಾವತಿಸದೆ ನಕಲಿ ದಾಖಲೆ ಸೃಷ್ಟಿಸಿ ಮರು ಸಾಲ; ಪ್ರಕರಣ ದಾಖಲು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.