ಕುಡಿವ ನೀರಿನ ಸಮಸ್ಯೆಗೆ ಮುಕ್ತಿ ಯಾವಾಗ?
ಬರಿದಾದ ಅತ್ತನೂರು ಕೆರೆ
Team Udayavani, May 3, 2019, 11:06 AM IST
ಸಿರವಾರ: ಅತ್ತನೂರು ಗ್ರಾಮದ ಕೆರೆ ಬರಿದಾಗಿರುವುದು
ಸಿರವಾರ: ಸಮೀಪದ ಅತ್ತನೂರು ಗ್ರಾಮದ ಕೆರೆ ಸ್ವಚ್ಛಗೊಳಿಸುವ ಉದ್ದೇಶದಿಂದ ಕೆರೆಯಲ್ಲಿದ್ದ ನೀರನ್ನು ಖಾಲಿ ಮಾಡಿದ ಗ್ರಾಮ ಪಂಚಾಯಿತಿ ಕಾಲುವೆ ಮೂಲಕ ನೀರು ತುಂಬಿಸಿಕೊಳ್ಳುವಲ್ಲಿ ನಿರ್ಲಕ್ಷ್ಯ ವಹಿಸಿದ್ದರಿಂದ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ.
ಅತ್ತನೂರು ಕೆರೆಗೆ ಕಾಲುವೆ ಮೂಲಕ ನೀರು ಹರಿಸಿ ತುಂಬಿಸಲಾಗುತ್ತಿತ್ತು. 2017ರಲ್ಲಿ ವ್ಯಕ್ತಿಯೊಬ್ಬರು ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ಆಗ ಕೆರೆ ಖಾಲಿ ಮಾಡಿ ನೀರು ಬಿಡಲಾಗುತ್ತಿತ್ತು. ನಂತರ ಪ್ರತಿ ವರ್ಷ ಕೆರೆ ಸ್ವಚ್ಛ ಮಾಡಿ ಕೆರೆ ತುಂಬಿಸಲಾಗುತ್ತಿತ್ತು. ಪ್ರಸಕ್ತ ವರ್ಷ ಕೆರೆ ಸ್ವಚ್ಛಗೊಳಿಸುವ ಉದ್ದೇಶದಿಂದ ಎರಡು ತಿಂಗಳ ಹಿಂದೆಯೇ ಕೆರೆಯಲ್ಲಿನ ನೀರನ್ನು ಖಾಲಿ ಮಾಡಲಾಗಿದೆ. ಆದರೆ ಗ್ರಾಮ ಪಂಚಾಯಿತಿ ಎರಡು ತಿಂಗಳಾದರೂ ಕೆರೆಗೆ ನೀರು ಹರಿಸಲು ನಿರ್ಲಕ್ಷ್ಯ ತೋರಿದೆ.
ಮೆಟಲಿಂಗ್ ಕಾಮಗಾರಿ: ಎರಡು ತಿಂಗಳ ಹಿಂದೆಯೇ ಕೆರೆಯಲ್ಲಿನ ನೀರು ಖಾಲಿ ಮಾಡಿದ್ದರೂ ಇದೀಗ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಯೋಜನೆಯ 21ಲಕ್ಷ ಅನುದಾನದಲ್ಲಿ ಕೆರೆಯ ಒಂದು ಬದಿಗೆ ಮೆಟ್ಲಿಂಗ್ ಕಾಮಗಾರಿ ನಡೆಯುತ್ತಿದೆ. ಇದು ಕೂಡ ಕೆರೆಗೆ ನೀರು ಹರಿಸಲು ವಿಳಂಬವಾಗುತ್ತಿದೆ.
ದೂರದ ಕೆರೆಗಳೆ ಆಸರೆ: ಅತ್ತನೂರು ಕೆರೆ ಬರಿದಾಗಿದ್ದರಿಂದ ಗ್ರಾಮಸ್ಥರು ತಳ್ಳುವ ಗಾಡಿ, ಸೈಕಲ್, ಬೈಕ್‌ಗಳಲ್ಲಿ ಕೊಡಗಳನ್ನು ಹಾಕಿಕೊಂಡು ಅತ್ತನೂರು ಕ್ಯಾಂಪ್, ನೀಲಗಲ್, ಅತ್ತನೂರು ಹೊರವಲಯದಲ್ಲಿರುವ ಕೆರೆಗಳಿಗೆ ತೆರಳಿ ನೀರು ತರುವಂತಾಗಿದೆ.
ಶುದ್ಧೀಕರಣ ನೀರೂ ಅಶುದ್ಧ: ಗ್ರಾಮದಲ್ಲಿ ನೀರಿನ ಶುದ್ಧೀಕರಣ ಘಟಕವಿದೆ. ಆದರೆ ಈ ನೀರು ಕುಡಿದರೆ ಮೊಣಕಾಲು ನೋವು ಇತರೆ ಕಾಯಿಲೆ ಬರುತ್ತಿರುವುದರಿಂದ ಗ್ರಾಮಸ್ಥರು ನೀರು ಕುಡಿಯಲು ಹಿಂದೇಟು ಹಾಕುತ್ತಿದ್ದಾರೆ.
ಹುಸಿ ಭರವಸೆ: ಕಲ್ಲೂರು ಜಿಪಂ ಕ್ಷೇತ್ರದ ಸದಸ್ಯರಾಗಿ ಅತ್ತನೂರಿನವರೇ ಇದ್ದಾರೆ. ಅತ್ತನೂರು ತಾಪಂ ಕ್ಷೇತ್ರಕ್ಕೂ ಸ್ಥಳೀಯರೇ ಆಯ್ಕೆಯಾಗಿದ್ದಾರೆ. ಅತ್ತನೂರು ಗ್ರಾಪಂ ಅಧ್ಯಕ್ಷರೂ ಸ್ಥಳೀಯರೇ ಇದ್ದರೂ ಕೆರೆ ಅಭಿವೃದ್ಧಿಗೆ ನಿರ್ಲಕ್ಷ್ಯ ವಹಿಸಲಾಗುತ್ತಿದೆ. ಪ್ರತಿ ಬಾರಿ ಚುನಾವಣೆ ಸಂದರ್ಭದಲ್ಲಿ ಮಾತ್ರ ಕೆರೆ ಅಭಿವೃದ್ಧಿ ಭರವಸೆ ನೀಡುತ್ತಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಕುಡಿಯುವ ನೀರಿನ ಕೆರೆ ಸ್ವಚ್ಛತೆ ಮಾಡಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು ಎಂಬ ಉದ್ದೇಶದಿಂದ ಕೆರೆ ಅಭಿವೃದ್ಧಿ ಕಾಮಗಾರಿ ಮಾಡಲಾಗುತ್ತಿದೆ. ಎರಡು ದಿನದಲ್ಲಿ ಕಾಮಗಾರಿ ಪೂರ್ಣಗೊಳಿಸಿ ಬಂಗಾರಪ್ಪ ಕೆರೆಯಿಂದ ಕಾಲುವೆ ಮೂಲಕ ಅತ್ತನೂರು ಕೆರೆಗೆ ನೀರು ಹರಿಸಲಾಗುವುದು.
••ಮಹಾಂತೇಶ ಪಾಟೀಲ ಅತ್ತನೂರು,
ಜಿಪಂ ಸದಸ್ಯರು.
ಎರಡು ತಿಂಗಳ ಹಿಂದೆಯೇ ಕೆರೆಯನ್ನು ಖಾಲಿ ಮಾಡಲಾಗಿದೆ. ಇದರಿಂದಾಗಿ ನೀರಿನ ಸಮಸ್ಯೆ ಹೆಚ್ಚಿದ್ದು ದೂರದಿಂದ ನೀರು ತರಬೇಕಿದೆ. ಈ ಸಮಸ್ಯೆಗೆ ಮುಕ್ತಿಯೆ ಇಲ್ಲದಂತಾಗಿದೆ.
••ಹೆಸರು ಹೇಳಲಿಚ್ಛಿಸದ ಗ್ರಾಮಸ್ಥ,
ಅತ್ತನೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Udupi: ಸಾಲ ಮರುಪಾವತಿಸದೆ ನಕಲಿ ದಾಖಲೆ ಸೃಷ್ಟಿಸಿ ಮರು ಸಾಲ; ಪ್ರಕರಣ ದಾಖಲು
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?
ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
Priority: ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಅವಕಾಶ ವಂಚಿತ ಯಕ್ಷಗಾನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.