ಇಲ್ಲಿ ಶುದ್ಧ ನೀರು ಗಗನಕುಸುಮ
ಶುದ್ಧ ನೀರು ಪೂರೈಸಲು ನಿರ್ಮಿಸಿದ್ದ ಘಟಕ•ನಿರ್ವಹಣೆ ಇಲ್ಲದೆ ಬಹುತೇಕ ಘಟಕ ಸ್ಥಗಿತ
Team Udayavani, Apr 27, 2019, 1:09 PM IST
ಸಿರುಗುಪ್ಪ: ನಗರದ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ನಿರ್ಮಿಸಿದ್ದ ಶುದ್ಧ ಕುಡಿಯುವ ನೀರಿನ ಘಟಕಗಳು ಸೂಕ್ತ ನಿರ್ವಹಣೆ ಇಲ್ಲದೆ ಹಾಳಾಗಿದ್ದು, ನಾಗರಿಕೆ ಶುದ್ಧ ನೀರು ಇಲ್ಲದೆ ಪರದಾಡುವಂತಾಗಿದೆ.
ನಗರದ 11, 16, 18, 21, 23, 26 ಹಾಗೂ 27ನೇ ವಾರ್ಡ್‌ಗಳಲ್ಲಿ ಜನರಿಗೆ ಶುದ್ಧ ಕುಡಿಯುವ ನೀರೊದಗಿಸುವ ಉದ್ದೇಶದಿಂದ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದ್ದು, 16 ಮತ್ತು 18ನೇ ವಾರ್ಡ್ ನಲ್ಲಿ ಮಾತ್ರ ಶುದ್ಧ ಕುಡಿವ ನೀರಿನ ಘಟಕಗಳು ಕಾರ್ಯನಿರ್ವಹಿಸುತ್ತಿವೆ.
ಆದರೆ 11, 21, 23, 26ನೇ ವಾರ್ಡ್ ಗಳಲ್ಲಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ನೀರು ಸಂಗ್ರಹಿಸಲು ಬೋರ್ ಸೌಲಭ್ಯ ಇಲ್ಲದ ಕಾರಣ ಈ ನಾಲ್ಕು ಘಟಕಗಳು ಸ್ಥಗಿತಗೊಂಡಿವೆ. ಈ ಘಟಕಗಳಿಗೆ ನೀರು ಪೂರೈಕೆ ಮಾಡಲೆಂದು ಹಾಕಲಾಗಿದ್ದ ಬೋರ್‌ವೆಲ್ಗಳಲ್ಲಿ ಸಂಪೂರ್ಣವಾಗಿ ನೀರು ಬತ್ತಿ ಹೋಗಿದ್ದು, ಘಟಕಗಳ ಸ್ಥಗಿತಕ್ಕೆ ಕಾರಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹರಿಗೋಲ್ ಘಾಟ್ನಿಂದ ನಗರಸಭೆ ಅಧಿಕಾರಿಗಳು ನಗರಕ್ಕೆ ಪೂರೈಕೆ ಮಾಡುವ ನೀರು ಕುಡಿಯಲು ಯೋಗ್ಯವಾಗಿಲ್ಲದ ಕಾರಣ ನಗರದ ಪ್ರತಿಯೊಬ್ಬರು ಶುದ್ಧ ಕುಡಿಯುವ ನೀರಿನ ಘಟಕಗಳ ನೀರು ಅವಲಂಭಿಸಿದ್ದಾರೆ. ಆದರೆ ಜನರಿಗೆ ಶುದ್ಧ ನೀರು ಪೂರೈಸುವ ಶುದ್ಧ ಕುಡಿಯುವ ನೀರಿನ ಘಟಕಗಳೇ ಸ್ಥಗಿತಗೊಂಡು ನಿರುಪಯುಕ್ತವಾಗಿವೆ.
ಕಡಿಮೆ ದರದಲ್ಲಿ ಸ್ಥಳೀಯವಾಗಿಯೇ ಶುದ್ಧ ಕುಡಿಯುವ ನೀರೊದಗಿಸುವ ಉದ್ದೇಶದಿಂದ ನಿರ್ಮಾಣವಾದ ನಾಲ್ಕು ಘಟಕಗಳು ಸ್ಥಗಿತಗೊಂಡಿದ್ದು, 11, 21, 23, 26ನೇ ವಾರ್ಡ್‌ಗಳ ಜನರು ಬೇರೆಡೆಗೆ ತೆರಳಿ ಶುದ್ಧ ಕುಡಿಯುವ ನೀರು ತರುವಂತಾಗಿದೆ.
ನಗರದಲ್ಲಿ ಒಟ್ಟು 6 ಶುದ್ಧ ಕುಡಿಯುವ ನೀರನ ಘಟಕಗಳಿದ್ದು, ಇದರಲ್ಲಿ ಬೋರ್ ನೀರಿನ ಕೊರತೆಯಿಂದ ನಾಲ್ಕು ಘಟಕಗಳು ಸ್ಥಗಿತಗೊಂಡಿದ್ದು, 2 ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಬೋರ್ ನೀರಿನ ಕೊರತೆ ಇರುವ ಘಟಕಗಳಿಗೆ ನಗರಸಭೆಯಿಂದ ನೀರು ಪೂರೈಸಲು ಯೋಜನೆ ಸಿದ್ಧಪಡಿಸಲಾಗುತ್ತಿದೆ.
•ಮಹಮ್ಮದ್,
ಪ್ರಭಾರಿ ಪೌರಾಯುಕ್ತ, ನಗರಸಭೆ
ನಮ್ಮ ವಾರ್ಡ್‌ನಲ್ಲಿ ಶುದ್ಧ ಕುಡಿವ ನೀರಿನ ಘಟಕವಿದ್ದರೂ ಯಾವುದೇ ಪ್ರಯೋಜನವಿಲ್ಲ. ಸದ್ಯ ಘಟಕ ಸ್ಥಗಿತಗೊಂಡಿದ್ದು, ಕುಡಿವ ನೀರು ಬೇರೆಡೆಯಿಂದ ತರಬೇಕಾಗಿದೆ. ಬೇಸಿಗೆಯಲ್ಲಿ ಕುಡಿವ ನೀರು ಹೆಚ್ಚಿನ ಅವಶ್ಯವಿದ್ದು, ಶುದ್ಧ ನೀರು ಸಿಕ್ಕರೆ ಅನುಕೂಲ. ನಮ್ಮಲ್ಲಿರುವ ಘಟಕದಿಂದ ಯಾವುದೇ ಪ್ರಯೋಜನವಿಲ್ಲದಂತಾಗಿದೆ.
•ಯಂಕಮ್ಮ, ಮಂಗಮ್ಮ, ದುರುಗಪ್ಪ,
23ನೇ ವಾರ್ಡ್ ನಿವಾಸಿಗಳು
ನಗರದಲ್ಲಿ ಶುದ್ಧ ಕುಡಿಯುವ ಎರಡು ನೀರಿನ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಇನ್ನುಳಿದ ನಾಲ್ಕು ಘಟಕಗಳು ಬೋರ್ ನೀರಿನ ಕೊರತೆಯಿಂದ ಸ್ಥಗಿತಗೊಂಡಿದ್ದು, ಈ ನಾಲ್ಕು ಘಟಕಗಳಿಗೆ ನಗರಸಭೆಯಿಂದ ನೀರು ಪೂರೈಸುವಂತೆ ಕೇಳಿದ್ದೇವೆ.
•ಫಕ್ಕೀರಸ್ವಾಮಿ, ಎಇಇ,
ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಎಸ್‌ಎಸ್‌ಎಲ್‌ಸಿ ಫೇಲ್ ಆಗಿದ್ದಕ್ಕೆ ಭುವನೇಶ್ವರಿ ವಿಗ್ರಹ ವಿರೂಪಗೊಳಿಸಿದ ಯುವಕ
Fraud: ಡ್ರಗ್ಸ್ ಕೇಸ್ ಹೆಸರಲ್ಲಿ ಟೆಕಿಗೆ ಬೆದರಿಸಿ 40 ಲಕ್ಷ ವಂಚನೆ
Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ ಜನರ ಭೇಟಿ
Puttur: ಮಹಿಳೆಯ ಮಾನಭಂಗಕ್ಕೆ ಯತ್ನ; ಆರೋಪಿಗೆ ಜೈಲು ಶಿಕ್ಷೆ
Bantwala: ಕೆದಿಲ ಗ್ರಾಮದಲ್ಲಿ ಸಿಡಿಲು ಬಡಿದು ಬಾಲಕ ಸಾವು
MUST WATCH
ಹೊಸ ಸೇರ್ಪಡೆ
BBK11: ಮುಖವಾಡ ಬಯಲು ಮಾಡುತ್ತೇವೆ..ಆರಂಭದಲ್ಲೇ ರೊಚ್ಚಿಗೆದ್ದ ವೈಲ್ಡ್ ಕಾರ್ಡ್ ಸ್ಪರ್ಧಿಗಳು
Bengaluru: ಎಸ್‌ಎಸ್‌ಎಲ್‌ಸಿ ಫೇಲ್ ಆಗಿದ್ದಕ್ಕೆ ಭುವನೇಶ್ವರಿ ವಿಗ್ರಹ ವಿರೂಪಗೊಳಿಸಿದ ಯುವಕ
Fraud: ಡ್ರಗ್ಸ್ ಕೇಸ್ ಹೆಸರಲ್ಲಿ ಟೆಕಿಗೆ ಬೆದರಿಸಿ 40 ಲಕ್ಷ ವಂಚನೆ
Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ ಜನರ ಭೇಟಿ
Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.