ವಸುಧೇಂದ್ರ ತೀರ್ಥರು ಮಹಿಮಾನ್ವಿತರು
ಸುಬುಧೇಂದ್ರ ತೀರ್ಥ ಶ್ರೀ ಆಶೀರ್ವಚನವಸುಧೇಂದ್ರ ತೀರ್ಥರ 258ನೇ ಆರಾಧನೆ
Team Udayavani, Oct 21, 2019, 3:33 PM IST
ಸಿರುಗುಪ್ಪ: ಶ್ರೀ ವಸುಧೇಂದ್ರ ತೀರ್ಥರು ಮಹಾ ಪಂಡಿತರು, ವಾಗ್ಮಿàಗಳು, ಅನುಗ್ರಹ ಸಂಪನ್ನರು, ಮಹಿಮಾನ್ವಿತರಾಗಿದ್ದು ಅವರು ಕಠಿಣವಾದ ನಿಯಮ ನಿಷ್ಠೆಗಳನ್ನು ಆಚರಿಸುತ್ತಿದ್ದರು. ಅವರು ಬೃಂದಾವನದಲ್ಲಿ ಜಾಗೃತರಾಗಿದ್ದು ಭಕ್ತರು ನಿಯಮ ನಿಷ್ಠೆಗಳನ್ನು ಆಚರಿಸದೇ ಇದ್ದಲ್ಲಿ ಸಂಕಷ್ಟ ಎದುರುಸುತ್ತಿದ್ದರು. ಭಕ್ತರ ಕೋರಿಕೆಯನ್ನು ಮನ್ನಿಸಿ ಶಾಂತ ಸ್ವಭಾವ ಹೊಂದಿ ಭಕ್ತರನ್ನು ಅನುಗ್ರಹಿಸುತ್ತಿದ್ದಾರೆ ಎಂದು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿ ಪತಿ ಶ್ರೀ ಸುಬುಧೇಂದ್ರ ತೀರ್ಥರು ತಿಳಿಸಿದರು.
ತಾಲೂಕಿನ ಕೆಂಚನಗುಡ್ಡ ಗ್ರಾಮದ ತುಂಗಭದ್ರಾ ನದಿ ತೀರದಲ್ಲಿರುವ ಶ್ರೀ ವಸುಧೇಂದ್ರ ತೀರ್ಥರ 258ನೇ ಆರಾಧನೆ ಕಾರ್ಯಕ್ರಮದಲ್ಲಿ ಭಾನುವಾರ ಭಾಗವಹಿಸಿದ ಅವರು ಭಕ್ತರಿಗೆ ಆರ್ಶೀವಚನ ನೀಡಿದರು. ಶ್ರೀ ವಸುಧೇಂದ್ರ ತೀರ್ಥರು ಶ್ರೀರಾಘವೇಂದ್ರ ಸ್ವಾಮಿಗಳ ವಂಶಜರಾಗಿದ್ದು ಅವರು ಪೀಠಾಧಿಪತಿಗಳಾಗಿದ್ದಾಗ ತಮಿಳುನಾಡಿನ ರಾಜ ವಿಜಯವಪ್ಪಳ ಮಾಳವರಾಯ ಗುರುಗಳಿಂದ ಕೆರೆ ನಿರ್ಮಾಣ ಹಾಗೂ ಮಂಟಪ ನಿರ್ಮಾಣ ಭೂಮಿ ಪೂಜೆ ಸಮಯದಲ್ಲಿ ಆಶೀರ್ವಾದ ಪಡೆದು ಮೂಲ ರಾಮನ ಕೋಶಕ್ಕೆ ಹಾಗೂ ಶ್ರೀಮಠಕ್ಕೆ ಅನೇಕ ಗ್ರಾಮಗಳನ್ನು ಬಳುವಳಿಯಾಗಿ ನೀಡುತ್ತಾನೆ. ಅಪಾರ ನಿಧಿ ಯನ್ನು ದೇಣಿಗೆ ನೀಡಿದ ಕುರಿತು ತಾಮ್ರ ಶಾಸನದಲ್ಲಿ ಮಾಹಿತಿ ನೀಡಿದ್ದು, ಶ್ರೀಮೂಲರಾಮನ ಜೊತೆಯಲ್ಲಿ ತಾಮ್ರ ಶಾಸನಕ್ಕೂ ನಿತ್ಯ ಪುಜೆ ಸಲ್ಲಿಸಲಾಗುತ್ತಿದೆ.
ಮಂತ್ರಾಲಯದಲ್ಲಿ ಲೌಕಿಕವಾಗಿ ಶ್ರೀಮಠಕ್ಕೆ ತೊಂದರೆಯಾಗಿ ಭೂಮಿ ಕಳೆದುಕೊಂಡಾಗ ಆಗಿನ ಮುಸಲ್ಮಾನ ನವಾಬರು ಶ್ರೀಗಳ ಮಹಿಮೆಯಿಂದಾಗಿ ಮರಳಿ ಮಠಕ್ಕೆ ಭೂಮಿಯನ್ನು ಹಿಂತಿರುಗಿಸಿದರು. ಅಪಾರ ಪಂಡಿತರಾಗಿದ್ದ ವಸುಧೇಂದ್ರ ತೀರ್ಥರು ಅನೇಕ ಗ್ರಂಥಗಳನ್ನು ರಚಿಸಿದ್ದಾರೆ. ತಂತ್ರಸಾರದಿ ಗ್ರಂಥ, ಚಂದ್ರಿಕಾ ಸುಧಾ ಗ್ರಂಥ ವಿಮರ್ಶೆ, ವಿವಿಧ ಮತಗಳ ಸಾರವನ್ನು ತಿಳಿಸುವ ಗ್ರಂಥವನ್ನು ರಚಿಸಿದ್ದಾರೆ. ಅಧ್ಯಾಯ ಸೂತ್ರ ಗ್ರಂಥಸಾರ ಸೇರಿದಂತೆ ಅನೇಕ ಗ್ರಂಥಗಳನ್ನು ಸಂಗ್ರಹಿಸಿ ಪುನರ್ ಮುದ್ರಿಸಿ ಶ್ರೀಮಠದ ಮೂಲಕ ಭಕ್ತರಿಗೆ ನೀಡಲಾಗುತ್ತದೆ. ಕೆಂಚನಗುಡ್ಡದ ವಸುಧೇಂದ್ರ ತೀರ್ಥರ ಮೂಲಬೃಂದಾವನ ಸನ್ನಿಧಾನವನ್ನು ಜಿರ್ಣೋದ್ಧಾರಗೊಳಿಸಿದ್ದು ಎಲ್ಲ ಭಕ್ತರಿಗೂ ಜಾಗೃತ ಮಠದಲ್ಲಿ ಮೂಲರಾಮನ ಪೂಜೆ ನೆರವೇರಿಸಿ ಸೀತಾಪತಿ ಸಮೇತ ಮೂಲ ದೇವರ ಅನುಗ್ರಹ ದೊರೆಯುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Bengaluru: ಹನಿಟ್ರ್ಯಾಪ್: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
Bengaluru: ಬಸ್‌ಗಳಲ್ಲಿ ಮೊಬೈಲ್ ಕಳ್ಳತನ: ಇಬ್ಬರು ಆರೋಪಿಗಳ ಸೆರೆ, 60 ಫೋನ್ ಜಪ್ತಿ
MUST WATCH
ಹೊಸ ಸೇರ್ಪಡೆ
Wayanad Results 2024:ವಯನಾಡ್ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Karnataka By Poll Results: ಜೆಡಿಎಸ್ ಅಂತಿಮ ದಿನ ಎಣಿಸತೊಡಗಿದೆ: ಸಿ.ಪಿ.ಯೋಗೇಶ್ವರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.