ಅಕ್ಕ ಲಕೋಟನಲ್ಲಿ ತ್ರಿಕೋನ ಸ್ಪರ್ಧೆ
ದುಧನಿ-ಮೈಂದುರ್ಗಿ-ಅಕ್ಕಲಕೋಟ ಬಿಜೆಪಿಗೆ ಅನುಕೂಲ ಗೆಲುವಿನ ವಿಶ್ವಾಸದಲ್ಲಿ ಸಚಿನ್ ಕಲ್ಯಾಣಶೆಟ್ಟಿ
Team Udayavani, Oct 9, 2019, 11:04 AM IST
ಸೋಮಶೇಖರ ಜಮಶೆಟ್ಟಿ
ಸೊಲ್ಲಾಪುರ: ಮಹಾರಾಷ್ಟ್ರ ಮತ್ತು ಕರ್ನಾಟಕ ಗಡಿ ಭಾಗದ ಅಕ್ಕಲಕೋಟ ವಿಧಾನಸಭಾ ಮತಕ್ಷೇತ್ರದಿಂದ ಸುಮಾರು 11 ಅಭ್ಯರ್ಥಿಗಳು ಚುನಾವಣೆ ಕಣದಲ್ಲಿದ್ದರೂ, ಕಾಂಗ್ರೆಸ್-ಬಿಜೆಪಿ ಮತ್ತು ವಂಚಿತ ಬಹುಜನ ಪಕ್ಷದ ನಡುವೆ ಭಾರಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
ಕಳೆದ 2009ರ ವಿಧಾನಸಭೆ ಚುನಾವಣೆಯಲ್ಲಿ ಅಕ್ಕಲಕೋಟ ತಾಲೂಕಿನ ಸೇಗಾಂವ ಗ್ರಾಮದಲ್ಲಿ ನಡೆದ ಶೂಟೌಟ್ ಪ್ರಕರಣ ಇಡೀ ರಾಜ್ಯದ ಗಮನ ಸೆಳೆದಿತ್ತು. ಆದ್ದರಿಂದ ಈ ಬಾರಿ ಕಟ್ಟೆಚ್ಚರ ವಹಿಸಲಾಗಿದೆ. ಜತೆಗೆ ಅತಿ ಸೂಕ್ಷ್ಮ ಮತಕ್ಷೇತ್ರವಾಗಿ ಪರಿವರ್ತನೆ ಆಗಿದೆ. ಹೀಗಾಗಿ ಚುನಾವಣೆ ಆಯೋಗ ಅಕ್ಕಲಕೋಟ ಮತಕ್ಷೇತ್ರದ 138 ಗ್ರಾಮಗಳ ಮೇಲೆ ತೀವ್ರ ನಿಗಾ ಇಟ್ಟಿದೆ.
ಪಕ್ಷದ ಅಭ್ಯರ್ಥಿಗಳು: ಸಚಿನ್ ಕಲ್ಯಾಣಶೆಟ್ಟಿ (ಬಿಜೆಪಿ), ಸಿದ್ಧರಾಮ ಮ್ಹೇತ್ರೆ (ಕಾಂಗ್ರೆಸ್), ನಾಗಮೂರ್ತಿ ಕುರಣೆ (ಬಿಎಸ್‌ಪಿ), ಮಧುಕರ ಜಾಧವ (ಮನಸೇ), ಧರ್ಮರಾಜ ರಾಠೊಡ (ವಂಚಿತ ಬಹುಜನ), ಸುರೇಖಾ ಕ್ಷೀರಸಾಗರ (ಅಖೀಲ ಭಾರತ ಹಿಂದು ಮಹಾಸಭಾ), ಅಮೋಲ ಹರಣಾಳಕರ (ಪಕ್ಷೇತರ), ದೀಪಕ ಮಹಾಸ್ವಾಮಿಜಿ (ಪಕ್ಷೇತರ), ಲಕ್ಷ್ಮಣ ಮೇತ್ರೆ (ಪಕ್ಷೇತರ) ಸುಜಾತಾ ಬಾಬಾನಗರೆ (ಪಕ್ಷೇತರ), ಸಂತೋಷ ಗಜದಾನೆ (ಬಹುಜನ್ ಮುಕ್ತಿ ಪಾರ್ಟಿ) ಪಕ್ಷದ ಅಭ್ಯರ್ಥಿಗಳಾಗಿದ್ದಾರೆ.
ಹಾಲಿ ಶಾಸಕ ಸಿದ್ಧರಾಮ ಮ್ಹೇತ್ರೆ, ಬಿಜೆಪಿ ಅಭ್ಯರ್ಥಿ ಸಚಿನ್ ಕಲ್ಯಾಣಶೆಟ್ಟಿ ನಡುವೆ ಬಾರಿ ಪೈಪೋಟಿ ನಡೆದಿದೆ. ರ್ಯಾಲಿ, ಕಾರ್ನರ್ ಸಭೆ, ಬಹಿರಂಗ ಸಭೆಗಳ ಮೂಲಕ ಮತದಾರರನ್ನು ಒಲಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಅಕ್ಕಲಕೋಟ ತಾಲೂಕಿನಲ್ಲಿ ದುಧನಿ, ಮೈಂದರ್ಗಿ ಮತ್ತು ಅಕ್ಕಲಕೋಟ ಹೀಗೆ ಒಟ್ಟು ಮೂರು ನಗರ ಪರಿಷತ್‌ಗಳಿವೆ. ಅಕ್ಕಲಕೋಟ ಮತ್ತು ದುಧನಿ ಇವೆರಡು ನಗರ ಪರಿಷತ್‌ಗಳು ಬಿಜೆಪಿ ಅಧಿಕಾರದಲ್ಲಿದೆ. ಇದು ಬಿಜೆಪಿ ಅಭ್ಯರ್ಥಿಗೆ ಅನುಕೂಲವಾಗಲಿದೆ ಎಂದು ಹೇಳಲಾಗುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಅಲೆಯಿಂದ ಬಿಜೆಪಿ ಅಭ್ಯರ್ಥಿ ಸಚಿನ್ ಕಲ್ಯಾಣಶೆಟ್ಟಿ ಗೆಲುವು ತಮ್ಮದೇ ಎನ್ನುವ ವಿಶ್ವಾಸದಲ್ಲಿದ್ದಾರೆ. ಅಕ್ಕಲಕೋಟ ವಿಧಾನಸಭಾ ಮತಕ್ಷೇತ್ರದಲ್ಲಿ ಲಿಂಗಾಯತ ಸಮಾಜದ ಪ್ರಭಾವ ಹೆಚ್ಚಾಗಿದ್ದರಿಂದ ಗೆಲುವಿಗೆ ಅನುಕೂಲ ಆಗಬಹುದು. ಈ ಕ್ಷೇತ್ರದಲ್ಲಿ ಸುಮಾರು 1 ಲಕ್ಷ 15 ಸಾವಿರ ಲಿಂಗಾಯತ ಸಮಾಜದವರು ಇದ್ದಾರೆ. ಆದ್ದರಿಂದ ಸಚಿನ್ ಕಲ್ಯಾಣಶೆಟ್ಟಿಗೆ ಗೆಲುವು ನಿಶ್ಚಿತವೆಂದು ಹೇಳಲಾಗುತ್ತಿದೆ. ಅದರಂತೆ 70 ಸಾವಿರ ಮುಸ್ಲಿಂರು, 35 ಸಾವಿರ ದಲಿತರು, 30 ಸಾವಿರ ಲಂಬಾಣಿ, 25 ಸಾವಿರ ಕುರುಬರು ಮತ್ತು ಕೋಳಿ, ಮಾಳಿ, ತೇಲಿ, ಮರಾಠಾ ಸೇರಿದಂತೆ 45 ಸಾವಿರ ಸಮಾಜದವರು ಇದ್ದಾರೆ. ಆದರೆ ಈ ಚುನಾವಣೆಯಲ್ಲಿ ಯಾರು ಗೆಲ್ಲಬಹುದು ಎನ್ನುವ ಲೆಕ್ಕಾಚಾರ ಆರಂಭವಾಗಿದೆ. ಅಕ್ಟೋಬರ್ 21 ರಂದು ಮತದಾನ ನಡೆಯಲಿದ್ದು, 24 ರಂದು ಫಲಿತಾಂಶ ಪ್ರಕಟವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
Hunasagi: ನಕಲಿ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಗಳಿಂದ ದಾಳಿ
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.