ಗುರುಪೂರ್ಣಿಮೆ ಉತ್ಸವ: ಅದ್ಧೂರಿ ಪಲ್ಲಕ್ಕಿ ಮೆರವಣಿಗೆ
Team Udayavani, Jul 19, 2019, 4:12 PM IST
ಸೊಲ್ಲಾಪುರ: ತೀರ್ಥಕ್ಷೇತ್ರ ಅಕ್ಕಲಕೋಟ ನಗರದ ಸ್ವಾಮಿ ಸಮರ್ಥ ಅನ್ನಛತ್ರ ಮಂಡಳದ 32ನೇ ವಾರ್ಷಿಕೋತ್ಸವ ಹಾಗೂ ಗುರುಪೂರ್ಣಿಮೆ ಉತ್ಸವ ಅಂಗವಾಗಿ ನಡೆದ ಪಲ್ಲಕಿ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು. ಈ ವೇಳೆ ಕೇರಳದ ‘ತೈಯಂ ಮೇಳ’ ನೃತ್ಯ ಎಲ್ಲರ ಗಮನ ಸೆಳೆಯಿತು.
ಅನ್ನಛತ್ರ ಮಂಡಳದ ಸಂಸ್ಥಾಪಕ ಅಧ್ಯಕ್ಷ ಜನ್ಮೇಜಯರಾಜೆ ಭೋಸಲೆ ನೇತೃತ್ವದಲ್ಲಿ ಅನ್ನಛತ್ರದಲ್ಲಿ ಸಂಜೆ 5ಗಂಟೆಗೆ ಚಿತ್ರನಟ ಸ್ವಪ್ನೀಲ ಜೋಶಿ ಮತ್ತು ಚಿತ್ರನಟಿ ಆಶಾವರಿ ಜೋಶಿ, ಪಲ್ಲಕ್ಕಿ ಉತ್ಸವ ಪ್ರಮುಖ ಅಣ್ಣಾ ಥೋರಾತ, ಅತುಲ್ ಬೇಹರೆ, ಸಂದೀಪ ಫುಗೆ ಹಾಗೂ ಮಂಡಳದ ಪ್ರಮುಖ ಕಾರ್ಯಕಾರಿ ವಿಶ್ವಸ್ತ ಅಮೋಲರಾಜೆ ಭೊಸಲೆ ಅವರು ಪಲ್ಲಕ್ಕಿ ಹಾಗೂ ರಥೋತ್ಸವ ಮೆರವಣಿಗೆಗೆ ಚಾಲನೆ ನೀಡಿದರು.
ಅನ್ನಛತ್ರದಿಂದ ಪಟ್ಟಣದ ಮುಖ್ಯರಸ್ತೆಗಳಲ್ಲಿ ಪಲ್ಲಕ್ಕಿ ಉತ್ಸವ ಅದ್ದೂರಿಯಾಗಿ ನಡೆಯಿತು. ಮೆರವಣಿಗೆಯಲ್ಲಿ ಪಟ್ಟಣದ ಸಾವಿರಾರು ಮಹಿಳೆಯರು, ವಯೋವೃದ್ಧರು ಹಾಗೂ ಚಿಕ್ಕ ಮಕ್ಕಳು ಭಾಗವಹಿಸಿದ್ದರು. ಅಲ್ಲದೇ ಕೇರಳದ ‘ತೈಯಂ ಮೇಳ’ ವಿಶೇಷ ನೃತ್ಯ ಮೂಲಕ ವೈಭವದಿಂದ ಪಲ್ಲಕ್ಕಿ ಉತ್ಸವ ಆಚರಿಸಲಾಯಿತು. ಕೇರಳದಿಂದ ಸುಮಾರು 25 ಜನರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ವಿಶೇಷ ವೇಶಭೂಷಣದೊಂದಿಗೆ ಮತ್ತು ವಿವಿಧ ದೇವಿಗಳ ರೂಪದಲ್ಲಿ ನೃತ್ಯ ಸಾದರ ಪಡಿಸಿದರು.
ಕೇರಳದ ರಾಜೀವ ಎಲ್. ಕುಂದರ್, ವಂಶಿಕಾ ಆರ್ಟ್‌ಸ್, ಗುರುವಾಯನ್ ಕೆರೆ ಮತ್ತು ಮಂಡಳದ ಕಾರ್ಯದರ್ಶಿ ಶ್ಯಾಮ ಮೋರೆ, ಉಪಾಧ್ಯಕ್ಷ ಅಭಯ ಖೋಬರೆ, ಲಾಲಾ ರಾಠೊಡ, ನಗರ ಸೇವಕ ಚೇತನ ನರೂಟೆ, ಶೈಲೇಶ ಪೀಸೆ, ದೀಲಿಪ ಸಿದ್ಧೆ, ಪ್ರಶಾಂತ ಸಾಠೆ, ಲಕ್ಷ್ತ್ರಣ ಪಾಟೀಲ, ಸಂತೋಷ ಭೋಸಲೆ, ಮಹಾಂತೇಶ ಸ್ವಾಮಿ, ಅಪ್ಪಾ ಹಂಚಾಟೆ, ರೋಹಿತ ಖೋಬರೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.