ಪಂಢರಪುರ ವಿಠ್ಠಲನಿಗೆ ಫಡ್ನವೀಸ್ ಮಹಾಪೂಜೆ
•ಸುಭಿಕ್ಷ ಮಹಾರಾಷ್ಟ್ರಕ್ಕಾಗಿ ಮುಖ್ಯಮಂತ್ರಿ ವಿಶೇಷ ಪ್ರಾರ್ಥನೆ
Team Udayavani, Jul 13, 2019, 11:02 AM IST
ಸೊಲ್ಲಾಪುರ: ಆಷಾಢ ಏಕಾದಶಿ ನಿಮಿತ್ತ ಪಂಢರಪುರ ವಿಠuಲ-ರುಕ್ಮಿಣಿಯ ಸರ್ಕಾರಿ ಮಹಾಪೂಜೆ ನೆರವೇರಿಸಿದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಪತ್ನಿ ಅಮೃತಾ ಫಡ್ನವೀಸ್ ಅವರನ್ನು ಸನ್ಮಾನಿಸಲಾಯಿತು.ಮತ್ತು ಪತ್ನಿ ಅಮೃತಾ ಫಡ್ನವೀಸ್ ಅವರನ್ನು ಸನ್ಮಾನಿಸಲಾಯಿತು.
ಸೊಲ್ಲಾಪುರ: ಬರಗಾಲ ಮುಕ್ತ ಮಹಾರಾಷ್ಟ್ರಕ್ಕಾಗಿ ರಾಜ್ಯ ಸರ್ಕಾರ ಕೈಗೊಂಡಿರುವ ಪ್ರಯತ್ನಗಳಿಗೆ ನಿಸರ್ಗದ ಸಾಥ್ ದೊರೆಯಲಿ, ರಾಜ್ಯದಲ್ಲಿ ಸಾಕಷ್ಟು ಮಳೆಯಾಗುವ ಮೂಲಕ ರೈತರಿಗೆ ಸುಖವಾಗಲಿ, ರೈತರಿಗೆ ನಿನ್ನ ಆಶೀರ್ವಾದ ಸದಾ ಇರಲಿ ಮತ್ತು ಮಹಾರಾಷ್ಟ್ರ ಸುಜಲಾಂ, ಸುಫಲಾಂವಾಗಲಿ ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಪಂಢರಪುರ ವಿಠuಲನಲ್ಲಿ ಪಾರ್ಥಿಸಿದರು.
ಆಷಾಢ ಏಕಾದಶಿ ಅಂಗವಾಗಿ ಶುಕ್ರವಾರ ಬೆಳಗ್ಗೆ ಪಂಢರಪುರ ವಿಠuಲ-ರುಕ್ಮಿಣಿಯ ಸರ್ಕಾರಿ ಮಹಾಪೂಜೆಯನ್ನು ರಾಜ್ಯದ ಮುಖ್ಯಮಂತ್ರಿ ದೇವೆಂದ್ರ ಫಡ್ನವೀಸ್, ಪತ್ನಿ ಅಮೃತಾ ಫಡ್ನವೀಸ್ ನೆರವೇರಿಸಿದರು.
ಸರಕಾರಿ ಮಹಾಪೂಜೆ ನೆರವೇರಿಸಿದ ನಂತರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯದ ರೈತರು ಸುಖವಾಗಲಿ, ರೈತರು ಸುಖವಾಗಿದ್ದರೇ ರಾಜ್ಯವು ಸುಖವಾಗಿರಲು ಸಾಧ್ಯ. ಬರಗಾಲ ಮುಕ್ತ ಮಹಾರಾಷ್ಟ್ರಕ್ಕಾಗಿ ರಾಜ್ಯ ಸರ್ಕಾರ ಅನೇಕ ಯೋಜನೆಗಳನ್ನು ಕೈಗೊಂಡಿದೆ. ರಾಜ್ಯ ಸರಕಾರದ ಪ್ರಯತ್ನಗಳಿಗೆ ನಿಸರ್ಗದ ಸಹಾಯ ಮಹತ್ವದ್ದಾಗಿದೆ. ಈಗಾಗಲೇ ರಾಜ್ಯ ಸರಕಾರ ಮರಗಳನ್ನು ಬೆಳೆಸುವ ಉದ್ದೇಶ ಹೊಂದಿದೆ. ಗಿಡ-ಮರಗಳಿಂದ ಬರಗಾಲ ಮುಕ್ತವಾಗಲಿದೆ. ಹೀಗಾಗಿ ಆಷಾಢ ಏಕಾದಶಿಯಂದು ಪಂಢರಪುರ ವಿಠuಲನ ದರ್ಶನಕ್ಕೆ ಬರುವ ಪ್ರತಿಯೊಬ್ಬ ಭಕ್ತರು ಒಂದೊಂದು ಮರಗಳನ್ನು ಬೆಳಸುವ ಸಂಕಲ್ಪ ಮಾಡಬೇಕು ಎಂದು ಹೇಳಿದರು.
ಭಾಗವತ ಧರ್ಮ ವಾರಕರಿ ಸಂಪ್ರದಾಯವು ಮಹಾರಾಷ್ಟ್ರಕ್ಕೆ ವೈಭವದ ಸಾಂಸ್ಕೃತಿಕ ಪರಂಪರೆ ಹಾಕಿಕೊಟ್ಟಿದೆ. ಈ ಪರಂಪರೆಯಿಂದ ಶಕ್ತಿ, ಸಮತೆ, ಸಂಸ್ಕಾರಗಳು ಮಾನವ ಜೀವನಕ್ಕೆ ಕೊಡುಗೆಯಾಗಿವೆ. ಪ್ರತಿಯೊಂದು ಆಷಾಢ ವಾರಿವು ನಿರ್ಮಲಯುತ ವಾರಿಗಾಗಿ ನಾನು ರಾಜ್ಯ ಸರ್ಕಾರದಿಂದ ಪ್ರಯತ್ನಿಸುವುದಾಗಿ ಹೇಳಿದರು.
ಇಂದು ಸರ್ಕಾರಿ ಪೂಜೆ ಸಲ್ಲಿಸುವ ಅವಕಾಶ ಸಿಕ್ಕಿದ್ದು ನನ್ನ ಜೀವನದಲ್ಲಿನ ಭಾಗ್ಯದ ದಿನವಾಗಿದೆ. ಇದರಿಂದ ಸಿಕ್ಕಿರುವ ಶಕ್ತಿಯನ್ನು ರಾಜ್ಯದ ಸಮಾನ್ಯ ಜನರ ಕಲ್ಯಾಣಕ್ಕಾಗಿ ಉಪಯೋಗಿಸಲಾಗುವುದು. ಅಲ್ಲದೆ ಮುಂದಿನ ಸರಕಾರಿ ಪೂಜೆಯೂ ಸಲ್ಲಿಸುವ ಅವಕಾಶ ದೊರೆಯಲಿ ಎಂದ ಅವರು, ಪಂಢರಪುರ ಅಭಿವೃದ್ಧಿಗಾಗಿ ಪ್ರಯತ್ನಿಸುವುದಾಗಿ ಹೇಳಿದರು.
ಗ್ರಾಮೀಣ ಪ್ರದೇಶದಲ್ಲಿ ವಿವಿಧ ನೀರಾವರಿ ಯೋಜನೆಗಳ ಕಾಮಗಾರಿ ಜತೆಗೆ, ವಿದ್ಯಾರ್ಥಿಗಳಿಗೆ ಪ್ರವೇಶ ಶುಲ್ಕ, ಉದ್ಯೋಗ ಯೋಜನೆ, ಸಾಲಮನ್ನಾ ಸೇರಿದಂತೆ ವಿವಿಧ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ರಾಜ್ಯ ಸರಕಾರ ಅಭಿವೃದ್ಧಿಗೆ ಹೆಚ್ಚು ಮಹತ್ವ ನೀಡಲಾಗಿದೆ. ಅಲ್ಲದೆ ಮರಾಠಾ ಸಮುದಾಯಕ್ಕೆ ಈಗಾಗಲೇ ರಾಜ್ಯ ಸರ್ಕಾರ ಮೀಸಲಾತಿ ನೀಡಿಲಾಗಿದೆ. ಇದರಿಂದ ಮರಾಠ ಸಮುದಾಯದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.
ಈ ವೇಳೆ ವಿಠuಲ-ರುಕ್ಮಿಣಿ ಮಂದಿರ ಸಮಿತಿ ವತಿಯಿಂದ ಮುಖ್ಯಮಂತ್ರಿಗಳನ್ನು ಸನ್ಮಾನಿಸಲಾಯಿತು. ಪಂಢರಪುರ ವಾರಿಗೆ ಬರುವ ಭಕ್ತರಿಗೆ ಸಕಲ ಸೌಲಭ್ಯ ಒದಗಿಸುವ ಕೆಲಸವನ್ನು ಜಿಲ್ಲಾ ಪ್ರಶಾಸನ ಮಾಡಿದೆ. ವಾರಕರಿಗಳಿಗೆ ಯಾವುದೇ ಸಮಸ್ಯೆ ಬರದಂತೆ ನೋಡಿಕೊಂಡಿರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ವಿಜಯಕುಮಾರ ದೇಶಮುಖ ಹೇಳಿದರು.
ಸೊಲ್ಲಾಪುರ ಜಿಲ್ಲಾ ಉಸ್ತುವಾರಿ ಸಚಿವ ವಿಜಯಕುಮಾರ ದೇಶಮುಖ, ಶಿಕ್ಷಣ ಸಚಿವ ವಿನೋದ ತಾವಡೆ, ವಿಧಾನ ಪರಿಷದ್ ಉಪ ಸಭಾಪತಿ ನೀಲಮ್ ಗೋಹ್ರೆ, ಮಾಢಾ ಸಂಸದ ರಣಜೀತಸಿಂಹ ನಿಂಬಾಳಕರ್, ಮಂದಿರ ಸಮಿತಿಯ ಸಭಾಪತಿ ಹಾಗೂ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಭೋಸಲೆ ಸೇರಿದಂತೆ ಮೊದಲಾದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!
MLA Basavaraj Mattimud: ನನ್ನ ಹತ್ಯೆಗೆ ಸೊಲ್ಲಾಪುರದ ರೌಡಿಗಳಿಗೆ ಸುಪಾರಿ: ಶಾಸಕ
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Protest: ಅಂಬೇಡ್ಕರ್ ಕುರಿತು ಅಮಿತ್ ಶಾ ಹೇಳಿಕೆ ಖಂಡಿಸಿ ಗದಗ, ಕಲಬುರಗಿ ಬಂದ್
CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Madikeri; ಜಾತ್ರೋತ್ಸವದ ವೇಳೆ ಗುಂಪು ಸಂಘರ್ಷ: ಕಟ್ಟೆಮಾಡು ಗ್ರಾಮದಲ್ಲಿ ನಿಷೇಧಾಜ್ಞೆ
Udupi: ಗೀತಾರ್ಥ ಚಿಂತನೆ-140: ಮಕ್ಕಳಲ್ಲಿ “ಇಗೋ’ ಏರಿಕೆ, ಪಾಲಕರಲ್ಲಿ ಗೌರವ ಇಳಿಕೆ
Kasaragod; ಬಸ್-ಕಾರು ಢಿಕ್ಕಿ: ಇಬ್ಬರ ಸಾವು
South Korea Plane Crash: ಛಿದ್ರಗೊಂಡ ದೇಹಗಳು, ಕೊನೇ ಸಂದೇಶ…
Israel ಪ್ರಧಾನಿ ಬೆಂಜಮಿನ್ ನೆತನ್ಯಾಹುಗೆ ಪ್ರಾಸ್ಟೇಟ್ ಶಸ್ತ್ರಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.