ಮಹಾ ಉತ್ಸವ ಸಂಭ್ರಮಿಸಿ
ಶೇ. 90 ಮತದಾನವಾದ ಗ್ರಾಪಂ ಅಧಿಕಾರಿ-ಸಿಬ್ಬಂದಿಗೆ ಸನ್ಮಾನ
Team Udayavani, Apr 14, 2019, 11:07 AM IST
ಸೊಲ್ಲಾಪುರ: ಇಂದಿರಾಗಾಂಧಿ ಸ್ಟೇಡಿಯಂನಲ್ಲಿ ನಡೆದ ಮತ ಜಾಗೃತಿ ಅಭಿಯಾನದಲ್ಲಿ ಮಾನವ ಸರಪಳಿ ನಿರ್ಮಿಸಿ ಜಾಗೃತಿ ಮೂಡಿಸಲಾಯಿತು.
ಸೊಲ್ಲಾಪುರ: ದೇಶದ ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವದ ಮಹಾ ಉತ್ಸವ ಸಂಭ್ರಮಿಸುವುದರ ಜೊತೆಗೆ ಬೇರೆಯವರಿಗೂ ಮತದಾನ ಮಾಡಲು ಪ್ರೋತ್ಸಾಹಿಸಬೇಕೆಂದು ಮತ ಜಾಗೃತಿ ಅಧಿಕಾರಿ ಹಾಗೂ ಜಿ.ಪಂ. ಮುಖ್ಯಕಾರ್ಯಕಾರಿ ಅಧಿಕಾರಿ ಡಾ| ರಾಜೇಂದ್ರ ಭಾರೂಢ ಮತದಾರರಿಗೆ ಕರೆ ನೀಡಿದರು.
ಸೊಲ್ಲಾಪುರ ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಏ.18 ರಂದು ಮತ್ತು ಮಾಢಾ ಲೋಕಸಭೆ ಚುನಾವಣೆ ಸಲುವಾಗಿ ಏ.23 ರಂದು ಮತದಾನ ನಡೆಯಲಿರುವ ನಿಮಿತ್ತ ನಗರದ ಇಂದಿರಾಗಾಂಧಿ ಸ್ಟೇಡಿಯಂನಲ್ಲಿ ಹಮ್ಮಿಕೊಂಡಿದ್ದ ಮತ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಿಇಒ ಡಾ| ರಾಜೇಂದ್ರ ಭಾರೂಢ ಮಾತನಾಡಿ, ಯುವಕರು ದೇಶದ ಪ್ರಜಾಪ್ರಭುತ್ವದ ಮಹಾ ಉತ್ಸವದಲ್ಲಿ ಪಾಲ್ಗೊಳ್ಳುವ ಮೂಲಕ ಯಾವುದೆ ಆಮಿಷ ಮತ್ತು ಒತ್ತಡಕ್ಕೆ ಒಳಗಾಗದೇ ನಿರ್ಭಯವಾಗಿ ತಮ್ಮ ಪವಿತ್ರವಾದ ಮತವನ್ನು ಚಲಾಯಿಸಬೇಕು.
ದಿವ್ಯಾಂಗರಿಗೆ ಸಹಕರಿಸಲು ಸ್ವಯಂಸೇವಕರಾಗಿ ಕಾರ್ಯ ನಿರ್ವಹಿಸಬೇಕು. ಅಲ್ಲದೆ ಶೇಕಡಾ 90ಕ್ಕೂ ಮೇಲ್ಪಟ್ಟು ಮತದಾನ ಮಾಡಿದ ಆಯಾ ಗ್ರಾಪಂ ಚುನಾವಣೆ ಅಧಿ ಕಾರಿ ಮತ್ತು ಸಿಬ್ಬಂದಿಗಳನ್ನು ಸನ್ಮಾನಿಸಲಾಗುವದು ಎಂದು ಹಳಿದರು.
ಜಿಲ್ಲಾಧಿಕಾರಿ ಡಾ| ರಾಜೇಂದ್ರ ಭೋಸಲೆ ಮಾತನಾಡಿ, ಮತದಾನ ಪ್ರತಿಯೊಬ್ಬ ಪ್ರಜೆಯ ಪವಿತ್ರ ನಾಗರಿಕ ಸೇವೆಯಾಗಿದ್ದು, ಪ್ರಜಾಪ್ರಭುತ್ವ ಬಲಿಷ್ಠಗೊಳಿಸಲು ಪ್ರತಿಯೊಬ್ಬರೂ ಕಡ್ಡಾಯವಾಗಿ ಮತ ಚಲಾಯಿಸಬೇಕು. ಅಲ್ಲದೆ ಮತದಾರರು
ಮತದಾನದ ದಿವಸ ಮತಗಟ್ಟೆಗಳಿಗೆ ಹೋಗುವ ಮೂಲಕ ತಮ್ಮ ಬಂಧು-ಬಳಗ ಹಾಗೂ ಆಪ್ತ ಸ್ನೇಹಿತರಿಗೆ ಮತದಾನ ಮಾಡಲು ಪ್ರೋತ್ಸಾಹಿಸಬೇಕು
ಎಂದು ಹೇಳಿದರು. ಪೊಲೀಸ್ ಆಯುಕ್ತ ಮಹಾದೇವ ತಾಂಬಡೆ, ಜಿಲ್ಲಾ ಪೊಲೀಸ್ ಅಧಿಕ್ಷಕ ಮನೋಜ ಪಾಟೀಲ, ಕ್ಷೇತ್ರ ಅಧಿ ಕಾರಿ ಅಂಕುಶ ಚವ್ಹಾಣ ಮತ್ತಿತರರಿದ್ದರು.
ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ಸ್ವೀಪ್ ಸಮಿತಿ ವತಿಯಿಂದ 45 ಅಡಿ ಎತ್ತರದ ಭಾರತ ದೇಶದ ತ್ರಿವರ್ಣ ಧ್ವಜ ‘ಮತ ಜಾಗೃತಿ’ ಲೋಗೋ ತಯಾರಿಸಿದ್ದು ನೋಡುಗರ ಮನಸೆಳೆಯಿತು. ಮತ ಜಾಗೃತಿಗಾಗಿ ಸುಮಾರು ಎಂಟು ಸಾವಿರಕ್ಕೂ ಹೆಚ್ಚಿನ ನಾಗರಿಕರು ಮತ್ತು ವಿದ್ಯಾರ್ಥಿಗಳು ಮಾನವ ಸರಪಳಿ ನಿರ್ಮಿಸಿ ಪ್ರತಿಜ್ಞೆ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
MUST WATCH
ಹೊಸ ಸೇರ್ಪಡೆ
Kollywood: ಬಹಿರಂಗ ಪತ್ರ ಬರೆದು ಧನುಷ್ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.