ಚಂದ್ರಗುತ್ತಿಯ ಜೀವ ವೈವಿಧ್ಯಕ್ಕೆ ಕಾಯಕಲ್ಪ
ಅಪರೂಪದ ಪ್ರಾಣಿಗಳ ಬಗ್ಗೆ ಜಾಗೃತಿ-ಅರಿವು ಕಾರ್ಯಕ್ರಮ
Team Udayavani, Oct 16, 2019, 12:49 PM IST
ಎಚ್.ಕೆ.ಬಿ. ಸ್ವಾಮಿ
ಸೊರಬ: ಐತಿಹಾಸಿಕ, ಪುರಾಣ ಪ್ರಸಿದ್ಧ ಹಾಗೂ ಹಲವು ಜೀವ ಸಂಕುಲಗಳನ್ನು ಹೊಂದಿರುವ ತಾಲೂಕಿನ ಚಂದ್ರಗುತ್ತಿಯ ಜೀವ ವೈವಿದ್ಯತೆಯ ಮೇಲೆ ಬೆಳಕು ಚೆಲ್ಲುವ ಯತ್ನ ನಡೆದಿದೆ.
ಅಪರೂಪದ ಪ್ರಾಣಿಗಳ ಬಗ್ಗೆ ಜಾಗೃತಿ ಹಾಗೂ ಪಾರಂಪರಿಕ ಜ್ಞಾನಗಳ ದಾಖಲೀಕರಣ ಮತ್ತು ಸಸ್ಯ ಸಂಪತ್ತಿನ ಕುರಿತು ಅರಿವು ಮೂಡಿಸುವ ಯತ್ನ ನಡೆಸಲಾಗುತ್ತಿದೆ. ಸುಮಾರು 26,667 ಹೆಕ್ಟೇರ್ ಅರಣ್ಯ ಪ್ರದೇಶವನ್ನೊಳಗೊಂಡ ಸೊರಬ ತಾಲೂಕಿನ ಭಾಗವನ್ನು ಮಲೆನಾಡು, ಅರೆ ಮಲೆನಾಡೆಂಡು ವಿಭಾಗಿಸಬಹುದಾಗಿದೆ. ಇಲ್ಲಿ ಪ್ರಮುಖವಾಗಿ ನಿತ್ಯ ಹಸಿರು ಮತ್ತು ಅರೆ ನಿತ್ಯ ಹಸಿರು ಅರಣ್ಯ (ಕಾನು), ನಿತ್ಯ ಹಸಿರು ಮತ್ತು ಅರೆ ನಿತ್ಯ ಹಸಿರನ್ನುಳ್ಳ ನಶಿಸಿರುವ ಹಂತ, ಎಲೆ ಉದುರುವ ಕಾಡು, ಗಿಡ ಮತ್ತು ಮರಗುಳುಳ್ಳ ಹುಲ್ಲು ಬನಿ ಜಾಡಿ (ಹುಲ್ಲು ಗಾವಲು) ಎಂದು ಇಬ್ಭಾಗಿಸಬಹುದಾಗಿದೆ.
ಚಂದ್ರಗುತ್ತಿಯ ಸುತ್ತಲಿನ ಪ್ರದೇಶ ಹಾಗೂ ಇಲ್ಲಿನ ಐತಿಹಾಸಿಕ ಕೋಟೆಯ ಪ್ರದೇಶವನ್ನು ಅಧ್ಯಯನಕ್ಕೆ ಬಳಸಿಕೊಳ್ಳಲಾಗಿದೆ. ಸಂಶೋಧಕ ಶ್ರೀಪಾದ ಬಿಚ್ಚುಗತ್ತಿ ನೇತೃತ್ವದಲ್ಲಿ ವಕೀಲ ಎಚ್.ಎಂ. ಪ್ರಶಾಂತ ಹುನವಳ್ಳಿ, ವಾಜಗಾರ್‌ನ ಪರಿಸರ ತಜ್ಞ, ಲೇಖಕ ಉಮಾಪತಿ ಭಟ್, ಕಂಪ್ಯೂಟರ್ ಶಿಕ್ಷಕ ವಸಂತ್ ಬಾಪಟ್ ಪಾಲ್ಗೊಂಡು ವರದಿಯನ್ನು ರಚಿಸಿದ್ದಾರೆ.
ಚಂದ್ರಗುತ್ತಿಯ ವರದಾ ಗ್ರಾಮೀಣಾಭಿವೃದ್ಧಿ ಟ್ರಸ್ಟ್, ವೃಕ್ಷಲಕ್ಷ ಆಂದೋಲನ ಸೇರಿ ವಿವಿಧ ಸ್ಥಳೀಯ ಸಂಸ್ಥೆಯವರು ಈ ಕಾರ್ಯಕ್ಕೆ ಸಹಕಾರ ನೀಡಿದ್ದಾರೆ ಭೂ ವೈವಿಧ್ಯತೆ, ಜಲ ವೈವಿಧ್ಯತೆ ಅವುಗಳ ಉಪ ವಿಧಗಳು, ಅಧ್ಯಯನ ಪ್ರದೇಶ, ಇತಿಹಾಸದ ವೈವಿಧ್ಯತೆ, ಜನಪದ ಜ್ಞಾನ, ಪ್ರಾಣಿ ವೈವಿಧ್ಯ, ಸಸ್ಯ ವೈವಿಧ್ಯ ಇವು ಪ್ರಮುಖ ಘಟಕಗಳಾಗಿವೆ. ಸುಮಾರು 8-9 ತಿಂಗಳ ಶ್ರಮದ ಫಲವಾಗಿ ವರದಿ ತಯಾರಾಗಿದೆ.
ಊಹೆ, ಕಲ್ಪಿತ ವಿಚಾರಗಳನ್ನು ಗಮನಿಸಿ, ದಾಖಲಾತಿಯಲ್ಲಿ ಕೈ ಬಿಡಲಾಗಿದೆ. ಆದರೆ ಕೆಲವು ಅಗತ್ಯ, ಔಚಿತ್ಯತೆ ಕಂಡು ಬಂದ ಹಿನ್ನೆಲೆಯಲ್ಲಿ ಹೆಚ್ಚು ವಿವರವುಳ್ಳ ಲೇಖನಗಳನ್ನು ಬಳಸಿಕೊಳ್ಳಲಾಗಿದೆ ಎಂಬುದು ಗಮನಾರ್ಹ ಸಂಗತಿ. ಕ್ಷೀಣಿಸುತ್ತಿರುವ ಜೀವ ಸಂಕುಲಗಳು: ತರಿ ಜಮೀನಿನ ಬೆಳೆಗಳಿಗೆ ಹಾಗೂ ಖುಷ್ಕಿ ಬೇಸಾಯಕ್ಕೆ ಹೆಚ್ಚು ರಾಸಾಯನಿಕ ಬಳಸುತ್ತಿರುವುದರಿಂದ ಕಪ್ಪೆಗಳ ಸಂಕುಲ ವಿನಾಶದಂಚಿಗೆ ತಲುಪಿವೆ. ಕಪ್ಪೆ, ಕೇರೆ ಹಾವುಗಳ ಸಂಖ್ಯೆಯೂ ತಗ್ಗಿದೆ. ಹಾಗೆಯೇ ಕಾಗೆ, ಗುಬ್ಬಿಗಳ ಸಂತತಿಯೂ ವಿರಳವಾಗಿದ್ದು, ಹದ್ದುಗಳು ಇಲ್ಲವೇ ಇಲ್ಲ ಎನ್ನುವಂತಾಗಿದೆ. ಹಲವು ಕಾಡು ಪ್ರಾಣಿಗಳು ವಿರಳವಾಗಿವೆ. ಇವುಗಳ ಅಧ್ಯಯನದಲ್ಲಿ ಸುಮಾರು 350ಕ್ಕೂ ಹೆಚ್ಚು ವಿಧದ ಸಸ್ಯ ಸಂಕುಲಗಳು ಕಂಡು ಬಂದಿವೆ.
ಅಪರೂಪದ ಸಸ್ಯರಾಶಿ, ಔಷಧೀಯ ಸಸ್ಯಗಳು, ಬೆಲೆಬಾಳುವ ಮರಮುಟ್ಟುಗಳು ನಾಶವಾಗುತ್ತಿವೆ. ಜೊತೆಯಲ್ಲಿ ಗಣಿಗಾರಿಕೆಯಿಂದ ಸಾಕಷ್ಟು ದುಷ್ಪರಿಣಾಮ ಎದುರಾಗಿದ್ದು, ಭವಿಷ್ಯದಲ್ಲಿ ಜನತೆ ಸಾಕಷ್ಟು ಸಮಸ್ಯೆಗಳು ಎದುರಾಗಬಹುದು. ಈ ನಿಟ್ಟಿನಲ್ಲಿ ಹಲವು ಪ್ರಮುಖ ಮಾಹಿತಿಗಳು ಅಧ್ಯಯನದಿಂದ ಬೆಳಕಿಗೆ ಬಂದಿದೆಯಾದರೂ, ಇದು ಆತಂಕಕಾರಿ ವಿಷಯವೇ ಸರಿ. ನಮ್ಮ ಭೂಮಿ, ನಮ್ಮ ನೆಲೆ, ನಮ್ಮ ಜಲ, ನಮ್ಮ ಆವರಣದ ಕುರಿತು ಇರಬೇಕಾದ ಅವಿನಾಭಾವ ಸಂಬಂಧ ಕಳಚಿಕೊಂಡಿದೆ. ಈ ಎಲ್ಲ ಹಿನ್ನೆಲೆಯಲ್ಲಿ ಇಂದು ಋಣಾತ್ಮಕ ಚಿಂತನೆ ಬದಿಗಿಟ್ಟು, ಧನಾತ್ಮಕ ಚಿಂತನೆ, ಆಲೋಚನೆ ನಡೆಸುವ ನಿಟ್ಟಿನಲ್ಲಿ ಹೆಜ್ಜೆ ಹಾಕಬೇಕಿದೆ. ಈ ನಿಟ್ಟಿನಲ್ಲಿ ಪರಿಸರ ಜಾಗೃತಿ ಮೂಡಿಸುವ ಜೊತೆಗೆ ರ್ಕಾರಕ್ಕೆ ಎಚ್ಚರಿಕೆಯ ಗಂಟೆಯನ್ನು ವರದಿಯಲ್ಲಿ ತಿಳಿಸಲಾಗುತ್ತಿದೆ ಎಂದರೆ ತಪ್ಪಾಗಲಾರದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ
Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.