ಕಾಂಗ್ರೆಸ್ ಮುಕ್ತ ಭಾರತ ಸನ್ನಿಹಿತ
•ಪ್ರಧಾನಿ ಮೋದಿ ನೇತೃತ್ವದಲ್ಲಿ ಜಗತ್ತೇ ಅಚ್ಚರಿಪಡುವಂತೆ ದೇಶದ ಅಭಿವೃದ್ಧಿ: ಯಡಿಯೂರಪ್ಪ
Team Udayavani, Jun 3, 2019, 12:38 PM IST
ಸೊರಬ: ಸಂಸದರಾಗಿ ಆಯ್ಕೆಯಾದ ಬಿ.ವೈ. ರಾಘವೇಂದ್ರ ಅವರಿಗೆ ತಾಲೂಕು ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮವನ್ನು ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಿದರು.
ಸೊರಬ: ಎಲ್ಲಾ ಸಮಾಜಗಳ ಮತಗಳನ್ನೂ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಡೆಯುವ ಮೂಲಕ ಶೇ. 52 ಮತ ಗಳಿಸಿದೆ. ಕಾಂಗ್ರೆಸ್ ಶೇ. 30 ಮತ ಗಳಿಸುವ ಮೂಲಕ ದಯನೀಯ ಸ್ಥಿತಿ ತಲುಪಿದೆ. ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ ಕಾಂಗ್ರೆಸ್ ಮುಕ್ತ ಭಾರತ ಕನಸು ಸನ್ನಿಹಿತವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.
ಹೊಸಪೇಟೆ ಬಡಾವಣೆಯ ದಿವಾಕರ ಭಾವೆ ತೋಟದ ಆವರಣದಲ್ಲಿ ನಡೆದ ಅಭಿನಂದನಾ ಸಮಾರಂಭದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಅಲ್ಪಸಂಖ್ಯಾತರು ಬಿಜೆಪಿಗೆ ಮತ ನೀಡಿದ್ದಾರೆ. ಲೋಕಸಭಾ ಚುನಾವಣೆಯ ಫಲಿತಾಂಶದ ಮೂಲಕ ರಾಜ್ಯದ ವಿಧಾನ ಸಭೆಯ 171 ಕ್ಷೇತ್ರಗಳಲ್ಲಿ ಬಿಜೆಪಿ ಮೊದಲ ಸ್ಥಾನದಲ್ಲಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರ ಆಳ್ವಿಕೆಯಲ್ಲಿ ಜಗತ್ತೇ ಅಚ್ಚರಿಪಡುವಂತೆ ಭಾರತ ಅಭಿವೃದ್ಧಿ ಹೊಂದಲಿದೆ. ದೇಶದ ಎಲ್ಲ ರೈತರಿಗೂ ವಾರ್ಷಿಕ ಮೂರು ಸಾವಿರ ರೂಪಾಯಿ ಹಾಗು 60 ವರ್ಷ ದಾಟಿದ ರೈತರಿಗೆ ನಿವೃತ್ತಿ ವೇತನ ಮತ್ತು ಬಡ ವಿದ್ಯಾರ್ಥಿಗಳಿಗೆ ಕೊಡುವ ಸ್ಕಾಲರ್‌ಶಿಪ್ ಅನ್ನು ಹೆಚ್ಚಿಸುವ ಮೂಲಕ ತನ್ನ ಮೊದಲನೆಯ ಮಂತ್ರಿ ಮಂಡಲದ ಸಭೆಯಲ್ಲಿಯೇ ಸರ್ಕಾರ ಬಡವರ, ರೈತರ ಪರವಾಗಿದೆ ಎಂದು ದೃಢಪಡಿಸಿದ್ದಾರೆ ಎಂದರು.
ರಾಜ್ಯದಲ್ಲಿ ದೇವೇಗೌಡ, ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ ಮತ್ತು ಕೋಲಾರದ ಮುನಿಯಪ್ಪ ಈ ಬಾರಿಯ ಚುನಾವಣೆಯಲ್ಲಿ ಸೊಲುತ್ತಾರೆಂದು ಖಚಿತವಾಗಿ ತಿಳಿಸಿದ್ದೆ. ಅದರಂತೆಯೇ ರಾಜ್ಯದ ಜನತೆ ಬಿಜೆಪಿಗೆ 25 ಸ್ಥಾನಗಳನ್ನು ನೀಡುವುದರೊಂದಿಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುಮಲತಾ ಜಯ ಗಳಿಸುವ ಮೂಲಕ ಅಭೂತಪೂರ್ವ ಬೆಂಬಲ ನೀಡಿದ್ದಾರೆ. ರಾಜ್ಯದ ಎಲ್ಲ ಮೀಸಲು ಕ್ಷೇತ್ರಗಳೂ ಬಿಜೆಪಿ ಪಾಲಾಗಿವೆ ಎಂದರು.
ಈ ಬಾರಿಯ ಲೋಕಸಭಾ ಚುನಾವಣೆ ಕುಮಾರ್‌ಬಂಗಾರಪ್ಪ ಅವರಿಗೆ ಅಗ್ನಿಪರಿಕ್ಷೆಯಾಗಿದ್ದು, ತಾಲೂಕಿನಲ್ಲಿ ಬಿಜೆಪಿಗೆ ಹೆಚ್ಚು ಮತ ಗಳಿಸುವ ಮೂಲಕ ಅಭಿನಂದನೆಗೆ ಪಾತ್ರರಾಗಿದ್ದಾರೆ. ಜಿಲ್ಲೆಯಲ್ಲಿ ಏಳು ಜನ ಬಿಜೆಪಿ ಶಾಸಕರಿದ್ದು ರಾಜ್ಯದಲ್ಲಿಯೇ ಜಿಲ್ಲೆಯನ್ನು ಮಾದರಿಯಾಗಿಸುವುದು ನಮ್ಮ ಗುರಿಯಾಗಿದೆ ಎಂದರು. ನೂತನ ಸಂಸದ ರಾಘವೇಂದ್ರ ಮಾತನಾಡಿ, ಚುನಾವಣೆಯ ಫಲಿತಾಂಶದ ಹಿಂದೆ ಮಾತನಾಡುತ್ತಿದ್ದ ಎಲ್ಲ ಊಹಾಪೋಹಗಳನ್ನು ಜನತೆ ಸುಳ್ಳು ಮಾಡಿದ್ದು, ಭಾರೀ ಬಹುಮತದಿಂದ ಗೆಲ್ಲಿಸಿದ್ದಾರೆ. ದೇಶಭಕ್ತ ನಾಯಕನೊಂದಿಗೆ ಕೆಲಸ ಮಾಡುವ ಅವಕಾಶ ನನಗೆ ಲಭಿಸಿದೆ. ಲೋಕಸಭಾ ಉಪ ಚುನಾವಣೆಯ ಸಂದರ್ಭದಲ್ಲಿ ತಾಲೂಕಿನ ಜನತೆಗೆ ಬರಬೇಕಾಗಿದ್ದ ಬೆಳೆವಿಮೆ ಸರಿಯಾಗಿ ವಿತರಣೆಯಾಗಿರಲಿಲ್ಲ. ಸಂಬಂಧಿಸಿದ ಸಚಿವರೊಂದಿಗೆ ಮಾತನಾಡಿದ ಪರಿಣಾಮವಾಗಿ ಸೊರಬ ಮತ್ತು ಶಿಕಾರಿಪುರ ತಾಲೂಕಿಗೆ ಐದು ಕೋಟಿ ರೂ. ಬೆಳೆವಿಮೆ ಬಂದಿದೆ. ಸಂಬಂಧಿಸಿದ ಇಲಾಖೆಯವರು ರೈತರಿಗೆ ತಿಳಿಸುವ ಕೆಲಸ ಮಾಡುತ್ತಾರೆ. ಚಂದ್ರಗುತ್ತಿ ಸೇರಿದಂತೆ ಜಿಲ್ಲೆಯ ಎಲ್ಲ ಪುಣ್ಯ ಮತ್ತು ಐತಿಹಾಸ ಕ್ಷೇತ್ರಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದರು. ಶಾಸಕ ಕುಮಾರ್‌ಬಂಗಾರಪ್ಪ ಮಾತನಾಡಿ, ತಾಲೂಕಿನ ಶೇ. 80 ನೀರಾವರಿಯನ್ನು ವರದಾ ಮತ್ತು ದಂಡಾವತಿಯಿಂದ ಕಲ್ಪಿಸುವ ಪ್ರಯತ್ನ ಮಾಡುತ್ತೇವೆ. ರಾಜ್ಯದಲ್ಲಿ ಕೆಲವೇ ದಿನಗಳಲ್ಲಿ ಬಿಜೆಪಿ ಸರ್ಕಾರ ಬರಬೇಕಾಗಿದೆ. ಪಪಂ ಚುನಾವಣೆಯ ಫಲಿತಾಂಶದ ನಂತರ ಪಟ್ಟಣದಲ್ಲಿ ಅಧಿಕಾರ ಬಿಜೆಪಿಯದ್ದಾಗಲಿದೆ. ಮುಂಬರುವ ತಾಪಂ, ಜಿಪಂಗಳಲ್ಲಿಯೂ ಅಧಿಕಾರ ಹಿಡಿಯುವುದು ಖಂಡಿತ. ಹಿಂದೆ ಬಿಜೆಪಿಯನ್ನು ತಾಲೂಕಿನಲ್ಲಿ ಕಟ್ಟಿ ಬೆಳೆಸಲು ಶ್ರಮಿಸಿದ ಒಬ್ಬೊಬ್ಬ ವ್ಯಕ್ತಿಯೂ ಇಂದು ಸಾವಿರ ಸಾವಿರ ವ್ಯಕ್ತಿಗಳಿಗೆ ಸಮಾನರಾಗುತ್ತಾರೆ. ಅಂದು ಬಿಜೆಪಿ ಬಾವುಟ ಕಟ್ಟಿದ ವ್ಯಕ್ತಿಯ ಪರಿಶ್ರಮವೇ ಇಂದಿನ ಬಿಜೆಪಿ ತಾಲೂಕಿನಲ್ಲಿ ಗೆಲ್ಲುತಿರುವುದಕ್ಕೆ ಕಾರಣ ಎಂದರು. ತಾಲೂಕು ಅಧ್ಯಕ್ಷ ಎ.ಎಲ್. ಅರವಿಂದ, ಶಾಸಕರಾದ ಆಯನೂರು ಮಂಜುನಾಥ, ವಿಶ್ವೇಶ್ವರ ಹೆಗಡೆ ಕಾಗೇರಿ, ಎಚ್. ಹಾಲಪ್ಪ, ಪ್ರಮುಖರಾದ ಭಾರತಿ ಶೆಟ್ಟಿ, ದತ್ತಾತ್ರಿ, ಗೀತಾ ಮಲ್ಲಿಕಾರ್ಜುನ್, ಈಶ್ವರ ಚನ್ನಪಟ್ಟಣ, ಗಜಾನನ ರಾವ್, ಶ್ರೀಪಾದ ರಾವ್ ನಿಸರಾಣಿ, ಎಂ.ಆರ್. ಪಟೀಲ್, ಚಿಕ್ಕಾವಲಿ ನಾಗರಾಜ್ ಗೌಡ, ಜಿಪಂ ಸದಸ್ಯರಾದ ಸತೀಶ್, ರಾಜಶೇಖರ ಗಾಳಿಪುರ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
Mangaluru: ಆನ್‌ಲೈನ್ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ
Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್ ಅಧ್ಯಕ್ಷನ ಬಂಧನ
Whale: ಅಂಬರ್ ಗ್ರೀಸ್ ಮಾರಾಟ ಜಾಲ ಶಂಕೆ: ಕಾರ್ಯಾಚರಣೆಗೆ ಬಂದಿದ್ದ ಅಧಿಕಾರಿಗಳಿಗೆ ಹಲ್ಲೆ!
Surathkal: ತಡಂಬೈಲ್‌ನಲ್ಲಿ ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ
MUST WATCH
ಹೊಸ ಸೇರ್ಪಡೆ
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ
Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.