ಪ್ರವೇಶ ಪ್ರಶ್ನೆ ಪತ್ರಿಕೆ ಅದಲು ಬದಲು
ಆತಂಕದಲ್ಲಿ ವಿದ್ಯಾರ್ಥಿಗಳು ಪಾಲಕರ ಪ್ರತಿಭಟನೆ ಮರು ಪರೀಕ್ಷೆ ನಡೆಸುವಂತೆ ಆಗ್ರಹ
Team Udayavani, Apr 8, 2019, 1:08 PM IST
ಸುರಪುರ: ಆರುಂಧತಿ ಪದವಿ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ನವೋದಯ ಪ್ರವೇಶ ಪರೀಕ್ಷೆ ಬರೆದ ವಿದ್ಯಾರ್ಥಿಗಳು.
ಸುರಪುರ: ನಗರದ ಕುಂಬಾರಪೇಟೆ ಪ್ರೇರಣಾ ಪರೀಕ್ಷಾ ಕೇಂದ್ರದಲ್ಲಿ ಶನಿವಾರ ನಡೆದ ಜವಾಹರ ನವೋದಯ ಪ್ರವೇಶ ಪರೀಕ್ಷೆ ಪ್ರಶ್ನೆ ಪತ್ರಿಕೆ ಅದಲು ಬದಲಾದ ಘಟನೆ ನಡೆದಿದೆ.
ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮ ಮತ್ತು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಆಂಗ್ಲ ಮಾಧ್ಯಮ ಪ್ರಶ್ನೆ ಪತ್ರಿಕೆ ವಿತರಿಸಲಾಗಿದೆ. ಎರಡು ಮಾಧ್ಯಮಗಳ ವಿದ್ಯಾರ್ಥಿಗಳು ಇದನ್ನು ಗಮನಿಸಿದೆ 45 ನಿಮಿಷ ಪರೀಕ್ಷೆ ಬರೆದರು. ನಂತರ ವಿದ್ಯಾರ್ಥಿಗಳಲ್ಲಿ ಗುಸು, ಗುಸು ಚರ್ಚೆ ಪ್ರಾರಂಭವಾದಾಗ ಕೋಣೆ
ಮೇಲ್ವಿಚಾರಕರ ಗಮನಕ್ಕೆ ಬಂದಿತು. ತಕ್ಷಣವೇ ಎಚ್ಚೆತ್ತುಕೊಂಡ ಮೇಲ್ವಿಚಾರಕರು ಪರಿಶೀಲಿಸಿದಾಗ ಪ್ರಶ್ನೆ ಪತ್ರಿಕೆ ಅದಲು ಬದಲಾಗಿರುವುದು ಖಚಿತವಾಗಲಿದೆ.
ನಂತರ ಪ್ರಶ್ನೆ ಪತ್ರಿಕೆಗಳನ್ನು ವಾಪಸ್ಸು ಪಡೆದುಕೊಂಡರು. ಮಕ್ಕಳು ಬರೆದಿದ್ದ ಉತ್ತರಗಳಿಗೆ ವೈಟನರ್ ಹಚ್ಚಿ ಪುನಃ ಕ್ರಮ ಸಂಖ್ಯೆ ಅನುಸಾರ ಪ್ರಶ್ನೆ ಪತ್ರಿಕೆ ವಿತರಿಸಿದರು. ಅಷ್ಟೊತ್ತಿಗಾಗಲೇ ಪರೀಕ್ಷೆ ಆರಂಭವಾಗಿ ಒಂದು ಗಂಟೆ ಸಮಯ ಕಳೆದು ಹೋಗಿತ್ತು.
ಪುನಃ ಪ್ರಶ್ನೆ ಪತ್ರಿಕೆ ನೀಡಿದ ನಂತರ ವಿದ್ಯಾರ್ಥಿಗಳು ಉತ್ತರ ಬರೆಯಲು ಆರಂಭಿಸಿದರು. ಆದರೆ ಹೆಚ್ಚುವರಿ ಸಮಯ ನೀಡಿಲ್ಲ. ಇದರಿಂದ ಆತಂಕದಲ್ಲಿದ್ದ ಮಕ್ಕಳು ಸಮಯ ಸರಿ ಹೋಗದ ಕಾರಣ ಪೂರ್ಣ ಪ್ರಶ್ನೆ ಪತ್ರಿಕೆ ಬರೆಯಲಾಗಿಲ್ಲ. ನವೋದಯ ಕೇಂದ್ರ ಕಚೇರಿಯ ಪರೀಕ್ಷಾ ವಿಭಾಗದಿಂದ ಪ್ರವೇಶ ಬಯಸಿ ಅರ್ಜಿ ಸಲ್ಲಿಸಿ ನೋಂದಣಿ ಮಾಡಿಕೊಂಡಿದ್ದ ವಿದ್ಯಾರ್ಥಿಗಳಿಗೆ ನಿಯಮಾನುಸಾರ ಹೆಸರು, ರೂಲ್ ನಂಬರ್ ನಮೂದಿಸಿಯೇ ಪ್ರಶ್ನೆ ಪತ್ರಿಕೆ ಮುದ್ರಿಸಲಾಗಿರುತ್ತದೆ.
ಇಷ್ಟೆಲ್ಲ ವ್ಯವಸ್ಥಿತವಾಗಿದ್ದರು ಕೂಡ ಕೇಂದ್ರದ 19 ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ಅದಲು ಬದಲು ಆಗಿ ಅವಾಂತರ ಸೃಷ್ಠಿಯಾಗಿದೆ. ಪರೀಕ್ಷೆ ಮುಗಿದ ನಂತರ ಪಾಲಕರಿಗೆ ವಿಷಯ ಗೊತ್ತಾಯಿತು. ತಕ್ಷಣವೇ ಪಾಲಕರು ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಸಂಬಂಧಿಸಿದ ನವೋದಯ ವಿದ್ಯಾಲಯ ಅಧಿಕಾರಿಗಳೊಂದಿಗೆ ಕೆಲ ಹೊತ್ತು ಮಾತಿನ ಚಕಮಕಿ ನಡೆಸಿದರು. ಇದರಿಂದ ಎಚ್ಚೆತ್ತುಕೊಂಡು ಬಿಇಒ ನಾಗರತ್ನ ಓಲೇಕಾರ ಹೋತಪೇಟ ನವೋದಯ ವಿದ್ಯಾಲಯದ ಪ್ರಾಂಶುಪಾಲರನ್ನು ಸಂಪರ್ಕಿಸಿ ವಿಷಯ ಗಮನಕ್ಕೆ ತಂದರು. ಪರೀಕ್ಷಾ ಕೇಂದ್ರದ ಅಧೀಕ್ಷಕ ಮತ್ತು ಮೇಲ್ವಿಚಾರಕನ ನಿರ್ಲಕ್ಷ್ಯತನದಿಂದ ಸದ್ಯಕ್ಕೆ 19 ವಿದ್ಯಾರ್ಥಿಗಳ ಭವಿಷ್ಯಕ್ಕೆ ಕುತ್ತು ಬಂದಿದೆ. ಕಾರಣ ನವೋದಯ ಶಾಲೆ ಆಡಳಿತ ಇದನ್ನು ಗಂಭೀರವಾಗಿ ಪರಿಗಣಿಸಿ ಮರು ಪರೀಕ್ಷೆ ನಡೆಸಬೇಕು ಎಂದು ಪಾಲಕರು ಆಗ್ರಹಿಸಿದ್ದಾರೆ.
ತಾಲೂಕಿನಲ್ಲಿ ಒಟ್ಟು 11 ಪರೀಕ್ಷಾ ಕೇಂದ್ರ ಸ್ಥಾಪಿಸಲಾಗಿತ್ತು. 1997
ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. 1671 ವಿದ್ಯಾರ್ಥಿಗಳು ಹಾಜರಾಗಿ ಪರೀಕ್ಷೆ ಬರೆದರೆ 326 ವಿದ್ಯಾರ್ಥಿಗಳು
ಗೈರಾಗಿದ್ದರು.
ಕೊಠಡಿ ಮೇಲ್ವಿಚಾರಕರ ನಿರ್ಲಕ್ಷ್ಯವೇ ಈ ತಪ್ಪಿಗೆ ಕಾರಣ. 11 ಕೇಂದ್ರಗಳ ಎಲ್ಲ ಮೇಲ್ವಿಚಾರಕರಿಗೆ ತರಬೇತಿ ನೀಡಿದ್ದೇವೆ. ಎಲ್ಲ ಕೇಂದ್ರಗಳಿಗಳಿಗೂ ಭೇಟಿ ನೀಡಿದ್ದೇನೆ. ಆ ಸಂದರ್ಭದಲ್ಲಿ ಅಧಿಧೀಕ್ಷಕರಾಗಲಿ ಅಥವಾ ಮೇಲ್ವಿಚಾರಕರಾಗಲಿ ಗಮನಕ್ಕೆ ತಂದಿಲ್ಲ. ತಂದಿದ್ದರೆ ಸರಿ ಮಾಡಬಹುದಿತ್ತು. ಪರೀಕ್ಷೆ ಮುಗಿದ ನಂತರ ಪಾಲಕರಿಂದ ಮಾಹಿತಿ ಗೊತ್ತಾಗಿದೆ.
ನಾಗತರ್ನ ಓಲೇಕಾರ,
ಬಿಇಒ ಸುರಪುರ
ಕ್ರಮಸಂಖ್ಯೆ ಅನುಸಾರವೇ ಪ್ರಶ್ನೆ ಪತ್ರಿಕೆ ಬಂದಿದ್ದವು. ಕೋಣೆ
ಮೇಲ್ವಿಚಾರಕರ ನಿರ್ಲಕ್ಷ್ಯದಿಂದ ಈ ಅವಾಂತರ ನಡೆದಿದೆ. ಅರಿವಿಗೆ ಬರುತ್ತಿದ್ದಂತೆ ಅದಲು ಬದಲಾಗಿದ್ದ ಎಲ್ಲ ಪ್ರಶ್ನೆ ಪತ್ರಿಕೆಗಳನ್ನು
ಮಕ್ಕಳಿಂದ ಪಾಪಸ್ಸು ಪಡೆದು ಅವುಗಳಿಗೆ ವೈಟನರ್ ಹಚ್ಚಿ ಪುನಃ ಕ್ರಮ ಸಂಖ್ಯೆ ಅನುಸಾರ ವಿತರಣೆ ಮಾಡಿದ್ದೇವೆ. ಬಿಇಒ ಅವರ ಗಮನಕ್ಕೆ ತಂದಿಲ್ಲ. ಮೇಲ್ವಿಚಾರಕರ ತಪ್ಪೊಪ್ಪಿಗೆ ಪತ್ರ
ಲಗತ್ತಿಸಿದ್ದು, ಮಕ್ಕಳಿಗೆ ತೊಂದರೆ ಆಗದಂತೆ ನಿರ್ವಹಿಸಲು ನವೋದಯ ವಿದ್ಯಾಲಯ ಪ್ರಾಂಶುಪಾಲರಿಗೆ ಮನವಿ ಮಾಡಿದ್ದೇವೆ.
ಬಸವರಾಜ ಪಾವಲೆ,
ಪರೀಕ್ಷಾ ಕೇಂದ್ರದ ಅಧೀಕ್ಷಕ
ಈ ಬಗ್ಗೆ ದೆಹಲಿ ಮತ್ತು ಬೆಂಗಳೂರಿನ ಕೇಂದ್ರ ಕಚೇರಿಗೆ ವರದಿ ಸಲ್ಲಿಸಿದ್ದೇವೆ. ಅವರ ನಿರ್ದೇಶನದ ಮೇರೆಗೆ ತಪ್ಪೊಪ್ಪಿಗೆ ಪತ್ರದೊಂದಿಗೆ 19 ವಿದ್ಯಾರ್ಥಿಗಳ ಪ್ರಶ್ನೆ ಪತ್ರಿಕೆಗಳ ಪ್ರತ್ಯೇಕ ಬಂಡಲ್ ಮಾಡಿ ಪರೀಕ್ಷಾ ವಿಭಾಗಕ್ಕೆ ಕಳುಹಿಸಲಾಗುತ್ತಿದೆ.
ಈ ಉತ್ತರ ಪತ್ರಿಕೆಗಳನ್ನು ಮ್ಯಾನುವಲ್ ಆಗಿ ಮೌಲ್ಯಮಾಪನ ಮಾಡುವ ಭರವಸೆ ಇದೆ.
ಎಂ.ಕೆ. ಜಗದೀಶ ಪ್ರಾಂಶುಪಾಲ,
ನವೋದಯ ವಿದ್ಯಾಲಯ
ಹೋತಪೇಟ
ನಾಲ್ಕು ಭಾಷೆ ಮಕ್ಕಳು ಪರೀಕ್ಷೆ ಬರೆಯ ಬೇಕಾಗಿದ್ದರಿಂದ ತಪ್ಪಾಗದಂತೆ ನೋಡಿಕೊಳ್ಳಲು ಜಿಲ್ಲೆಯ 20 ಪರೀಕ್ಷಾ ಕೇಂದ್ರಗಳ
ಅಧೀಕ್ಷಕರು, ಬಿಇಒಗಳಿಗೆ ಹಾಗೂ ಮೇಲ್ವಿಚಾರಕರಿಗೆ ತರಬೇತಿ ನೀಡಲಾಗಿದೆ. ಅಗತ್ಯವಿದ್ದಲ್ಲಿ ಬಿಇಒ ಅವರಿಂದ ಮಾಹಿತಿ ಪಡೆದುಕೊಳ್ಳಲು ಸೂಚಿಸಲಾಗಿದೆ. ಇಷ್ಟೆಲ್ಲ ಇದ್ದು ತಪ್ಪಾಗಿರುವುದಕ್ಕೆ ಮೇಲ್ವಿಚಾರಕರು, ಅಧೀಕ್ಷಕರ ಮತ್ತು ಬಿಇಒ ನಿರ್ಲಕ್ಷ್ಯವೇ ಕಾರಣ. ವಿಷಯ ಗಮನಕ್ಕೆ ತಂದಿದ್ದರೆ ಹೆಚ್ಚುವರಿ ಸಮಯ ನೀಡಲು ಅವಕಾಶವಿತ್ತು. ಇದಾವುದು ಮಾಡದೆ ಕರ್ತವ್ಯ ಲೋಪ ಮತ್ತು ನಿರ್ಲಕ್ಷ್ಯ ಆಧಾರದ ಹಿನ್ನೆಲೆಯಲ್ಲಿ ಮೂವರು ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲು ಮೇಲಾ ಧಿಕಾರಿಗಳಿಗೆ ವರದಿ ಮಾಡುತ್ತೇನೆ.
ಶ್ರೀಶೈಲ ಬಿರಾದಾರ, ಡಿಡಿಪಿಐ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ಹೊಸ ಸೇರ್ಪಡೆ
ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23ಶಾಲೆಗೆ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿ ವಿದ್ಯಾರ್ಥಿ
Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್, ಟ್ರಾಫಿಕ್ ಜಾಮ್
Uchila: ಕಾರು ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು
Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು
Bengaluru: 7 ಮದುವೆ ಮುಚ್ಚಿಟ್ಟು 8ನೇ ಮದುವೆಯಾಗಿ ಪತಿಗೆ ವಂಚನೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.