ಸುರಪುರ ಅರಸರ ತ್ಯಾಗ-ಸಾಹಸ ಪ್ರಶಂಸನೀಯ: ಪಾಣಿಭಾತೆ
ದೇಶದ ಬಹುತೇಕ ಅರಸರು ಸ್ವ-ಹಿತಾಸಕ್ತಿ ಕಾಪಾಡಿಕೊಂಡಿದ್ದೆ ಹೆಚ್ಚು
Team Udayavani, Jul 1, 2019, 11:36 AM IST
ಸುರಪುರ: ನಗರದ ದರ್ಭಾರ ಹಾಲ್ ಕನ್ನಡಿ ಮಹಲಿನಲ್ಲಿ ಸುರಪುರ ಕಥನ ಪುಸ್ತಕವನ್ನು ಡಾ| ಬಸವಲಿಂಗ ಸ್ವಾಮೀಜಿ ಬಿಡುಗಡೆಗೊಳಿಸಿದರು.
ಸುರಪುರ: ದೇಶದ ಬಹುತೇಕ ಅರಸರು ಪ್ರಜಾಹಿತಾಸಕ್ತಿಯೊಂದಿಗೆ ಸ್ವಹಿತಾಸಕ್ತಿ ಕಾಪಾಡಿಕೊಂಡಿದ್ದೆ ಹೆಚ್ಚು. ಇದಕ್ಕೆ ಅಪವಾದ ಎನುವಂತೆ ನಮ್ಮ ಸಂಸ್ಥಾನ ಅರಸರು ತಮಗಾಗಿ ಏನನ್ನು ಇಟ್ಟುಕೊಳ್ಳದೆ ಎಲ್ಲವನ್ನು ಪ್ರಜೆಗಳಿಗೆ ದಾನ ಮಾಡುವ ಮೂಲಕ ಕೊಡಗೈ ದಾನಿಗಳು ಎನಿಸಿಕೊಂಡಿದ್ದಾರೆ. ಇಲ್ಲಿಯ ಅರಸರ ತ್ಯಾಗ ಮತ್ತು ಸಾಹಸ ಪ್ರಶಂಸನೀಯ ಎಂದು ಕೃತಿಯ ಅನುವಾದಕ ಸಂಸ್ಕೃತ ಪಂಡಿತ ಜನಾರ್ಧನ ಪಾಣಿಭಾತೆ ಹೇಳಿದರು.
ಇಲ್ಲಿಯ ದರ್ಭಾರ ಹಾಲ್ ಕನ್ನಡಿ ಮಹಲನಲ್ಲಿ ಕನ್ನಡ ಸಂಸ್ಕೃತಿಕ ಶಕ್ತಿ ಕೇಂದ್ರ ಆಯೋಜಿಸಿದ್ದ ದಿ. ಗುಂಡಾಚಾರ್ಯ ಪೇರುಮಾಳರ ಸುರಪುರ ಕಥನ ಕನ್ನಡ ಅನುವಾದ ಕೃತಿ ಬಿಡುಗಡೆಯಲ್ಲಿ ಅವರು ಮಾತನಾಡಿದರು.
ದೇಶದ 540 ಸಂಸ್ಥಾನಗಳ ಇತಿಹಾಸ ಓದಿದ್ದೇನೆ. ಯಾವಬ್ಬ ಅರಸರು ಇಷ್ಟೊಂದು ದಾನ ಮಾಡಿದ ಉದಾಹರಣೆ ಇಲ್ಲ. ಇಲ್ಲಿಯ ಅರಸರು ತಮಗೆ, ತಮ್ಮ ವಂಶಸ್ಥರಿಗೆ ಏನನ್ನು ಉಳಿಸಿಕೊಳ್ಳದೆ ಎಲ್ಲವನ್ನು ದಾನವಾಗಿ ನೀಡಿದ್ದಾರೆ. ಹೀಗಾಗಿ ಇವರು ಕೊಡಗೈ ದಾನಿಗಳು. ಇಂತಹ ಐತಿಹಾಸಿಕ ಪರಂಪರೆ, ಪ್ರಜಾಹಿತ ಆಡಳಿತ, ಶೌರ್ಯ, ಸಾಹಸ ಸೇರಿದಂತೆ ಪ್ರತಿಯೊಂದು ಅಂಶವನ್ನು ಲೇಖಕರು ಅತ್ಯಂತ ಸೂಕ್ಷ್ಮವಾಗಿ ಚಿತ್ರಿಸಿದ್ದಾರೆ. ಇದು ಅವರ ಕುಶಲಮತಿಗೆ ಸಾಕ್ಷಿಯಾಗಿದೆ ಎಂದರು.
ನನ್ನ ವಿದ್ಯಾ ಗುರುಗಳ ಹಸ್ತ ಪ್ರತಿ ಕನ್ನಡಕ್ಕೆ ಅನುವಾದಿಸಲು ಅವಕಾಶ ಸಿಕ್ಕಿರವುದು ನನ್ನ ಸೌಭಾಗ್ಯ. ಸಂಸ್ಥಾನಕ್ಕೆ ಸಂಬಂಧಿಸಿದಂತೆ ಅವರು ಸಂಸ್ಕೃತ, ತೆಲುಗು ಮತ್ತು ಕನ್ನಡದಲ್ಲಿ ಸುಮಾರು 35ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ ಸಂಸ್ಥಾನದ ಹಿರಿಮೆ ಗರಿಮೆಯನ್ನು ಹೆಚ್ಚಿಸುವ ಮೂಲಕ ಈ ನೆಲದ ಮಣ್ಣಿನ ಋಣದಿಂದ ಮುಕ್ತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಕೃತಿಗಳನ್ನು ಕನ್ನಡಕ್ಕೆ ತಂದು ಓದುಗರಿಗೆ ನೀಡುವ ಕೆಲಸವಾಗಬೇಕು ಎಂದು ಸಲಹೆ ನೀಡಿದರು.
ಸಾನ್ನಿಧ್ಯ ವಹಸಿದ್ದ ಬಾಗಲಕೋಟೆ ಚಿತ್ತರಗಿ ವಿಜಯ ಮಹಾಂತೇಶ್ವರ ಮಠದ ಡಾ| ಬಸವಲಿಂಗ ಸ್ವಾಮೀಜಿ, ಇತಿಹಾಸ ಸಂಶೋಧಕ ಬಾಸ್ಕರರಾವು ಮುಡಬೂಳ, ಶರಣಬಸಪ್ಪ ನಿಷ್ಠಿ ಮಾತನಾಡಿದರು.
ಅರಸು ಮನೆತನದ ಡಾ| ರಾಜಾ ಕೃಷ್ಣಪ್ಪ ನಾಯಕ ಅಧ್ಯಕ್ಷತೆ ವಹಿಸಿದ್ದರು. ಖ್ಯಾತ ಗರುಡಾದ್ರಿ ಕಲಾವಿದ ವಿಜಯ ಹಾಗರ ಗುಂಡಗಿ, ಕೃತಿ ಸಂಪಾದಕ ಶ್ರೀಹರಿರಾವ ಆದವಾನಿ, ಕನ್ನಡ ಸಂಸ್ಕೃತಿಕ ಶಕ್ತಿ ಕೇಂದ್ರದ ಮುಖ್ಯಸ್ಥ ಪಿಎಸ್‌ಐ ಕೃಷ್ಣ ಸುಬೇದಾರ ವೇದಿಕೆಯಲ್ಲಿದ್ದರು. ರಾಜಗೋಪಾಲ ಸ್ವಾಗತಸಿ, ವಂದಿಸಿದರು. ಇದೇ ವೇಳೆ ಗೌರವ ಡಾಕ್ಟರೇಟ್ ಪಡೆದ ರಾಜಾ ಕೃಷ್ಣಪ್ಪ ನಾಯಕ ಹಾಗೂ ರಾಜಪುರೋಹಿತ ವಿಜಯರಾಘವನ್ ಬುಕ್ಕಪಟ್ಟಣಂ ಅವರನ್ನು ಸನ್ಮಾನಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಆನ್‌ಲೈನ್ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ
Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್ ಅಧ್ಯಕ್ಷನ ಬಂಧನ
Whale: ಅಂಬರ್ ಗ್ರೀಸ್ ಮಾರಾಟ ಜಾಲ ಶಂಕೆ: ಕಾರ್ಯಾಚರಣೆಗೆ ಬಂದಿದ್ದ ಅಧಿಕಾರಿಗಳಿಗೆ ಹಲ್ಲೆ!
Surathkal: ತಡಂಬೈಲ್‌ನಲ್ಲಿ ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ
Mangaluru: ಇನ್ನು ಯುಪಿಐ ಮೂಲಕವೂ ಟ್ರಾಫಿಕ್ ದಂಡ ಪಾವತಿ
MUST WATCH
ಹೊಸ ಸೇರ್ಪಡೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Mangaluru: ಆನ್‌ಲೈನ್ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ
Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್ ಅಧ್ಯಕ್ಷನ ಬಂಧನ
Over Remarks: ʼಸಿದ್ದರಾಮೋತ್ಸವʼ ಮಾಡಿಸುವ ನೀವು ‘ಅಂಬೇಡ್ಕರ್ ಉತ್ಸವ’ ಮಾಡಲ್ಲ: ಬಿಜೆಪಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.